ಜಗತ್ತಿನ ಅಗ್ರ 10 ಬಜೆಟ್ ವಿಮಾನಯಾನ ಸಂಸ್ಥೆಗಳು

By Nagaraja

ಎಲ್ಲರೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಲು ಬಯಸುತ್ತಾರೆ. ಆದರೆ ವಿಮಾನಯಾನದ ವಿಚಾರಕ್ಕೆ ಬಂದಾಗ ಇದು ಸ್ವಲ್ಪ ಭಿನ್ನವಾಗಿರುತ್ತದೆ. ವಿಮಾನಯಾನ ಅತ್ಯಂತ ದುಬಾರಿ ಎಂಬ ಅಪವಾದವಿದೆ. ಹಾಗಿದ್ದರೂ ಜಗತ್ತಿನ ಕೆಲವು ಸಂಸ್ಥೆಗಳು ಅತ್ಯಲ್ಪ ವೆಚ್ಚದಲ್ಲೂ ಗುಣಮಟ್ಟದ ವಿಮಾನಯಾನ ಸೇವೆಯನ್ನು ಒದಗಿಸುತ್ತಿದೆ.

ಇವನ್ನೂ ಓದಿ: ಟಾಪ್ 10 ದುಬಾರಿ ಜೆಟ್ ವಿಮಾನಗಳು

ನಿಮ್ಮ ಮಾಹಿತಿಗಾಗಿ, ವಾಣಿಜ್ಯ ಬಳಕೆಗಾಗಿ ತಲೆಯೆತ್ತಿದ ಮೊದಲ ವಿಮಾನಯಾನ ಸಂಸ್ಥೆ Deutsche Luftschiffahrts-Aktiengesellschaft (DELAG) ಅಗಿದೆ. ಜರ್ಮನಿ ಮೂಲದ ಈ ಸಂಸ್ಥೆಯನ್ನು 1906ನೇ ಇಸವಿಯಲ್ಲಿ ಸ್ಥಾಪಿಸಲಾಗಿತ್ತು. ಬಳಿಕ ವರ್ಷಗಳೇ ಉರುಳಿದಂತೆಯೇ ವಿಮಾನಯಾನ ಸಂಚಾರಕ್ಕೆ ಬೇಡಿಕೆ ಹೆಚ್ಚಾಗಿದ್ದು, ಇದು ಜಾಗತಿಕವಾಗಿ ಅನೇಕ ವಿಮಾನಯಾನ ಸಂಸ್ಥೆಗಳು ತಲೆಯೆತ್ತಲು ಪ್ರೇರಣೆಯಾಗಿದೆ.

ಜಗತ್ತಿನ ಅಗ್ರ 10 ಬಜೆಟ್ ವಿಮಾನಯಾನ ಸಂಸ್ಥೆಗಳು

ವಿಶ್ವ ವಿಮಾನಯಾನ ಸಂಸ್ಥೆಗಳ ಸಮೀಕ್ಷೆ ಹಾಗೂ ಜಗತ್ತಿನ 105 ವಿವಿಧ ರಾಷ್ಟ್ರಗಳ ಪ್ರಯಾಣಿಕರ ವಿಮರ್ಶೆಯನ್ನು ಪರಿಗಣಿಸಿ ಜಗತ್ತಿನ ಅತ್ಯಂತ ಕಡಿಮೆ ವೆಚ್ಚದ ಅಗ್ರ 10 ವಿಮಾನಯಾನ ಸಂಸ್ಥೆಗಳ ಬಗ್ಗೆ ಇಲ್ಲಿ ಪಟ್ಟಿ ಮಾಡಿ ಕೊಟ್ಟಿರುತ್ತೇವೆ. ಅಂತರಾಷ್ಟ್ರೀಯ ವಿಮಾನ ಸಂಸ್ಥೆಗಳಿಂದ ಹಿಡಿದು ದೇಶೀಯ ವಿಮಾನಯಾನ ಸಂಸ್ಥೆಗಳ ವರೆಗಿನ 245 ವಿಮಾನಯಾನ ಸಂಸ್ಥೆಗಳಲ್ಲಿ ನಡೆಸಿರುವ ಬೃಹತ್ ಸಮೀಕ್ಷೆಯ ಬಳಿಕ ಇದನ್ನು ತಯಾರಿಸಲಾಗಿದೆ.

10. ಸ್ಕೂಟ್

10. ಸ್ಕೂಟ್

ನಮ್ಮ ಬಜೆಟ್ ವಿಮಾನಯಾನ ಸಂಸ್ಥೆಗಳ ಪೈಕಿ ಅಂತಿಮ ಸ್ಥಾನದಲ್ಲಿ ಸಿಂಗಾಪುರ ತಲಹದಿಯ ಸ್ಕೂಟ್ ವಿಮಾನಯಾನ ಸಂಸ್ಥೆ ಸ್ಥಾನ ಪಡೆದುಕೊಂಡಿದೆ. 2011 ನವೆಂಬರ್‌ನಲ್ಲಿ ಸ್ಥಾಪನೆಯಾಗಿರುವ ಈ ವಿಮಾನಯಾನ ಸಂಸ್ಥೆಯು 2012ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಒಟ್ಟು 6 ವಿಮಾನಗಳನ್ನು ಹೊಂದಿರುವ ಈ ಚೊಕ್ಕದಾದ ಸಂಸ್ಥೆಯು 12 ಪ್ರದೇಶಗಳಿಗೆ ತನ್ನ ಸಂಪರ್ಕವನ್ನು ಹೊಂದಿದೆ.

9. ಜೆಟ್‌ಸ್ಟಾರ್ ಏಷಿಯಾ

9. ಜೆಟ್‌ಸ್ಟಾರ್ ಏಷಿಯಾ

ಮಗದೊಂದು ಸಿಂಗಾಪುರ ತಲಹದಿಯ ಜೆಟ್‌ಸ್ಟಾರ್ ಏಷಿಯಾ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ಕಡಿಮೆ ವೆಚ್ಚ ವಿಮಾನಯಾನ ಸೇವೆಯನ್ನು ಒದಗಿಸುತ್ತಿದೆ. ಒಟ್ಟು 18 ವಿಮಾನಗಳನ್ನು ಹೊಂದಿರುವ ಈ ವಿಮಾನಯಾನ ಸಂಸ್ಥೆಯು 21 ಪ್ರದೇಶಗಳಿಗೆ ತನ್ನ ಸೇವೆಯನ್ನು ಒದಗಿಸುತ್ತಿದೆ.

8. ವರ್ಜಿನ್ ಅಮೆರಿಕ

8. ವರ್ಜಿನ್ ಅಮೆರಿಕ

ಹೆಸರಲ್ಲೇ ಸೂಚಿಸಿರುವಂತೆಯೇ ಅಮೆರಿಕ ತಲಹದಿಯ ವರ್ಜಿನ್ ಅಮೆರಿಕ 2004ನೇ ಇಸವಿಯಲ್ಲಿ ಸ್ಥಾಪನೆಯಾಗಿತ್ತು. ಪೂರ್ವ ಹಾಗೂ ಪಶ್ಚಿಮ ಸಮುದ್ರ ತೀರಾ ಪ್ರದೇಶದಲ್ಲಿ ಕಡಿಮೆ ವೆಚ್ಚದಲ್ಲಿ ಗರಿಷ್ಠ ಗುಣಮಟ್ಟದ ವಿಮಾನಯಾನ ಸೇವೆ ಒದಗಿಸುವುದೇ ಸಂಸ್ಥೆಯ ಉದ್ದೇಶವಾಗಿದೆ. ಒಟ್ಟು 53 ವಿಮಾನಗಳನ್ನು ಹೊಂದಿರುವ ಈ ಸಂಸ್ಥೆಯು 23 ಕೇಂದ್ರಗಳಿಗೆ ಬಜೆಟ್ ಸೇವೆಯನ್ನು ಒದಗಿಸುತ್ತಿದೆ.

7. ವೆಸ್ಟ್‌ಜೆಟ್

7. ವೆಸ್ಟ್‌ಜೆಟ್

120 ವಿಮಾನ ಹಾಗೂ 89 ಗುರಿಗಳಿಗೆ ಸಂಪರ್ಕವನ್ನು ಹೊಂದಿರುವ ಕೆನಡಾ ಮೂಲದ ಜೆಸ್ಟ್‌ವೆಟ್ ಸಾರ್ವಜನಿಕ ವಿಮಾನಯಾನ ಸಂಸ್ಥೆಯು 1996ನೇ ಇಸವಿಯಿಂದ ತನ್ನ ಸೇವೆಯನ್ನು ಆರಂಭಿಸಿತ್ತು. ಇದರಲ್ಲಿ 10,000ಕ್ಕೂ ಹೆಚ್ಚು ಮಂದಿ ಉದ್ಯೋಗ ಹರಸಿಕೊಂಡಿದ್ದಾರೆ.

6. ಈಸಿಜೆಟ್

6. ಈಸಿಜೆಟ್

'ಯುರೋಪ್ ಬೈ ಈಸಿಜೆಟ್', 'ಬ್ಯುಸಿನೆಸ್ ಬೈ ಈಸಿಜೆಟ್' ಮತ್ತು 'ದಿಸ್ ಈಸ್ ಜನರೇಷನ್ ಈಸಿಜೆಟ್' ಎಂಬ ಘೋಷವಾಕ್ಯಗಳೊಂದಿಗೆ ಜನರನ್ನು ತಲುಪಿರುವ ಲಂಡನ್ ಮೂಲದ ಈಸಿಜೆಟ್ 202 ವಿಮಾನಗಳೊಂದಿಗೆ 134 ಪ್ರದೇಶಗಳ ಸಂಪರ್ಕವನ್ನು ಹೊಂದಿದೆ. ಯುರೋಪ್ ಖಂಡದಲ್ಲಿರುವ ಎರಡನೇ ಬಜೆಟ್ ವಿಮಾನಯಾನ ಸಂಸ್ಥೆಯಾಗಿರುವ ಇದನ್ನು 1995ರಲ್ಲಿ ಸ್ಥಾಪಿಸಲಾಗಿತ್ತು.

5. ಇಂಡಿಗೊ

5. ಇಂಡಿಗೊ

ಭಾರತೀಯರು ಯಾವತ್ತೂ ಕಡಿಮೆ ವೆಚ್ಚದ ವಿಮಾನಗಳನ್ನು ಹುಡುಕಾಡುತ್ತಿರುತ್ತಾರೆ. ಇದಕ್ಕೊಂದು ಉತ್ತಮ ಉದಾಹರಣೆಯೆಂಬಂತೆ 2006ರಲ್ಲಿ ಸ್ಥಾಪನೆಯಾಗಿರುವ ಇಂಡಿಗೊ 78 ಹೊಚ್ಚ ಹೊಸ ಏರ್‌ಬಸ್ ಎ320 ವಿಮಾಗಳೊಂದಿಗೆ 36 ಪ್ರದೇಶಗಳಿಗೆ ಸಂಪರ್ಕವನ್ನು ಹೊಂದಿದೆ. ಕೇವಲ ಎಕಾನಮಿ ಕ್ಲಾಸ್ ಮಾತ್ರ ಲಭ್ಯವಿರುವ ಈ ವಿಮಾನದಲ್ಲಿ ಪೂರಕ ಊಟದ ವ್ಯವಸ್ಥೆಯಿರುವುದಿಲ್ಲ. ಅಲ್ಲದೆ ವಿಮಾನದಲ್ಲಿ ವಿನೋದ ಸೇವೆ ಕೂಡಾ ಇರುವುದಿಲ್ಲ.

4. ಜೆಟ್‌ಸ್ಟಾರ್ ಏರ್‌ವೇಸ್

4. ಜೆಟ್‌ಸ್ಟಾರ್ ಏರ್‌ವೇಸ್

'ಆಸ್ಟ್ರೇಲಿಯಾದ ನಂ.1 ಬಜೆಟ್ ವಿಮಾನಯಾನ ಸಂಸ್ಥೆ- ಕಡಿಮೆ ವೆಚ್ಚ, ಗುಡ್ ಟೈಮ್ಸ್' ಘೋಷವಾಕ್ಯದಿಂದ ಆರಂಭವಾಗಿರುವ ಜೆಟ್‌ಸ್ಟಾರ್ 2003ರಲ್ಲಿ ಸ್ಥಾಪನೆಯಾಗಿದ್ದು, ಮೆಲ್ಬರ್ನ್‌ನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಅಂತೆಯೇ 73 ವಿಮಾನಗಳ ಮೂಖಾಂತರ 35 ಪ್ರದೇಶಗಳಿಗೆ ಸಂಪರ್ಕವನ್ನು ಹೊಂದಿದೆ.

3. ನಾರ್ವೇಜಿಯನ್

3. ನಾರ್ವೇಜಿಯನ್

ಯುರೋಪ್ ತಲಹದಿಯ ನಾರ್ವೇಜಿಯನ್ ಮೂರನೇ ಬಜೆಟ್ ವಿಮಾನಯಾನ ಸಂಸ್ಥೆ ಎನಿಸಿಕೊಂಡಿದೆ. ಓಸ್ಲೊದಲ್ಲಿ ಕೇಂದ್ರ ಕಚೇರಿ ಹೊಂದಿರುವ ಪ್ರಸ್ತುತ ಸಂಸ್ಥೆ 1993ನೇ ಇಸವಿಯಲ್ಲಿ ಅಸ್ಥಿತ್ವಕ್ಕೆ ಬಂದಿತ್ತು. ಅಲ್ಲದೆ 86 ವಿಮಾನಗಳೊಂದಿಗೆ 126 ಪ್ರದೇಶಗಳಿಗೆ ಸಂಪರ್ಕವನ್ನು ಹೊಂದಿದೆ.

2. ಏರ್‌ಏಷಿಯಾ ಎಕ್ಸ್

2. ಏರ್‌ಏಷಿಯಾ ಎಕ್ಸ್

ಇದೀಗ ಎಲ್ಲರೂ ಮಲೇಷ್ಯಾದ ಕಡಿಮೆ ವೆಚ್ಚದ ಏರ್‌ಏಷಿಯಾ ಎಕ್ಸ್‌ಟ್ರಾ ಲಾಂಗ್ ನೆರವಿನೊಂದಿಗೆ ದೂರ ಪ್ರಯಾಣವನ್ನು ಕೈಗೊಳ್ಳಬಹುದಾಗಿದೆ. 2007ರಲ್ಲಿ ಸ್ಥಾಪನೆಯಾಗಿರುವ ಪ್ರಸ್ತುತ ಸಂಸ್ಥೆ 18 ವಿಮಾನಗಳೊಂದಿಗೆ 19 ಪ್ರದೇಶಗಳಿಗೆ ಸಂಪರ್ಕವನ್ನು ಹೊಂದಿದೆ. ಕಾಮನ್ ಟಿಕೆಟಿಂಗ್ ಸಿಸ್ಟಂ, ಏರ್‌ಕ್ರಾಫ್ಟ್ ಲೈವರಿ, ಎಂಪ್ಲಾಯ್ ಯೂನಿಫಾರ್ಮ್ ಮತ್ತು ಮ್ಯಾನೇಜ್‌ಮೆಂಟ್ ಸ್ಟೈಲ್‌ಗಳಂತಹ ನೀತಿಗಳನ್ನು ಪಾಲಿಸುವ ಮೂಲಕ ಅತ್ಯಂತ ಕಡಿಮೆ ವೆಚ್ಚ ಕಾಯ್ದುಕೊಳ್ಳಲು ಸಹಕಾರಿಯಾಗಿದೆ.

1. ಏರ್‌ಏಷಿಯಾ

1. ಏರ್‌ಏಷಿಯಾ

ಜಗತ್ತಿನ ಅತ್ಯಂತ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯಾಗಿರುವ 1993ನೇ ಇಸವಿಯಲ್ಲಿ ಸ್ಥಾಪನೆಯಾಗಿತ್ತು. ಮಲೇಷ್ಯಾ ತಲಹದಿಯ ಈ ವಿಮಾನಯಾನ ಸಂಸ್ಥೆಯು 169 ವಿಮಾನಗಳೊಂದಿಗೆ 88 ಪ್ರದೇಶಗಳಿಗೆ ತನ್ನ ಸಂಪರ್ಕವನ್ನು ಹೊಂದಿದೆ. ಇದರಲ್ಲಿರುವ ಎಲ್ಲ ವಿಮಾನಗಳು ಏರ್‌ಬಸ್ ಎ320 ಆಗಿದೆ.

Most Read Articles

Kannada
English summary
Based on the World Airline Survey and feedback from respondents representing 105 different nationalities, let's take a look at 10 of the cheapest airlines out there that make a budget holiday possible. The survey covered more than 245 airlines, from the largest international carriers to the smaller domestic airlines.
Story first published: Friday, August 22, 2014, 11:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more