ಬುಲೆಟ್ ಪ್ರೂಫ್ ಗ್ಲಾಸ್ ಅನ್ನು ಪುಡಿ ಮಾಡಿದ ಟೊಯೊಟಾ ಫಾರ್ಚೂನರ್

ಈಗಿನ ಯುವಕರು ಹಣ ಸಂಪಾದಿಸಲು ಹೊಸ ಹೊಸ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಯುವಕರು ತಮ್ಮಲ್ಲಿದ್ದ ಕ್ರಿಯಾಶೀಲತೆಯಿಂದ ವಿವಿಧ ರೀತಿಯ ವಸ್ತುಗಳನ್ನು, ವಾಹನಗಳನ್ನು ತಯಾರಿಸಿದ್ದರು.

ಬುಲೆಟ್ ಪ್ರೂಫ್ ಗ್ಲಾಸ್ ಅನ್ನು ಪುಡಿ ಮಾಡಿದ ಟೊಯೊಟಾ ಫಾರ್ಚೂನರ್

ಯೂಟ್ಯೂಬ್ ನಲ್ಲಿ ಹಲವಾರು ರೀತಿಯ ವೀಡಿಯೊಗಳಿವೆ. ಅವುಗಳಲ್ಲಿ ಯುವ ಜನರು ಅಪ್ ಲೋಡ್ ಮಾಡಿರುವ ಹಲವಾರು ಕ್ರಿಯಾತ್ಮಕ ವೀಡಿಯೊಗಳನ್ನು ಕಾಣಬಹುದು. ಈಗ ಯೂಟ್ಯೂಬ್ ಚಾನೆಲ್ ವೊಂದು ಮಹೀಂದ್ರಾ ಬೊಲೆರೊ, ಟ್ರಾಕ್ಟರ್ ಹಾಗೂ ಫಾರ್ಚೂನರ್ ಕಾರುಗಳನ್ನು ಬುಲೆಟ್ ಪ್ರೂಫ್ ಗ್ಲಾಸಿನ ಮೇಲೆ ಹತ್ತಿಸಿ, ಈ ಗ್ಲಾಸ್ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಪರೀಕ್ಷಿಸಿದೆ.

ಬುಲೆಟ್ ಪ್ರೂಫ್ ಗ್ಲಾಸ್ ಅನ್ನು ಪುಡಿ ಮಾಡಿದ ಟೊಯೊಟಾ ಫಾರ್ಚೂನರ್

ಈ ವಿಶಿಷ್ಟ ವೀಡಿಯೊವನ್ನು ಮಿಸ್ಟರ್ ಇಂಡಿಯನ್ ಹ್ಯಾಕರ್ ಎಂಬ ಯೂಟ್ಯೂಬ್ ಚಾನೆಲ್ ಬಿಡುಗಡೆಗೊಳಿಸಿದೆ. ಈ ವೀಡಿಯೊ 10.5 ಮಿಲಿಯನ್ ಬಾರಿ ವೀಕ್ಷಣೆಗೊಳಪಟ್ಟಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬುಲೆಟ್ ಪ್ರೂಫ್ ಗ್ಲಾಸ್ ಅನ್ನು ಪುಡಿ ಮಾಡಿದ ಟೊಯೊಟಾ ಫಾರ್ಚೂನರ್

ಬುಲೆಟ್ ಪ್ರೂಫ್ ಗ್ಲಾಸಿನ ಸಾಮರ್ಥ್ಯವನ್ನು ಪರೀಕ್ಷಿಸಲು ನಾನಾ ರೀತಿಯ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಉದ್ದೇಶಕ್ಕಾಗಿ 50 ಎಂಎಂ ಬುಲೆಟ್ ಪ್ರೂಫ್ ಗ್ಲಾಸ್ ಅನ್ನು ಬಳಸಲಾಗಿದೆ.

ಬುಲೆಟ್ ಪ್ರೂಫ್ ಗ್ಲಾಸ್ ಅನ್ನು ಪುಡಿ ಮಾಡಿದ ಟೊಯೊಟಾ ಫಾರ್ಚೂನರ್

ಈ ಗ್ಲಾಸಿನಲ್ಲಿ ಎಷ್ಟು ಪದರಗಳನ್ನು ಬಳಸಲಾಗಿದೆ ಎಂಬುದನ್ನು ಯೂಟ್ಯೂಬ್ ಸೈಟ್ ಬಹಿರಂಗಪಡಿಸಿಲ್ಲ. ಮಹೀಂದ್ರಾ ಬೊಲೆರೊ ಹಾಗೂ ಟ್ರಾಕ್ಟರ್ ಚಲಿಸಿದಾಗ ಏನು ಆಗದ ಈ ಗ್ಲಾಸ್ ಟೊಯೊಟಾ ಫಾರ್ಚೂನರ್ ಕಾರಿನ ಮುಂಭಾಗದ ಚಕ್ರ ಚಲಿಸಿದಾಗ ಚೂರಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬುಲೆಟ್ ಪ್ರೂಫ್ ಗ್ಲಾಸ್ ಅನ್ನು ಪುಡಿ ಮಾಡಿದ ಟೊಯೊಟಾ ಫಾರ್ಚೂನರ್

ಟೊಯೊಟಾದ ಫಾರ್ಚೂನರ್ ಕಾರನ್ನು ಈ ವಿಶಿಷ್ಟ ರೀತಿಯ ಪರೀಕ್ಷೆಯಲ್ಲಿ ಬಳಸಲಾಗಿದೆ. 1,800 ಕೆ.ಜಿ ತೂಕವನ್ನು ಹೊಂದಿರುವ ಟ್ರಾಕ್ಟರ್ ಚಲಿಸಿದಾಗ ಸಣ್ಣ ಗೆರೆಗಳು ಮೂಡಿದ್ದವು.

ಬುಲೆಟ್ ಪ್ರೂಫ್ ಗ್ಲಾಸ್ ಅನ್ನು ಪುಡಿ ಮಾಡಿದ ಟೊಯೊಟಾ ಫಾರ್ಚೂನರ್

ಆದರೆ ಟ್ರಾಕ್ಟರ್ ಗಿಂತ 200 ಕೆ.ಜಿ ಕಡಿಮೆ ತೂಕವನ್ನು ಹೊಂದಿರುವ ಬೊಲೆರೊ ಚಲಿಸಿದಾಗ ಸಣ್ಣ ಗೆರೆಗಳು ಸಹ ಮೂಡಲಿಲ್ಲ. ಸುಮಾರು 2,200 ಕೆ.ಜಿ ತೂಕವನ್ನು ಹೊಂದಿರುವ ಟೊಯೊಟಾ ಫಾರ್ಚೂನರ್ ಈ ಗ್ಲಾಸಿನ ಮೇಲೆ ಹತ್ತಿದ ಕೂಡಲೇ ಚೂರಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬುಲೆಟ್ ಪ್ರೂಫ್ ಗ್ಲಾಸ್ ಅನ್ನು ಪುಡಿ ಮಾಡಿದ ಟೊಯೊಟಾ ಫಾರ್ಚೂನರ್

ಸಾಮಾನ್ಯವಾಗಿ ಬುಲೆಟ್ ಪ್ರೂಫ್ ಗ್ಲಾಸ್'ಗಳು ಗಾಜಿನ ಹಲವಾರು ಪದರಗಳನ್ನು ಹೊಂದಿರುತ್ತವೆ. ಇವುಗಳು ಚೂರಾಗುತ್ತವೆಯಾದರೂ ಅಷ್ಟು ಸುಲಭವಾಗಿ ಪುಡಿಮಾಡಲು ಸಾಧ್ಯವಿಲ್ಲ. ಇದಕ್ಕೆ ಸಾಕ್ಷಿಯಾಗಿದೆ ಮಿಸ್ಟರ್ ಇಂಡಿಯನ್ ಹ್ಯಾಕರ್ ಬಿಡುಗಡೆಗೊಳಿಸಿರುವ ಈ ವೀಡಿಯೊ.

ಬುಲೆಟ್ ಪ್ರೂಫ್ ಗ್ಲಾಸಿನ ಪದರಗಳ ನಡುವೆ ಥರ್ಮೋಪ್ಲಾಸ್ಟಿಕ್ ತುಂಬಿರುತ್ತದೆ. ಗನ್'ಗಳ ಬುಲೆಟ್ ಕಾರಿನೊಳಗೆ ಪ್ರವೇಶಿಸದಂತೆ ತಡೆಯಲು ಇವು ನೆರವಾಗುತ್ತವೆ. ಈ ಗಾಜು ಚೂರಾದರೂ ಸಹ ಬುಲೆಟ್'ಗಳು ಸುಲಭವಾಗಿ ಕಾರಿನೊಳಗೆ ಹೋಗಲು ಸಾಧ್ಯವಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬುಲೆಟ್ ಪ್ರೂಫ್ ಗ್ಲಾಸ್ ಅನ್ನು ಪುಡಿ ಮಾಡಿದ ಟೊಯೊಟಾ ಫಾರ್ಚೂನರ್

ಈ ಕಾರಣಕ್ಕಾಗಿಯೇ ಬುಲೆಟ್ ಪ್ರೂಫ್ ಗ್ಲಾಸ್'ಗಳನ್ನು ಸುರಕ್ಷಿತವೆಂದು ಹೇಳಲಾಗುತ್ತದೆ. ಈ ಗ್ಲಾಸ್'ಗಳನ್ನು ವಿವಿಧ ಬಗೆಯ ಗುಣಮಟ್ಟದಲ್ಲಿ ಮಾರಾಟ ಮಾಡಲಾಗುತ್ತದೆ. ಈ ಚಿತ್ರಗಳನ್ನು ಮಿಸ್ಟರ್ ಇಂಡಿಯನ್ ಹ್ಯಾಕರ್ ನಿಂದ ಪಡೆಯಲಾಗಿದೆ.

Most Read Articles

Kannada
English summary
Toyota Fortuner breaks Bullet proof glass. Read in Kannada.
Story first published: Saturday, December 26, 2020, 18:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X