ಮೇಡ್ ಇನ್ ಇಂಡಿಯಾ ಬೈಕ್ ಚಾಲನೆ ಮಾಡಿದ ಹಾಲಿವುಡ್ ನಟ

ಜರ್ಮನಿ ಮೂಲದ ಬಿಎಂಡಬ್ಲ್ಯು ಮೋಟರ್‌ರಾಡ್ ಕಂಪನಿಯು ಪ್ರೀಮಿಯಂ ಬೈಕುಗಳನ್ನು ಉತ್ಪಾದಿಸುತ್ತದೆ. ಈ ಬೈಕುಗಳ ಬೆಲೆ ಐಷಾರಾಮಿ ಕಾರುಗಳಷ್ಟೇ ದುಬಾರಿಯಾಗಿದೆ. ಈ ಬೈಕುಗಳ ಉತ್ಪಾದನಾ ಘಟಕಗಳು ವಿಶ್ವದ ಹಲವಾರು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಮೇಡ್ ಇನ್ ಇಂಡಿಯಾ ಬೈಕ್ ಚಾಲನೆ ಮಾಡಿದ ಹಾಲಿವುಡ್ ನಟ

ಕಂಪನಿಯು ಭಾರತದ ತಮಿಳುನಾಡಿನಲ್ಲಿ ದ್ವಿಚಕ್ರ ವಾಹನ ಉತ್ಪಾದನಾ ಘಟಕವನ್ನು ಹೊಂದಿದೆ. ಇಲ್ಲಿ ತಯಾರಿಸುವ ಬೈಕುಗಳನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಭಾರತದಲ್ಲಿ ತಯಾರಿಸಿ ರಫ್ತು ಮಾಡುವ ಬೈಕ್‌ಗಳಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಸಹ ಸೇರಿದೆ.

ಮೇಡ್ ಇನ್ ಇಂಡಿಯಾ ಬೈಕ್ ಚಾಲನೆ ಮಾಡಿದ ಹಾಲಿವುಡ್ ನಟ

ಈಗ ಇಂಟರ್ ನೆಟ್ ನಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಜನಪ್ರಿಯ ಹಾಲಿವುಡ್ ನಟ ಟಾಮ್ ಕ್ರೂಸ್ ಈ ಬೈಕ್ ಚಾಲನೆ ಮಾಡುತ್ತಿದ್ದಾರೆ. ನಟ ಟಾಮ್ ಕ್ರೂಸ್ ತಮ್ಮ ಚಿತ್ರಗಳಲ್ಲಿನ ಆಕ್ಷನ್ ದೃಶ್ಯಗಳಿಗೆ ಹೆಸರುವಾಸಿಯಾಗಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಮೇಡ್ ಇನ್ ಇಂಡಿಯಾ ಬೈಕ್ ಚಾಲನೆ ಮಾಡಿದ ಹಾಲಿವುಡ್ ನಟ

ಈ ಫೋಟೋಗಳಲ್ಲಿ ಟಾಮ್ ಕ್ರೂಸ್ ಮಾಸ್ಕ್ ಧರಿಸಿ ಬಿಎಂಡಬ್ಲ್ಯು ಜಿ 310 ಜಿಎಸ್‌ ಬೈಕ್‌ ಚಾಲನೆ ಮಾಡುತ್ತಿದ್ದಾರೆ. ಮಿಷನ್ ಇಂಪಾಸಿಬಲ್ 7 ಸಿನಿಮಾದ ಆಕ್ಷನ್ ದೃಶ್ಯಗಾಗಿ ಈ ಬೈಕ್ ಅನ್ನು ಚಾಲನೆ ಮಾಡಿದ್ದಾರೆ.

ಮೇಡ್ ಇನ್ ಇಂಡಿಯಾ ಬೈಕ್ ಚಾಲನೆ ಮಾಡಿದ ಹಾಲಿವುಡ್ ನಟ

ಟಾಮ್ ಕ್ರೂಸ್‌ರವರ ಮಿಷನ್ ಇಂಪಾಸಿಬಲ್ ಸಿನಿಮಾಗಳಲ್ಲಿ ಬೈಕ್, ಕಾರು ಹಾಗೂ ಇತರ ವಾಹನ ಆಧಾರಿತ ಸ್ಟಂಟ್ ದೃಶ್ಯಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಈ ಸಿನಿಮಾದಲ್ಲಿನ ಸಾಹಸ ದೃಶ್ಯವೊಂದಕ್ಕೆ ವಿಮಾನಗಳನ್ನು ಸಹ ಬಳಸಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಮೇಡ್ ಇನ್ ಇಂಡಿಯಾ ಬೈಕ್ ಚಾಲನೆ ಮಾಡಿದ ಹಾಲಿವುಡ್ ನಟ

ಇತ್ತೀಚಿಗಷ್ಟೇ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.2.85 ಲಕ್ಷಗಳಾಗಿದೆ. ಕಂಪನಿಯು ಈ ಬೈಕ್ ಅನ್ನು ಬಿಎಸ್ 6 ಎಂಜಿನ್ ಅಪ್‌ಗ್ರೇಡ್‌ನೊಂದಿಗೆ ಬೈಕಿನಲ್ಲಿಯೂ ಕೆಲ ಬದಲಾವಣೆಗಳನ್ನು ಮಾಡಿದೆ.

ಮೇಡ್ ಇನ್ ಇಂಡಿಯಾ ಬೈಕ್ ಚಾಲನೆ ಮಾಡಿದ ಹಾಲಿವುಡ್ ನಟ

ಈ ಬೈಕ್ ಅನ್ನು ಹೊಸ ಬಣ್ಣದೊಂದಿಗೂ ಮಾರಾಟ ಮಾಡಲಾಗುವುದು. ಈ ಬೈಕ್ ಅನ್ನು ರೆಡ್ ಹೈ ಲೈಟ್ ಹೊಂದಿರುವ ನೀಲಿ ಹಾಗೂ ಕಪ್ಪು ಬಣ್ಣದ ಛಾಯೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮೇಡ್ ಇನ್ ಇಂಡಿಯಾ ಬೈಕ್ ಚಾಲನೆ ಮಾಡಿದ ಹಾಲಿವುಡ್ ನಟ

ಈ ಬೈಕಿನಲ್ಲಿದ್ದ ಟ್ರಾಕ್ಷನ್ ಕಂಟ್ರೋಲ್ ಹಾಗೂ ಆಟೋಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಸಹ ಅಪ್ ಡೇಟ್ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಮೆಕಾನಿಕಲ್ ಅಂಶದಲ್ಲಿ ಬದಲಾವಣೆಗಳನ್ನು ಮಾಡಿಲ್ಲ.

ಮೇಡ್ ಇನ್ ಇಂಡಿಯಾ ಬೈಕ್ ಚಾಲನೆ ಮಾಡಿದ ಹಾಲಿವುಡ್ ನಟ

ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನಲ್ಲಿ 312.2 ಸಿಸಿಯ ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಲಿಕ್ವಿಡ್ ಕೂಲ್ಡ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 31 ಬಿಹೆಚ್ ಪಿ ಪವರ್ ಹಾಗೂ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡಿನ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮೇಡ್ ಇನ್ ಇಂಡಿಯಾ ಬೈಕ್ ಚಾಲನೆ ಮಾಡಿದ ಹಾಲಿವುಡ್ ನಟ

ಈ ವಿಶೇಷ ಬೈಕ್‌ ಅನ್ನು ಆಕ್ಷನ್ ಹೀರೋ ಟಾಮ್ ಕ್ರೂಸ್ ತಮ್ಮ ನೆಚ್ಚಿನ ದೃಶ್ಯಕ್ಕಾಗಿ ಬಳಸಿದ್ದಾರೆ. ಈ ಬೈಕ್‌ ಅನ್ನು ಪೊಲೀಸ್ ಅಧಿಕಾರಿಯ ದೃಶ್ಯಕ್ಕೆ ಮಾತ್ರವಲ್ಲದೇ ಉಳಿದ ದೃಶ್ಯಗಳಿಗೂ ಬಳಸಿದ್ದಾರೆ. ಅವರು ಯಾವುದೇ ಡೂಪ್ ಬಳಸದೇ ಸ್ವತಃ ತಾವೇ ಈ ಸಾಹಸ ದೃಶ್ಯಗಳಲ್ಲಿ ಭಾಗಿಯಾಗಿದ್ದಾರೆ.

Most Read Articles
 

Kannada
English summary
Tom Cruise spotted with made in India BMW G 310 GS bike. Read in Kannada.
Story first published: Saturday, October 10, 2020, 17:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X