ಪ್ರವಾಸಿಗೆ ಚಿತ್ರ ಹಿಂಸೆ ನೀಡಿದ ಅಧಿಕಾರಿಗಳು, ವೈರಲ್ ಆದ ವೀಡಿಯೊ

ಅಟಲ್ ಸುರಂಗದೊಳಗೆ ನಡೆದಿದೆ ಎಂದು ಹೇಳಲಾದ ಘಟನೆಯೊಂದರ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಾಗ ಸುರಂಗದಲ್ಲಿದ್ದವರೊಬ್ಬರು ದೃಶ್ಯಗಳನ್ನು ರೆಕಾರ್ಡ್ ಮಾಡಿದ್ದಾರೆ.

ಪ್ರವಾಸಿಗೆ ಚಿತ್ರ ಹಿಂಸೆ ನೀಡಿದ ಅಧಿಕಾರಿಗಳು, ವೈರಲ್ ಆದ ವೀಡಿಯೊ

ಈ ವೀಡಿಯೊವನ್ನು ಪಂಜಾಬ್ ಕೇಸರಿ ಹಿಮಾಚಲ ಪ್ರದೇಶದ ಯು-ಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ದೃಶ್ಯದಲ್ಲಿ ಪ್ರವಾಸಿಯೊಬ್ಬನಿಗೆ ಅಧಿಕಾರಿಗಳು ದೈಹಿಕ ಹಿಂಸೆ ನೀಡುತ್ತಿರುವುದನ್ನು ಕಾಣಬಹುದು. ಈ ವೀಡಿಯೊದಲ್ಲಿ ವ್ಯಕ್ತಿಗೆ ಹಿಂಸೆ ನೀಡುತ್ತಿರುವವನ್ನು ಬಾರ್ಡರ್ ರೋಡ್ ಆರ್ಗನೈಜೇಷನ್ ಅಧಿಕಾರಿಗಳಾಗಿರಬಹುದು ಎಂದು ಹೇಳಲಾಗಿದೆ.

ಪ್ರವಾಸಿಗೆ ಚಿತ್ರ ಹಿಂಸೆ ನೀಡಿದ ಅಧಿಕಾರಿಗಳು, ವೈರಲ್ ಆದ ವೀಡಿಯೊ

ಅಷ್ಟಕ್ಕೂ ಆ ವ್ಯಕ್ತಿ ಏನು ತಪ್ಪು ಮಾಡಿದ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಅಧಿಕಾರಿಗಳು ಆ ವ್ಯಕ್ತಿಗೆ ಥಳಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವೀಡಿಯೊದಲ್ಲಿರುವ ಅಧಿಕಾರಿಗಳು ಆ ವ್ಯಕ್ತಿಗೆ ಚಿತ್ರ ಹಿಂಸೆ ನೀಡುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪ್ರವಾಸಿಗೆ ಚಿತ್ರ ಹಿಂಸೆ ನೀಡಿದ ಅಧಿಕಾರಿಗಳು, ವೈರಲ್ ಆದ ವೀಡಿಯೊ

ವೀಡಿಯೊ ವೈರಲ್ ಆದ ತಕ್ಷಣವೇ ಎಚ್ಚೆತ್ತು ಕೊಂಡಿರುವ ಹಿಮಾಚಲ ಪ್ರದೇಶ ಪೊಲೀಸರು ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಆದರೆ ಘಟನೆ ಕುರಿತು ಪೊಲೀಸರು ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಪ್ರವಾಸಿಗೆ ಚಿತ್ರ ಹಿಂಸೆ ನೀಡಿದ ಅಧಿಕಾರಿಗಳು, ವೈರಲ್ ಆದ ವೀಡಿಯೊ

ವೀಡಿಯೊದಲ್ಲಿರುವ ಪ್ರವಾಸಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಅಧಿಕಾರಿಗಳು ಈ ರೀತಿ ಹಲ್ಲೆ ನಡೆಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಅಟಲ್ ಸುರಂಗವನ್ನು ಕೆಲವು ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪ್ರವಾಸಿಗೆ ಚಿತ್ರ ಹಿಂಸೆ ನೀಡಿದ ಅಧಿಕಾರಿಗಳು, ವೈರಲ್ ಆದ ವೀಡಿಯೊ

ದಿನ ಕಳೆದಂತೆ ಅಟಲ್ ಸುರಂಗವು ಭಾರತದಾದ್ಯಂತವಿರುವ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಅಟಲ್ ಸುರಂಗಕ್ಕೆ ಭೇಟಿ ನೀಡುವ ಪ್ರವಾಸಿಗರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ.

ಪ್ರವಾಸಿಗೆ ಚಿತ್ರ ಹಿಂಸೆ ನೀಡಿದ ಅಧಿಕಾರಿಗಳು, ವೈರಲ್ ಆದ ವೀಡಿಯೊ

ವೇಗವಾಗಿ ವಾಹನ ಚಲಾಯಿಸುವುದು, ಅದರಲ್ಲೂ ಕುಡಿದು ವಾಹನ ಚಾಲನೆ ಮಾಡುವುದು ಸೇರಿದಂತೆ ಹಲವಾರು ರೀತಿಯಲ್ಲಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ವಾಹನಗಳನ್ನು ಅಟಲ್ ಸುರಂಗದೊಳಗೆ ನಿಲ್ಲಿಸಿ ನೃತ್ಯ ಮಾಡುತ್ತಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪ್ರವಾಸಿಗೆ ಚಿತ್ರ ಹಿಂಸೆ ನೀಡಿದ ಅಧಿಕಾರಿಗಳು, ವೈರಲ್ ಆದ ವೀಡಿಯೊ

ಇತ್ತೀಚೆಗೆ ಕೆಲವು ಪ್ರವಾಸಿಗರು ಸುರಂಗದೊಳಗೆ ನೃತ್ಯ ಮಾಡಿ, ಸಂಚಾರಕ್ಕೆ ಅಡ್ಡಿ ಪಡಿಸಿದ ವೀಡಿಯೊ ವೈರಲ್ ಆಗಿತ್ತು. ವೀಡಿಯೊ ವೈರಲ್ ಆದ ನಂತರ ಪೊಲೀಸರು ನೃತ್ಯ ಮಾಡಿದ್ದವರನ್ನು ಬಂಧಿಸಿದ್ದರು.

ಜೊತೆಗೆ ಅವರ ವಾಹನಗಳನ್ನು ವಶಕ್ಕೆ ಪಡೆದಿದ್ದರು. ಹಿಮಾಚಲ ಪ್ರದೇಶ ಪೊಲೀಸರು ಅಟಲ್ ಸುರಂಗದಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ಸುಮಾರು 25ಕ್ಕೂ ಹೆಚ್ಚು ಪ್ರವಾಸಿಗರನ್ನು ಬಂಧಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪ್ರವಾಸಿಗೆ ಚಿತ್ರ ಹಿಂಸೆ ನೀಡಿದ ಅಧಿಕಾರಿಗಳು, ವೈರಲ್ ಆದ ವೀಡಿಯೊ

ನಿಯಮಗಳನ್ನು ಉಲ್ಲಂಘಿಸಿದವರಿಂದ ರೂ.50,000 ದಂಡ ವಸೂಲು ಮಾಡಲಾಗಿದೆ. ಈ ಕಾರಣಕ್ಕೆ ಅಟಲ್ ಸುರಂಗಮಾರ್ಗದಲ್ಲಿ ಪ್ರಯಾಣಿಸುವವರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸುವುದು ಅಗತ್ಯ. ಇದರಿಂದ ಅಪಘಾತಗಳನ್ನು ತಡೆಗಟ್ಟಬಹುದು. ಜೊತೆಗೆ ಪೊಲೀಸರ ಕ್ರಮಗಳಿಂದಲೂ ಪಾರಾಗಬಹುದು. ಈ ಚಿತ್ರಗಳನ್ನು ಪಂಜಾಬ್ ಕೇಸರಿ ಹಿಮಾಚಲ ಪ್ರದೇಶ್ ಯೂಟ್ಯೂಬ್ ಚಾನೆಲ್ ನಿಂದ ಪಡೆಯಲಾಗಿದೆ.

Most Read Articles

Kannada
English summary
Tourist assaulted by officers in Atal tunnel. Read in Kannada.
Story first published: Monday, January 4, 2021, 18:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X