Expressway: ದೇಶದಲ್ಲಿ ಹೆದ್ದಾರಿ ಕ್ರಾಂತಿ.. ಈ ವರ್ಷ 5 ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ, ಕರ್ನಾಟಕದಲ್ಲಿ ಎಲ್ಲಿ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಮೂಲಸೌಕರ್ಯ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ವಿವಿಧ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿದೆ. ಮುಂಬರುವ ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಅದಕ್ಕೂ ಮೊದಲು ಹಲವು ಎಕ್ಸ್‌ಪ್ರೆಸ್‌ವೇ (Expressway)ಗಳನ್ನು ಲೋಕಾರ್ಪಣೆಗೊಳಿಸಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈ ವರ್ಷ ಉದ್ಘಾಟನೆಗೊಳ್ಳುವ ಹೆದ್ದಾರಿಗಳ ಮೊದಲ ಸಾಲಿನಲ್ಲಿ ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ (Delhi - Mumbai Expressway) ಇದ್ದು, ಫೆಬ್ರವರಿ ವೇಳೆಗೆ ಈ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆಯಿದೆ. ಈಗಾಗಲೇ ಹರಿಯಾಣದ ಸೋಹ್ನಾದಿಂದ ರಾಜಸ್ಥಾನದ ದೌಸಾವರೆಗೆ (209 ಕಿಲೋಮೀಟರ್‌) ಎಕ್ಸ್‌ಪ್ರೆಸ್‌ವೇಯನ್ನು ತೆರೆಯಾಲಾಗಿದೆ.

Expressway: ದೇಶದಲ್ಲಿ ಹೆದ್ದಾರಿ ಕ್ರಾಂತಿ.. ಈ ವರ್ಷ 5 ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ, ಕರ್ನಾಟಕದಲ್ಲಿ ಎಲ್ಲಿ?

ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ ಒಟ್ಟು 1,386 ಕಿಲೋಮೀಟರ್‌ಗಳಷ್ಟು ಉದ್ದವಿದ್ದು, ದೆಹಲಿ, ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾದುಹೋಗಲಿದೆ. ಈ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ಆರಂಭವಾದ ಮೇಲೆ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈಗೆ ಈಗಿರುವ ಪ್ರಯಾಣದ ಅವಧಿಯು 24 ಗಂಟೆಗಳಿಂದ 12 ಇಳಿಕೆಯಾಗುವ ಸಂಭವವಿದೆ.

ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru - Chennai Expressway), ಸಹ ಇದೇ ವರ್ಷ ಉದ್ಘಾಟನೆಗೊಳ್ಳುವ ನೀರಿಕ್ಷೆಯಿದೆ. 262 ಕಿಮೀ ಉದ್ದದ ರಸ್ತೆ ಇದಾಗಿದ್ದು, ಈ ಹೆದ್ದಾರಿ ನಿರ್ಮಾಣದಿಂದ ಇವೆರೆಡು ನಗರಗಳ ಜನರಿಗೆ ದೊಡ್ಡಮಟ್ಟದ ಅನುಕೂಲವಾಗಲಿದೆ. ಈಗಿರುವ 5 ರಿಂದ 6 ಗಂಟೆ ಪ್ರಯಾಣದ ಅವಧಿಯು 3 ಗಂಟೆಗೆ ಕಡಿಮೆಯಾಗಲಿದ್ದು, ಬೆಂಗಳೂರು - ಚೆನ್ನೈ ನಡುವಿನ ಅಂತರವನ್ನು ಸುಮಾರು 80 ಕಿಮೀ ಇಳಿಮುಖವಾಗಲಿದೆ.

Expressway: ದೇಶದಲ್ಲಿ ಹೆದ್ದಾರಿ ಕ್ರಾಂತಿ.. ಈ ವರ್ಷ 5 ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ, ಕರ್ನಾಟಕದಲ್ಲಿ ಎಲ್ಲಿ?

ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದುಹೋಗಲಿದ್ದು, ಪ್ರಸ್ತುತ, 4 ಪಥದ ಹೆದ್ದಾರಿಯಾಗಿರಲಿದ್ದು, ವಾಹನ ದಟ್ಟಣೆಯ ಅಗತ್ಯಕ್ಕೆ ತಕ್ಕಂತೆ 8 ಪಥಗಳಿಗೆ ಹೆಚ್ಚಿಸಬಹುದು. ಈ ಎಕ್ಸ್‌ಪ್ರೆಸ್‌ವೇ 17 ಫ್ಲೈಓವರ್‌ಗಳು, 41 ವೆಹಿಕಲ್ ಅಂಡರ್‌ಪಾಸ್‌, 52 ಪಾದಚಾರಿ ಅಂಡರ್‌ಪಾಸ್‌, 162 ಸೇತುವೆಗಳನ್ನು ಹೊಂದಿರಲಿದೆ, ಹೆದ್ದಾರಿಯಿಂದ ಕರ್ನಾಟಕ, ತಮಿಳುನಾಡು ರಾಜ್ಯಗಳ ಕೈಗಾರಿಕೆಗಳ ಪ್ರಗತಿಗೆ ಮತ್ತಷ್ಟು ವೇಗ ದೊರೆಯಲಿದೆ.

ದ್ವಾರಕಾ ಎಕ್ಸ್‌ಪ್ರೆಸ್‌ವೇ (Dwarka Expressway) ಸಹ ಈ ವರ್ಷದ ಬೇಸಿಗೆ ವೇಳೆಗೆ ವಾಹನ ಸಂಚಾರಕ್ಕೆ ಲಭ್ಯವಾಗಬಹುದು. ಇದು 27.6 ಕಿಲೋಮೀಟರ್ ಉದ್ದದ ಹೆದ್ದಾರಿಯಾಗಿದ್ದು, ಕಾಮಗಾರಿ ಮುಕ್ತಾಯಗೊಂಡ ಬಳಿಕ, ದೆಹಲಿ ಹಾಗೂ ಹರಿಯಾಣ ರಾಜ್ಯಗಳ ನಡುವೆ ಸಾರಿಗೆ ಸಂಪರ್ಕ ಸುಧಾರಿಸಲಿದೆ. ಈ ಹೆದ್ದಾರಿ ದೇಶದ ಮೊದಲ 8 ಪಥದ ಎಕ್ಸ್‌ಪ್ರೆಸ್‌ವೇ ಖ್ಯಾತಿಗೂ ಪಾತ್ರವಾಗಲಿದೆ.

ದೆಹಲಿ - ಅಮೃತಸರ - ಕತ್ರಾ ಎಕ್ಸ್‌ಪ್ರೆಸ್‌ವೇ (Delhi - Amritsar - Katra Expressway) ಕಾಮಗಾರಿಯು ವೇಗವಾಗಿ ಸಾಗುತ್ತಿದೆ. ಈ ಹೆದ್ದಾರಿಯು 669 ಕಿಮೀ ಉದ್ದವಿದ್ದು, ರೂ.40,000 ಕೋಟಿ ವ್ಯಯಿಸಿ ನಿರ್ಮಿಸಲಾಗುತ್ತಿದೆ. ಒಮ್ಮೆ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಗೊಂಡ ಮೇಲೆ ದೆಹಲಿಯಿಂದ ಅಮೃತಸರಕ್ಕೆ 4 ಗಂಟೆಗಳಲ್ಲಿಯೇ ಪ್ರಯಾಣಿಯಬಹುದು. ದೆಹಲಿಯಿಂದ ಕತ್ರಾಗೆ 6 ಗಂಟೆಗಳಲ್ಲಿ ತಲುಪಬಹುದು.

Expressway: ದೇಶದಲ್ಲಿ ಹೆದ್ದಾರಿ ಕ್ರಾಂತಿ.. ಈ ವರ್ಷ 5 ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ, ಕರ್ನಾಟಕದಲ್ಲಿ ಎಲ್ಲಿ?

ಪ್ರಸ್ತುತ, ದೆಹಲಿಯಿಂದ ಕತ್ರಾಕ್ಕೆ 727 ಕಿಮೀ ದೂರವಿದ್ದು, ನೂತನ ಹೆದ್ದಾರಿಯಿಂದ 58 ಕಿಮೀ ಕಡಿಮೆಯಾಗಲಿದೆ. ಈ ಎಕ್ಸ್‌ಪ್ರೆಸ್‌ವೇ ಏಷ್ಯಾದಲ್ಲಿಯೇ ಅತಿ ಉದ್ದದ 1300 - ಮೀಟರ್ ಕೇಬಲ್ ತೂಗುವ ಸೇತುವೆಗೂ ಸಾಕ್ಷಿಯಾಗಲಿದೆ. ಜೊತೆಗೆ ಸಿಖ್ಖರದ ಪವಿತ್ರ ಕ್ಷೇತ್ರಗಳಾದ ಗೋಲ್ಡನ್ ಟೆಂಪಲ್, ಕಪುರ್ತಲಾ ಜಿಲ್ಲೆಯ ಸುಲ್ತಾನ್‌ಪುರ್ ಲೋಧಿ ಗುರುದ್ವಾರ, ಗೋಯಿಂಡ್ವಾಲ್ ಸಾಹಿಬ್ ಗುರುದ್ವಾರ, ಹಾಗೂ ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ ಸಂಪರ್ಕ ಕಲ್ಪಿಸುತ್ತದೆ.

ದೆಹಲಿ - ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ (Delhi - Dehradun Expressway)ಯು ನಿರ್ಮಾಣ ಹಂತದಲಿದ್ದು, ಈ ವರ್ಷವೇ ಉದ್ಘಾಟನೆಗೊಳ್ಳಬಹುದು. ಇವೆರೆಡು ನಗರಗಳ ನಡುವೆ ಈಗಿರುವ 5 ಗಂಟೆ 15 ನಿಮಿಷ ಪ್ರಯಾಣದ ಅವಧಿಯೂ 3 ಗಂಟೆಗೆ ಇಳಿಕೆಯಾಗಲಿದ್ದು, ಹೆದ್ದಾರಿಯು 340 ಮೀಟರ್ ಉದ್ದದ 'ದಾತ್ ಕಾಲಿ' ಸುರಂಗವನ್ನು ಒಳಗೊಂಡಿರಲಿದೆ.

Article Published On: Friday, January 5, 2024, 16:50 [IST]
English summary
Top 5 expressway soon inauguration india where is in karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+