ಮಿಲಿಟರಿ ಬಲಾಬಲ; ರಕ್ಷಣೆಗಾಗಿ ಅತಿ ಹೆಚ್ಚು ಖರ್ಚು ಮಾಡುವ ದೇಶ ಯಾವುದು?

2015ನೇ ಲೆಕ್ಕಾಚಾರದ ಪ್ರಕಾರ ಜಾಗತಿಕ ಮಿಲಿಟರಿ ಖರ್ಚು ಬರೋಬ್ಬರಿ 1.7 ಟ್ರಿಲಿಯನ್ ಅಮೆರಿಕನ್ ಡಾಲರನ್ನು ಮೀರಿದೆ. ಪ್ರತಿಯೊಂದು ದೇಶಗಳು ತಮ್ಮ ತಮ್ಮ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವುದರಲ್ಲಿ ಮಗ್ನವಾಗಿರುವುದು ಮಿಲಿಟರಿ ವೆಚ್ಚದಲ್ಲಿ ಭಾರಿ ಏರುಗತಿ ಸಾಧಿಸಲು ಕಾರಣವಾಗಿದೆ. ವಿಶ್ವ ರಾಷ್ಟ್ರಗಳು ಮಿಲಿಟರಿ ಅಗತ್ಯಗಳಿಗಾಗಿ ಭಾರಿ ಮೊತ್ತವನ್ನು ವ್ಯಯ ಮಾಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಭಾರಿ ವರ್ಧನೆ ಕಂಡುಬರುತ್ತಿದೆ.

ಈ ಸಂಬಂಧ ವಿಶ್ವದೆಲ್ಲ ರಾಷ್ಟ್ರಗಳ ಶಸ್ತ್ರಾಸ್ತ್ರ ವೆಚ್ಚಯನ್ನು ಅಧ್ಯಯನ ಮಾಡುತ್ತಿರುವ ಸ್ಟಾಕ್ಹೋಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ತಾಜಾ ವರದಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿ ಕಂಡುಬಂದಿದ್ದು, ಚೀನಾ ಎರಡನೇ ಸ್ಥಾನದಲ್ಲಿದೆ. ಹಾಗಿದ್ದರೂ ಮೂರನೇ ಸ್ಥಾನದಲ್ಲಿ ಅಚ್ಚರಿಯ ಎಂಟ್ರಿ ಕಂಡುಬಂದಿದೆ. ಅಲ್ಲದೆ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬುದನ್ನು ಕೆಳಗಿನ ಪಟ್ಟಿಯ ಮುಖಾಂತರ ಅರಿಯೋಣವೇ.

01. ಅಮೆರಿಕ

01. ಅಮೆರಿಕ

ಆರ್ಥಿಕ ಹಿಂಜರಿತವನ್ನು ಸಮರ್ಥವಾಗಿ ಎದುರಿಸುತ್ತಿರುವ ವಿಶ್ವದ ದೊಡ್ಡಣ್ಣ ಅಮೆರಿಕ ಈಗಲೂ ಅಗ್ರಸ್ಥಾನದಲ್ಲಿದ್ದು, 2015ನೇ ಸಾಲಿನಲ್ಲಿ ಒಟ್ಟು 596 ಬಿಲಿಯನ್ ಅಮೆರಿಕನ್ ಡಾಲರ್ ಮಿಲಿಟರಿ ಬಳಕೆಗಾಗಿ ವ್ಯಯ ಮಾಡಿದೆ.

02. ಚೀನಾ

02. ಚೀನಾ

21ನೇ ಶತಮಾನದಲ್ಲಿ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಚೀನಾ, ಸೈನ್ಯ ಬಲದಲ್ಲಿ ತಾನ್ಯಾಕೆ ಮುಂದಿದೆ ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿದೆ. ವರದಿಗಳ ಪ್ರಕಾರ ಚೀನಾ 215 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಮಿಲಿಟರಿಗಾಗಿ ವ್ಯಯ ಮಾಡಿದೆ.

03. ಸೌದಿ ಅರೇಬಿಯಾ

03. ಸೌದಿ ಅರೇಬಿಯಾ

ನಾವು ಈಗಾಗಲೇ ತಿಳಿಸಿರುವಂತೆಯೇ ಮೂರನೇ ಸ್ಥಾನದಲ್ಲಿ ಅಚ್ಚರಿಯ ಪ್ರವೇಶ ಕಂಡುಬಂದಿದೆ. 2015ನೇ ಸಾಲಿನಲ್ಲಿ ಮಿಲಿಟರಿ ಅಗತ್ಯಗಳಿಗಾಗಿ 87.2 ಬಿಲಿಯನ್ ಅಮೆರಿಕನ್ ಡಾಲರ್ ವ್ಯಯ ಮಾಡಿರುವ ಸೌದಿ ಅರೇಬಿಯಾ ಮೂರನೇ ಸ್ಥಾನಕ್ಕೇರಿದೆ.

04. ರಷ್ಯಾ

04. ರಷ್ಯಾ

ಅಮೆರಿಕ ವಿರುದ್ಧದ ಶೀತಲ ಸಮರದ ಬಳಿಕ ಸ್ವಲ್ಪ ಹಿನ್ನಡೆಯನ್ನು ಅನುಭವಿಸಿದರೂ ರಷ್ಯಾ ತನ್ನ ಆಂತರಿಕ ಭದ್ರತೆಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಿದೆ ಎಂಬುದು ಇಲ್ಲಿ ಕಂಡುಬರುತ್ತಿದೆ. ಕಳೆದ ವರ್ಷ ರಷ್ಯಾ 66.4 ಬಿಲಿಯನ್ ಅಮೆರಿಕರ್ ಡಾಲರ್ ಮಿಲಿಟರಿಗಾಗಿ ವ್ಯಯ ಮಾಡಿದೆ.

05. ಬ್ರಿಟನ್

05. ಬ್ರಿಟನ್

ಒಂದು ಕಾಲದಲ್ಲಿ ಸಾಮ್ರಾಜ್ಯಶಾಹಿ ಆಡಳಿತದಿಂದ ವಿಶ್ವಕ್ಕೆ ಭೀತಿಯಾಗಿರುವ ಬ್ರಿಟನ್ ಈಗಲೂ ಮಿಲಿಟರಿ ವ್ಯವಸ್ಥೆಗೆ ಅತಿ ಹೆಚ್ಚು ಹೂಡಿಕೆಯನ್ನು ಮಾಡುತ್ತಿದೆ. ಅಗ್ರ ಐದು ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಬ್ರಿಟನ್ 55.5 ಮಿಲಿಯನ್ ಡಾಲರ್ ಗಳನ್ನು ಹೂಡಿಕೆ ಮಾಡಿದೆ.

06. ಭಾರತ

06. ಭಾರತ

ಪ್ರತಿ ಬಜೆಟ್ ನಲ್ಲೂ ರಕ್ಷಣಾ ವ್ಯವಸ್ಥೆಗಾಗಿ ಅತಿ ಹೆಚ್ಚು ವ್ಯಯ ಮಾಡುತ್ತಿರುವ ಭಾರತ 51.3 ಬಿಲಿಯನ್ ಅಮೆರಿಕನ್ ಡಾಲರ್ ವ್ಯಯ ಮೂಡುವ ಮೂಲಕ ಗಮನ ಸೆಳೆದಿದೆ.

07. ಫ್ರಾನ್ಸ್

07. ಫ್ರಾನ್ಸ್

ವಿಶ್ವಸಂಸ್ಥೆಯ ವಿಶಿಷ್ಟ ವಿಟೋ ಪವರ್ ಹೊಂದಿರುವ ಐದು ದೇಶಗಳಲ್ಲಿ ಒಂದಾಗಿರುವ ಫ್ರಾನ್ಸ್, 2015ನೇ ಸಾಲಿನಲ್ಲಿ ಮಿಲಿಟರಿಗಾಗಿ 50.9 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದೆ.

08. ಜಪಾನ್

08. ಜಪಾನ್

ಎರಡನೇ ಮಹಾಯುದ್ಧದಲ್ಲಿ ಅಣು ಬಾಂಬ್ ದಾಳಿಯ ಬಳಿಕ ಶಿಪ್ರ ಗತಿಯಲ್ಲಿ ಚೇತರಿಸಿಕೊಂಡಿರುವ ಜಪಾನ್, ರಕ್ಷಣೆಗಾಗಿ 40.9 ಬಿಲಿಯನ್ ಅಮೆರಿಕನ್ ಡಾಲರ್ ವ್ಯಯ ಮಾಡಿದೆ.

09. ಜರ್ಮನಿ

09. ಜರ್ಮನಿ

ಯುರೋಪ್‌ನ ಮುಂದುವರಿದ ರಾಷ್ಟ್ರಗಳಲ್ಲಿ ಒಂದಾಗಿರುವ ಜರ್ಮನಿ ಕೂಡಾ ರಕ್ಷಣೆಗಾಗಿ ಅತಿ ಹೆಚ್ಚು ಖರ್ಚು ಮಾಡುತ್ತಿದ್ದು, 2015ನೇ ಸಾಲಿನಲ್ಲಿ 39.4 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದೆ.

10. ದಕ್ಷಿಣ ಕೊರಿಯಾ

10. ದಕ್ಷಿಣ ಕೊರಿಯಾ

ಉತ್ತರ ಕೊರಿಯಾದಿಂದ ಸದಾ ಭದ್ರತಾ ಭೀತಿಯನ್ನು ಎದುರಿಸುತ್ತಿರುವ ದಕ್ಷಿಣ ಕೊರಿಯಾ ತನ್ನ ಮಿಲಿಟರಿ ಶಕ್ತಿಯನ್ನು ಮತ್ತಷ್ಟು ಬಲಪಡಿಪಡಿಸುವ ಇರಾದೆಯಲ್ಲಿದ್ದು, 2015ರಲ್ಲಿ ಒಟ್ಟು 36.4 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದೆ.

More from DriveSpark

Article Published On: Wednesday, April 13, 2016, 10:46 [IST]
English summary
Top 10 Military Spenders In 2015
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+