4 ಕೋಟಿಯ ಧೋನಿ ಕಾರಿನ ಫೀಚರ್ಸ್‌ ಏನೆಂದು ಗೊತ್ತಾ: ಈ ಫಿಚರ್ಸ್‌ಗಳು ಇಷ್ಟೊಂದು ದುಬಾರಿಯೇ?

ಭಾರತದ ಕ್ರಿಕೆಟ್‌ ತಂಡದ ಮಾಜೀ ಕಪ್ತಾನ ಮಹೇಂದ್ರ ಸಿಂಗ್‌ ಧೋನಿ, ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಒಂದಿಲ್ಲೊಂದು ವಿಷಯಗಳಿಂದ ಟ್ರೆಂಡಿಂಗ್‌ನಲ್ಲಿ ಇದ್ದೇ ಇರುತ್ತಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ವರುಷಗಳು ಹಲವಾರು ಕಳೆದರೂ, ಇಂದಿಗೂ ಸಹ ಅವರ ಖ್ಯಾತಿ ಕೊಂಚವೂ ಕಮ್ಮಿಯಾಗಿಲ್ಲ. ಹಾಗಾಗಿಯೇ ಧೋನಿ ಏನು ಮಾಡಿದರೂ ಸದಾ ಸುದ್ದಿಯಾಗುತ್ತಿರುವುದು.

ಇತ್ತೀಚೆಗಷ್ಟೇ ಧೋನಿ ಮರ್ಸಿಡಿಸ್ ಎಎಂಜಿ ಜಿ63 (Mercedes Benz G63) ಎಸ್‍ಯುವಿ ಖರೀದಿಸುರುವುದು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್ ಆಗಿದೆ. ಧೋನಿ ಜನಪ್ರಿಯ ಎಸ್‌ಯುವಿಯನ್ನು ತಮ್ಮ ಸ್ವಂತ ಗ್ಯಾರೇಜ್‌ಗೆ ಸೇರಿಸಿದ್ದಾರೆ. ಈ ಹೊಸ ಮರ್ಸಿಡಿಸ್ ಎಎಂಜಿ ಜಿ63 (Mercedes-AMG G63) ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.3 ಕೋಟಿಯಾಗಿದೆ. ಇಂದಿನ ಲೇಖನದಲ್ಲಿ ಈ ಕಾರಿನ ಟಾಪ್‌ ಫೀಚರ್ಸ್‌ಗಳು ಯಾವುದೆಂದು ನೋಡೋಣ.

Top Features Of Dhonis New Mercedes Benz G63 SUV

1. ಎಂಜಿನ್‌: ಧೋನಿ ಖರೀಧಿಸಿರುವ ಮರ್ಸಿಡಿಸ್ ಎಎಂಜಿ ಜಿ63 ಕಾರು ನಾಲ್ಕು ಲೀಟರ್‌ ಬೈಟರ್ಬೋ ವಿ೮ ಎಂಜಿನ್ ಜೊತೆ ಬರುತ್ತಿದ್ದು ಸುಮಾರು 576 ಬಿಹೆಚ್‌ಪಿ ಪವರ್‌ ಮತ್ತು 850 ಎನ್‌ಎಮ್‌ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದೇ ಎಂಜಿನ್‌ ಅನ್ನು ಮರ್ಸಿಡಿಸ್‌ ಕಂಪನಿಯು ತನ್ನ ಇತರ ಎಎಂಜಿ ಕಾರುಗಳಲ್ಲಿಯೂ ಬಳಸಿದ್ದು, ಅತ್ಯಂತ ಪವರ್‌ಫುಲ್‌ ಎಂಜಿನ್‌ಗಳಲ್ಲಿ ಒಂದಾಗಿದೆ.

2. ಎಕ್ಸಾಸ್ಟ್‌: ಈ ಮರ್ಸಿಡಿಸ್ ಎಎಂಜಿ ಜಿ63 (Mercedes Benz G63) ಕಾರಿನ ವಿಶಿಷ್ಟವಾದ ವಸ್ತುಗಳಲ್ಲಿ ಈ ಕಾರಿನ ಎಕ್ಸಾಸ್ಟ್‌ ಸಹ ಸೇರಿಕೊಂಡಿದೆ. ಈ ಕಾರಿನಲ್ಲಿ ವಿಶಿಷ್ಟವಾದ ಸೈಡ್‌ ಎಕ್ಸಿಟ್‌ಗಳನ್ನು ಹೊಂದಿರುವ ಎಕ್ಸಾಸ್ಟ್‌ಗಳನ್ನು ಹೊಂದಿದೆ. ವಿಶ್ವದ ಕೆಲವೇ ಕೆಲವು ಕಾರುಗಳಲ್ಲಿ ಮಾತ್ರ ಈ ರೀತಿಯ ಎಕ್ಸಾಸ್ಟ್‌ ಸಿಸ್ಟಂ ಇದ್ದು ಅದರಲ್ಲಿ ಈ ಕಾರು ಸಹ ಒಂದಾಗಿದೆ.

Top Features Of Dhonis New Mercedes Benz G63 SUV

3. 4WD ಸಿಸ್ಟಂ: ಧೋನಿ ಮರ್ಸಿಡಿಸ್ ಎಎಂಜಿ ಜಿ63 ಎಸ್‍ಯುವಿ 4WD ಸಿಸ್ಟಂ ಅನ್ನು ಒಳಗೊಂಡಿದೆ. ಇದೊಂದು ಪರ್ಫಾಮೆನ್ಸ್‌ ಎಸ್‌ಯುವಿ ಆಗಿರಬಹುದು, ಆದರೆ ಇದು ಆಫ್‌ರೋಡ್‌ ಮಾಡುವಲ್ಲಿಯೂ ಎತ್ತಿದ ಕೈ ಎಂದರೆ ನೀವು ನಂಬಲೇ ಬೇಕು. ಈ ಕಾರಿನಲ್ಲಿ ಆಫ್‌ರೋಡಿಂಗ್‌ ಅನ್ನು ಬೆಂಬಲಿಸುವುದಕ್ಕಾಗಿಯೇ 4WD ಸಿಸ್ಟಂ ಅನ್ನು ಅಳವಡಿಸಲಾಗಿದೆ.

4. ಬೆಲೆ: ಇದರಲ್ಲಿರುವ ಫೀಚರ್ಸ್‌ಗಳಷ್ಟೇ ವಿಶೇಷವಾದುದು ಇದರ ಬೆಲೆ. ಕಾರಣ ಈ ಕಾರಿನ ಬೆಲೆಗೆ ನೀವು ಒಂದು ಸ್ವಿಫ್ಟ್‌ ಶೋರೂಮ್ ಅನ್ನೇ ಒಪನ್ ಮಾಡಬಹುದು. ಹೌದು, ಧೋನಿ ಖರೀದಿಸಿರು ಈ ‌ ಮರ್ಸಿಡಿಸ್ ಎಎಂಜಿ ಜಿ63 ಎಸ್‍ಯುವಿ ಬೆಲೆ ಸುಮಾರು ನಾಲ್ಕು ಕೊಟಿ ರೂಪಾಯಿಗಳು.

ಇದು ಈ ಕಾರಿನ ಬೇಸ್‌ ವೇರಿಯಂಟ್‌ ಬೆಲೆ. ವೇರಿಯಂಟ್ಗಳು ಬದಲಾದಂತೆ ಇದರ ಬೆಲೆಯೂ ಹೆಚ್ಚಾಗುತ್ತಾ ಹೋಗುತ್ತದೆ. ಅಂದರೆ ಈಗ ನಾಲ್ಕು ಕೋಟಿ ಇರುವ ಈ ಕಾರಿನ ಬೆಲೆ, ಇದರ ಆಯ್ಕೆಗಳು ಮತ್ತು ಫೀಚರ್‌ಗಳು ಬದಲಾದಂತೆ ಅದು ಹೆಚ್ಚಾಗುತ್ತಾ ಹೋಗುತ್ತಾ ಈಗಿರುವ ಬೆಲೆಗಿಂತಲೂ ಅಧಿಕವಾಗುತ್ತದೆ.

ಧೋನಿ ಚಿಕ್ಕ ವೀಡಿಯೊದಲ್ಲಿ ಧೋನಿ ಡ್ರೈವರ್ ಸೀಟಿನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಂತ ಕಾರುಗಳನ್ನು ಓಡಿಸಲು ಇಷ್ಟಪಡುವ ಧೋನಿ ತಮ್ಮ ಕಾರಿನೊಂದಿಗೆ ರಾಂಚಿ ನಗರವನ್ನು ಸುತ್ತುವ ವಿಡಿಯೋ ಆಗಾಗ ವೈರಲ್ ಆಗುತ್ತಿದೆ. ಸ್ಯಾಟಿನ್ ಬ್ಲ್ಯಾಕ್ ಬಣ್ಣವು ಕಾರಿನ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಎಂಎಸ್ ಧೋನಿಯ ಗ್ಯಾರೇಜ್‌ನಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಮತ್ತು ಜೀಪ್ ಟ್ರೈಲ್‌ಹಾಕ್ ಪಕ್ಕದಲ್ಲಿ ಮರ್ಸಿಡಿಸ್ ಎಎಮ್‌ಜಿ ಜಿ63 ಆಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, November 30, 2023, 14:33 [IST]
English summary
Top features of dhonis new mercedes benz g63 suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+