ಟಾಪ್ 10 ಐಕಾನಿಕ್ ಚಲನಚಿತ್ರ ಕಾರುಗಳು

By Nagaraja

ನಿರಂತರ ಅಂತರಾಳಗಳಲ್ಲಿ ನೀವು ಹಾಲಿವುಡ್ ಚಿತ್ರಗಳನ್ನು ವೀಕ್ಷಿಸುವುದಾದ್ದಲ್ಲಿ ನಮ್ಮ ಈ ಲೇಖನ ಹೆಚ್ಚು ನಿಕಟವಾಗಿ ಅರಿಯಲು ಸಾಧ್ಯವಾಗಬಹುದು. ಹೌದು ನಾವು ಚಲನಚಿತ್ರಗಳಲ್ಲಿ ಬಳಕೆಯಾದ ಅಗ್ರ 10 ಐಕಾನಿಕ್ ಕಾರುಗಳ ಬಗ್ಗೆ ವಿವರವಾಗಿ ಚರ್ಚಿಸಲಿದ್ದೇವೆ.

ಇವನ್ನೂ ಓದಿ: ಹಾಲಿವುಡ್ ಹಾಟ್ ಬೈಕ್

ಹಾಗೆಂದ ಮಾತ್ರಕ್ಕೆ ಚಲನಚಿತ್ರಗಳಲ್ಲಿ ಕಾರುಗಳ ಪಾತ್ರ ಮಹತ್ವದ್ದು. ಅದು ಕ್ಲೈಮಾಕ್ಸ್‌ ಆಗಿರಬಹುದು ಅಥವಾ ಸಿನೆಮಾದ ಪ್ರಮುಖ ದೃಶ್ಯಗಳನ್ನು ಕಾರೊಂದು ಆವರಿಸಿರುತ್ತದೆ. ಅಪಹರಕ್ಕೀಡಾದ ನಟಿಯನ್ನು ರಕ್ಷಿಸಲು ಹೀರೊ ಕಾರಲ್ಲಿ ಪ್ರವೇಶವಾಗುತ್ತದೆ. ಹೀಗೆ ಹಲವು ಸಿನಿಮಯ ಘಟನೆಗಳನ್ನು ನಾವು ನೆನಪಿಸಿಕೊಳ್ಳಬಹುದು.

ಟಾಪ್ 10 ಐಕಾನಿಕ್ ಚಲನಚಿತ್ರ ಕಾರುಗಳು

ಮುಂದಿನ ಸ್ಲೈಡರ್ ಮುಖಾಂತರ ಟಾಪ್ 10 ಐಕಾನಿಕ್ ಚಲನಚಿತ್ರಗ ಬಗ್ಗೆ ಅರಿಯಲು ಪ್ರಯತ್ನಿಸಿರಿ.

10. ಬಂಬ್ಲ್ ಬೀ

10. ಬಂಬ್ಲ್ ಬೀ

ಟಾಪ್ 10 ಐಕಾನಿಕ್ ಚಲನಚಿತ್ರಗಳ ಸಾಲಿನ ಅಂತಿಮ ಪಟ್ಟಿಲ್ಲಿ ಬಂಬ್ಲ್ ಬೀ ಕಾಣಿಸಿಕೊಂಡಿದೆ. ಈ ಸಿನೆಮಾದಲ್ಲಿ ಷೆವರ್ಲೆ ಕ್ಯಾಮರೊ ಕಾರನ್ನು ಬಳಕೆ ಮಾಡಲಾಗಿತ್ತು.

9 ಘೋಸ್ಟ್ ಬಸ್ಟರ್ಸ್

9 ಘೋಸ್ಟ್ ಬಸ್ಟರ್ಸ್

ಹೆಸರಾಂತ ಗೋಸ್ಟ್ ಬಸ್ಟರ್ಸ್ ಚಿತ್ರದಲ್ಲಿ 1959ರ ಕ್ಯಾಡಿಲಿಕ್ ಅಥವಾ ಎಕ್ಟೊ 1 ಕಾರನ್ನು ಬಳಕೆ ಮಾಡಲಾಗಿತ್ತು. ಅಲ್ಲದೆ ಅಂಬುಲೆನ್ಸ್ ಶೈಲಿಯ ಗರಿಷ್ಠ ಮಾರ್ಪಾಡುಗೊಂಡಿರುವ ಕಾರು ಘೋಸ್ಟ್ ಚೇಸ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

8. ಬ್ಯಾಕ್ ಟು ದಿ ಫ್ಯೂಚರ್

8. ಬ್ಯಾಕ್ ಟು ದಿ ಫ್ಯೂಚರ್

ಪ್ರಸ್ತುತ ಹಾಲಿವುಡ್‌ನ ಯೂನಿವರ್ಸಲ್ ಸ್ಟುಡಿಯೋದಲ್ಲಿ ಪ್ರದರ್ಶನಕ್ಕಿಟ್ಟಿರುವ ಡಿಲೊರೆನ್ ಡಿಎಂಸಿ-12 ಕಾರನ್ನು ಬ್ಯಾಕ್ ಟು ದಿ ಫ್ಯೂಚರ್ ಕಾರಲ್ಲಿ ಬಳಕೆ ಮಾಡಲಾಗಿತ್ತು. ಈ ನ್ಯೂಕ್ಲಿಯರ್ ಕಾರು ನೋಡುಗರಲ್ಲಿ ಕುತೂಹಲ ಮೂಡಿಸಿತ್ತು.

7. ಹರ್ಬಿ

7. ಹರ್ಬಿ

1963ರ ಫೋಕ್ಸ್‌ವ್ಯಾಗನ್ ಬೀಟ್ಲ್ ಮಾದರಿಯು ಜನಪ್ರಿಯ ಹರ್ಬಿ ಚಲನಚಿತ್ರದಲ್ಲಿ ಗಮನ ಸೆಳೆದಿದತ್ತು. ಇದರ ರೇಸಿಂಗ್ ಸ್ಪರ್ಶದ ರೇಖೆಯು ನೈಜ ಐಕಾನಿಕ್ ಕಾರನ್ನು ಇನ್ನಷ್ಟು ಅಂದವಾಗಿಸಿತ್ತು.

6. ಮ್ಯಾಡ್ ಮ್ಯಾಕ್ಸ್

6. ಮ್ಯಾಡ್ ಮ್ಯಾಕ್ಸ್

ಮ್ಯಾಡ್ ಮ್ಯಾಕ್ಸ್ ಚಿತ್ರದಲ್ಲಿ 1974ರ ಫೋರ್ಡ್ ಫಾಲ್ಕನ್ ಬಳಕೆ ಮಾಡಲಾಗಿತ್ತು. ಅಂದ ಹಾಗೆ ಈ ಸೀಮಿತ ಆವೃತ್ತಿಯ ಕಾರು ಆಸ್ಟ್ರೇಲಿಯಾದಲ್ಲಿ ಮಾರಾಟವಾಗಿತ್ತು. ಪ್ರಮುಖವಾಗಿಯೂ ಕಾನೂನು ಸುವವ್ಯಸ್ಥೆ ಕಾಪಾಡುದರಲ್ಲಿ ಮ್ಯಾಡ್ ಮ್ಯಾಕ್ಸ್ ಕಾಣಿಸಿಕೊಂಡಿತ್ತು.

5. ನೈಟ್ ರೈಡರ್

5. ನೈಟ್ ರೈಡರ್

ಜನಪ್ರಿಯ ನೈಟ್ ರೈಡರ್ ಚಿತ್ರದಲ್ಲಿ ಪೊಂಟಿಯಾಕ್ ಫೈರ್‌ಬರ್ಡ್ ಟ್ರಾನ್ಸ್ ಸೂಪರ್ ಕಾರನ್ನು ಬಳಕೆ ಮಾಡಲಾಗಿತ್ತು. 1982ರಲ್ಲಿ ಸರಿ ಸುಮಾರು ಒಂದು ಲಕ್ಷ ಅಮೆರಿಕನ್ ಡಾಲರ್ ವೆಚ್ಚದಲ್ಲಿ ವಿಶೇಷವಾಗಿಯೂ ನೈಟ್ ರೈಡರ್ ಚಿತ್ರಕ್ಕಾಗಿ ಈ ಕಾರನ್ನು ನಿರ್ಮಿಸಲಾಗಿತ್ತು.

4. ದಿ ಫಾಸ್ಟ್ ಆಂಡ್ ದಿ ಫ್ಯೂರಿಯಸ್

4. ದಿ ಫಾಸ್ಟ್ ಆಂಡ್ ದಿ ಫ್ಯೂರಿಯಸ್

900 ಅಶ್ವಶಕ್ತಿ ಉತ್ಪಾದಿಸಬಲ್ಲ ಡೊಡ್ಜ್ ಚಾರ್ಜರ್ ನಮ್ಮ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದು ನೈಜ ಫಾಸ್ಟ್ ಆಂಡ್ ಫ್ಲೂರಿಯಸ್ ಕಾರು ಎಂದೆನಿಸಿಕೊಂಡಿತ್ತು.

3. ಬ್ಯಾಟ್ಮನ್

3. ಬ್ಯಾಟ್ಮನ್

ಬ್ಯಾಟ್ಮನ್ ಚಿತ್ರದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಆದರೆ ಈ ಚಿತ್ರದಲ್ಲಿ ಬಳಕೆಯಾದ ಟಂಬ್ಲರ್ ಕಾರಿನ ಬಗ್ಗೆ ನೆನಪಿದೆಯೇ? 1965ರಲ್ಲಿ ಈ ಕ್ಲಾಸಿಕ್ ಆ್ಯಂಟಿ ವಿಲನ್ ಕಾರು ನಿರ್ಮಾಣಕ್ಕೆ 30,000 ಅಮೆರಿಕನ್ ಡಾಲರ್ ವೆಚ್ಚ ತಗಲಿತ್ತು.

2. ಸ್ಕೈ ಫಾಲ್

2. ಸ್ಕೈ ಫಾಲ್

ಐಕಾನಿಕ್ ಆಸ್ಟನ್ ಮಾರ್ಟಿನ್ ಡಿಬಿ5 ಕಾರನ್ನು ಜೇಮ್ಸ್ ಬಾಂಡ್ ಚಲನಚಿತ್ರದಲ್ಲಿ ಬಳಕೆ ಮಾಡಲಾಗಿತ್ತು. ಜೇಮ್ಸ್ ಬಾಂಡ್ ಅನೇಕ ಪತ್ತೆದಾರಿ ಸಿನೆಮಾಗಳಲ್ಲಿ ಬಳಕೆ ಮಾಡಿದ ಖ್ಯಾತಿಯನ್ನು ಈ ಕಾರು ಪಡೆದಿದೆ.

1. ಗೋನ್ ಇನ್ 60 ಸೆಕೆಂಡ್ಸ್

1. ಗೋನ್ ಇನ್ 60 ಸೆಕೆಂಡ್ಸ್

ಟಾಪ್ 10 ಐಕಾನಿಕ್ ಚಲನಚಿತ್ರ ಕಾರುಗಳ ಪಟ್ಟಿಯ ಅಗ್ರಸ್ಥಾನದಲ್ಲಿ ಎಲಿಯನೋರ್ ಕಾಣಿಸಿಕೊಂಡಿದ್ದು, ಪ್ರಖ್ಯಾತ ಗೋನ್ ಇನ್ 60 ಸೆಕೆಂಡ್ಸ್ ಚಲನಚಿತ್ರದಲ್ಲಿ ಇದನ್ನು ಬಳಕೆ ಮಾಡಲಾಗಿತ್ತು. 1967ರ ಈ ಫೋರ್ಡ್ ಮಸ್ಟಾಂಗ್ ಕಾರನ್ನು ಸ್ಟೀವ್ ಸ್ಟಾನ್‌ಫರ್ಡ್ ಎಂಬವರು ಕಸ್ಟಮೈಸ್ಡ್ ಮಾಡಿದ್ದರು. ಅಲ್ಲದೆ ಚಿತ್ರದ ಕ್ಲೈಮಾಕ್ಸ್‌ನಲ್ಲಿ ಚೇಸಿಂಗ್ ದೃಶ್ಯವು ಈಗಲೂ ಸಿನೆಮಾ ಪ್ರೇಕ್ಷಕರಲ್ಲಿ ಅಚ್ಚಳಿಯದೇ ಉಳಿದಿದೆ.

Most Read Articles

Kannada
Read in English: Top 10 Iconic Movie Cars
English summary
Here in our list, we take a look at a few cars that have appeared in movies and proved that they were not simply modes of getting around, but they created a lasting impression on us.
Story first published: Monday, September 8, 2014, 17:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X