ಸಚಿವರ ವಾಹನವನ್ನು ಓವರ್ ಟೇಕ್ ಮಾಡಿ ಬಂಧನಕ್ಕೊಳಗಾದ ಪ್ರವಾಸಿಗರು

ಭಾರತದ ಯಾವುದೇ ರಾಜ್ಯದ ಸಚಿವರಿಗೆ ಬೆಂಗಾವಲು ವಾಹನಗಳನ್ನು ನೀಡಲಾಗುತ್ತದೆ. ಸಚಿವರ ಸುರಕ್ಷತೆಗಾಗಿ ಅವರ ಬೆಂಗಾವಲು ವಾಹನಗಳು ಹಾದುಹೋಗುವ ಸ್ಥಳಗಳಲ್ಲಿ ಕೆಲ ಸಮಯದವರೆಗೆ ಸಂಚಾರವನ್ನು ನಿಲ್ಲಿಸಲಾಗುತ್ತದೆ.

ಸಚಿವರ ವಾಹನವನ್ನು ಓವರ್ ಟೇಕ್ ಮಾಡಿ ಬಂಧನಕ್ಕೊಳಗಾದ ಪ್ರವಾಸಿಗರು

ಈ ವೇಳೆ ಬೇರೆ ಯಾವುದೇ ವಾಹನಗಳು ಬೆಂಗಾವಲು ಪಡೆಯ ವಾಹನಗಳಿಗೆ ಅಡ್ಡ ಬಂದರೆ ಅದರಿಂದ ತೊಂದರೆಯುಂಟಾಗುತ್ತದೆ. ಒಡಿಶಾದಲ್ಲೂ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದ ಸಂಬಂಧ ಪೊಲೀಸರು ಐವರು ಪ್ರವಾಸಿಗರನ್ನು ವಶಕ್ಕೆ ಪಡೆದಿದ್ದಾರೆ. ಮಾಹಿತಿಯ ಪ್ರಕಾರ, ಈ ಪ್ರವಾಸಿಗರು ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಅಲ್ಲಿನ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರ ಕಾರನ್ನು ಓವರ್ ಟೇಕ್ ಮಾಡಿದ್ದಾರೆ.

ಸಚಿವರ ವಾಹನವನ್ನು ಓವರ್ ಟೇಕ್ ಮಾಡಿ ಬಂಧನಕ್ಕೊಳಗಾದ ಪ್ರವಾಸಿಗರು

ಈ ಆರೋಪದ ಮೇರೆಗೆ ಪೊಲೀಸರು ಈ ಐದು ಪ್ರವಾಸಿಗರನ್ನು ವಶಕ್ಕೆ ಪಡೆದಿದ್ದಾರೆ. ಪುನಃ ಈ ರೀತಿ ತಪ್ಪು ಮಾಡದಂತೆ ಎಚ್ಚರಿಕೆ ನೀಡಿ ಐವರನ್ನೂ ಬಿಡುಗಡೆಗೊಳಿಸಲಾಗಿದೆ. ಸಂತೋಷ್ ಶಾ, ಅವರ ಪತ್ನಿ, ಸಹೋದರ ಹಾಗೂ ಇಬ್ಬರು ಮಕ್ಕಳು ಎರಡು ವಾಹನಗಳಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸಚಿವರ ವಾಹನವನ್ನು ಓವರ್ ಟೇಕ್ ಮಾಡಿ ಬಂಧನಕ್ಕೊಳಗಾದ ಪ್ರವಾಸಿಗರು

ಇವರೆಲ್ಲರೂ ಬಾಲಸೋರ್ ಜಿಲ್ಲೆಯ ಪಂಚಲಿಂಗೇಶ್ವರದಿಂದ ಕೋಲ್ಕತ್ತಾಗೆ ಹಿಂದಿರುಗುತ್ತಿದ್ದರು. ಈ ವಿಷಯದ ಬಗ್ಗೆ ಮಾತನಾಡಿರುವ ಸಂತೋಷ್ ಶಾ, ಬಸ್ತಾ ಬಳಿ ಎನ್‌ಹೆಚ್-16 ರಲ್ಲಿ ಪ್ರಯಾಣಿಸುವಾಗ ನಾವು ಸೈರನ್ ಕೇಳಿದೆವು. ಆ ವಾಹನವನ್ನು ಆಂಬುಲೆನ್ಸ್ ಎಂದು ಭಾವಿಸಿ ಅದನ್ನು ಓವರ್ ಟೇಕ್ ಮಾಡಿದೆ ಎಂದು ಹೇಳಿದ್ದಾರೆ.

ಸಚಿವರ ವಾಹನವನ್ನು ಓವರ್ ಟೇಕ್ ಮಾಡಿ ಬಂಧನಕ್ಕೊಳಗಾದ ಪ್ರವಾಸಿಗರು

ಆದರೆ ಈ ವಾಹನವು ಸಚಿವರ ಬೆಂಗಾವಲು ಸಚಿವರ ಕಾರು ಎಂದು ನಂತರ ತಿಳಿಯಿತು. ಕೆಲ ಸಮಯದ ನಂತರ ಪೈಲಟ್ ಕಾರು ರಸ್ತೆಯಿಂದ ಕಚ್ಚಾ ರಸ್ತೆಯತ್ತ ತೆರಳಿತು. ನಂತರ ಆ ಕಾರ್ ಅನ್ನು ಓವರ್ ಟೇಕ್ ಮಾಡಿದೆವು ಎಂದು ಅವರು ಹೇಳಿದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸಚಿವರ ವಾಹನವನ್ನು ಓವರ್ ಟೇಕ್ ಮಾಡಿ ಬಂಧನಕ್ಕೊಳಗಾದ ಪ್ರವಾಸಿಗರು

ಮಾಹಿತಿಯ ಪ್ರಕಾರ, ಸಚಿವರ ಪೈಲಟ್ ಕಾರು ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಜಲೇಶ್ವರ ಲಖನಾಥ್ ಟೋಲ್ ಗೇಟ್'ನಿಂದ 20 ಕಿ.ಮೀಗಳವರೆಗೆ ಈ ಎರಡೂ ವಾಹನಗಳನ್ನು ಬೆನ್ನಟ್ಟಿ ಈ ವಾಹನಗಳಲ್ಲಿದ್ದವರನ್ನು ಬಸ್ತಾ ಪೊಲೀಸ್ ಠಾಣೆಗೆ ಕರೆತಂದಿದೆ. ಅವರನ್ನು ಐದು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿಡಲಾಗಿತ್ತು.

ಸಚಿವರ ವಾಹನವನ್ನು ಓವರ್ ಟೇಕ್ ಮಾಡಿ ಬಂಧನಕ್ಕೊಳಗಾದ ಪ್ರವಾಸಿಗರು

ಪರಿಶೀಲನಾ ಸಭೆಯೊಂದರಲ್ಲಿ ಭಾಗವಹಿಸಲು ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರು ಬಸ್ತಾಕ್ಕೆ ತೆರಳುತ್ತಿದ್ದರು. ಈ ವಿಷಯದ ಬಗ್ಗೆ ಮಾಹಿತಿ ನೀಡಿದ ಬಸ್ತಾ ಪೊಲೀಸ್ ಠಾಣೆಯ ಅಧಿಕಾರಿ ಅಶೋಕ್ ನಾಯಕ್, ಎರಡು ವಾಹನಗಳು ಸಚಿವರ ಕಾರನ್ನು ಹಿಂದಿಕ್ಕಿದವು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸಚಿವರ ವಾಹನವನ್ನು ಓವರ್ ಟೇಕ್ ಮಾಡಿ ಬಂಧನಕ್ಕೊಳಗಾದ ಪ್ರವಾಸಿಗರು

ಈ ಕಾರಣಕ್ಕೆ ಆ ಕಾರುಗಳಲ್ಲಿದ್ದವರನ್ನು ವಶಕ್ಕೆ ಪಡೆದು ನಮ್ಮ ಬಳಿಗೆ ಕರೆತರುವಂತೆ ಸಚಿವರ ಪೈಲಟ್ ವಾಹನಕ್ಕೆ ಸೂಚನೆ ನೀಡಲಾಯಿತು. ಪೈಲಟ್ ವಾಹನವು ಎರಡೂ ವಾಹನಗಳಲ್ಲಿದವರನ್ನು ಹಾಗೂ ವಾಹನಗಳನ್ನು ಬಸ್ತಾ ಪೊಲೀಸ್ ಠಾಣೆಗೆ ಕರೆತಂದಿತು. ಇವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಯಿತು ಎಂದು ಹೇಳಿದ್ದಾರೆ.

ಸಚಿವರ ವಾಹನವನ್ನು ಓವರ್ ಟೇಕ್ ಮಾಡಿ ಬಂಧನಕ್ಕೊಳಗಾದ ಪ್ರವಾಸಿಗರು

ನಾವು ಸಚಿವರ ವಾಹನವನ್ನು ಓವರ್ ಟೇಕ್ ಮಾಡಬಾರದಿತ್ತು. ಅದು ನನ್ನ ತಪ್ಪು. ಸಚಿವರ ವಾಹನವನ್ನು ಹಿಂದಿಕ್ಕುವುದು ಅಪರಾಧವೆಂದು ನನಗೆ ತಿಳಿದಿರಲಿಲ್ಲ. ನಾವು ಮತ್ತೆ ಈ ರೀತಿಯ ತಪ್ಪುಗಳನ್ನು ಮಾಡುವುದಿಲ್ಲವೆಂದು ವಾಹನದಲ್ಲಿದ್ದ ಸಂತೋಷ್ ಶಾ ಹೇಳಿದ್ದಾರೆ. ಈ ಬಗ್ಗೆ ಇಂಡಿಯಾ ಟುಡೆ ವರದಿ ಮಾಡಿದೆ.

Most Read Articles

Kannada
English summary
Tourists arrested for overtaking minister vehicle. Read in Kannada.
Story first published: Monday, February 22, 2021, 20:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X