ಜಗತ್ತಿನ ಅಗ್ರ 10 ಐಷಾರಾಮಿ ರೈಲುಗಳು
ದಿನಪ್ರತಿ ಲೋಕಲ್ ರೈಲಿನಲ್ಲಿ ಸಂಚರಿಸಿ ಬೆಸತ್ತು ಹೋಗಿರುವೀರಾ? ನಿಮಗಿದೋ ನಾವಿಂದು ಪರಿಚಯಿಸಲಿದ್ದೇವೆ ಆಡಂಬರದ ಮಗದೊಂದು ರೂಪವಾಗಿರುವ ಐಷಾರಾಮಿ ರೈಲುಗಳು. ಇಂದಿನ ಆಧುನಿಕ ಕಾಲಘಟ್ಟದಲ್ಲಿ ದುಡ್ಡಿನ ಬಗ್ಗೆ ಯಾರು ಕ್ಯಾರೇ ಮಾಡುತ್ತಿಲ್ಲ. ದುಡ್ಡು ಕೊಟ್ಟರೇ ಸಾಕು ತಮಗೆ ಬೇಕಾದ ಎಲ್ಲ ಸೌಲಭ್ಯಗಳು ಸಿಗಬೇಕು ಎಂದು ಅಂದುಕೊಳ್ಳುವವರೇ ಜಾಸ್ತಿ.
ನೋಡಲು ಸುಂದರ ಅಷ್ಟೇ ಅಪಾಯಕಾರಿ ರೈಲು ಮಾರ್ಗಗಳು
ಅಂದ ಹಾಗೆ ಈ ಕ್ಷಣಿಕ ಲೋಕದಲ್ಲಿ ನೀವು ಅನುಭವಿಸಬೇಕಾದ ಕೆಲವು ರೈಲ್ವೆ ಯಾತ್ರೆಗಳನ್ನು ನಾವಿಲ್ಲಿ ಪರಿಚಯಿಸಲಿದ್ದೇವೆ. ಐಷಾರಾಮಿ ಪಯಣದ ಪ್ರತೀಕವಾದ ಈ 10 ರೈಲು ಸಂಚಾರಗಳು ನಿಮ್ಮಲ್ಲಿ ಆನಂದವನ್ನುಂಟು ಮಾಡಲಿದೆ. ಇದಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ವೆನಿಸ್-ಸಿಂಪ್ಲೊನ್ ಓರಿಯಂಟ್ ಎಕ್ಸ್ ಪ್ರೆಸ್, ಯುರೋಪ್
ಯುರೋಪ್ ವೆನಿಸ್-ಸಿಂಪ್ಲೊನ್ ಓರಿಯಂಟ್ ಎಕ್ಸ್ ಪ್ರೆಸ್ ಪಯಣವು ನಿಮ್ಮನ್ನು ಒಂದು ಶತಮಾನದಷ್ಟು ಹಿಂದೆ ಕೊಂಡೊಯ್ಯಲಿದೆ. ಅಂದರೆ 1920ನೇ ದಶಕದಲ್ಲಿದ್ದ ವಿಶಿಷ್ಟ ಆಲಂಕಾರಗಳು, ಗಾಜಿನ ಫಲಕಗಳು ವಿಶಿಷ್ಟ ಅನುಭವವನ್ನು ನೀಡಲಿದೆ.
ಸಂಚರಿಸಲು ಸೂಕ್ತ ಕಾಲ: ಮಾರ್ಚ್ ನಿಂದ ನವೆಂಬರ್
ಎಲ್ಲಿ: ಪ್ಯಾರಿಸ್ ನಿಂದ ಇಸ್ತಾಂಬುಲ್

ರೊವೊಸ್ ರೈಲ್, ಆಫ್ರಿಕಾ
ಆಫ್ರಿಕಾದ ರೆವೊಸ್ ರೈಲ್ ಯಾತ್ರೆಯು ಸ್ಮರಣೀಯ ನಿಮಿಷಗಳನ್ನು ನಿಮ್ಮದಾಗಿಸಲಿದೆ. ರಾಯಲ್ ಸೂಟ್ಸ್, ಡಿಲಕ್ಸ್ ಸೂಟ್ಸ್, ಪುಲ್ ಮ್ಯಾನ್ ಸೂಟ್ಸ್ ಗಳೆಂಬ ಹವಾನಿಯಂತ್ರಿತ ಐಷಾರಾಮಿ ಪಯಣವನ್ನು ನೀವು ಕೈಗೊಳ್ಳಬಹುದಾಗಿದೆ. ಇದರಲ್ಲಿ ಮಿನಿ ಬಾರ್, ಆತಿಥಿ ಕೋಣೆ, ಭೋಜನಾ ವ್ಯವಸ್ಥೆಯು ಲಭ್ಯವಾಗಲಿದೆ.
ಸಂಚರಿಸಲು ಸೂಕ್ತ ಕಾಲ: ವರ್ಷದುದ್ದಕ್ಕೂ
ಎಲ್ಲಿ: ಪ್ರೆಟೋರಿಯಾ, ಕೇಪ್ ಟೈನ್, ಡರ್ಬನ್, ವಿಕ್ಟೋರಿಯಾ ಫಾಲ್ಸ್, ಡಾರ್ ಈಸ್ ಸಲಾಂ (ತನ್ಜಾನಿಯಾ), ಸ್ವಕೋಪ್ಮುಂಡ್ (ನಮಿಬಿಯಾ)

ಪ್ಯಾಲೆಸ್ ಆನ್ ವೀಲ್ಸ್, ರಾಜಸ್ತಾನ
ಭಾರತದ ಮಾಜಿ ಐಷಾರಾಮಿ ರೈಲು, ಪ್ಯಾಲೆಸ್ ಆನ್ ವೀಲ್ಸ್ ಪಿಎಟಿಎ ಗೋಲ್ಡ್ ಅವಾರ್ಡ್ ಹಾಗೂ ವಿಶ್ವದ ನಾಲ್ಕನೇ ಶ್ರೀಮಂತ ರೈಲು ಎಂಬ ಗೌರವಕ್ಕೂ ಭಾಜನವಾಗಿತ್ತು. ಇದರಲ್ಲಿ 88 ಮಂದಿ ಪ್ರವಾಸಿಗರಿಗೆ ಸಂಚರಿಸಬಹುದಾಗಿದೆ. ವಿವಿಧ ವರ್ಣಚಿತ್ರಗಳು, ಪಿಠೋಪಕರಣಗಳು ಪರಿಪೂರ್ಣ ರಾಯಲ್ ಸಂಚಾರವನ್ನು ಖಾತ್ರಿಪಡಿಸುತ್ತದೆ. ಅಲ್ಲದೆ ಮಹಾರಾಜಾ ಹಾಗೂ ಮಹಾರಾಣಿ ರೆಸ್ಟೋರೆಂಟ್ ಗಳು ಇದರ ವಿಶೇಷತೆಯಾಗಿದೆ.
ಸಂಚರಿಸಲು ಸೂಕ್ತ ಕಾಲ: ನವೆಂಬರ್ ನಿಂದ ಎಪ್ರಿಲ್
ಎಲ್ಲಿ: ದೆಹಲಿ, ಜೈಪುರ, ಉದೈಯ್ ಪುರ್, ಜೋಧ್ ಪುರ್, ಆಗ್ರಾ

ರೋಕಿ ಮೌಂಟೈನೀರ್, ಕೆನೆಡಾ
ನೀವು ಕೆನೆಡಾದ ಪರ್ವತಾರೋಹಿ ನೈಸರ್ಗಿಕ ಸೌಂದರ್ಯವನ್ನು ಆನಂದಿಸಲು ಬಯಸುವುದಾದ್ದಲ್ಲಿ ರೋಕಿ ಮೌಂಟೈನೀರ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ. ಇಲ್ಲಿ ಆತಿಥಿಗಳು ಗೋಲ್ಡ್ ಲೀಫ್ ಸರ್ವಿಸ್, ಸಿಲ್ವರ್ ಲೀಫ್ ಸರ್ವಿಸ್, ರೆಡ್ ಲಿಫ್ ಸರ್ವಿಸ್ ಮತ್ತು ವಿಸ್ಟ್ಲರ್ ಸೇವೆಯನ್ನು ಆನಂದಿಸಬಹುದಾಗಿದೆ. ಏಳು ಬಾರಿ ವಿಶ್ವ ಪ್ರವಾಸ ಪ್ರಶಸ್ತಿಗೂ ಇದು ಭಾಜನವಾಗಿದೆ.
ಸಂಚರಿಸಲು ಸೂಕ್ತ ಕಾಲ: ಎಪ್ರಿಲ್ ನಿಂದ ಅಕ್ಟೋಬರ್
ಎಲ್ಲಿ: ವಾಂಕೋವರ್ ನಿಂದ ಕಾಲ್ ಗೇರಿ, ವಾಂಕೋವರ್ ಮತ್ತು ಜಾಸ್ಪೆರ್, ವಿಸ್ಟ್ಲರ್ ನಿಂದ ಜಾಸ್ರ್, ಸೀಟ್ಲ್ ನಿಂದ ಜಾಸ್ಪರ್, ವಾಂಕೋವರ್ ನಿಂದ ವಿಸ್ಟ್ಲೆರ್

ಮಹಾರಾಜಾ ಎಕ್ಸ್ ಪ್ರೆಸ್, ಭಾರತ
ಐಷಾರಾಮಿ ರೈಲು ಎಂಬ ಖ್ಯಾತಿಗೆ ಪಾತ್ರವಾಗಿರುವ ಮಾಹಾರಾಜಾಸ್ ಎಕ್ಸ್ ಪ್ರೆಸ್ ಸತತವಾಗಿ ಮೂರು ಬಾರಿ 2012, 2013 ಹಾಗೂ 2014ನೇ ಇಸವಿಗಳಲ್ಲಿ 'ವಿಶ್ವ ಪ್ರವಾಸ ಪ್ರಶಸ್ತಿ'ಯನ್ನು ಬಾಚಿಕೊಂಡಿತ್ತು. ಮಯೂರ್ ಮಹಲ್ ತಮ್ತು ರಂಗ್ ಮಹಲ್ ಗಳು ಇದರ ವಿಶಿಷ್ಟತೆಯಾಗಿದ್ದು, ರಾಜಾ ಕ್ಲಬ್ ಹಾಗೂ ಸಫಾರಿ ಬಾರ್ ಇದರಲ್ಲಿರಲಿದೆ.
ಸಂಚರಿಸಲು ಸೂಕ್ತ ಕಾಲ: ನವೆಂಬರ್ ನಿಂದ ಎಪ್ರಿಲ್
ಎಲ್ಲಿ: ನವದೆಹಲಿ, ಔರಂಗಾಬಾದ್, ಉದೈಯ್ ಪುರ್, ಜೋಧ್ ಪುರ್, ಬಿಕಾನೆರ್, ಜೈಪುರ, ಆಗ್ರಾ, ವಾರಣಾಸಿ, ಲಕ್ನೋ
ವಿಶ್ವದ ಅತಿ ದುಬಾರಿ ಐಷಾರಾಮಿ ರೈಲು - 'ಮಹಾರಾಜಾ ಎಕ್ಸ್ ಪ್ರೆಸ್'
ಈಸ್ಟರ್ನ್ ಮತ್ತು ಓರಿಯೆಂಟಲ್ ಎಕ್ಸ್ ಪ್ರೆಸ್, ದಕ್ಷಿಣ ಪೂರ್ವ ಏಷ್ಯಾ
ಇಲ್ಲಿನ ಆಕರ್ಷಕ ಪಟ್ಟಣಗಳು, ಮನ ಸೆಳೆಯುವ ಪರ್ವತಗಳು, ಕಾಡುಗಳು, ದೇವಾಲಯಗಳು ನಿಮ್ಮ ಪಯಣವನ್ನು ಶ್ರೀಮಂತವಾಗಿಸಲಿದೆ. ಆರು ವಿಭಿನ್ನ ಪಯಣಗಳನ್ನು ಇಲ್ಲಿನ ಐಷಾರಾಮಿ ರೈಲು ಹೊಂದಿರುತ್ತದೆ. ಅವುಗಳೆಂದರೆ ಬ್ಯಾಂಕಾಂಕ್ ನಿಂದ ಸಿಂಗಾಪುರ, ಸಿಂಗಾಪುರದಿಂದ ಬ್ಯಾಂಕಾಂಕ್, ಎಪಿಕ್ ಥಾಯ್ಲೆಂಡ್, ಫಾಬ್ಲೆಸ್ ಆಫ್ ದಿ ಹಿಲ್ಸ್, ಲೆಜೆಂಡ್ ಆಫ್ ದಿ ಪೆನಿನ್ ಸುಲಾ ಮತ್ತು ನ್ಯೂ ಇಯರ್ ಸೆಲೆಬ್ರೇಷನ್ ಇದರ ವಿಭಿನ್ನತೆಯಾಗಿದೆ.
ಸಂಚರಿಸಲು ಸೂಕ್ತ ಕಾಲ: ಮೇನಿಂದ ಡಿಸೆಂಬರ್
ಎಲ್ಲಿ: ಬ್ಯಾಂಕಾಂಕ್, ಸಿಂಗಾಪುರ, ಕೌಲಾಂಲಪುರ

ಗೋಲ್ಡನ್ ಈಗಲ್ ಟ್ರಾನ್ಸ್ ಸೈಬರಿಯನ್ ಎಕ್ಸ್ ಪ್ರೆಸ್, ರಷ್ಯಾ
ಜಗತ್ತಿನ ಅತ್ಯುತ್ತಮ ರೈಲು ಯಾನ ಎಂಬ ಮೆಚ್ಚುಗೆಗೆ ಪಾತ್ರವಾಗಿರುವ ಗೋಲ್ಡನ್ ಈಗಲ್ ಟ್ರಾನ್ಸ್ ಸೈಬರಿಯನ್ ಎಕ್ಸ್ ಪ್ರೆಸ್, ಮೋಸ್ಕೋದ ಪೂರ್ವ ಹಾಗೂ ಪಶ್ಚಿಮ ಪ್ರದೇಶಗಳನ್ನು ಆವರಿಸುತ್ತದೆ. ಇದರಲ್ಲಿ ಸಂಚರಿಸುವ ಆತಿಥಿಗಳು ಭವ್ಯವಾದ, ಅಂತ್ಯವಿಲ್ಲದ ಹುಲ್ಲುಗಾವಲು ಮತ್ತು ವಿಶ್ವದ ಅತ್ಯಂತ ದೊಡ್ಡ ತಾಜಾನೀರಿನ ಸರೋವರ ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ.
ಸಂಚರಿಸಲು ಸೂಕ್ತ ಕಾಲ: ಮೇನಿಂದ ಸೆಪ್ಟೆಂಬರ್
ಎಲ್ಲಿ: ಮೋಸ್ಕೋ, ಕಜಾನ್, ಲೇಕ್ ಬೈಕಲ್, ವ್ಲಾದಿವೊಸ್ಟೋಕ್

ರಾಯಲ್ ಸ್ಕಾಟ್ಸ್ ಮ್ಯಾನ್, ಸ್ಕಾಟ್ಲೆಂಡ್
ರಾಯಲ್ ಸ್ಕಾಟ್ಸ್ ಮ್ಯಾನ್ ರೈಲು ಯಾತ್ರೆಯು 36 ಮಂದಿಗೆ ಸಂಪೂರ್ಣ ಖಾಸಗಿ ಪಯಣದ ಅನುಭವ ನೀಡಲಿದೆ. ಗುಣಮಟ್ಟದ ಸಾಮಾಗ್ರಿಗಳು, ಖಾಸಗಿ ಸ್ನಾನಗೃಹ, ಆಧುನಿಕ ಸೌಲಭ್ಯಗಳು ಮತ್ತು ಪ್ರಕೃತಿ ರಮಣೀಯ ದೃಶ್ಯಗಳನ್ನು ಸವಿಯಬಹುದಾಗಿದೆ.
ಸಂಚರಿಸಲು ಸೂಕ್ತ ಕಾಲ: ಎಪ್ರಿಲ್ ನಿಂದ ಅಕ್ಟೋಬರ್
ಎಲ್ಲಿ: ಲಂಡನ್, ಕೀಥ್, ಪರ್ತ್, ಯಾರ್ಕ್, ಓಕ್ಸ್ ಫರ್ಡ್, ಚೆಸ್ಟೆರ್

ಚೀಫ್ (Chepe), ಮೆಕ್ಸಿಕೊ
ಮೆಕ್ಸಿಕೊದ ಭವ್ಯವಾದ ಚೀಫ್ ರೈಲು, ವಿಶ್ವದ ಅತ್ಯಂತ ಅದ್ಭತ ರೈಲು ಯಾನವನ್ನು ನೀಡುತ್ತದೆ. ನೈಸರ್ಗಿಕ ಸೌಂದರ್ಯ, ವಿಶಿಷ್ಟ ಸಂಪ್ರಾದಾಯವು ಕ್ಷಣ ಕ್ಷಣದಲ್ಲೂ ಕ್ಲಾಸಿಕ್ ಅನುಭವ ನೀಡುತ್ತದೆ.
ಸಂಚರಿಸಲು ಸೂಕ್ತ ಕಾಲ: ವರ್ಷದುದ್ಧಕ್ಕೂ
ಎಲ್ಲಿ: ಚಿಹೋವಾ, ಕ್ರೀಲ್, ಟ್ರೆಮೊರಿಸ್, ಲಾಸ್ ಮೋಚಿಸ್

ದಿ ಘಾನ್, ಆಸ್ಟ್ರೇಲಿಯಾ
ಎಂಜಿನಿಯರ್ ಅಮೋಘತೆಗೆ ಇಂದೊಂದು ಅತ್ಯುತ್ತಮ ಉದಾಹರಣೆಯಾಗಿದೆ. ಈ 2,979 ಕೀ.ಮೀ. ಉದ್ದದ ಯಾತ್ರೆಯು ನಿಮ್ಮನ್ನೂ ಮಾಯಾ ಪ್ರಪಂಚಕ್ಕೆ ಕೊಂಡೊಯ್ಯಲಿದೆ. ಒಂದು ಪಯಣದಲ್ಲಿ ಅನುಭವಿಸಬೇಕಾದ ಎಲ್ಲ ಸೌಲಭ್ಯಗಳು ಇದರಲ್ಲಿರಲಿದೆ.
ಸಂಚರಿಸಲು ಸೂಕ್ತ ಕಾಲ: ವರ್ಷದುದ್ಧಕ್ಕೂ
ಎಲ್ಲಿ: ಆಡಿಲೇಡ್, ಆಲಿಸ್ ಸ್ಪ್ರಿಂಗ್ಸ್, ಡಾರ್ವಿನ್

ದೇಶದ ಅತಿ ಉದ್ದದ ರೈಲು ಸೇತುವೆ ವೆಂಬನಾಡ್
ನಮ್ಮ ಫೇಸ್ ಬುಕ್ ಪುಟಕ್ಕೊಂದು ಲೈಕ್ ಒತ್ತಿರಿ


Click it and Unblock the Notifications








