ಇನೋವಾ ಕಾರುಗಳನ್ನು ಆಂಬ್ಯುಲೆನ್ಸ್'ಗಳಾಗಿ ಮಾಡಿಫೈಗೊಳಿಸುತ್ತಿರುವ ಟೊಯೊಟಾ ಡೀಲರ್

ಕರೋನಾ ಎರಡನೇ ಅಲೆ ಆರ್ಭಟ ದಿನದಿಂದ ದಿನಕ್ಕೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದರೂ ಸೋಂಕು ಹರಡುವಿಕೆ ಪೂರ್ತಿಯಾಗಿ ಕಡಿಮೆಯಾಗಿಲ್ಲ.

ಇನೋವಾ ಕಾರುಗಳನ್ನು ಆಂಬ್ಯುಲೆನ್ಸ್'ಗಳಾಗಿ ಮಾಡಿಫೈಗೊಳಿಸುತ್ತಿರುವ ಟೊಯೊಟಾ ಡೀಲರ್

ಹೀಗಾಗಿ ಕರೋನಾ ವೈರಸ್ ಸೋಂಕಿತರನ್ನು ಸಾಗಿಸುವ ಆಂಬ್ಯುಲೆನ್ಸ್‌ಗಳ ಕೊರತೆ ಇನ್ನೂ ಹಲವು ಪ್ರದೇಶಗಳಲ್ಲಿ ಎದುರಾಗಿದೆ. ಕೆಲವು ಉದಾರಿಗಳು ತಮ್ಮ ಕಾರುಗಳನ್ನು ಸೋಂಕಿತರನ್ನು ಸಾಗಿಸುವ ಆಂಬ್ಯುಲೆನ್ಸ್‌ಗಳಾಗಿ ಪರಿವರ್ತಿಸಿರುವ ಹಲವು ಘಟನೆಗಳು ವರದಿಯಾಗಿವೆ.

ಇನೋವಾ ಕಾರುಗಳನ್ನು ಆಂಬ್ಯುಲೆನ್ಸ್'ಗಳಾಗಿ ಮಾಡಿಫೈಗೊಳಿಸುತ್ತಿರುವ ಟೊಯೊಟಾ ಡೀಲರ್

ಈಗ ಗುಜರಾತ್‌ನಲ್ಲಿರುವ ಅಧಿಕೃತ ಟೊಯೊಟಾ ಶೋರೂಂ ಆದ ಇನ್ಫಿನಿಯಮ್ ಟೊಯೊಟಾ 200 ಟೊಯೊಟಾ ಇನೋವಾ ಎಂಪಿವಿ ಕಾರುಗಳನ್ನು ಆಂಬ್ಯುಲೆನ್ಸ್‌ಗಳಾಗಿ ಮಾಡಿಫೈ ಮಾಡುತ್ತಿದೆ.

ಇನೋವಾ ಕಾರುಗಳನ್ನು ಆಂಬ್ಯುಲೆನ್ಸ್'ಗಳಾಗಿ ಮಾಡಿಫೈಗೊಳಿಸುತ್ತಿರುವ ಟೊಯೊಟಾ ಡೀಲರ್

ಈ ಕಾರುಗಳಲ್ಲಿ ಸ್ಟ್ರೆಚರ್ ಸೇರಿದಂತೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಕಾರಿನ ಕ್ಯಾಬಿನ್‌ನಲ್ಲಿ ಅಳವಡಿಸಲಾಗುತ್ತಿದೆ. ಈ 200 ಇನೋವಾ ಆಂಬ್ಯುಲೆನ್ಸ್‌ಗಳನ್ನುಆಸ್ಪತ್ರೆಗಳಿಗಾಗಿ, ಸಂಸದರು ಹಾಗೂ ಶಾಸಕರಿಗೆ ಗ್ರಾಮೀಣ ಪ್ರದೇಶದಲ್ಲಿ ಬಳಸಲು ಕಳುಹಿಸಲಾಗುತ್ತದೆ.

ಇನೋವಾ ಕಾರುಗಳನ್ನು ಆಂಬ್ಯುಲೆನ್ಸ್'ಗಳಾಗಿ ಮಾಡಿಫೈಗೊಳಿಸುತ್ತಿರುವ ಟೊಯೊಟಾ ಡೀಲರ್

ಇನೋವಾ ಕಾರನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಲು ರೂ.3 ಲಕ್ಷದಿಂದ ರೂ.4.5 ಲಕ್ಷ ಖರ್ಚಾಗುತ್ತದೆ. ಇನೋವಾ ಕಾರುಗಳನ್ನು ಆಂಬ್ಯುಲೆನ್ಸ್‌ ಆಗಿ ಪರಿವರ್ತಿಸಿಕೊಳ್ಳುವ ಗ್ರಾಹಕರಿಗೆ ಸಬ್ಸಿಡಿ ನೀಡಲಾಗುತ್ತದೆ.

ಇನೋವಾ ಕಾರುಗಳನ್ನು ಆಂಬ್ಯುಲೆನ್ಸ್'ಗಳಾಗಿ ಮಾಡಿಫೈಗೊಳಿಸುತ್ತಿರುವ ಟೊಯೊಟಾ ಡೀಲರ್

ಗುಜರಾತ್‌ನಲ್ಲಿ ಟೊಯೊಟಾ ಇನೋವಾ ಕಾರಿನ ಆನ್-ರೋಡ್ ಬೆಲೆ ರೂ.24.5 ಲಕ್ಷಗಳಾಗಿದೆ. ಆಂಬ್ಯುಲೆನ್ಸ್ ಆಗಿ ಮಾಡಿಫೈಗೊಳ್ಳುವ ಗ್ರಾಹಕರಿಗೆ ಈ ಕಾರುಗಳನ್ನು ರೂ.20.6 ಲಕ್ಷಗಳಿಗೆ ಮಾರಾಟ ಮಾಡಲಾಗುತ್ತದೆ.

ಇನೋವಾ ಕಾರುಗಳನ್ನು ಆಂಬ್ಯುಲೆನ್ಸ್'ಗಳಾಗಿ ಮಾಡಿಫೈಗೊಳಿಸುತ್ತಿರುವ ಟೊಯೊಟಾ ಡೀಲರ್

ಗ್ರಾಹಕರು ಬಯಸಿದಲ್ಲಿ ಉಳಿದ ಮೊತ್ತವನ್ನು ಶಾಸಕರು, ಸಂಸದರು ಅಥವಾ ಗಣ್ಯ ವ್ಯಕ್ತಿಗಳು ದಾನ ಮಾಡಬಹುದು ಎಂದು ಇನ್ಫಿನಿಯಮ್ ಟೊಯೊಟಾ ತಿಳಿಸಿದೆ. ಈ ಬಗ್ಗೆ ಇನ್ಫಿನಿಯಮ್ ಟೊಯೊಟಾದ ಅಧ್ಯಕ್ಷರಾದ ಅಜಿತ್ ಮೆಹ್ತಾ ಮಾಹಿತಿ ನೀಡಿದ್ದಾರೆ.

ಇನೋವಾ ಕಾರುಗಳನ್ನು ಆಂಬ್ಯುಲೆನ್ಸ್'ಗಳಾಗಿ ಮಾಡಿಫೈಗೊಳಿಸುತ್ತಿರುವ ಟೊಯೊಟಾ ಡೀಲರ್

ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆಂಬ್ಯುಲೆನ್ಸ್'ಗಳು, ಆಸ್ಪತ್ರೆ ಹಾಗೂ ರೋಗಿಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಗಳಾಗಿವೆ.

ಇನೋವಾ ಕಾರುಗಳನ್ನು ಆಂಬ್ಯುಲೆನ್ಸ್'ಗಳಾಗಿ ಮಾಡಿಫೈಗೊಳಿಸುತ್ತಿರುವ ಟೊಯೊಟಾ ಡೀಲರ್

ಈ ಆಂಬ್ಯುಲೆನ್ಸ್'ಗಳನ್ನು ಒದಗಿಸುವ ಮೂಲಕ ನಮ್ಮ ಇನ್ಫಿನಿಯಮ್ ಟೊಯೊಟಾ ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಕೈಲಾದಷ್ಟು ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿದರು .

ಇನೋವಾ ಕಾರುಗಳನ್ನು ಆಂಬ್ಯುಲೆನ್ಸ್'ಗಳಾಗಿ ಮಾಡಿಫೈಗೊಳಿಸುತ್ತಿರುವ ಟೊಯೊಟಾ ಡೀಲರ್

ಇನ್ಫಿನಿಟಿ ಟೊಯೊಟಾ ಗುಜರಾತ್'ನ ಶಾಸಕರು ಹಾಗೂ ಸಂಸದರನ್ನು ಸಂಪರ್ಕಿಸುತ್ತಿದೆ. ಕೆಲವರು ಈ ರೀತಿ ಮಾಡಿಫೈಗೊಂಡಿರುವ ಇನೋವಾ ಕಾರು ಖರೀದಿಸಲು ಇನ್ಫಿನಿಯಮ್ ಟೊಯೊಟಾ ಬಳಿ ಆಸಕ್ತಿ ವ್ಯಕ್ತ ಪಡಿಸಿದ್ದಾರೆ.

Most Read Articles

Kannada
English summary
Toyota dealer modifies 200 Innova cars as ambulances. Read in Kannada.
Story first published: Thursday, June 10, 2021, 14:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X