ಸೆಪ್ಟೆಂಬರ್ 1ರಿಂದ 14 ಟೋಲ್ ಪ್ಲಾಜಾಗಳಲ್ಲಿ ಏರಿಕೆಯಾಗಲಿದೆ ಟೋಲ್ ಶುಲ್ಕ

ಭಾರತದ ಹೆದ್ದಾರಿಗಳಲ್ಲಿರುವ ಟೋಲ್‌ಗೇಟ್‌ಗಳು ಅಧಿಕ ಶುಲ್ಕ ವಿಧಿಸಿ ವಾಹನ ಸವಾರರನ್ನು ಸುಲಿಗೆ ಮಾಡುತ್ತಿವೆ ಎಂದು ವಾಹನ ಸವಾರರು ಬಹಳ ದಿನಗಳಿಂದ ದೂರುತ್ತಲೇ ಇದ್ದಾರೆ. ಹಾಗೆಯೇ ದೇಶಾದ್ಯಂತವಿರುವ ಟೋಲ್ ಗೇಟ್ ಗಳನ್ನು ತೆಗೆದು ಹಾಕಬೇಕೆಂದು ವಾಹನ ಸವಾರರ ಬಹುದಿನದ ಬೇಡಿಕೆಯಾಗಿದೆ. ಆದರೆ ವಾಹನ ಸವಾರರ ಬೇಡಿಕೆ ಈಡೇರುವ ಯಾವುದೇ ಲಕ್ಷಣಗಳಿಲ್ಲ.

ಸೆಪ್ಟೆಂಬರ್ 1ರಿಂದ 14 ಟೋಲ್ ಪ್ಲಾಜಾಗಳಲ್ಲಿ ಏರಿಕೆಯಾಗಲಿದೆ ಟೋಲ್ ಶುಲ್ಕ

ವಾಹನ ಸವಾರರು ಕನಿಷ್ಠ ಪಕ್ಷ ಟೋಲ್‌ ಶುಲ್ಕವನ್ನಾದರೂ ಕಡಿಮೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ವಾಹನ ಸವಾರರ ಬೇಡಿಕೆಗೆ ವಿರುದ್ಧವಾಗಿ ಟೋಲ್‌ ಶುಲ್ಕಗಳನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಈಗ ನಮ್ಮ ನೆರೆ ರಾಜ್ಯ ತಮಿಳುನಾಡಿನಲ್ಲಿರುವ ಟೋಲ್ ಗಳ ಶುಲ್ಕವನ್ನು ಶೀಘ್ರವೇ ಹೆಚ್ಚಿಸಲಾಗುವುದು ಎಂದು ವರದಿಯಾಗಿದೆ. ತಮಿಳುನಾಡಿನ ಒಟ್ಟು 14 ಟೋಲ್‌ಗೇಟ್‌ಗಳಲ್ಲಿ ಶುಲ್ಕವನ್ನು ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ಟೋಲ್ ಶುಲ್ಕವು 8% ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.

ಸೆಪ್ಟೆಂಬರ್ 1ರಿಂದ 14 ಟೋಲ್ ಪ್ಲಾಜಾಗಳಲ್ಲಿ ಏರಿಕೆಯಾಗಲಿದೆ ಟೋಲ್ ಶುಲ್ಕ

ವರದಿಗಳ ಪ್ರಕಾರ ಟೋಲ್ ಶುಲ್ಕ ದರ ಏರಿಕೆ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ. ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಹೈರಣಾಗಿರುವ ವಾಹನ ಸವಾರರು ಟೋಲ್ ಶುಲ್ಕ ಏರಿಕೆಯ ಸುದ್ದಿ ಕೇಳಿ ಕಂಗಲಾಗಿದ್ದಾರೆ. ಆದರೆ ಟೋಲ್ ಶುಲ್ಕ ಏರಿಕೆ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಿನ ವಾರ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಗಳಿವೆ.

ಸೆಪ್ಟೆಂಬರ್ 1ರಿಂದ 14 ಟೋಲ್ ಪ್ಲಾಜಾಗಳಲ್ಲಿ ಏರಿಕೆಯಾಗಲಿದೆ ಟೋಲ್ ಶುಲ್ಕ

ಆದರೆ ಕೆಲವು ಮೂಲಗಳ ಪ್ರಕಾರ ತಮಿಳುನಾಡಿನ 14 ಟೋಲ್‌ ಪ್ಲಾಜಾಗಳಲ್ಲಿ ಟೋಲ್ ಶುಲ್ಕವು ಹೆಚ್ಚಾಗಲಿದೆ. ವರದಿಗಳ ಪ್ರಕಾರ, ತಿಂಡಿವನಂ - ಉಳುಂದೂರು ಪೇಟೈಯ ರಸ್ತೆಯ ವಿಕ್ರವಾಂಡಿ ಟೋಲ್‌ ಗೇಟ್ ಹಾಗೂ ಉಳುಂದೂರು ಪೇಟೈ - ಬದಲೂರು ರಸ್ತೆಯ ತಿರುಮಂತುರೈ ಟೋಲ್‌ ಪ್ಲಾಜಾಗಳಲ್ಲಿ ಟೋಲ್ ಶುಲ್ಕವು ಹೆಚ್ಚಾಗಲಿದೆ.

ಸೆಪ್ಟೆಂಬರ್ 1ರಿಂದ 14 ಟೋಲ್ ಪ್ಲಾಜಾಗಳಲ್ಲಿ ಏರಿಕೆಯಾಗಲಿದೆ ಟೋಲ್ ಶುಲ್ಕ

ಇದಲ್ಲದೇ ಚೆನ್ನೈ - ಟಾಡಾ ರಸ್ತೆಯ ನಲ್ಲೂರು ಟೋಲ್‌ ಗೇಟ್ ಹಾಗೂ ಸೇಲಂ - ಕುಮಾರ ಪಾಳ್ಯಂ ರಸ್ತೆಯಲ್ಲಿ ವೈಕುಂಠಂ ಟೋಲ್‌ ಗೇಟ್‌ನಲ್ಲಿ ಶುಲ್ಕಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಸೇಲಂ - ಉಳುಂದೂರು ಪೇಟೈಯ ರಸ್ತೆಯಲ್ಲಿರುವ ಮೆಟ್ಟುಪಟ್ಟಿ ಟೋಲ್‌ ಗೇಟ್‌ನಲ್ಲಿಯೂ ಟೋಲ್ ಶುಲ್ಕ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್ 1ರಿಂದ 14 ಟೋಲ್ ಪ್ಲಾಜಾಗಳಲ್ಲಿ ಏರಿಕೆಯಾಗಲಿದೆ ಟೋಲ್ ಶುಲ್ಕ

ಮೂಲಗಳ ಪ್ರಕಾರ, ತಿರುಚಿ - ದಿಂಡಿಗಲ್ ರಸ್ತೆಯ ಪೊನ್ನಂಬಲ ಪಟ್ಟಿ ಟೋಲ್‌ ಗೇಟ್ ಹಾಗೂ ತಂಜಾವೂರು - ತಿರುಚಿ ರಸ್ತೆಯ ವಾಜವದಂ ಕೋಟೈ ಟೋಲ್‌ ಗೇಟ್‌ನಲ್ಲಿ ಟೋಲ್ ಶುಲ್ಕ ಹೆಚ್ಚಾಗಲಿದೆ. ಈ ಸುದ್ದಿ ಹೊರ ಬರುತ್ತಿದ್ದಂತೆ ವಾಹನ ಸವಾರರು ಮತ್ತಷ್ಟು ಚಿಂತಾ ಕ್ರಾಂತರಾಗಿದ್ದಾರೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಭಾರತದ ವಿವಿಧ ನಗರಗಳಲ್ಲಿ ಈಗಾಗಲೇ ರೂ. 100 ಗಳ ಗಡಿ ದಾಟಿದೆ.

ಸೆಪ್ಟೆಂಬರ್ 1ರಿಂದ 14 ಟೋಲ್ ಪ್ಲಾಜಾಗಳಲ್ಲಿ ಏರಿಕೆಯಾಗಲಿದೆ ಟೋಲ್ ಶುಲ್ಕ

ಇನ್ನು ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 100ರ ಸನಿಹದಲ್ಲಿದೆ. ವಾಹನ ಸವಾರರು ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಲಾಗುವ ತೆರಿಗೆಗಳನ್ನು ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಇಳಿಸುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವು ಜನರ ಒತ್ತಾಯಕ್ಕೆ ಮನ್ನಣೆ ನೀಡುತ್ತಿಲ್ಲ. ಇನ್ನು ತಮಿಳುನಾಡಿನಲ್ಲಿ ಎಂ. ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಇತ್ತೀಚೆಗೆ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ ಗೆ ರೂ. 3 ಗಳಷ್ಟು ಕಡಿಮೆ ಮಾಡಿದೆ.

ಸೆಪ್ಟೆಂಬರ್ 1ರಿಂದ 14 ಟೋಲ್ ಪ್ಲಾಜಾಗಳಲ್ಲಿ ಏರಿಕೆಯಾಗಲಿದೆ ಟೋಲ್ ಶುಲ್ಕ

ಈ ಬೆಲೆ ಇಳಿಕೆಯು ತಮಿಳುನಾಡಿನ ವಾಹನ ಸವಾರರಿಗೆ ತುಸು ನಿರಾಳತೆಯನ್ನು ನೀಡಿದೆ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಯಾವುದೇ ಕಾರಣಕ್ಕೂ ಕಡಿಮೆಮಾಡುವುದಿಲ್ಲವೆಂದು ಇತ್ತೀಚಿಗಷ್ಟೇ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರವರು ತಿಳಿಸಿದ್ದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ರೋಸಿ ಹೋಗಿರುವ ಜನರು ಈಗ ಅನಿವಾರ್ಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಸೆಪ್ಟೆಂಬರ್ 1ರಿಂದ 14 ಟೋಲ್ ಪ್ಲಾಜಾಗಳಲ್ಲಿ ಏರಿಕೆಯಾಗಲಿದೆ ಟೋಲ್ ಶುಲ್ಕ

ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಉಂಟಾಗಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ವಾಹನ ತಯಾರಕ ಕಂಪನಿಗಳು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲು ಮುಂದಾಗುತ್ತಿವೆ. ಖ್ಯಾತ ವಾಹನ ತಯಾರಕ ಕಂಪನಿಗಳ ಜೊತೆಗೆ ಸ್ಟಾರ್ಟ್ ಅಪ್ ಕಂಪನಿಗಳೂ ಸಹ ಎಲೆಕ್ಟ್ರಿಕ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ.

ಸೆಪ್ಟೆಂಬರ್ 1ರಿಂದ 14 ಟೋಲ್ ಪ್ಲಾಜಾಗಳಲ್ಲಿ ಏರಿಕೆಯಾಗಲಿದೆ ಟೋಲ್ ಶುಲ್ಕ

ಇನ್ನು ಟೋಲ್ ಪ್ಲಾಜಾಗಳ ಬಗ್ಗೆ ಹೇಳುವುದಾದರೆ, ದ್ವಿ ಚಕ್ರ ವಾಹನಗಳನ್ನು ಹೊರತು ಪಡಿಸಿ ಟೋಲ್ ಪ್ಲಾಜಾಗಳ ಮೂಲಕ ಹಾದು ಹೋಗುವ ಎಲ್ಲಾ ವಾಹನಗಳು ಕಡ್ಡಾಯವಾಗಿ ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ. ಕಳೆದ ವರ್ಷದವರೆಗೂ ಟೋಲ್ ಶುಲ್ಕ ಪಾವತಿಸಲು ವಾಹನಗಳು ಗಂಟೆ ಗಟ್ಟಲೇ ಟೋಲ್ ಪ್ಲಾಜಾಗಳಲ್ಲಿ ಕಾಯ ಬೇಕಾಗಿತ್ತು. ಇದರಿಂದ ವಾಯು ಮಾಲಿನ್ಯವೂ ಉಂಟಾಗುತ್ತಿತ್ತು.

ಸೆಪ್ಟೆಂಬರ್ 1ರಿಂದ 14 ಟೋಲ್ ಪ್ಲಾಜಾಗಳಲ್ಲಿ ಏರಿಕೆಯಾಗಲಿದೆ ಟೋಲ್ ಶುಲ್ಕ

ವಾಹನ ಸವಾರರು ಗಂಟೆ ಗಟ್ಟಲೇ ಟೋಲ್ ಪ್ಲಾಜಾಗಳಲ್ಲಿ ಕಾಯುವುದನ್ನು ತಪ್ಪಿಸಲು ಕೇಂದ್ರ ಸರ್ಕಾರವು ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಗಳನ್ನು ವಾಹನಗಳ ಮುಂಭಾಗದ ವಿಂಡ್ ಶೀಲ್ಡ್ ಮೇಲೆ ಅಳವಡಿಸಲಾಗುತ್ತದೆ. ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಹೊಂದಿರುವ ವಾಹನಗಳು ಟೋಲ್ ಪ್ಲಾಜಾ ಮೂಲಕ ಹಾದು ಹೋದಾಗ ಸಂಬಂಧಿಸಿದ ಟೋಲ್ ಶುಲ್ಕವು ಫಾಸ್ಟ್ ಟ್ಯಾಗ್ ಖಾತೆಯಿಂದ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.

ಸೆಪ್ಟೆಂಬರ್ 1ರಿಂದ 14 ಟೋಲ್ ಪ್ಲಾಜಾಗಳಲ್ಲಿ ಏರಿಕೆಯಾಗಲಿದೆ ಟೋಲ್ ಶುಲ್ಕ

ಈ ವರ್ಷದ ಫೆಬ್ರವರಿ ತಿಂಗಳಿನಿಂದ ಟೋಲ್ ಪ್ಲಾಜಾಗಳಲ್ಲಿ ಹಾದು ಹೋಗುವ ವಾಹನಗಳು ಫಾಸ್ಟ್ ಟ್ಯಾಗ್ ಹೊಂದಿರುವುದು ಕಡ್ಡಾಯವಾಗಿದೆ. ಫಾಸ್ಟ್ ಟ್ಯಾಗ್ ಹೊಂದಿಲ್ಲದೇ ಟೋಲ್ ಪ್ಲಾಜಾ ಮೂಲಕ ಸಾಗುವ ವಾಹನಗಳಿಗೆ ದುಪ್ಪಟ್ಟು ಟೋಲ್ ಶುಲ್ಕವನ್ನು ವಿಧಿಸಲಾಗುತ್ತದೆ. ಹೊಸದಾಗಿ ಬಿಡುಗಡೆಯಾಗುವ ಕಾರುಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಿ ಮಾರಾಟ ಮಾಡುವಂತೆ ಕೇಂದ್ರ ಸರ್ಕಾರವು ವಾಹನ ತಯಾರಕ ಕಂಪನಿಗಳಿಗೆ ಸೂಚನೆ ನೀಡಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Toll fees to be increased in 14 toll plazas from september 1 in tamil nadu details
Story first published: Friday, August 20, 2021, 20:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X