ಸವಾರ ಬೈಕಿನ ಮೇಲೆ ಕುಳಿತಿದ್ದರೂ ಬೈಕ್ ಹೊತ್ತೊಯ್ದ ಟೋಯಿಂಗ್ ಸಿಬ್ಬಂದಿ

ಭಾರತದಲ್ಲಿ ಕರೋನಾ ವೈರಸ್ ಸಾಂಕ್ರಾಮಿಕದ ಅವಧಿಯಲ್ಲಿ ಜನರು ಸಾರ್ವಜನಿಕ ಸಾರಿಗೆಗಳಲ್ಲಿ ಸಂಚರಿಸುವ ಬದಲು ಸ್ವಂತ ವಾಹನಗಳಲ್ಲಿ ಸಂಚರಿಸಲು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಸಾರ್ವಜನಿಕ ಸಾರಿಗೆಗಳಲ್ಲಿ ಸಂಚರಿಸಿದರೆ ಕರೋನಾ ವೈರಸ್ ಹರಡ ಬಹುದೆಂಬ ಭೀತಿಯೇ ಜನರ ಈ ನಿರ್ಧಾರಕ್ಕೆ ಪ್ರಮುಖ ಕಾರಣ.

ಸವಾರ ಬೈಕಿನ ಮೇಲೆ ಕುಳಿತಿದ್ದರೂ ಬೈಕ್ ಹೊತ್ತೊಯ್ದ ಟೋಯಿಂಗ್ ಸಿಬ್ಬಂದಿ

ಜನರು ಸ್ವಂತ ವಾಹನಗಳನ್ನು ಹೆಚ್ಚು ಖರೀದಿಸುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿರುವುದು ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಂಚಾರ ದಟ್ಟಣೆಗೆ ಅಸಮರ್ಪಕ ಪಾರ್ಕಿಂಗ್ ಸಹ ಒಂದು ಪ್ರಮುಖ ಕಾರಣವಾಗಿದೆ. ಸಂಚಾರ ದಟ್ಟಣೆ ಯಾವುದೋ ಒಂದು ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತದ ಬಹುತೇಕ ನಗರಗಳು ಸಂಚಾರ ದಟ್ಟಣೆಯಿಂದ ಬಳಲುತ್ತಿವೆ.

ಸವಾರ ಬೈಕಿನ ಮೇಲೆ ಕುಳಿತಿದ್ದರೂ ಬೈಕ್ ಹೊತ್ತೊಯ್ದ ಟೋಯಿಂಗ್ ಸಿಬ್ಬಂದಿ

ಬಹುತೇಕ ಎಲ್ಲಾ ನಗರಗಳಲ್ಲಿ ವಾಹನ ಸವಾರರು ಪಾರ್ಕಿಂಗ್ ಸೌಲಭ್ಯವಿಲ್ಲದೇ ಪರದಾಡುತ್ತಿದ್ದಾರೆ. ಇನ್ನೂ ಕೆಲವರು ಸಮರ್ಪಕವಾದ ಪಾರ್ಕಿಂಗ್ ಸೌಲಭ್ಯವಿದ್ದರೂ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಜನರು ಪಾರ್ಕಿಂಗ್ ಇಲ್ಲದ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ ಎಂಬುದು ಗಮನಾರ್ಹ.

ಸವಾರ ಬೈಕಿನ ಮೇಲೆ ಕುಳಿತಿದ್ದರೂ ಬೈಕ್ ಹೊತ್ತೊಯ್ದ ಟೋಯಿಂಗ್ ಸಿಬ್ಬಂದಿ

ವಾಹನಗಳನ್ನು ಬೇಕಾ ಬಿಟ್ಟಿಯಾಗಿ ಪಾರ್ಕಿಂಗ್ ಮಾಡುವುದರಿಂದ ಆ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ. ಕೆಲವೊಮ್ಮೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳೂ ಇರುತ್ತವೆ. ಈ ಕಾರಣಕ್ಕಾಗಿಯೇ ಸಂಚಾರಿ ಪೊಲೀಸರು ಅನಧಿಕೃತ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ಟೋಯಿಂಗ್ ಮಾಡಿ ಎತ್ತೊಯ್ಯುತ್ತಾರೆ.

ಸವಾರ ಬೈಕಿನ ಮೇಲೆ ಕುಳಿತಿದ್ದರೂ ಬೈಕ್ ಹೊತ್ತೊಯ್ದ ಟೋಯಿಂಗ್ ಸಿಬ್ಬಂದಿ

ಬಹುತೇಕ ಸಂದರ್ಭಗಳಲ್ಲಿ ಟೋಯಿಂಗ್ ಸಿಬ್ಬಂದಿ ವಾಹನ ಸವಾರರು ವಾಹನದಲ್ಲಿ ಇಲ್ಲದಿದ್ದರೆ ಮಾತ್ರ ಆ ವಾಹನಗಳನ್ನು ಟೋಯಿಂಗ್ ಮಾಡಿ ಕೊಂಡೊಯ್ಯುತ್ತಾರೆ. ಆದರೆ ಬೈಕಿನ ಸವಾರ ಬೈಕ್ ಮೇಲೆ ಕುಳಿತಿದ್ದರೂ ಟೋಯಿಂಗ್ ವಾಹನದ ಸಿಬ್ಬಂದಿ ಆತನ ಸಮೇತ ಬೈಕ್ ಅನ್ನು ಟೋಯಿಂಗ್ ವಾಹನದೊಳಗೆ ಎತ್ತಾಕಿ ಕೊಂಡ ವಿಲಕ್ಷಣ ಘಟನೆ ನಡೆದಿದೆ.

ಸವಾರ ಬೈಕಿನ ಮೇಲೆ ಕುಳಿತಿದ್ದರೂ ಬೈಕ್ ಹೊತ್ತೊಯ್ದ ಟೋಯಿಂಗ್ ಸಿಬ್ಬಂದಿ

ಅಂದ ಹಾಗೆ ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆಯಲ್ಲಿ. ಪುಣೆಯ ನಾನಾ ಪೇಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪುಣೆ ನಗರದಲ್ಲಿ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ವಾಹನಗಳನ್ನು ತೆರವುಗೊಳಿಸುವಲ್ಲಿ ಅಲ್ಲಿನ ಪೊಲೀಸರು ನಿರತರಾಗಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಎತ್ತಿ ಟೋಯಿಂಗ್ ವಾಹನದೊಳಗೆ ಹಾಕಿ ಕೊಳ್ಳಲು ಮುಂದಾಗಿದ್ದಾರೆ.

ಸವಾರ ಬೈಕಿನ ಮೇಲೆ ಕುಳಿತಿದ್ದರೂ ಬೈಕ್ ಹೊತ್ತೊಯ್ದ ಟೋಯಿಂಗ್ ಸಿಬ್ಬಂದಿ

ಆ ಸಂದರ್ಭದಲ್ಲಿ ಬೈಕ್ ಸವಾರ ಬೈಕಿನ ಮೇಲೆ ಕುಳಿತಿದ್ದ. ಆತ ಬೈಕಿನಿಂದ ಇಳಿಯಲು ಪ್ರಯತ್ನಿಸಿದರೂ ಸಹ ಆತನನ್ನು ಕೆಳಕ್ಕೆ ಇಳಿಯಲು ಬಿಡದೇ ಸಂಚಾರಿ ಪೊಲೀಸರು ಆತನ ಸಹಿತ ಬೈಕ್ ಅನ್ನು ಟೋಯಿಂಗ್ ವಾಹನದೊಳಕ್ಕೆ ಹಾಕಿ ಕೊಂಡಿದ್ದಾರೆ. ತಾನು ಆ ಪ್ರದೇಶದಲ್ಲಿ ಬೈಕ್ ಪಾರ್ಕ್ ಮಾಡಿರಲಿಲ್ಲ. ಆಗಷ್ಟೇ ಅಲ್ಲಿಗೆ ಬಂದು ಬೈಕ್ ಮೇಲೆ ಕುಳಿತಿದ್ದೇ ಎಂದು ಬೈಕ್ ಸವಾರ ಹೇಳಿದರೂ ಆತನ ಮಾತನ್ನು ಕೇಳಲು ಸಂಚಾರಿ ಪೊಲೀಸರು ಸಿದ್ದರಿರಲಿಲ್ಲ.

ಸವಾರ ಬೈಕಿನ ಮೇಲೆ ಕುಳಿತಿದ್ದರೂ ಬೈಕ್ ಹೊತ್ತೊಯ್ದ ಟೋಯಿಂಗ್ ಸಿಬ್ಬಂದಿ

ಈ ಘಟನೆಯ ಫೋಟೋ ಹಾಗೂ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಂಚಾರಿ ನಿಯಮಗಳ ಪ್ರಕಾರ, ಮಾಲೀಕರು ವಾಹನದ ಬಳಿ ನಿಂತಿದ್ದರೂ ಸಹ ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದರೆ ಅದನ್ನು ಉಲ್ಲಂಘನೆಯೆಂದು ಪರಿಗಣಿಸಲಾಗುತ್ತದೆ.

ಸವಾರ ಬೈಕಿನ ಮೇಲೆ ಕುಳಿತಿದ್ದರೂ ಬೈಕ್ ಹೊತ್ತೊಯ್ದ ಟೋಯಿಂಗ್ ಸಿಬ್ಬಂದಿ

ನೋ ಪಾರ್ಕಿಂಗ್ ಹಾಗೂ ನೋ ಸ್ಟಾಪಿಂಗ್ ನಡುವಿನ ವ್ಯತ್ಯಾಸ

ರಸ್ತೆಯಲ್ಲಿ ನೋ ಪಾರ್ಕಿಂಗ್‌ಗಾಗಿ ಬೋರ್ಡ್ ಇದ್ದರೆ, ಅಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ ಎಂಬುದು ಇದರ ಅರ್ಥವಲ್ಲ. ಆದರೆ ವಾಹನ ಸವಾರರು ವಾಹನವನ್ನು ಆ ಪ್ರದೇಶದಲ್ಲಿ ಪಾರ್ಕಿಂಗ್ ಮಾಡಿ ತೆರಳುವಂತಿಲ್ಲ. ವಾಹನಗಳನ್ನು ನಿಲ್ಲಿಸುವುದಕ್ಕೆ ಅನುಮತಿ ನೀಡಲಾಗದ ಸ್ಥಳಗಳಲ್ಲಿ ನೋ ಸ್ಟಾಪಿಂಗ್ ಎಂದು ಸೂಚಿಸುವ ಫಲಕಗಳನ್ನು ಹಾಕಲಾಗಿರುತ್ತದೆ.

ಸವಾರ ಬೈಕಿನ ಮೇಲೆ ಕುಳಿತಿದ್ದರೂ ಬೈಕ್ ಹೊತ್ತೊಯ್ದ ಟೋಯಿಂಗ್ ಸಿಬ್ಬಂದಿ

ಇಂತಹ ಬೋರ್ಡ್ ಗಳನ್ನು ಹೆಚ್ಚಾಗಿ ಜನ ನಿಬಿಡ ರಸ್ತೆಗಳು ಹಾಗೂ ಹೆಚ್ಚು ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ಹಾಕಲಾಗುತ್ತದೆ. ಈ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ಸಂಚಾರಿ ಪೊಲೀಸರು ಈ ರೀತಿಯ ಕಾರ್ಯಕ್ಕೆ ಕೈ ಹಾಕುತ್ತಿರುವುದು ಇದು ಮೊದಲ ಬಾರಿಯಲ್ಲ. ಈ ಹಿಂದೆಯೂ ಈ ರೀತಿಯ ಹಲವು ಘಟನೆಗಳು ನಡೆದಿವೆ.

ಸವಾರ ಬೈಕಿನ ಮೇಲೆ ಕುಳಿತಿದ್ದರೂ ಬೈಕ್ ಹೊತ್ತೊಯ್ದ ಟೋಯಿಂಗ್ ಸಿಬ್ಬಂದಿ

ಮುಂಬೈ ಪೊಲೀಸರು ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನೊಳಗಿದ್ದ ತಾಯಿಯೊಬ್ಬಳು ತನ್ನ ಮಗುವಿಗೆ ಹಾಲುಣಿಸುತ್ತಿದ್ದರೂ ಲೆಕ್ಕಿಸದೇ ಆ ಕಾರ್ ಅನ್ನು ಎಳೆದೊಯ್ದಿದ್ದರು. ಕಾನ್ಪುರದ ಪೊಲೀಸರು ಬೈಕಿನ ಮೇಲೆ ಸವಾರ ಕುಳಿತಿದ್ದರೂ ಸಹ ಬೈಕ್ ಅನ್ನು ಟೋಯಿಂಗ್ ಮಾಡಿ ಪೊಲೀಸ್ ಠಾಣೆಗೆ ಹೊತ್ತೊಯ್ದಿದ್ದರು.

ಇದರ ಜೊತೆಗೆ ವಾಹನಗಳನ್ನು ಟೋಯಿಂಗ್ ಮಾಡುವವರು ಅವುಗಳನ್ನು ಜಾಗರೂಕತೆಯಿಂದ ನಿರ್ವಹಿಸುವುದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ವಾಹನಗಳನ್ನು ಟೋಯಿಂಗ್ ಮಾಡುವ ವೇಳೆಯಲ್ಲಿ ಟೋಯಿಂಗ್ ವಾಹನದ ಸಿಬ್ಬಂದಿ ದ್ವಿ ಚಕ್ರ ವಾಹನಗಳ ಬಂಪರ್‌ಗಳನ್ನು ಮುರಿದು ಹಾಕಿರುವ ಬಗ್ಗೆ, ಮಿರರ್ ಗಳಿಗೆ ಹಾನಿ ಮಾಡಿರುವ ಬಗ್ಗೆ ಹಲವು ದೂರುಗಳು ಕೇಳಿ ಬಂದಿವೆ.

ಸವಾರ ಬೈಕಿನ ಮೇಲೆ ಕುಳಿತಿದ್ದರೂ ಬೈಕ್ ಹೊತ್ತೊಯ್ದ ಟೋಯಿಂಗ್ ಸಿಬ್ಬಂದಿ

ಇದರ ಜೊತೆಗೆ ನಮ್ಮ ಬೆಂಗಳೂರಿನಲ್ಲಿ ಟೋಯಿಂಗ್ ವಾಹನದ ಸಿಬ್ಬಂದಿ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಿದ್ದರೂ ಅಂತಹ ವಾಹನಗಳನ್ನು ಸಹ ಟೋಯಿಂಗ್ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ಇತ್ತೀಚಿಗೆ ಸಾರ್ವಜನಿಕರು ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಘಟನೆ ವರದಿಯಾಗಿದೆ.

ಗಮನಿಸಿ: ಈ ಲೇಖನದಲ್ಲಿ ಮೊದಲ ಮೂರು ಚಿತ್ರಗಳನ್ನು ಹೊರತು ಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Towing people tows bike with the owner video details
Story first published: Saturday, August 21, 2021, 14:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X