ಬಣ್ಣ ಬದಲಿಸಿದ ಬಾಹುಬಲಿ ಪ್ರಭಾಸ್, ವೇಗದ ಕುದುರೆ ಲ್ಯಾಂಬೋರ್ಗಿನಿ ಅವೆಂಟಡಾರ್: ಕಾರಣವೇನು ಗೊತ್ತಾ?
ಬಾಹುಬಲಿ ನಟ ಪ್ರಭಾಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಅಷ್ಟು ದೊಡ್ಡ ಹಿಟ್ ಇಂಡಸ್ಟ್ರಿಗೆ ನೀಡಿಲ್ಲವಾದರೂ, ಬಿಗ್ ಬಜೆಟ್ ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ಬಂದಿದ್ದಾರೆ. ಅಷ್ಟರ ಮಟ್ಟಿಗೆ ಅವರ ಸ್ಟಾರ್ ವ್ಯಾಲ್ಯೂ ಅನ್ನು ಪ್ರಭಾಸ್ ಹೊಂದಿದ್ದು, ಇತ್ತೀಷೆಗಷ್ಟೇ ಸಾಲಾರ್ ಚಿತ್ರದಲ್ಲಿಯೂ ಸದ್ದು ಮಾಡಿದ್ದರು.
ತೆಲುಗು ಸೂಪರ್‌ಸ್ಟಾರ್ ಪ್ರಭಾಸ್ ಬಳಿಯಿರುವ ದುಬಾರಿ ಕಾರುಗಳಲ್ಲಿ ಲ್ಯಾಂಬೋರ್ಗಿನಿ ಅವೆಂಟಡಾರ್ ಸಹ ಒಂದು. ಸೂಪರ್ ಕಾರು ನಿರ್ಮಾಣ ಕಂಪನಿಯಾದ ಲ್ಯಾಂಬೋರ್ಗಿನಿಯ ಪ್ರಸಿದ್ದ ಮಾಡೆಲ್ ಸಹ ಹೌದು ಈ ಅವೆಂಟಡಾರ್. ೨೦೨೧ ರಲ್ಲಿ ಪ್ರಭಾಸ್ ಈ ಆರೆಂಜ್ ಬಣ್ಣದ ಲ್ಯಾಂಬೋರ್ಗಿನಿ ಅವೆಂಟಡಾರ್ ಕಾರನ್ನು ಖರೀದಿಸಿದ್ದರು. ಇದೀಗ ಪ್ರಭಾಸ್ ಈ ಕಾರಿನ ಬಣ್ಣವನ್ನು ಸಾಟಿನ್ ಕಪ್ಪು ಬಣ್ಣಕ್ಕೆ ಬದಲಾಯಿಸಿದ್ದಾರೆ.

ಸುಮಾರು ಆರು ಕೊಟಿ ಬೆಲೆ ಬಾಳುವ ಈ ಕಾರನ್ನು ಪ್ರಭಾಸ್ ಕೊಳ್ಳುವಾಗ ಆರೆಂಜ್ ಬಣ್ಣವನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಇದೀಗ ಈ ಕಾರಿಗೆ ರಾಪಿಂಗ್ ಮಾಡುವ ಮೂಲಕ ಬಣ್ಣವನ್ನು ಬದಲಾಯಿಸಿದ್ದಾರೆ. ಕಾರ್ ಕ್ರೇಝಿ ಇಂಡಿಯಾ ಎಂಬ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಈ ಕಾರಿನ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದ್ದು, ಹೊಸ ಬಣ್ಣ ನೋಡುಗರ ಕಣ್ಮನ ಸೆಳೆಯುತ್ತಿದೆ.
ತೆಲುಗಿನ 'ಈಶ್ವರ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ಪ್ರಭಾಸ್, ನಂತರ ಹಲವಾರು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಬಾಹುಬಲಿ ಚಿತ್ರದ ಮೂಲಕ ಬಾರಿ ಜನಪ್ರಿಯತೆಯನ್ನು ಗಳಿಸಿಕೊಂಡರು. ಪ್ರಭಾಸ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಒಬ್ಬರಾಗಿದ್ದಾರೆ. ಇವರು ಖರೀದಿಸಿದ ದುಬಾರಿ ಕಾರಿನ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಲ್ಯಾಂಬೊರ್ಗಿನಿ ಸ್ಪೋರ್ಟ್ಸ್ ಕಾರುಗಳಿಗೆ ವಿಶ್ವದೆಲ್ಲೆಡೆ ಒಂದು ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿದೆ. ಸುಮಾರು 9 ವರ್ಷಗಳ ಅವಧಿಯಲ್ಲಿ ಲ್ಯಾಂಬೊರ್ಗಿನಿ ಅವೆಂಟಡಾರ್‌ನ ಹಲವಾರು ಮಾದರಿಗಳನ್ನು ಬಿಡುಗಡೆ ಮಾಡಿತು. 2012ರಲ್ಲಿ ಅವೆಂಟಡಾರ್ ರೋಡ್‌ಸ್ಟರ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಲ್ಯಾಂಬೋರ್ಗಿನಿ ಅವೆಂಟಡಾರ್ ತಿರುಗಿ ನೋಡುವ ಪ್ರಮೇಯವನ್ನೇ ಎದುರಿಸಲಿಲ್ಲ.
ಇನ್ನು ಲ್ಯಾಂಬೋರ್ಗಿನಿಯು ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಎಂಬ ಮಾದರಿಯ ಕಾರಿನ ವಿತರಣೆಯನ್ನು 2022 ರಲ್ಲಿ ಭಾರತದಲ್ಲಿ ಆರಂಭಿಸಿತು. ಲಂಬೋರ್ಗಿನಿ ಕಂಪನಿಯು ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ವೆರಿಯೆಂಟ್‌ಗಳಲ್ಲಿ ವಿಶ್ವಾದ್ಯಂತ ಕೇವಲ 250 ಯುನಿಟ್‌ಗಳನ್ನು ಮಾತ್ರವೇ ವಿತರಣೆ ಮಾಡಿದ್ದು, ಹೊಸ ಕಾರು ಮಾದರಿಯು ವಿ12 ನ್ಯಾಚುರಲ್ ಆಸ್ಪೆರೆಟೆಡ್ ಸರಣಿಯಲ್ಲಿ ಬಿಡುಗಡೆ ಮಾಡಲಾಗುತ್ತಿರುವ ಕೊನೆಯ ಕಾರು ಮಾದರಿ ಇದಾಗಿತ್ತು.

ಈ ಲ್ಯಾಂಬೋರ್ಗಿನಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮಾದರಿಯು ಮೆಂಟಲ್ ಎಸ್‌ವಿಜೆ ಆವೃತ್ತಿಯಲ್ಲಿರುವ 6.5-ಲೀಟರ್ ವಿ12 ಎಂಜಿನ್ ಅನ್ನು ಪಡೆದುಕೊಂಡಿದ್ದು, ಹೊಸ ಕಾರು 7-ಸ್ಪೀಡ್ ಆಟೋಮ್ಯಾಟೆಡ್ ಮ್ಯಾನುವಲ್ ಟ್ರಾನ್‌ಮಿಷನ್ ಮೂಲಕ 770 ಬಿಎಚ್‌ಪಿ ಮತ್ತು 720 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಈ ಕಾರಣಕ್ಕಾಗಿಯೇ ಹಲವರು ಲ್ಯಾಂಬೋರ್ಗಿನಿ ಕಂಪನಿಯ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು.
ಈ ಮೂಲಕ ಇದು ಕಡಿಮೆ ವೇಗದಲ್ಲೂ ಚುರುಕುತನವನ್ನು ಹೆಚ್ಚಿಸಲಿದ್ದು, ಹೆಚ್ಚಿನ ವೇಗದಲ್ಲಿ ನಿಯಂತ್ರಣ ಮತ್ತು ಸ್ಥಿರತೆಯನ್ನು ಉತ್ತಮಗೊಳಿಸುತ್ತದೆ. ಇದರೊಂದಿಗೆ ಹೊಸ ಕಾರು 2.8 ಸೆಕೆಂಡುಗಳಲ್ಲಿ ಸೊನ್ನೆಯಿಂದ -100 ಕಿ.ಮೀ ವೇಗವನ್ನು ಪಡೆಯಲಿದ್ದು, 8.7 ಸೆಕೆಂಡುಗಳಲ್ಲಿ ಸೊನ್ನೆಯಿಂದ 200 ಕಿ.ಮೀ ವೇಗ ತಲುಪಬಲ್ಲದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ


Click it and Unblock the Notifications