ಎಲೆಕ್ಟ್ರಿಕ್‌ ರೂಪದಲ್ಲಿ ಲಗ್ಗೆಯಿಡಲಿದೆ ಈ ಪ್ರಸಿದ್ದ ಕಾರುಗಳು: ನಿಮ್ಮ ನೆಚ್ಚಿನ ಕಾರು ಇದರಲ್ಲಿದೆಯೇ?

ಭಾರತದ ಸೇರಿದಂತೆ ವಿಶ್ವದಾದ್ಯಂತ ಎಲೆಕ್ಟ್ರಿಕ್‌ ವಾಹನಗಳ ಕಾರುಬಾರು ಜೋರಾಗುತ್ತಲೇ ಇದೆ. ಈಗಾಗಲೇ ಹಲವು ಪ್ರಮುಖ ವಾಹನ ನಿರ್ಮಾಣ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್‌ ಪಾಳಯದಲ್ಲಿ ತಮ್ಮದೇ ಆದ ಛಾಪನ್ನು ಮೂಡುತ್ತಿದ್ದಾರೆ. ಹಾಗಾಗಿ ಈಗಾಗಲೇ ಗ್ರಾಹಕರನ್ನು ತಮ್ಮತ್ತ ಸೆಳೆದು ಇವಿ ಕ್ಷೇತ್ರದಲ್ಲಿ ಪಾರಪತ್ಯವನ್ನು ಸಾಧಿಸಲು ಪ್ರಯತ್ನಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಈಗಾಗಲೇ ಹಲವು ವಾನಹ ನಿರ್ಮಾಣ ಕಂಪನಿಗಳು ಹೊಸ ಹೊಸ ಮಾಡೆಲ್‌ಗಳನ್ನು ಇವಿ ಕ್ಷೇತ್ರದಲ್ಲಿ ಲಾಂಚ್‌ ಮಾಡಿರುವುದನ್ನು ನಾವು ಕಂಡಿದ್ದೇವೆ. ಇದು ಮಾತ್ರವಲ್ಲದೇ ಈಗಾಗಲೇ ಪ್ರಸಿದ್ದವಾಗಿರುವ ICE ಕಾರುಗಳನ್ನು ಸಹ ಎಲೆಕ್ಟ್ರಿಕ್‌ ರೂಪಾಂತರಗಳಲ್ಲಿ ಪರಿಚಯಿಸಿರುವುದನ್ನು ನಾವು ಕಂಡಿದ್ದೇವೆ. ಇದಕ್ಕೆ ಪ್ರಮುಖ ಉದಾಹರಣೆಗಳೆಂದರೆ ಟಾಟಾ ಕಂಪನಿಯ ನೆಕ್ಸಾನ್‌, ಟಿಯಾಗೋ, ಪಂಚ್ ಮುಂತಾದವು. ಇಂದಿನ ಲೇಖನದಲ್ಲಿ ಈಗ ICE ಕಾರುಗಳಾಗಿದ್ದು ಮುಂದೆ ಎಲೆಕ್ಟ್ರಿಕ್‌ ರೂಪಾತರದಲ್ಲಿ ಮಾರುಕಟ್ಟೆಗೆ ಬರಲಿರುವ ಕಾರುಗಳು ಯಾವುದೆಂದು ನೋಡೋಣ.

Top ICE Cars Which Is Coming In Electric Version, TATA Harrier EV, Safari And More

1. ಹ್ಯುಂಡೈ ಕ್ರೇಟಾ ಇವಿ: ಸದ್ಯಕ್ಕೆ ಹ್ಯುಂಡೈನ ಹೆಮ್ಮೆ ಎಂದೇ ಹೇಳಬಹುದಾದ ಕಾರು ಈ ಕ್ರೇಟಾ. ಮೊನ್ನೆಯಷ್ಟೇ ಇದರ ಫೇಸ್‌ಲಿಫ್ಟ್‌ ಮಾದರಿಯೂ ಲಾಂಚ್‌ ಆಗಿ ಭಾರೀ ಮೊತ್ತದಲ್ಲಿ ಬುಕಿಂಗ್‌ ಸಹ ಪಡೆದುಕೊಂಡಿತ್ತು. ಮಾಹಿತಿಗಳ ಪ್ರಕಾರ ಹ್ಯುಂಡೈ ಕಂಪನಿಯು ಕ್ರೇಟಾ ಕಾರಿನ ಎಲೆಕ್ಟ್ರಿಕ್‌ ರೂಪಾಂತರದಲ್ಲಿ ಬಿಡುಗಡೆ ಮಾಡುವ ಸಿದ್ದತೆಗಳಲ್ಲಿ ಇದ್ದು, ಈ ವರ್ಷದ ಕೊನೆಯಲ್ಲಿ ಇದು ಕಾರ್ಯ ರೂಪಕ್ಕೆ ಬರಬಹುದು ಎಂದು ಹೇಳಲಾಗುತ್ತಿದೆ.

2. ಹೋಂಡಾ ಎಲವೇಟ್‌ ಇವಿ: ಕಳೆದ ವರ್ಷವಷ್ಟೇ ಹೋಂಡಾ, ಭಾರತದಲ್ಲಿ ಎಲವೇಟ್‌ ಎಸ್‌ಯುವಿಯನ್ನು ಲಾಂಚ್‌ ಮಾಡಿದ್ದು, ಇದೀಗ ಇದರ ಎಲೆಕ್ಟ್ರಿಕ್‌ ರೂಪಾಂತರವನ್ನು ಅಭಿವೃದ್ದಿ ಪಡಿಸುತ್ತಿದೆ. ಸದ್ಯಕ್ಕೆ ಎಲಿವೇಟ್ ಹೊರತಾಗಿ, ಹೋಂಡಾ ಪ್ರಸ್ತುತ ದೇಶದಲ್ಲಿ ಅಮೇಜ್ ಮತ್ತು ಸಿಟಿಯನ್ನು ಮಾರಾಟ ಮಾಡುತ್ತಿದೆ. ಈ ಸೆಡಾನ್‌ಗಳು ಕಂಪನಿಗೆ ಉತ್ತಮ ಮಾರಾಟ ತಂದುಕೊಟ್ಟಿವೆಯಾದರೂ, 2030 ರ ಅಂತ್ಯದ ವೇಳೆಗೆ ಹಂತ ಹಂತವಾಗಿ ನಾಲ್ಕು SUV ಗಳನ್ನು ಪರಿಚಯಿಸುವ ಯೋಜನೆಯಿದೆ.

Top ICE Cars Which Is Coming In Electric Version, TATA Harrier EV, Safari And More

3. ಟಾಟಾ ಹ್ಯಾರಿಯರ್‌ ಇವಿ: ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ (TATA Harrier EV) ಎಸ್‍ಯುವಿ ಬಗ್ಗೆ ಹೇಳುವುದಾದರೆ, ಇದು ಡ್ಯುಯಲ್ ಮೋಟಾರ್ ಮತ್ತು AWD ಸೆಟಪ್‌ಗಳೊಂದಿಗೆ ಬರುವ ಸಾಧ್ಯತೆಯಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯು ಲೋಡ್ (V2L) ಮತ್ತು ವಾಹನದಿಂದ ವಾಹನಕ್ಕೆ (V2V) ಚಾರ್ಜಿಂಗ್ ಸಾಮರ್ಥ್ಯಗಳನ್ನು ಒದಗಿಸುವ ನಿರೀಕ್ಷೆಯಿದೆ, ಸುಮಾರು 60kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಮತ್ತು ಅಂದಾಜು 400 ಕಿ.ಮೀ ನಿಂದ 500 ಕಿ.ಮೀ ರೆಂಜ್ ಅನ್ನು ನೀಡುತ್ತದೆ.

4. ಟಾಟಾ ಸಫಾರಿ ಇವಿ: ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿರುವ ಟಾಟಾ ದ ಫ್ಲ್ಯಾಗ್‌ಶಿಪ್‌ ವಾಹನವಾದ ಟಾಟಾ ಸಫಾರಿ, ಕೆಲವೇ ಸಮಯದಲ್ಲಿ ಎಲೆಕ್ಟ್ರಿಕ್‌ ರೂಪಾತರದಲ್ಲಿ ಗ್ರಾಹಕರ ಮುಂದೆ ಬರಲಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ICE ಸಫಾರಿ ಬಗ್ಗೆ ನೊಡುವುದಾದರೆ, ಈ ಎಸ್‍ಯುವಿಯಲ್ಲಿ 2.0 ಲೀಟರ್, 4-ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

Top ICE Cars Which Is Coming In Electric Version, TATA Harrier EV, Safari And More

ಈ ಎಂಜಿನ್ 168bhp ಮತ್ತು 350Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಟಾರ್ಕ್ ಕರ್ನವಾಟರ್ ಯುನಿಟ್ ನೊಂದಿಗೆ ಜೋಡಿಸಲಾಗಿದೆ. ಟಾಟಾ ಸಫಾರಿ ಫೇಸ್‌ಲಿಫ್ಟ್‌ಎಸ್‍ಯುವಿ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 16.30 ಕಿ.ಮೀ ಮೈಲೇಜ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 14.50 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

5. ಮಹೀಂದ್ರಾ ಕಂಪನಿಯು ಮಹೀಂದ್ರಾ XUV300 ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಅನಾವರಣಗೊಳಿಸಲು ಯೋಜಿಸಿದೆ, ಇದು ವಿಶಿಷ್ಟವಾದ ಇವಿ ವಿನ್ಯಾಸವನ್ನು ಹೊಂದಿದೆ. ಮಹೀಂದ್ರಾ XUV400, XUV300 ಗಿಂತ ಸ್ವಲ್ಪ ದೊಡ್ಡದಾಗಿದೆ, ಪ್ರಸ್ತುತ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ. ಬಿಡುಗಡೆಯ ಬಳಿಕ ಪೈಪೋಟಿ ಹೆಚ್ಚಾಗುತ್ತದೆ.

ವರದಿಗಳ ಪ್ರಕಾರ, XUV400 ಇವಿಗಿಂತ ಸುಮಾರು 2 ಲಕ್ಷ ಕಡಿಮೆ ಬೆಲೆ ಕಡಿಮೆಯಾಗಿರಬಹುದು. ಇದು ಪ್ರಸ್ತುತ ರೂ 15.99 ಲಕ್ಷದಿಂದ ರೂ 19.39 ಲಕ್ಷದ ಬೆಲೆಯಲ್ಲಿ ಲಭ್ಯವಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಹೊಸ ಮಹೀಂದ್ರಾ XUV300 ಎಲೆಕ್ಟ್ರಿಕ್ ಎಸ್‍ಯುವಿಯ (Mahindra XUV300 EV) ಅಧಿಕೃತ ಬೆಲೆ ವಿವರಗಳನ್ನು 2024ರ ಜೂನ್ ತಿಂಗಳಿನಲ್ಲಿ ಬಹಿರಂಗಪಡಿಸಬಹುದೆಂದು ಹೇಳಲಾಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 22, 2024, 12:53 [IST]
English summary
Top ice cars coming in electric versions tata harrier ev safari and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+