ಭಾರತದಲ್ಲಿ ಇನ್-ಬಿಲ್ಟ್ ಟಾಯ್ಲೆಟ್ ಹೊಂದಿರುವ ಮೊದಲ ಟೊಯೊಟಾ ಫಾರ್ಚೂನರ್ ಎಸ್‍ಯುವಿ!

ಟೊಯೊಟಾ ಫಾರ್ಚೂನರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಯಗಳಲ್ಲಿ ಒಂದಾಗಿದೆ. ಪೂರ್ಣ ಗಾತ್ರದ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ಹಲವು ವರ್ಷಗಳಿಂದ ಪಾರುಪತ್ಯ ಸಾಧಿಸುತ್ತಿದೆ.

ಭಾರತದಲ್ಲಿ ಟಾಯ್ಲೆಟ್ ಹೊಂದಿರುವ ಮೊದಲ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಈ ಟೊಯೊಟಾ ಫಾರ್ಚೂನರ್ ಅಗ್ರೇಸಿವ್ ಲುಕ್ ಮತ್ತು ಪ್ರಬಲ ಆಫ್ ರೋಡರ್ ಆಗಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ. ಫಾರ್ಚೂನರ್ ಎಸ್‍ಯುವಿಯು ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಕಡಿಮೆ ನಿರ್ವಹಣೆ ವೆಚ್ಚದಿಂದ ಇದು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಈ ಟೊಯೊಟಾ ಫಾರ್ಚೂನರ್ ಎಸ್‍ಯುವಿಯನ್ನು ಹಲವು ಜನರು ಮಾಡಿಫೈಗೊಳಿಸಲು ಆಯ್ಕೆ ಮಾಡಿಕೊಳ್ಳುತ್ತಾರೆ. ಮಾಡಿಫೈಗೊಂಡ ಫಾರ್ಚೂನರ್ ಎಸ್‍ಯುವಿ ಚಿತ್ರಗಳು ಮತ್ತು ಅಂತರ್ಜಾಲದಲ್ಲಿ ಸಾಕಷ್ಟು ಕಾಣಸಿಗುತ್ತದೆ.

ಭಾರತದಲ್ಲಿ ಟಾಯ್ಲೆಟ್ ಹೊಂದಿರುವ ಮೊದಲ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಆದರೆ ಬಿಲ್ಟ್-ಇನ್ ಟಾಯ್ಲೆಟ್ ಹೊಂದಿರುವ ಫಾರ್ಚೂನರ್ ಎಸ್‌ಯುವಿಯ ವಿಡಿಯೋಂದು ವೈರಲ್ ಆಗಿದೆ. ಭಾರತದಲ್ಲಿ ಬಿಲ್ಟ್-ಇನ್ ಟಾಯ್ಲೆಟ್ ಹೊಂದಿರುವ ಮೊದಲ ಟೊಯೊಟಾ ಫಾರ್ಚೂನರ್ ಎಸ್‍ಯುವಿ ಇದಾಗಿರಬಹುದು. ರೆವೊಕಿಡ್ ವ್ಲೊಗ್ಸ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಈ ಫಾರ್ಚೂನರ್ ಎಸ್‍ಯುವಿಯ ವಿಡಿಯೋ ಅಪ್ಲೋಡ್ ಮಾಡಲಾಗಿದೆ.

ಭಾರತದಲ್ಲಿ ಟಾಯ್ಲೆಟ್ ಹೊಂದಿರುವ ಮೊದಲ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಹೊರಗಿನಿಂದ ಟೊಯೋಟಾ ಫಾರ್ಚೂನರ್ ಅನ್ನು ತೋರಿಸುವ ವ್ಲಾಗರ್‌ನೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಇದು 2021ರ ಮಾಡೆಲ್ ಟೊಯೋಟಾ ಫಾರ್ಚುನರ್ ಫೇಸ್ ಲಿಫ್ಟ್ ಟಾಪ್ ಎಂಡ್ ವೆರಿಯಂಟ್ ಆಗಿದೆ. ಎಸ್‌ಯುವಿಯ ಬೂಟ್ ಅನ್ನು ತೋರಿಸುತ್ತಾರೆ.

ಭಾರತದಲ್ಲಿ ಟಾಯ್ಲೆಟ್ ಹೊಂದಿರುವ ಮೊದಲ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಈ ಫಾರ್ಚುನರ್ ಎಸ್‍ಯುವಿಯ ಬೂಟ್ ಒಳಗೆ ಇರುವ ಜಾಗವನ್ನು ಟಾಯ್ಲೆಟ್ ಸೆಟಪ್ ಅಳವಡಿಸಲು ಬಳಸಲಾಗಿದೆ. ಬಹುಶಃ ಟಾಯ್ಲೆಟ್ ಸೆಟಪ್ ಹೊಂದಿರುವ ಏಕೈಕ ಟೊಯೊಟಾ ಫಾರ್ಚೂನರ್ ಇದಾಗಿರಬಹುದು. ದೂರ ಪ್ರವಾಸ ಹೋದಾಗ ಸಾರ್ವಜನಿಕ ಶೌಚಾಲಯ ವಿಲ್ಲದಿದ್ದರೆ ಅಥವಾ ಕರೋನಾ ಆತಂಕದಿಂದ ಸಾರ್ವಜನಿಕ ಶೌಚಾಲಯ ಬಳಸುವ ಬದಲು ಇದು ಉಪಯುಕ್ತವಾಗಿರುತ್ತದೆ.

ಭಾರತದಲ್ಲಿ ಟಾಯ್ಲೆಟ್ ಹೊಂದಿರುವ ಮೊದಲ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಈ ವಿಡಿಯೋದಲ್ಲಿ ಕಾಣುವ ಟೊಯೊಟಾ ಫಾರ್ಚೂನರ್ ಹೊರಗಿನಿಂದ ಸ್ಟಾಕ್ ಆಗಿ ಕಾಣುತ್ತದೆ. ಇನ್ನು ಏಕೈಕ ಬದಲಾವಣೆ ಎಂದರೆ ಸ್ಟಾಕ್ ಟೈರ್‌ಗಳನ್ನು ಬದಲಾಯಿಸಿ 18 ಇಂಚಿನ ಬಿಎಫ್ ಗುಡ್ರಿಚ್ ಎಟಿ ಟೈರ್‌ಗಳನ್ನು ಅಳಾವಡಿಸಲಾಗಿದೆ.

ಭಾರತದಲ್ಲಿ ಟಾಯ್ಲೆಟ್ ಹೊಂದಿರುವ ಮೊದಲ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಕಾರಿನ ಒಳಗೆ ಟಾಯ್ಲೆಟ್ ಅಳವಡಿಸಲು ಮೂರನೇ ಸಾಲಿನ ಸೀಟನ್ನು ತೆಗೆಯಲಾಗಿದೆ. ಎರಡನೇ ಸಾಲಿನ ಸೀಟುಗಳನ್ನು ಮಡಿಚಿ ಶೌಚಾಲಯವನ್ನು ಪ್ರವೇಶಿಸಬಹುದು., ಕ್ಯಾರಾವಾನ್‌ಗಳಲ್ಲಿ ನಾವು ಇದೇ ರೀತಿಯ ಶೌಚಾಲಯದ ಸೆಟಪ್ ಅನ್ನು ನೋಡಿದ್ದೇವೆ ಆದರೆ, ಫಾರ್ಚುನರ್ ಎಸ್‌ಯುವಿಯಲ್ಲಿ ಇದನ್ನು ಮಾಡಿದ್ದು ಇದೇ ಮೊದಲು.

ಭಾರತದಲ್ಲಿ ಟಾಯ್ಲೆಟ್ ಹೊಂದಿರುವ ಮೊದಲ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಶೌಚಾಲಯಕ್ಕೆ ಮೀಸಲಾಗಿರುವ ನೀರಿನ ಟ್ಯಾಂಕ್‌ನೊಂದಿಗೆ ಬರುತ್ತದೆ ಎಂದು ವೀಡಿಯೊದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಎಸ್‍ಯುವಿಯನ್ನು ಆಫ್-ರೋಡ್ ಮಾರ್ಗದಲ್ಲಿ ಚಲಾಯಿಸಿದರೂ ನೀರು ಕಾರಿನ ಇದರ ಚೆಲ್ಲುವುದಿಲ್ಲ. ಇದನ್ನು ಹೊರತುಪಡಿಸಿ ಎಸ್‌ಯುವಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಶೌಚಾಲಯದಲ್ಲಿ ನಿರ್ಮಿಸಲಾದ ಈ ಕಸ್ಟಮೈಸ್ ಮಾಡಿದ ಒಟ್ಟಾರೆ ವೆಚ್ಚವನ್ನು ಬಹಿರಂಗಪಡಿಸಿಲ್ಲ.

ಭಾರತದಲ್ಲಿ ಟಾಯ್ಲೆಟ್ ಹೊಂದಿರುವ ಮೊದಲ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಇನ್ನು ಈ ಟೊಯೋಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನವೀಕರಿಸಿದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ. ಇದರೊಂದಿಗೆ ಕ್ರೋಮ್ ಸರೌಂಡ್‌ನೊಂದಿಗೆ ದೊಡ್ಡ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್‌ಗಳಿಗಾಗಿ ಹೊಸ ಹೌಸಿಂಗ್‌ಗಳೊಂದಿಗೆ ನವೀಕರಿಸಿದ ಫ್ರಂಟ್ ಬಂಪರ್ ಹೊಂದಿದೆ.

ಹೊಸ 18 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ. ಇನ್ನು ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದಲ್ಲಿ ಈಗ ಹೆಚ್ಚು ಪ್ರೀಮಿಯಂ ಆಗಿ ನವೀಕರಿಸಿದ್ದು, ಕೆಲವು ಹೊಸ ಫೀಚರೆ ಅನ್ನು ಅಳವಡಿಸಿದೆ. ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳೊಂದಿಗಿನ ಹೊಸ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಕನೆಕ್ಟಿವಿಟಿ ತಂತ್ರಜ್ಞಾನವನ್ನು ಹೊಂದಿದೆ.

ಭಾರತದಲ್ಲಿ ಟಾಯ್ಲೆಟ್ ಹೊಂದಿರುವ ಮೊದಲ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಇದರೊಂದಿಗೆ ವೆಂಟಿಲೇಟಡ್ ಮುಂಭಾಗದ ಸೀಟುಗಳು, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 11-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ. ಫಾರ್ಚೂನರ್ ಫೇಸ್‌ಲಿಫ್ಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಎಸ್‍ಯುವಿ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ.

ಭಾರತದಲ್ಲಿ ಟಾಯ್ಲೆಟ್ ಹೊಂದಿರುವ ಮೊದಲ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಇದರಲ್ಲಿ 2.7-ಲೀಟರ್ ಪೆಟ್ರೋಲ್ ಎಂಜಿನ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು ಐದು-ಸ್ಪೀಡ್ ಮ್ಯಾನುವಲ್ ಅಥವಾ ಆರು-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಟಾಯ್ಲೆಟ್ ಹೊಂದಿರುವ ಮೊದಲ ಟೊಯೊಟಾ ಫಾರ್ಚೂನರ್ ಎಸ್‍ಯುವಿ

ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾದಾಗ ಡೀಸೆಲ್ ಎಂಜಿನ್ 177 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಆರು-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ಜೋಡಿಸಲಾದ ಯುನಿಟ್ 201 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಟೂ ವ್ಹೀಲ್ ಮತ್ತು ಫ್ಹೋರ್ ವ್ಹೀಲ್ ಡ್ರೈವ್ ಕಾನ್ಫಿಗರೇಶನ್‌ಗಳಲ್ಲಿ ಹೊಂದಿದೆ. ಹಿಂದಿನ ಫಾರ್ಚೂನರ್ ಮಾದರಿಗೆ ಹೋಲಿಸಿದರೆ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಹಲವಾರು ಅಪ್ಡೇಟ್ ಗಳನ್ನು ಪಡೆದುಕೊಂಡಿದೆ.

Most Read Articles

Kannada
English summary
Toyota fortuner suv gets toilet setup in boot here is video details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X