ಕರೋನಾ ವೈರಸ್ ಎಫೆಕ್ಟ್: ಲಂಡನ್ ಬಸ್ ಸೇವೆಯನ್ನು ರದ್ದುಪಡಿಸಿದ ಟೂರಿಸ್ಟ್ ಕಂಪನಿ

ಕೋವಿಡ್ 19 ಸಾಂಕ್ರಾಮಿಕದ ಎರಡನೇ ಅಲೆ ದೇಶಾದ್ಯಂತ ಅಟ್ಟಹಾಸ ಮೆರೆಯುತ್ತಿದೆ. ಕರೋನಾ ಸೋಂಕಿನಿಂದ ದೇಶದ ಹಲವು ನಗರಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಇದರ ಪರಿಣಾಮವು ಸಾರಿಗೆ ಉದ್ಯಮದ ಮೇಲೆಯೂ ಉಂಟಾಗಿದೆ.

ಕರೋನಾ ವೈರಸ್ ಎಫೆಕ್ಟ್: ಲಂಡನ್ ಬಸ್ ಸೇವೆಯನ್ನು ರದ್ದುಪಡಿಸಿದ ಟೂರಿಸ್ಟ್ ಕಂಪನಿ

ದೆಹಲಿಯಿಂದ ಲಂಡನ್‌ಗೆ ಸಂಚರಿಸಬೇಕಿದ್ದ ಬಸ್ ಸೇವೆ ಮೇಲೆಯೂ ಕರೋನಾ ವೈರಸ್ ಕರಿ ನೆರಳು ಬಿದ್ದಿದೆ. ಏಕಾಏಕಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಗುರುಗ್ರಾಮ ಮೂಲದ ಅಡ್ವೆಂಚರ್ ಓವರ್ ಲ್ಯಾಂಡ್ ಕಂಪನಿಯು ಏಪ್ರಿಲ್'ನಿಂದ ಆರಂಭಿಸಬೇಕಿದ್ದ ಬಸ್ ಸೇವೆಯನ್ನು ರದ್ದುಪಡಿಸಿದೆ. ಕಂಪನಿಯು ಮುಂದಿನ ವರ್ಷ ಏಪ್ರಿಲ್‌ನಲ್ಲಿ ಈ ವರ್ಷದ ಪ್ರಯಾಣವನ್ನು ಆರಂಭಿಸಲಿದೆ.

ಕರೋನಾ ವೈರಸ್ ಎಫೆಕ್ಟ್: ಲಂಡನ್ ಬಸ್ ಸೇವೆಯನ್ನು ರದ್ದುಪಡಿಸಿದ ಟೂರಿಸ್ಟ್ ಕಂಪನಿ

ಈ ವರ್ಷದ ಬುಕ್ಕಿಂಗ್'ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯ ಬುಕ್ಕಿಂಗ್'ಗಳು 2022ರ ಏಪ್ರಿಲ್ ತಿಂಗಳಿನಿಂದ ಆರಂಭವಾಗಲಿವೆ. ಭಾರತದಲ್ಲಿ ಕರೋನಾ ಸೋಂಕು ಹೆಚ್ಚಾಗಿರುವ ಕಾರಣ ಇತರ ದೇಶಗಳಿಗೆ ಹೋಗುವ ಪ್ರಯಾಣಿಕರ ಮೇಲೆ ನಿರ್ಬಂಧ ಹೇರಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕರೋನಾ ವೈರಸ್ ಎಫೆಕ್ಟ್: ಲಂಡನ್ ಬಸ್ ಸೇವೆಯನ್ನು ರದ್ದುಪಡಿಸಿದ ಟೂರಿಸ್ಟ್ ಕಂಪನಿ

ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷ ಎಲ್ಲಾ ಪ್ರವಾಸಗಳನ್ನು ರದ್ದುಗೊಳಿಸಲು ಕಂಪನಿ ನಿರ್ಧರಿಸಿದೆ. ಅಡ್ವೆಂಚರ್ ಓವರ್ ಲ್ಯಾಂಡ್ ಕಂಪನಿಯ ಈ ಬಸ್ ದೆಹಲಿಯಿಂದ ಲಂಡನ್'ಗೆ 70 ದಿನಗಳಲ್ಲಿ ಪ್ರಯಾಣಿಸುತ್ತದೆ. ಈ ಬಸ್ ದೆಹಲಿಯಿಂದ ಹೊರಟು 18 ದೇಶಗಳ ಮೂಲಕ 20,000 ಕಿ.ಮೀಗಳಿಗಿಂತ ಹೆಚ್ಚು ದೂರ ಪ್ರಯಾಣಿಸಿ ಬ್ರಿಟನ್‌ನ ರಾಜಧಾನಿ ಲಂಡನ್‌ ತಲುಪುತ್ತದೆ.

ಕರೋನಾ ವೈರಸ್ ಎಫೆಕ್ಟ್: ಲಂಡನ್ ಬಸ್ ಸೇವೆಯನ್ನು ರದ್ದುಪಡಿಸಿದ ಟೂರಿಸ್ಟ್ ಕಂಪನಿ

ಕಂಪನಿಯು ಈ ಬಸ್ ಸೇವೆಗೆ ಬಸ್ ಟು ಲಂಡನ್ ಎಂದು ಹೆಸರಿಟ್ಟಿದೆ. ಈ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮ್ಯಾನ್ಮಾರ್, ಥೈಲ್ಯಾಂಡ್, ಲಾವೋಸ್, ಚೀನಾ, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್, ಕಝಕಿಸ್ತಾನ್, ರಷ್ಯಾ, ಲಾಟ್ವಿಯಾ, ಲಿಥುವೇನಿಯಾ, ಪೋಲೆಂಡ್, ಜೆಕ್ ರಿಪಬ್ಲಿಕ್, ಜರ್ಮನಿ, ನೆದರ್ಲ್ಯಾಂಡ್ಸ್, ಬೆಲ್ಜಿಯಂ ಹಾಗೂ ಫ್ರಾನ್ಸ್ ಮೂಲಕ ಲಂಡನ್ ತಲುಪಲಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕರೋನಾ ವೈರಸ್ ಎಫೆಕ್ಟ್: ಲಂಡನ್ ಬಸ್ ಸೇವೆಯನ್ನು ರದ್ದುಪಡಿಸಿದ ಟೂರಿಸ್ಟ್ ಕಂಪನಿ

ಲಂಡನ್‌ಗೆ ಪ್ರಯಾಣಿಸುವ ಈ ಬಸ್‌ 20 ಸೀಟುಗಳನ್ನು ಹೊಂದಿದೆ. ಅದರಲ್ಲಿರುವ ಎಲ್ಲಾ ಸೀಟುಗಳು ಬಿಜಿನೆಸ್ ಕ್ಲಾಸ್'ಗೆ ಸೇರಿವೆ. ಈ ಬಸ್‌ನಲ್ಲಿ 20 ಪ್ರಯಾಣಿಕರ ಜೊತೆಗೆ ಚಾಲಕ, ಸಹಾಯಕ ಚಾಲಕ, ಗೈಡ್ ಹಾಗೂ ಇನ್ನಿತರ ಸಿಬ್ಬಂದಿ ಇರಲಿದ್ದಾರೆ. ಪ್ರತಿ ಮಧ್ಯಂತರದ ನಂತರ ಗೈಡ್ ಅನ್ನು ಬದಲಿಸಲಾಗುತ್ತದೆ.

ಕರೋನಾ ವೈರಸ್ ಎಫೆಕ್ಟ್: ಲಂಡನ್ ಬಸ್ ಸೇವೆಯನ್ನು ರದ್ದುಪಡಿಸಿದ ಟೂರಿಸ್ಟ್ ಕಂಪನಿ

ದೆಹಲಿಯಿಂದ ಲಂಡನ್‌ಗೆ ಪ್ರಯಾಣಿಸಲು ಪ್ರತಿ ಪ್ರಯಾಣಿಕರು ರೂ.15 ಲಕ್ಷ ಪಾವತಿಸಬೇಕಾಗುತ್ತದೆ. 70 ದಿನಗಳ ಈ ಪ್ರವಾಸದಲ್ಲಿ ಪ್ರಯಾಣಿಕರಿಗೆ 4 ಅಥವಾ 5 ಸ್ಟಾರ್ ಹೋಟೆಲ್‌ಗಳಲ್ಲಿ ತಂಗಲು ಅವಕಾಶ ನೀಡಲಾಗುತ್ತದೆ. ಈ ಪ್ರವಾಸದಲ್ಲಿ ಪ್ರಯಾಣಿಕರು ತಮ್ಮ ಇಷ್ಟದ ಆಹಾರ ಹಾಗೂ ಮನರಂಜನೆಯನ್ನು ಪಡೆಯಬಹುದು.

Most Read Articles

Kannada
English summary
Tourist company cancels Delhi to London bus. Read in Kannada.
Story first published: Friday, April 23, 2021, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X