ದೇಶದ ಟಾಪ್ 10 ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಗಳು!

By Nagaraja

ಭಾರತದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು ಬಹುತೇಕ ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲಿದೆ. ಇದು ದೇಶದ ಪ್ರಮುಖ ನಗರಗಳಲ್ಲಿ ಹಾದು ಹೋಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ಸುಧಾರಣೆ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ನಿಯಂತ್ರಣದಲ್ಲಿರುವ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನೋಡಿಕೊಳ್ಳುತ್ತಿದೆ.

ಇವನ್ನೂ ಓದಿ: ವಿಶ್ವಕ್ಕೆ ಅಪಾಯಕಾರಿ ಸಾವಿನ ರಸ್ತೆ

2010ರ ಅಂಕಿಅಂಶದ ಪ್ರಕಾರ ದೇಶದ ಒಟ್ಟು ರಸ್ತೆಗಳ ಶೇಕಡಾ 2ರಷ್ಟು ಭಾಗವನ್ನು ರಾಷ್ಟ್ರೀಯ ಹೆದ್ದಾರಿಗಳು ತುಂಬಿಕೊಂಡಿದೆ. ಅಲ್ಲದೆ ಇದು ಒಟ್ಟು ರಸ್ತೆ ಟ್ರಾಫಿಕ್ ಪ್ರಮಾಣದ ಶೇಕಡಾ 40ರಷ್ಟಿದೆ. ಅಂದ ಹಾಗೆ ದೇಶದ ಬಹುತೇಕ ಹೆದ್ದಾರಿಗಳು ಎರಡು ಹಾದಿಯ (two-lane road) ರಸ್ತೆಗಳನ್ನು ಒಳಗೊಂಡಿದ್ದು, ಕೆಲವು ಕಡೆ ನಾಲ್ಕು, ಆರು ಮತ್ತು ಎಂಟು ಲೇನ್‌ಗಳನ್ನು ಪಡೆದುಕೊಂಡಿದೆ. ಅಂತೆಯೇ ಇನ್ನು ಕೆಲವು ಕಡೆ ಟೋಲ್ ರಸ್ತೆಗಳು ಸೇರಿವೆ.

ದೇಶದ ಟಾಪ್ 10 ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಗಳು!

ದೇಶದ ಹೈವೇ ಜಾಲ ಒಟ್ಟು 92,851.05 ಕೀ.ಮೀ. ವರೆಗೂ ಹರಡಿದ್ದು (57,694.97) ಇದರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಲ್ಲಿ 1,000ಕ್ಕೂ ಹೆಚ್ಚು ಕೀ.ಮೀ. ಸೀಮಿತ ಪ್ರವೇಶ ಎಕ್ಸ್‌ಪ್ರೆಸ್‌ವೇ ಸಹ ಸೇರಿದೆ. ಇಂದಿನ ಈ ಲೇಖನದಲ್ಲಿ ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಿದ್ದೇವೆ. ಇದಕ್ಕಾಗಿ ಮುಂದಿನ ಪುಟದತ್ತ ಮುಂದುವರಿಯಿರಿ...

ಚಿತ್ರ ಕೃಪೆ: ವಿಕಿಪಿಡೀಯಾ
10. ಎನ್‌ಎಚ್ 31

10. ಎನ್‌ಎಚ್ 31

ದೇಶದ ಅತಿ ಉದ್ದರ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಎನ್‌ಎಚ್ 31 ಕಾಣಿಸಿಕೊಂಡಿದೆ. ಇದು ಒಟ್ಟು 1,125 ಕೀ.ಮೀ. ಉದ್ದದ ಜಾಲವನ್ನು ಹೊಂದಿದೆ. ಜಾರ್ಖಂಡ್‌ನ ಬಾರ್ಹಿ ಪ್ರದೇಶದಿಂದ ಆರಂಭವಾಗುವ ಈ ಹೈವೇ ಜಾಲ ಗುವಾಹಟಿಯ ಜಾಲುಕ್‌ಬರಿನಲ್ಲಿ ಅಂತ್ಯಗೊಳ್ಳುತ್ತದೆ. ಅಲ್ಲದೆ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲೂ ಹಾದು ಹೋಗುತ್ತಿದೆ. ಇದರ ಒಂದು ವಿಭಾಗದ ಹೈವೇಯು ಈಸ್ಟ್-ವೆಸ್ಟ್ ಕಾರಿಡಾರ್‌ನಲ್ಲಿ ಕಾಣಿಸಿಕೊಂಡಿದೆ.

ಚಿತ್ರ ಕೃಪೆ: ವಿಕಿ ಕಾಮನ್ಸ್

9. ಎನ್‌ಎಚ್ 3

9. ಎನ್‌ಎಚ್ 3

ಇದನ್ನು 'ಎಬಿ' ರೋಡ್ ಎಂದು ಸಹ ಕರೆಯಲಾಗುತ್ತದೆ. ಇದು ಪ್ರಮುಖವಾಗಿಯೂ ಆಗ್ರಾ ಹಾಗೂ ಮುಂಬೈ ನಡುವೆ ಸಂಪರ್ಕ ಕಲ್ಪಿಸುತ್ತಿದ್ದು, ಒಟ್ಟು 1,190 ಕೀ.ಮೀ. ಉದ್ದವನ್ನು ಹೊಂದಿದೆ. ಇದು ಉತ್ತರ ಪ್ರದೇಶ, ರಾಜಸ್ತಾನ, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹಾದು ಹೋಗುತ್ತದೆ. ಅಲ್ಲದೆ ಗ್ರೇಟರ್ ಮುಂಬೈ ಪ್ರದೇಶದಲ್ಲಿ ಇದು 'ಈಸ್ಟರ್ನ್ ಎಕ್ಸ್‌ಪ್ರೆಸ್‌ ಹೈವೇ' ಎಂದು ಕರೆಯಲ್ಪಡುತ್ತಿದ್ದು, 'ಮುಂಬೈ ನಾಸಿಕ್ ಎಕ್ಸ್‌ಪ್ರೇಸ್‌ವೇ'ದತ್ತ ಮುಂದುವರಿಯುತ್ತದೆ.

ಚಿತ್ರ ಕೃಪೆ: ವಿಕಿ ಕಾಮನ್ಸ್
8. ಎಚ್‌ಎಚ್ 4

8. ಎಚ್‌ಎಚ್ 4

ದೇಶದ ಅತ್ಯಂತ ಜನಸಂಧಣಿಯ ನಾಲ್ಕು ನಗರಗಳನ್ನು (ಮುಂಬೈ, ಪುಣೆ, ಬೆಂಗಳೂರು ಮತ್ತು ಚೆನ್ನೈ) ಬಂಧಿಸುವ ರಾಷ್ಟ್ರೀಯ ಹೆದ್ದಾರಿ 4, ಪಶ್ಚಿಮ ಹಾಗೂ ದಕ್ಷಿಣ ಭಾರತದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿದೆ. ಇದು 1,235 ಕೀ.ಮೀ. ಉದ್ದದ ಮಾರ್ಗವನ್ನು ಹೊಂದಿದ್ದು, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹಾದು ಹೋಗುತ್ತದೆ.

ಚಿತ್ರ ಕೃಪೆ: ವಿಕಿ ಕಾಮನ್ಸ್
7. ಎನ್‌ಎಚ್ 17

7. ಎನ್‌ಎಚ್ 17

ಪಶ್ಚಿಮ ಘಟ್ಟಗಳಿಗೆ ಸಮಾನಾಂತರವಾಗಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 17 ಮಾರ್ಗವು, ದಕ್ಷಿಣದಿಂದ ಉತ್ತರಕ್ಕೆ ಬಂಧಿಸಲ್ಪಟ್ಟಿದೆ. ಅತ್ಯಂತ ಬಿಡುವಿಲ್ಲದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುರುತಿಸಿಕೊಂಡಿರುವ ಎನ್‌ಎಚ್ 17, ಪಶ್ಚಿಮ ಕರಾವಳಿ ತೀರ ಪ್ರದೇಶದಲ್ಲಿ ಹಾದು ಹೋಗುತ್ತಿದೆ. ಇದು ದಕ್ಷಿಣ ಮುಂಬೈನ ಪನವೆಲ್‌ನಿಂದ ಕೇರಳದ ಕೊಚ್ಚಿಯನ್ನು ಸಂಪರ್ಕಿಸುತ್ತದೆ. ಒಟ್ಟು 1296 ಕೀ.ಮೀ. ಉದ್ದವನ್ನು ಹೊಂದಿರುವ ಈ ಹೈವೇ ಮಹಾರಾಷ್ಟ್ರ, ಗೋವಾ, ಕರ್ನಾಟಕ ಹಾಗೂ ಕೇರಳವನ್ನು ಸಂಪರ್ಕಿಸುತ್ತದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಈ ಹೆದ್ದಾರಿಯಲ್ಲಿ ಸಂಚರಿಸಿದರೆ ಆರು ಭಾಷೆಗಳನ್ನು ಮಾತನಾಡುವ ಜನರನ್ನು ಭೇಟಿಯಾಗಬಹುದಾಗಿದೆ.

ಚಿತ್ರ ಕೃಪೆ: ವಿಕಿ ಕಾಮನ್ಸ್
6. ಎನ್‌ಎಚ್ 8

6. ಎನ್‌ಎಚ್ 8

ಭಾರತದ ಉಪಖಂಡದ ಅತ್ಯಂತ ಬಿಡುವಿಲ್ಲದ ರಾಷ್ಟ್ರೀಯ ಹೆದ್ದಾರಿ ಎಂದೇ ಗುರುತಿಸಿಕೊಂಡಿರುವ ಎನ್‌ಎಚ್8, ದೇಶದ ಎರಡು ಮಹಾನಗರಗಳನ್ನು ಸಂಪರ್ಕಿಸುತ್ತದೆ. ಇದು ದೇಶದ ರಾಜಧಾನಿ ದೆಹಲಿಯಿಂದ ವಾಣಿಜ್ಯ ನಗರಿ ಮುಂಬೈ ವರೆಗೆ 1,428 ಕೀ.ಮೀ. ದೂರದ ಮಾರ್ಗವನ್ನು ಹೊಂದಿದೆ. ಅಲ್ಲದೆ ಗುರ್ಗಾಂವ್, ಅಜ್ಮೆರ್, ಉದಯ್‌ಪುರ್, ಅಹಮಾದಾಬಾದ್, ಸುರತ್, ಜೈಪುರ ಮತ್ತು ವಡೋದರಾ ನಗರಗಳನ್ನು ಸಂಪರ್ಕಿಸುತ್ತದೆ. ಈ ಹೈವೇ ಮೋದಿ ಸರ್ಕಾರದ ಸುವರ್ಣ ಚತುಷ್ಪಥದ ಭಾಗವಾಗಿದೆ.

ಚಿತ್ರ ಕೃಪೆ: ವಿಕಿ ಕಾಮನ್ಸ್
5. ಎನ್‌ಎಚ್ 2

5. ಎನ್‌ಎಚ್ 2

ದೆಹಲಿ-ಕೋಲ್ಕತ್ತಾ ಹೈವೇ ಎಂದೇ ಬಣ್ಣಿಸಲ್ಪಟ್ಟಿರುವ ನ್ಯಾಷನಲ್ ಹೈವೇ 2, ದೆಹಲಿ ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹಾದು ಹೋಗುತ್ತಿದ್ದು, ಒಟ್ಟು 1,465 ಕೀ.ಮೀ. ದೂರವನ್ನು ಕ್ರಮಿಸಿದೆ. ಅಲ್ಲದೆ ಬಹುತೇಕ ಹಾದಿಯು ಐತಿಹಾಸಿಕ ಏಷಿಯಾ ರಸ್ತೆ ಜಾಲದ 'ಗ್ರಾಂಡ್ ಟ್ರಂಕ್ ರೋಡ್' ಹೊಂದಿರುತ್ತದೆ. ಈ ಜಾಲದಲ್ಲಿ 34 ನಗರಗಳು ಬಂಧಿಸಲ್ಪಟ್ಟಿದೆ.

ಚಿತ್ರ ಕೃಪೆ: ವಿಕಿ ಕಾಮನ್ಸ್
4. ಎನ್‌ಎಚ್ 15

4. ಎನ್‌ಎಚ್ 15

ರಾಷ್ಟ್ರೀಯ ಹೆದ್ದಾರಿ 15, ಪಶ್ಚಿಮ ಭಾರತ ಹಾಗೂ ವಾಯುವ್ಯ ಭಾರತದ ಪ್ರಮುಖ ಹೆದ್ದಾರಿಯಾಗಿದೆ. ಇದು ಗುಜರಾತ್‌ನ ಸಮಖಿಯಾಲಿದಿಂದ ಪಂಜಾಬ್‌ನ ಪಥನ್‌ಕೋಟ್ ವರೆಗೂ 1,526 ಕೀ.ಮೀ. ತನಕ ವಿಸ್ತರಿಸಿದೆ. ಇದು ಪಥನ್‌ಕೋಟ್, ಅಮೃತಸರ, ಟಾರ್ನ್ ತರನ್ ಸಾಹಿಬ್, ಝಿರಾ, ಕೋಟ್ಕಪುರಾ, ಭಟಿಂನ್ದಾ, ಗಂಗಾನಗರ, ಬಿಕಾನಗರ, ಜೈಸಲ್‌ಮರ್ ಮತ್ತು ಬರ್ಮರ್ ಪ್ರದೇಶಗಳಲ್ಲಿ ಹಾದು ಹೋಗುತ್ತದೆ.

ಚಿತ್ರಕೃಪೆ: ಬಿಸಿಎಂ ಟೂರಿಂಗ್
3. ಎನ್ಎಚ್ 5

3. ಎನ್ಎಚ್ 5

ಪೂರ್ವ ಕರಾವಳಿ ತೀರ ಪ್ರದೇಶದಲ್ಲಿ ಹಾದು ಹೋಗುತ್ತಿರುವ ಅತ್ಯಂತ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಾಗಿರುವ ಎನ್‌ಎಚ್ 5, ಓಡಿಷಾ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳನ್ನು ಬಂಧಿಸುತ್ತದೆ. ಇದು ಒಟ್ಟು 1,533 ಕೀ.ಮೀ. ಮಾರ್ಗವನ್ನು ಹೊಂದಿದೆ.

ಚಿತ್ರ ಕೃಪೆ: ವಿಕಿ ಕಾಮನ್ಸ್
2. ಎನ್‌ಎಚ್ 6

2. ಎನ್‌ಎಚ್ 6

ದೇಶದ ಅತ್ಯಂತ ಬಿಡುವಿಲ್ಲದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದಾಗಿರುವ ಎನ್‌ಎಚ್6, ಗುಜರಾತ್, ಮಹಾರಾಷ್ಟ್ರ, ಛತ್ತೀಸಗಡ, ಓಡಿಷಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹಾದು ಹೋಗುತ್ತದೆ. ಇದು ಒಟ್ಟು 1949 ಕೀ.ಮೀ. ಹೈವೇ ಜಾಲವನ್ನು ಹೊಂದಿದೆ.

ಚಿತ್ರ ಕೃಪೆ: ವಿಕಿಮಾಪಿಯಾ
1. ಎನ್‌ಎಚ್ 7

1. ಎನ್‌ಎಚ್ 7

ದೇಶದ ಅತ್ಯಂತ ಉದ್ದದ ಹೈವೇ ಜಾಲವನ್ನು ರಾಷ್ಟ್ರೀಯ ಹೆದ್ದಾರಿ 7 ಹೊಂದಿದೆ. ಇದು ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳನ್ನು ಸಂಪರ್ಕಿಸುತ್ತದೆ. ವಾರಣಾಸಿಯ ಹೈದರಾಬಾದ್ ಗೇಟ್‌ನಿಂದ ಆರಂಭವಾಗುವ ಎನ್‌ಎಚ್ 7, ಒಟ್ಟು 2,369 ಕೀ.ಮೀ. ಉದ್ದದ ಹೈವೇ ಜಾಲ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳುತ್ತದೆ. ನಿಮ್ಮ ಮಾಹಿತಿಗಾಗಿ ಬೆಂಗಳೂರು-ಹೊಸೂರು ಮಾರ್ಗವು ರಾಷ್ಟ್ರೀಯ ಹೆದ್ದಾರಿ 7ರ ಭಾಗವಾಗಿದೆ.

ಚಿತ್ರ ಕೃಪೆ: ವಿಕಿ ಕಾಮನ್ಸ್
ದೇಶದ ಟಾಪ್ 10 ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಗಳು!

ಇದೀಗ ನಿಮ್ಮ ನಗರದಲ್ಲಿ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟ, ನಿರ್ವಹಣೆ ಹಾಗೂ ಸಮಸ್ಯೆಗಳ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ಚರ್ಚಿಸಿರಿ.

ಚಿತ್ರ ಕೃಪೆ: ವಿಕಿಪಿಡೀಯಾ

More from DriveSpark

Article Published On: Friday, July 18, 2014, 10:57 [IST]
English summary
The Indian National Highway system is a complex system of roads that connects every major city in India. Not just major cities but it also runs across the length and breadth of our country. This road system measures over 92,851.05 km and is growing day by day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+