ನಿಮ್ಮ ಗರ್ಲ್ ಫ್ರೆಂಡ್ ಇಷ್ಟಪಡಬಹುದಾದ ಟಾಪ್ 5 ಕಾರು

ಪ್ರೀತಿ ಮಾಡುವ ಪ್ರತಿಯೊಬ್ಬ ಹುಡುಗರಲ್ಲೂ ತಮ್ಮ ಪ್ರೇಯಸಿಗೆ ಏನಾದರೂ ಸ್ವಲ್ಪ ವಿಭಿನ್ನವಾದ ಉಡುಗೊರೆ ಕೊಡಬೇಕೆಂಬ ಹಂಬಲವಿರುತ್ತದೆ. ಈ ಮೂಲಕ ತಮ್ಮ ಪ್ರೀತಿಯನ್ನು ಇನ್ನಷ್ಟು ಗಟ್ಟಿ ಮಾಡಲು ಬಯಸುತ್ತಾರೆ.

ಇನ್ನು ಯಾವುದೇ ಸೂಚನೆಯಿಲ್ಲದೆ ತಮ್ಮ ಪ್ರೇಯಸಿಗೆ ಅಚ್ಚರಿಯ ಉಡುಗೊರೆ ನೀಡಲು ಬಯಸುತ್ತಾರೆ. ಈ ಮೂಲಕ ತಮ್ಮ ಪ್ರೇಯಸಿಯನ್ನು ಹೆಚ್ಚು ಖುಷಿಗೊಳಿಸುತ್ತಾರೆ.

ಹಾಗಿದ್ದರೆ ನಿಮಗೆ ಪ್ರಿಯವಾದವರಿಗೆ ಕಾರು ಉಡುಗೊರೆ ಕೊಡುವ ಕುರಿತಂತೆ ಯಾಕೆ ಯೋಚಿಸಿ ನೋಡಬಾರದು? ಇಷ್ಟೊಂದು ದೊಡ್ಡ ಮೊತ್ತ ಖರ್ಚು ಮಾಡಲು ಆರ್ಥಿಕ ಬಲ ನಿಮ್ಮಲ್ಲಿ ಇಲ್ಲವೆಂಬ ಭಯ ಕಾಡುತ್ತಿದೆಯೇ? ಪರವಾಗಿಲ್ಲ ಬಿಡಿ ಸಾಧ್ಯವಾದರೆ ಯಾವತ್ತಾದರೂ ಒಂದು ದಿನ ಇಂತಹ ಕಾರುಗಳಲ್ಲಿ ಡ್ರೈವಿಂಗ್ ಮಾಡುವ ಪ್ರಯತ್ನವಾದರೂ ಮಾಡಬಹುದು.

ಹಾಗಿದ್ದರೆ ನಿಮ್ಮ ಪ್ರೇಯಸಿ ಇಷ್ಟಪಡುವ ಟಾಪ್ 5 ಕಾರುಗಳು ಯಾವುವು? ಹುಡುಗಿಯರಲ್ಲೂ ಕಾರು ಕ್ರೇಜ್ ಅತಿ ಹೆಚ್ಚಾಗಿರುತ್ತದೆ. ಹಾಗಾಗಿ ಅವರಿಗಿಷ್ಟವಾದ ಕಾರು ಉಡುಗೊರೆಯಾಗಿ ನೀಡುವ ಮೂಲಕ ಮನ ಗೆಲ್ಲಬಹುದಾಗಿದೆ.

ಸಾಮಾನ್ಯವಾಗಿ ಹೆಣ್ಮಕ್ಕಳು ಎರಡು ವಿಚಾರಗಳಿಗೆ ಹೆಚ್ಚಿನ ಗಮನ ಕೊಡುತ್ತಾರೆ. ಕಷ್ಟವಿಲ್ಲದ ಡ್ರೈವಿಂಗ್ ಹಾಗೂ ಹೆಚ್ಚು ಸೌಂದರ್ಯ ಹೊಂದಿರಬೇಕು. ಹೆಣ್ಮಕ್ಕಳು ಕಾರಿನ ಎಂಜಿನ್, ಟರ್ಕ್ಯೂ ಅಥವಾ ಇಂಧನ ದಕ್ಷತೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಿದ್ದರೆ ಬನ್ನಿ ನಿಮ್ಮ ಗರ್ಲ್ ಫ್ರೆಂಡ್ ಇಷ್ಟಪಡಬಹುದಾದ ಟಾಪ್ 5 ಕಾರುಗಳನ್ನು ನೋಡೋಣ.

ಫೋಕ್ಸ್‌ವ್ಯಾಗನ್ ಬೀಟ್ಲ್

ಫೋಕ್ಸ್‌ವ್ಯಾಗನ್ ಬೀಟ್ಲ್

ಪ್ರತಿಷ್ಠಿತ ಫೋಕ್ಸ್‌ವ್ಯಾಗನ್ ಬೀಟ್ಲ್ ಹೆಣ್ಣು ಸ್ನೇಹಿ ಕಾರಾಗಿದೆ. ಇದರ 2 ಲೀಟರ್ ಮೋಟಾರ್ ಹೆಚ್ಚಿನ ನಿರ್ವಹಣೆ ಹಾಗೂ ಉತ್ತಮ ಹ್ಯಾಂಡ್ಲಿಂಗ್ ಪ್ರತಿಪಾದಿಸುತ್ತದೆ.

ಫೋಕ್ಸ್‌ವ್ಯಾಗನ್ ಬೀಟ್ಲ್

ಫೋಕ್ಸ್‌ವ್ಯಾಗನ್ ಬೀಟ್ಲ್

ಹೆಣ್ಣಕ್ಕಳು ಇದನ್ನು ಹೆಚ್ಚು ಧೈರ್ಯಶಾಲಿಯಾಗಿ, ಸ್ವತಂತ್ರವಾಗಿ ಹಾಗೂ ಸ್ಟೈಲಿಷ್ ಆಗಿ ಚಲಾಯಿಸಬಲ್ಲರು. ಇನ್ನು ದರ 20 ಲಕ್ಷ ರು. ಅಸುಪಾಸಿನಲ್ಲಿದೆ.

ಆಡಿ ಟಿಟಿ

ಆಡಿ ಟಿಟಿ

ಜರ್ಮನಿಯ ಕಾರು ತಯಾರಕ ಸಂಸ್ಥೆಯಾದ ಆಡಿಯ ಟಿಟಿ ಸ್ಟೈಲಿಷ್ ಇಂಟಿರಿಯರ್ ಹಾಗೂ ಎಕ್ಸ್‌ಟೀರಿಯರ್ ವಿನ್ಯಾಸ ಹೊಂದಿದೆ.

ಆಡಿ ಟಿಟಿ

ಆಡಿ ಟಿಟಿ

ಈ ಎರಡು ಡೋರ್‌ಗಳ ಕಾಂಪಾಕ್ಟ್ ಕಾರು ಕಾರಿಗೆ ಯೂನಿಕ್ ವಿನ್ಯಾಸ ಪ್ರದಾನ ಮಾಡುತ್ತಿದೆ. ಒಟ್ಟಾರೆಯಾಗಿ ಆಡಿ ಟಿಟಿ ಅದ್ಭುತ ಅನುಭವ ನೀಡಲಿದೆ.

ಹೋಂಡಾ ಸಿಟಿ

ಹೋಂಡಾ ಸಿಟಿ

ಹೋಂಡಾ ಸಿಟಿ ಭಾರತದ ಫೇವರಿಟ್ ಮಿಡ್ ಸೈಜ್ ಸೆಡಾನ್ ಕಾರಾಗಿದೆ. ಇದು ಸ್ಟ್ರೈಲಿಷ್, ಆರಾಮದಾಯಕ ಹಾಗೂ ಹೆಚ್ಚಿನ ಸ್ಥಳಾವಕಾಶವನ್ನು ಹೊಂದಿದೆ.

ಹೋಂಡಾ ಸಿಟಿ

ಹೋಂಡಾ ಸಿಟಿ

ಹೋಂಡಾ ಸಿಟಿ ಚಾಲನೆಯನ್ನು ಹೆಣ್ಣಕ್ಕಳು ಖಂಡಿತ ಇಷ್ಟಪಡಲಿದ್ದಾರೆ. ಇದು ದೇಶದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ.

ಹ್ಯುಂಡೈ ಐ10 ಆಟೋಮ್ಯಾಟಿಕ್

ಹ್ಯುಂಡೈ ಐ10 ಆಟೋಮ್ಯಾಟಿಕ್

ಹ್ಯುಂಡೈ ಐ10 ಯುವ, ಸ್ವತಂತ್ರ ಹಾಗೂ ಸ್ವಾವಲಂಬನೆ ಹೊಂದಿರುವ ಹೆಣ್ಮಕ್ಕಳಿಗೆ ಹೆಚ್ಚು ಹೊಂದಿಕೆಯಾಗಲಿದೆ.

ಹ್ಯುಂಡೈ ಐ10 ಆಟೋಮ್ಯಾಟಿಕ್

ಹ್ಯುಂಡೈ ಐ10 ಆಟೋಮ್ಯಾಟಿಕ್

ಇದರ ಇಂಟಿರಿಯರ್ ಹಾಗೂ ಎಕ್ಸ್‌ಟೀರಿಯರ್ ವಿನ್ಯಾಸ ಸೌಂದರ್ಯ ಸವಿಯುವ ಯುವತಿಯರಿಗೆ ಹೆಚ್ಚು ಇಷ್ಟವಾಗಲಿದೆ.

ಸ್ಕೋಡಾ ಫ್ಯಾಬಿಯಾ

ಸ್ಕೋಡಾ ಫ್ಯಾಬಿಯಾ

ಸ್ಕೋಡಾ ಫ್ಯಾಬಿಯಾದ ಫಿಟ್ ಆಂಡ್ ಫಿನಿಶ್ ಗುಣಮಟ್ಟತೆ ಖಂಡಿತವಾಗಿಯೂ ನಿಮ್ಮ ಪ್ರೇಯಸಿ ಮೇಲೆ ಪ್ರಭಾವ ಬೀರಲಿದೆ.

ಸ್ಕೋಡಾ ಫ್ಯಾಬಿಯಾ

ಸ್ಕೋಡಾ ಫ್ಯಾಬಿಯಾ

ಇದು ಐಷಾರಾಮಿ ಲುಕ್ ಪ್ರದಾನ ಮಾಡುತ್ತಿದ್ದು, 1.6 ಲೀಟರ್ ಎಂಜಿನ್ ಉತ್ತಮ ನಿರ್ವಹಣೆ ಹಾಗೂ ಹ್ಯಾಂಡ್ಲಿಂಗ್ ನೀಡಲಿದೆ.

ಸ್ಕೋಡಾ ಫ್ಯಾಬಿಯಾ

ಸ್ಕೋಡಾ ಫ್ಯಾಬಿಯಾ

ಹಾಗಿದ್ದರೆ ನಿಮ್ಮ ಗರ್ಲ್‌ಫ್ರೆಂಡ್‌ಗೆ ಯಾವ ಕಾರನ್ನು ಗಿಫ್ಟ್ ಮಾಡಲು ಬಯಸುವೀರಾ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿರಿ...

More from DriveSpark

Article Published On: Wednesday, March 20, 2013, 9:34 [IST]
English summary
We tell you about the top 5 cars your girl first would love. Generally Women look for two things in a car- effortless driving and good looks. So go through this page.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+