ನೀರ ಮೇಲೆ ಹಾದುಹೋಗುವ ದೇಶದ 10 ಅತಿ ಉದ್ದದ ಸೇತುವೆಗಳು!
ಭವ್ಯ ಮನೋಹರವಾದ ಭಾರತ ದೇಶದಲ್ಲಿ ಅನೇಕ ಸೇತುವೆಗಳಿವೆ. ನದಿ, ಕಾಲುವೆಗಳಿಂದ ಕೂಡಿರುವ ನಮ್ಮ ದೇಶದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ಸೇತುವೆಗಳು ಅನಿವಾರ್ಯವೆನಿಸಿದೆ. ಬ್ರಿಟಿಷರ ಕಾಲದಿಂದಲೂ ಗುಣಮಟ್ಟದ ಸೇತುವೆಗಳು ಭಾರತದಲ್ಲಿ ನಿರ್ಮಾಣವಾಗತೊಡಗಿದೆ.
ದೇಶದ ಟಾಪ್ 10 ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಗಳು!
ಇಂದಿನ ಈ ಲೇಖನದಲ್ಲಿ ನೀರ ಮೇಲೆ ಹಾದು ಹೋಗುವ ದೇಶದ ಅತಿ ಉದ್ದದ 10 ಸೇತುವೆಗಳ ಬಗ್ಗೆ ಮಾತನಾಡಲಿದ್ದೇವೆ. ಪ್ರಸ್ತುತ ಪಟ್ಟಿಯಲ್ಲಿ ರೈಲ್ವೆ ಹಳಿಯನ್ನು ಉಲ್ಲೇಖಿಸಲಾಗಿದೆ. ಕೆಲವು ಅಂಕಿಅಂಶಗಳನ್ನು ತೆರೆದು ನೋಡಿದಾಗ ದೇಶದಲ್ಲಿ 500 ಮೀಟರ್ ಅಥವಾ ಅದಕ್ಕಿಂತಲೂ ಹೆಚ್ಚಿನ ಉದ್ದದ 43ರಷ್ಟು ಸೇತುವೆಗಳಿವೆ. ಈ ಪೈಕಿ ಉತ್ತರ ಪ್ರದೇಶದಲ್ಲೇ ಗರಿಷ್ಠ ಏಳು ಸೇತುವೆಗಳಿವೆ. ಆದರೆ ಟಾಪ್ 10 ವಿಚಾರಕ್ಕೆ ಬಂದಾಗ ಬಿಹಾರದಲ್ಲಿ ಅತಿ ಹೆಚ್ಚು ನಾಲ್ಕು ಕಂಡುಬರುತ್ತದೆ. ಹಾಗಿದ್ದರೆ ನಮ್ಮ ಕರ್ನಾಟಕ ಎಷ್ಟನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ ? ಬನ್ನಿ ನೋಡೋಣ.

10. ಹಳೆಯ ಗೋದಾವರಿ ಸೇತುವೆ (ಸ್ಥಗಿತಗೊಳಿಸಲಾಗಿದೆ)
ರಾಜ್ಯ: ಆಂಧ್ರ ಪ್ರದೇಶ
ನಗರ: ರಾಜಮುಂಡ್ರಿ
ಸಂಚಾರ: ರೈಲು
ನಿರ್ಮಾಣವಾದ ವರ್ಷ: 1900
ಉದ್ದ: 2,754 ಮೀಟರ್
ಎಲ್ಲಿ ಹಾದು ಹೋಗುತ್ತದೆ: ಗೋದಾವರಿ ನದಿ
ದೇಶದ ಅತಿ ಹಳೆಯ ರೈಲು ಸೇತುವೆಗಳಲ್ಲಿ ಒಂದಾಗಿರುವ ಹಳೆಯ ಗೋದಾವರಿ ನದಿ ಸೇತುವೆಯಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದನ್ನು ಚೆನ್ನೈ ಹಾಗೂ ಹೌರಾ ನಡುವಣ ರೈಲು ಸಂಪರ್ಕಕ್ಕಾಗಿ ನಿರ್ಮಿಸಲಾಗಿತ್ತು. 1900ನೇ ಇಸವಿಯಲ್ಲಿ ನಿರ್ಮಾಣವಾಗಿರುವ ಈ ಸೇತುವೆ ಅಂದಿನ ಮದ್ರಾಸ್ ಗವರ್ನರ್ ಸರ್ ಅರ್ಥುರ್ ಎಲಿಬ್ಯಾಂಕ್ ಹ್ಯಾವ್ ಲಾಕ್ ಅವರ ಹೆಸರನ್ನಿಡಲಾಗಿದೆ. ಈಗ ರೈಲು ಸಂಚಾರ ನಿಲುಗಡೆಗೊಳಿಸಿದ ಬಳಿಕ ನಾಗರಿಕ ನೀರು ಸರಬುರಾಜಿಗಾಗಿ ಬಳಕೆ ಮಾಡಲಾಗುತ್ತಿದೆ.

09. ಗೋದಾವರಿ ಸೇತುವೆ
ರಾಜ್ಯ: ಆಂಧ್ರ ಪ್ರದೇಶ
ನಗರ: ರಾಜಮುಂಡ್ರಿ
ಸಂಚಾರ: ರೈಲು ಹಾಗೂ ರಸ್ತೆ
ನಿರ್ಮಾಣವಾದ ವರ್ಷ: 1970
ಉದ್ದ: 2,754 ಮೀಟರ್
ಎಲ್ಲಿ ಹಾದು ಹೋಗುತ್ತದೆ: ಗೋದಾವರಿ ನದಿ
ಏಷ್ಯಾದ ಎರಡನೇ ಅತಿ ದೊಡ್ಡ ರೈಲು ಹಾಗೂ ರಸ್ತೆ ಸೇತುವೆಯಾಗಿರುವ ಗೋದಾವರಿ ಸೇತುವೆ ಪೂರ್ವ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಗಳನ್ನು ಬಂಧಿಸುತ್ತದೆ. ಚೆನ್ನೈ ಹಾಗೂ ಹೌರಾ ನಗರಗಳ ನಡುವಣ ರೈಲು ಓಡಾಟ ಕಲ್ಪಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿತ್ತು. ಈ ಸುಂದರ ಸೇತುವೆಯಲ್ಲಿ ರೈಲು ಹಳಿಯ ಮೇಲ್ಗಡೆಯಾಗಿ ರಸ್ತೆ ಹಾದು ಹೋದುತ್ತದೆ. ಕೊವ್ವುರ್-ರಾಜಮುಂಡ್ರಿ ಬ್ರಿಡ್ಜ್ ಎಂ ಹೆಸರಿನಿಂದಲೂ ಇದು ಜನಪ್ರಿಯವಾಗಿದೆ. ಅಲ್ಲದೆ ರಾಜಮುಂಡ್ರಿಯಲ್ಲಿ ಗೋದಾವರಿಯಲ್ಲಿ ಹಾದು ಹೋಗುವ ಮೂರು ಸೇತುವೆಗಳಲ್ಲಿ ಇದೂ ಒಂದಾಗಿದೆ.

08. ಕೊರ್ತಿ-ಕೊಲ್ಹಾರ ಸೇತುವೆ
ರಾಜ್ಯ: ಕರ್ನಾಟಕ
ನಗರ: ಬಿಜಾಪುರ
ಸಂಚಾರ: ರಸ್ತೆ
ನಿರ್ಮಾಣವಾದ ವರ್ಷ: 2006
ಉದ್ದ: 3,000 ಮೀಟರ್
ಎಲ್ಲಿ ಹಾದು ಹೋಗುತ್ತದೆ: ಕೃಷ್ಣ ನದಿ
ದೇಶದ ಅತಿ ಉದ್ದದ ಪಟ್ಟಿಯಲ್ಲಿ ನಮ್ಮ ಕರ್ನಾಚಕದ ಬಿಜಾಪುರ ಜಿಲ್ಲೆಯಲ್ಲಿರುವ ಕೊರ್ತಿ-ಕೊಲ್ಹಾರ ಸೇತುವೆ ಸಹ ಕಾಣಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 218ರ ಭಾಗವಾಗಿರುವ ಕೊರ್ತಿ-ಕೊಲ್ಹಾರ ಸೇತುವೆಯು ಬಿಜಾಪುರ ಹಾಗೂ ಹುಬ್ಲಿ ನಗರಗಳನ್ನು ಸಂಪರ್ಕಿಸುತ್ತದೆ.

07. ಕೊಲಿಯಾ ಬೊಮೊರ ಸೇತು
ರಾಜ್ಯ: ಅಸ್ಸಾಂ
ನಗರ: ತೆಜ್ಪುರ
ಸಂಚಾರ: ರಸ್ತೆ
ನಿರ್ಮಾಣವಾದ ವರ್ಷ: 1987
ಉದ್ದ: 3,015 ಮೀಟರ್
ಎಲ್ಲಿ ಹಾದು ಹೋಗುತ್ತದೆ: ಬ್ರಹ್ಮಪುತ್ರ ನದಿ
ಅಸ್ಸಾಂನ ಬ್ರಹ್ಮಪುತ್ರ ನದಿ ಮೇಲೆ ಹಾದು ಹೋದು ಹೋಗುವ ಕೊಲಿಯಾ ಬೊಮೊರ ಸೇತು (Kolia Bhomora Setu)ಉತ್ತರದಲ್ಲಿ ಸೋತಿತ್ ಪುರ ಹಾಗೂ ದಕ್ಷಿಣದ ನೌಗಾಂವ್ ಜಿಲ್ಲೆಯನ್ನು ಸಂಪರ್ಕಿಸುತ್ತದೆ. ಇದರ ನಿರ್ಮಾಣಕ್ಕೆ ಆರು ವರ್ಷಗಳೇ ತಗುಲಿತ್ತು.

06. ಜವಾಹರ್ ಸೇತು
ರಾಜ್ಯ: ಬಿಹಾರ
ನಗರ: ಸನ್ ನಗರ
ಸಂಚಾರ: ರಸ್ತೆ
ನಿರ್ಮಾಣವಾದ ವರ್ಷ: 1965
ಉದ್ದ: 3,061 ಮೀಟರ್
ಎಲ್ಲಿ ಹಾದು ಹೋಗುತ್ತದೆ: ಸನ್ ನದಿ
ನೆಹ್ರು ಸೇತುವೆಗೆ ಸಮಾನಂತರವಾಗಿ ನಿರ್ಮಾಣವಾಗಿರುವ ಜವಾಹರ್ ಸೇತು 1965ರಲ್ಲಿ ಲೋಕಾರ್ಪಣೆಯಾಗಿತ್ತು. ಇದು ಕೂಡಾ ದೆಹ್ರಿ ಆನ್ ಸನ್ ದಿಂದ ಸನ್ ನಗರವನ್ನು ಸಂಪರ್ಕಿಸುತ್ತದೆ. ಇದು ಐತಿಹಾಸಿಕ ಏಷ್ಯಾದ ರಸ್ತೆ 'ಗ್ರಾಂಡ್ ಟ್ರಂಕ್ ರೋಡ್' ಜಾಲದ ಭಾಗವಾಗಿದ್ದು, ಬಳಿಕ ಇದು ಬಾಂಗ್ಲಾದೇಶ ಹಾಗೂ ಪಾಕಿಸ್ತಾನವನ್ನು ಸಂಪರ್ಕಿಸುತ್ತದೆ.

05. ನೆಹ್ರು ಸೇತು
ರಾಜ್ಯ: ಬಿಹಾರ
ನಗರ: ಸನ್ ನಗರ
ಸಂಚಾರ: ರೈಲು
ನಿರ್ಮಾಣವಾದ ವರ್ಷ: 1900
ಉದ್ದ: 3,064 ಮೀಟರ್
ಎಲ್ಲಿ ಹಾದು ಹೋಗುತ್ತದೆ: ಸನ್ ನದಿ
ಬಹುಶ: ದೇಶದ ಅತಿ ಪುರಾತನ ರೈಲು ಸೇತುವೆಗಳಲ್ಲಿ ಒಂದಾಗಿರುವ ಬಿಹಾರದ ಸನ್ ರೈಲು ಸುತುವೆಯು ದೆಹ್ರಿಯ ಸನ್ ಹಾಗೂ ಸನ್ ನಗರವನ್ನು ಸಂಪರ್ಕಿಸುತ್ತದೆ. ಇದು ನಿರ್ಮಾಣವಾದ ಸಂದರ್ಭದಲ್ಲಿ ಇಡೀ ವಿಶ್ವದಲ್ಲೇ ಎರಡನೇ ಅತಿ ಉದ್ದದ ಸೇತುವೆಯೆಂಬ ಕೀರ್ತಿಗೆ ಪಾತ್ರವಾಗಿತ್ತು.

04. ವೆಂಬನಾಡ್ ರೈಲು ಸೇತುವೆ
ರಾಜ್ಯ: ಕೇರಳ
ನಗರ: ಕೊಚ್ಚಿ
ಸಂಚಾರ: ರೈಲು
ನಿರ್ಮಾಣವಾದ ವರ್ಷ: 2011
ಉದ್ದ: 4,620 ಮೀಟರ್
ಎಲ್ಲಿ ಹಾದು ಹೋಗುತ್ತದೆ: ವೆಂಬನಾಡ್ ಸರೋವರ
ಪ್ರಕೃತಿ ರಮಣೀಯವಾದ ವೆಂಬನಾಡ್ ಕಾಯಲ್ ಅಥವಾ ಸರೋವರದ ಮೇಲೆ ವೆಂಬನಾಡ್ ರೈಲು ಸೇತುವೆ ಹಾದು ಹೋಗುತ್ತದೆ. ಇದು ದೇಶದಲ್ಲೇ ಅತಿ ಉದ್ದದ ರೈಲ್ವೆ ಹಳಿ ಸೇತುವೆಯಾಗಿದ್ದು, ಎಡಪಲ್ಲಿ ಹಾಗೂ ವಲ್ಲಾರ್ ಪಾಡಂ ಪ್ರದೇಶವನ್ನು ಸಂಪರ್ಕಿಸುತ್ತದೆ. ಇಲ್ಲಿ ಗಮನಾರ್ಹ ವಿಷಯವೆಂದರೆ ಪ್ರಯಾಣಿಕ ರೈಲುಗಳು ಇದರಲ್ಲಿ ಹಾದು ಹೋಗುವುದಿಲ್ಲ ಬದಲಾಗಿ ಸಂಪೂರ್ಣಾಗಿ ಸರಕು ರೈಲುಗಳಿಗೆ ಮೀಸಲಿಡಲಾಗಿದೆ.

03. ವಿಕ್ರಂಶೀಲ ಸೇತು
ರಾಜ್ಯ: ಬಿಹಾರ
ನಗರ: ಭಾಗಲ್ ಫುರ್
ಸಂಚಾರ: ರಸ್ತೆ
ನಿರ್ಮಾಣವಾದ ವರ್ಷ: 2001
ಉದ್ದ: 4,700 ಮೀಟರ್
ಎಲ್ಲಿ ಹಾದು ಹೋಗುತ್ತದೆ: ಗಂಗಾ ನದಿ
ಗಂಗಾ ನದಿ ಮೇಲೆ ಹಾದು ಹೋಗುವ ಮಗದೊಂದು ಅತಿ ಉದ್ದದ ಸೇತುವೆ ಬಿಹಾರದ ಭಾಗಲ್ ಪುರ್ ನಗರದಲ್ಲಿ ಸ್ಥಿತಗೊಂಡಿದೆ. ಇದು ದಕ್ಷಿಣದ ಭಾಗಲ್ ಪುರ್ ದಿಂದ ಉತ್ತರದ ನೌಗಾಚಿಯಾ ನಗರವನ್ನು ಸಂಪರ್ಕಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 80 ಹಾಗೂ 31 ನಡುವೆ ಬಂಧ ಕಲ್ಪಿಸುತ್ತದೆ.

02. ಮಹಾತ್ಮ ಗಾಂಧಿ ಸೇತು
ರಾಜ್ಯ: ಬಿಹಾರ
ನಗರ: ಪಾಟ್ನಾ
ಸಂಚಾರ: ರಸ್ತೆ
ನಿರ್ಮಾಣವಾದ ವರ್ಷ: 1982
ಉದ್ದ: 5,575 ಮೀಟರ್
ಎಲ್ಲಿ ಹಾದು ಹೋಗುತ್ತದೆ: ಗಂಗಾ ನದಿ
ಮುಂಬೈನ ಬಾಂದ್ರಾ ವರ್ಲಿ ಸಮುದ್ರ ಸಂಪರ್ಕ ಸೇತುವೆ ನಿರ್ಮಾಣಗಿಂತಲೂ ಮೊದಲು ದೇಶದ ಅತಿ ದೊಡ್ಡ ಸೇತುವೆ ಎಂಬ ಗೌರವಕ್ಕೆ ಪಾಟ್ನಾದ ಮಹಾತ್ಮ ಗಾಂಧಿ ಸೇತು ಪಾತ್ರವಾಗಿತ್ತು. ದೇಶದ ಅತಿ ಪುರಾತನ ಸೇತುವೆ ಕೂಡಾ ಆಗಿರುವ ಇದನ್ನು 1982ನೇ ಇಸವಿಯಲ್ಲಿ ನಿರ್ಮಿಸಲಾಗಿದ್ದು, ಉತ್ತರ ಬಿಹಾರದಿಂದ ದಕ್ಷಿಣದ ಹಜಿಪುರವನ್ನು ಸಂಪರ್ಕ ಕಲ್ಪಿಸುತ್ತದೆ. ಇದು ರಾಷ್ಟ್ರೀಯ ಹೆದ್ದಾರಿ 19ರ ಭಾಗವಾಗಿದೆ. ಇಲ್ಲಿನ ಆಸಕ್ತಿದಾಯಕ ವಿಷಯೆವೆಂದರೆ ಇದರ ನಿರ್ಮಾಣಕ್ಕೂ ಮೊದಲು ಸಂಚಾರಿಗಳು ಬೋಟ್ ಗಳ ಮೂಲಕ ದಟ ಸೇರುತ್ತಿದ್ದರು.

01. ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ
ರಾಜ್ಯ: ಮಹಾರಾಷ್ಟ್ರ
ನಗರ: ಮುಂಬೈ
ಸಂಚಾರ: ರಸ್ತೆ
ನಿರ್ಮಾಣವಾದ ವರ್ಷ: 2009
ಉದ್ದ: 5600 ಮೀಟರ್
ಎಲ್ಲಿ ಹಾದು ಹೋಗುತ್ತದೆ: ಮಾಹಿಂ ಬೇ
ಮುಂಬೈನ ಏಕೈಕ ಅಭೂತಪೂರ್ವ ಯೋಜನೆಯಾಗಿರುವ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕವನ್ನು 10 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 1650 ಕೋಟಿ ರು.ಗಳ ಯೋಜನಾ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ ಸೇತುವೆಯ ದೀಪಾಲಂಕಾರಕ್ಕಾಗಿಯೇ ಸುಮಾರು 9 ಕೋಟಿ ರು. ವೆಚ್ಚವಾಗಿದೆ. ಹಾಗೆಯೇ 38,000 ಕೀ.ಮೀ. ಉದ್ದದ ಉಕ್ಕಿನ ಹಗ್ಗ, 575000 ಟನ್ನುಗಳಷ್ಟು ಕಾಂಕ್ರೀಟ್ ಬಳಸಿ 6000 ಮಂದಿ ಕೆಲಸಗಾರರು ಕಟ್ಟಿರುವ ಈ ಸೇತುವೆಗೆ ರಾಜೀವ್ ಗಾಂದಿ ಸೇತುವೆ ಎಂದು ಹೆಸರಿಡಲಾಗಿದೆ. ಇದು ಬಾಂದ್ರಾ ಹಾಗೂ ಮುಂಬಯಿ ಪಶ್ಚಿಮ ಉಪನಗರಗಳನ್ನು ವರ್ಲಿ ಮತ್ತು ಮಧ್ಯ ಮುಂಬಯಿಯೊಂದಿಗೆ ಸಂಪರ್ಕಿಸುತ್ತದೆ. ಅಂತೆಯೇ ಸುಮಾರು ಒಂದು ತಾಸಿನ ಪಯಣವನ್ನು 15 ನಿಮಿಷಗಳಿಗೆ ಇಳಿಸಿದೆ.

ಈಗ ದೇಶದಲ್ಲಿ ನಿಮಗೆ ಇಷ್ಟವಾದ ಸೇತುವೆಗಳ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಚರ್ಚಿಸಿರಿ.


Click it and Unblock the Notifications








