GPS ತೋರಿಸಿದ ದಾರಿ: ಕಾರು ಸೀದಾ ಸಮುದ್ರಕ್ಕೆ.. ವಿಡಿಯೋ ವೈರಲ್

ಇವತ್ತಿನ ದಿನಮಾನಗಳಲ್ಲಿ ಗೊತ್ತಿಲ್ಲದ ಸ್ಥಳಗಳನ್ನು ಹುಡುಕಲು ಬಹುತೇಕರು ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಮೊರೆ ಹೋಗುತ್ತಾರೆ. ಅಷ್ಟರ ಮಟ್ಟಿಗೆ ಜನಜನಿತವಾಗಿದೆ. ಆದರೆ, ಕೆಲವೊಮ್ಮೆ ಇದನ್ನು ಬಳಸಿಕೊಂಡು ಎಷ್ಟೋ ಮಂದಿ ತಾವು ತಲುಪಬೇಕಾದ ಸ್ಥಳವನ್ನು ಬಿಟ್ಟು ಬೇರೆಡೆಗೆ ಹೋಗಿರುವ ಉದಾಹರಣೆಯನ್ನು ನೋಡಿದ್ದೇವೆ.

ಸದ್ಯ, ಅಂತಹದ್ದೇ ಘಟನೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಇದು ನಡೆದಿರುವುದು ಅಮೆರಿಕದಲ್ಲಿ. ಮಹಿಳಾ ಪ್ರವಾಸಿಗರು, ತಾವು ಹೋಗಬೇಕಾದ ಸ್ಥಳಕ್ಕೆ ಜಿಪಿಎಸ್ ಮ್ಯಾಪ್ ಹಾಕಿಕೊಂಡು ಪಯಣ ಬೆಳೆಸಿದ್ದು, ಸೀದಾ ಕಾರನ್ನು ಹವಾಯಿಯ ಹೊನೊಕೊಹೌ ಸಮುದ್ರದೊಳಗೆ ಚಲಾಯಿಸಿದ್ದಾರೆ. ಆದರೆ, ಮಧ್ಯಪಾನ ಮಾಡಿ ಈ ರೀತಿಯಾಗಿ ವಾಹನವನ್ನು ಓಡಿಸಿದ್ದಾರೆ ಎಂದು ಹೇಳಲಾಗಿದೆ. ಆ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

GPS ದಾರಿ: ಕಾರು ಸೀದಾ ಸಮುದ್ರಕ್ಕೆ.. ಮುಂದೇನಾಯ್ತು? ವಿಡಿಯೋ ವೈರಲ್

ಭಾಗಶಃ ಸಮುದ್ರದಲ್ಲಿ ಮುಳುಗುತ್ತಿದ್ದ ಕಾರಿನಿಂದ ಇಬ್ಬರು ಮಹಿಳೆಯರನ್ನು ರಕ್ಷಿಸಲು ಅಲ್ಲೇ ಅಕ್ಕಪಕ್ಕದ ದೋಣಿಯಲ್ಲಿದ್ದ ಪ್ರವಾಸಿಗರು ನೀರಿಗೆ ಹಾರುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ವರದಿಗಳ ಪ್ರಕಾರ, ಅವರಿಬ್ಬರು ಕೈಲುವಾ ಕೋನಾದಲ್ಲಿನ ಸ್ನಾರ್ಕೆಲ್ ಟೂರ್ ಕಂಪನಿಯನ್ನು ತಲುಪಲು ಜಿಪಿಎಸ್ ಮ್ಯಾಪ್ ಬಳಸಿ, ಪ್ರಯಾಣಿಸುತ್ತಿದ್ದರು. ಆದರೆ, ತಪ್ಪಾದ ತಿರುವು ತೆಗೆದುಕೊಂಡು ಕಾರನ್ನು ಸಮುದ್ರದೊಳಗೆ ಚಲಾಯಿಸಿದ್ದಾರಂತೆ.

ಅದೃಷ್ಟವಶಾತ್, ಇಬ್ಬರು ಮಹಿಳಾ ಪ್ರವಾಸಿಗರು ಸೇಫ್ ಆಗಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂ ನಲ್ಲಿ ವಿಡಿಯೋವನ್ನು ಶೇರ್ ಮಾಡಿರುವ ಪ್ರತ್ಯಕ್ಷದರ್ಶಿ ಕ್ರಿಸ್ಟಿಹಚಿನ್ಸನ್, 'ನಾವು ಮಳೆಯಿಂದ ರಕ್ಷಣೆ ಪಡೆಯಲು ದೋಣಿಯಲ್ಲಿ ಕುಳಿತ್ತಿದೆವು. ಸ್ವಲ್ಪ ಸಮಯದ ನಂತರ ಕಾರೊಂದು ಬಂದು ಸಮುದ್ರಕ್ಕೆ ಇಳಿಯಿತು. ಅಲ್ಲೇ ಇದ್ದ ಇತರೆ ಪ್ರವಾಸಿಗರು ತಕ್ಷಣ ಅವರಿಬ್ಬರನ್ನು ರಕ್ಷಿಸಿದರು' ಎಂದು ಬರೆದುಕೊಂಡಿದ್ದಾರೆ.

GPS ದಾರಿ: ಕಾರು ಸೀದಾ ಸಮುದ್ರಕ್ಕೆ.. ಮುಂದೇನಾಯ್ತು? ವಿಡಿಯೋ ವೈರಲ್

ಮಹಿಳೆಯರಿಬ್ಬರನ್ನು ರಕ್ಷಿಸಿದ ಮೇಲೆ ಕಾರನ್ನು ದಡಕ್ಕೆ ಅಗ್ಗದ ಸಹಾಯದಿಂದ ಎಳೆದು ತರಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಮೊದಲೇ ಮುಂಭಾಗದ ಕಿಟಕಿಗಳು ತೆರೆದಿದ್ದರಿಂದ ಕಾರಿನೊಳಗೆ ಸಂಪೂರ್ಣ ನೀರು ತುಂಬಿ ಮುಳುಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕಾರನ್ನು ನೀರಿನಲ್ಲಿ ಇಳಿಸಿದ್ರು ಮಹಿಳೆಯರು ನಗುತ್ತಲೇ ಇದ್ದರು. ಇದು ಅಲ್ಲಿದ್ದವರಿಗೆ ಕೊಂಚ ಕಸಿವಿಸಿ ಉಂಟು ಮಾಡಿದೆ. ಅವರಿಬ್ಬರೂ ಮದ್ಯಪಾನ ಮಾಡಿದ್ದರೂ ಎಂದು ಕೆಲವರು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ, ಜಿಪಿಎಸ್ ಮ್ಯಾಪ್ ಕಾರ್ಯಕ್ಷಮತೆ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿದೆ. ನೆಟ್ಟಿಗರೊಬ್ಬರು ಎಷ್ಟೇ ತಂತ್ರಜ್ಞಾನ ಮುಂದುವರಿದಿದ್ದರೂ ನಮ್ಮ ಬುದ್ದಿಯನ್ನು ಬಳಸಬೇಕೆಂದು ಹೇಳಿದ್ದಾರೆ. ಮತ್ತೊಬ್ಬರು, ಅವರು ಬಳಕೆ ಮಾಡುತ್ತಿದ್ದ ಜಿಪಿಎಸ್ ಬಗ್ಗೆ ಮ್ಯಾಪ್ ಯಾವುದೆಂದು ತಿಳಿಯಬೇಕು ಎಂದು ಎಂದು ಕಾಮೆಂಟ್ ಮಾಡಿದ್ದಾರೆ.

ತಾವು ಹೋಗಬೇಕಾದ ಸ್ಥಳಕ್ಕೆ ಜಿಪಿಎಸ್ ಮ್ಯಾಪ್ ಹಾಕಿಕೊಂಡು ಪಯಣ ಬೆಳೆಸಿದ್ದ ಮಹಿಳಾ ಪ್ರವಾಸಿ, ಜಿಪಿಎಸ್ ಎಡವಟ್ಟು ಅಥವಾ ತನ್ನ ತಪ್ಪಿನಿಂದ ಕಾರನ್ನು ಸಮುದ್ರಕ್ಕೆ ಇಳಿಸಿರುವುದು ವಿಪರ್ಯಾಸವೇ ಸರಿ. ಜಿಪಿಎಸ್ ಇದೆ ಎಂದು ಮೈ ಮರೆಯದೇ ನಮಗೆ ಗೊತ್ತಿಲ್ಲದ ಸ್ಥಳಗಳಿಗೆ ಹೋದಾಗ ಸ್ಥಳೀಯರನ್ನು ವಿಚಾರಿಸಬೇಕು. ಇಲ್ಲದಿದ್ದರೆ, ಸರಿಯಾಗಿ ಮಾಹಿತಿ ನೀಡುವ ವಿಶ್ವಾಸಾರ್ಹ ಜಿಪಿಎಸ್ ಆಪ್ ಬಳಕೆ ಮಾಡಬೇಕು. ಆಗ ಇಂತಹ ಘಟನೆಗಳು ಮರುಕಳಿಸುವುದಿಲ್ಲ.

ಇದಿಷ್ಟೇ ಅಲ್ಲದೆ, ನೀವು ಯಾವುದಾದರೂ ಪ್ರವಾಸಿ ತಾಣಕ್ಕೆ ಮೊದಲ ಬಾರಿಗೆ ಭೇಟಿ ನೀಡಲು ನಿರ್ಧರಿಸಿದಾಗ ಸರಿಯಾದ ತಯಾರಿಯು ಅಗತ್ಯ. ಯಾವ ಸ್ಥಳಕ್ಕೆ ಹೋಗಬೇಕು ಅಂದುಕೊಂಡಿರುತ್ತೀರೋ ಅಲ್ಲಿ ಹೋಗಿ, ವಸತಿ ಸೇರಿದಂತೆ ಇನ್ನಿತರೇ ವ್ಯವಸ್ಥೆ ಮಾಡಿಕೊಳ್ಳುವ ಬದಲು ಆನ್ಲೈನ್ ನಲ್ಲಿ ಮೊದಲೇ ಹುಡುಕಿಕೊಳ್ಳಬೇಕು. ಆಗ ಲೊಕೇಶನ್ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತದೆ. ಇಲ್ಲವೇ, ಸ್ಥಳೀಯ ಪ್ರವಾಸೋದ್ಯಮ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಿ, ಹೆಚ್ಚಿನ ವಿವರ ಪಡೆಯಬಹುದು.

Article Published On: Monday, May 8, 2023, 13:22 [IST]
English summary
Tourists follow gps directions drive car sea details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+