ಚಾಲಕನ ಆಚಾತುರ್ಯದಿಂದ ಮೇಲಕ್ಕೆ ಹಾರಿದ ಟೊಯೊಟಾ ಫಾರ್ಚೂನರ್

ಪ್ರಪಂಚದ ಬೇರೆ ಯಾವುದೇ ದೇಶಗಳಲ್ಲಿ ಆಗದಷ್ಟು ರಸ್ತೆ ಅಪಘಾತಗಳು ಭಾರತದಲ್ಲಿ ಸಂಭವಿಸುತ್ತವೆ. ಭಾರತದಲ್ಲಿ ಪ್ರತಿ ವರ್ಷ ಸಂಭವಿಸುವ ಅಪಘಾತಗಳಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಚಾಲಕನ ಆಚಾತುರ್ಯದಿಂದ ಮೇಲಕ್ಕೆ ಹಾರಿದ ಟೊಯೊಟಾ ಫಾರ್ಚೂನರ್

ಭಾರತದ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣ ಸಂಚಾರಿ ನಿಯಮಗಳ ಉಲ್ಲಂಘನೆ. ಇದರ ಜೊತೆಗೆ ಕುಡಿದು ವಾಹನ ಚಲಾಯಿಸುವುದು ಹಾಗೂ ರಸ್ತೆಗಳಲ್ಲಿ ರೇಸ್ ಟ್ರಾಕ್‍‍ಗಳಂತೆ ವಾಹನ ಚಲಾಯಿಸುವುದು ಸಹ ಕಾರಣವಾಗಿವೆ. ಸಾರ್ವಜನಿಕರಲ್ಲಿ ಎಷ್ಟೇ ಪ್ರಮಾಣದ ಜಾಗೃತಿಯನ್ನು ಮೂಡಿಸಿದರೂ ಅಪಘಾತಗಳು ಸಂಭವಿಸುತ್ತಲೇ ಇವೆ.

ಚಾಲಕನ ಆಚಾತುರ್ಯದಿಂದ ಮೇಲಕ್ಕೆ ಹಾರಿದ ಟೊಯೊಟಾ ಫಾರ್ಚೂನರ್

ಭಾರೀ ಪ್ರಮಾಣದ ದಂಡಕ್ಕೆ ಹೆದರಿಯಾದರೂ ಸಂಚಾರಿ ನಿಯಮಗಳ ಉಲ್ಲಂಘನೆಯ ಪ್ರಮಾಣವು ಕಡಿಮೆಯಾಗಬಹುದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ದಂಡದ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಏರಿಸಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತಂದಿದೆ.

ಚಾಲಕನ ಆಚಾತುರ್ಯದಿಂದ ಮೇಲಕ್ಕೆ ಹಾರಿದ ಟೊಯೊಟಾ ಫಾರ್ಚೂನರ್

ರಸ್ತೆ ಅಪಘಾತಗಳು ದಿನನಿತ್ಯ ಸಂಭವಿಸುತ್ತಲೇ ಇರುತ್ತವೆ. ಕೆಲವು ಅಪಘಾತಗಳ ವೀಡಿಯೊಗಳು ವೈರಲ್ ಆಗುತ್ತವೆ. ಈಗ ಮತ್ತೊಂದು ಅಪಘಾತದ ವೀಡಿಯೊ ವೈರಲ್ ಆಗಿದೆ. ಈ ಅಪಘಾತ ನಡೆದಿರುವುದು ಚಂಡೀಗಢದಲ್ಲಿ.

ಚಾಲಕನ ಆಚಾತುರ್ಯದಿಂದ ಮೇಲಕ್ಕೆ ಹಾರಿದ ಟೊಯೊಟಾ ಫಾರ್ಚೂನರ್

ಈ ಅಪಘಾತದ ವೀಡಿಯೊದಲ್ಲಿ ಟೊಯೊಟಾ ಫಾರ್ಚೂನರ್ ಎಸ್‍‍ಯುವಿ ಅಪಘಾತಕ್ಕೆ ಒಳಗಾಗುವುದನ್ನು ಕಾಣಬಹುದು. ಅಪಘಾತವಾದ ಸಮಯದಲ್ಲಿ ಫಾರ್ಚೂನರ್ ನಿಧಾನವಾದ ವೇಗದಲ್ಲಿಯೇ ಚಲಿಸುತ್ತಿದೆ. ಆಗ ಟಿ ಜಂಕ್ಷನ್ ಎದುರಾಗುತ್ತದೆ.

ಚಾಲಕನ ಆಚಾತುರ್ಯದಿಂದ ಮೇಲಕ್ಕೆ ಹಾರಿದ ಟೊಯೊಟಾ ಫಾರ್ಚೂನರ್

ಆದರೆ ಈ ಜಂಕ್ಷನ್‍‍ನಲ್ಲಿಯೂ ಫಾರ್ಚೂನರ್ ಎಸ್‍‍ಯುವಿಯ ಚಾಲಕನು ತನ್ನ ವಾಹನವನ್ನು ನಿಧಾನಗೊಳಿಸುವುದಿಲ್ಲ. ಫಾರ್ಚೂನರ್ ಕಾರಿನ ಎಡಗಡೆಯಿಂದ ಬರುವ ಸೆಡಾನ್ ಕಾರು ಫಾರ್ಚೂನರ್ ಎಸ್‍‍ಯುವಿಗೆ ಗುದಿಯುತ್ತದೆ.

ಚಾಲಕನ ಆಚಾತುರ್ಯದಿಂದ ಮೇಲಕ್ಕೆ ಹಾರಿದ ಟೊಯೊಟಾ ಫಾರ್ಚೂನರ್

ತಕ್ಷಣವೇ ಟೊಯೊಟಾ ಫಾರ್ಚೂನರ್ ಎಸ್‍‍ಯುವಿಯು ಸಿನಿಮಾಗಳಲ್ಲಿ ಕಾರುಗಳು ಮೇಲಕ್ಕೆರುವಂತೆ ಹಾರಿ, ಎದುರುಗಡೆಯ ಪಾರ್ಕಿಂಗ್‍‍ನಲ್ಲಿ ನಿಲ್ಲಿಸಿದ್ದ ಎರಡು ವಾಹನಗಳ ಮೇಲೆ ಬೀಳುತ್ತದೆ.

ಚಾಲಕನ ಆಚಾತುರ್ಯದಿಂದ ಮೇಲಕ್ಕೆ ಹಾರಿದ ಟೊಯೊಟಾ ಫಾರ್ಚೂನರ್

ಇದರಿಂದಾಗಿ ಪಾರ್ಕಿಂಗ್ ಸ್ಥಳದಲ್ಲಿದ್ದ ಹೋಂಡಾ ಸಿಟಿ ಹಾಗೂ ಹ್ಯುಂಡೈ ವರ್ನಾ ಕಾರುಗಳಿಗೆ ಹಾನಿಯಾಗುತ್ತದೆ. ವರದಿಗಳ ಪ್ರಕಾರ, ಫಾರ್ಚೂನರ್ ಎಸ್‍‍ಯುವಿಗೆ ಅಪಘಾತವಾದಾಗ 23 ವರ್ಷದ ವ್ಯಕ್ತಿಯೊಬ್ಬ ಈ ಕಾರ್ ಅನ್ನು ಚಲಾಯಿಸುತ್ತಿದ್ದ ಎಂದು ಹೇಳಲಾಗಿದೆ.

ಚಾಲಕನ ಆಚಾತುರ್ಯದಿಂದ ಮೇಲಕ್ಕೆ ಹಾರಿದ ಟೊಯೊಟಾ ಫಾರ್ಚೂನರ್

ಈ ಅಪಘಾತದಲ್ಲಿ ಆತನಿಗೆ ಗಾಯಗಳಾಗಿವೆ. ಇದರ ಜೊತೆಗೆ ಆತನಿಗೆ ಆರೋಗ್ಯದ ಸಮಸ್ಯೆ ಇರುವುದು ತಿಳಿದು ಬಂದಿದೆ. ಅನಾರೋಗ್ಯದ ಕಾರಣದಿಂದಾಗಿ ಆತನಿಗೆ ತನ್ನ ಕಾರ್ ಅನ್ನು ನಿಧಾನಗೊಳಿಸಲು ಸಾಧ್ಯವಾಗಿಲ್ಲ.

ಮೇಲಕ್ಕೆ ಹಾರಿದ್ದ ಫಾರ್ಚೂನರ್ ಕಾರಿಗೆ ಹೆಚ್ಚಿನ ಹಾನಿಯಾಗಿಲ್ಲ. ಇದರಲ್ಲಿದ್ದ ಚಾಲಕನು ಅಪಘಾತದ ನಂತರ ಪ್ರಜ್ಞೆ ಕಳೆದುಕೊಂಡಿದ್ದಾನೆ. ಸ್ಥಳದಲ್ಲಿದ್ದವರು ಕಾರಿನ ವಿಂಡೊಗಳನ್ನು ಹೊಡೆದು ಆತನನ್ನು ಹೊರಕ್ಕೆ ಎಳೆದಿದ್ದಾರೆ.

ಚಾಲಕನ ಆಚಾತುರ್ಯದಿಂದ ಮೇಲಕ್ಕೆ ಹಾರಿದ ಟೊಯೊಟಾ ಫಾರ್ಚೂನರ್

ಯಾವುದೇ ಜಂಕ್ಷನ್‍‍ಗಳಲ್ಲಿ ವಾಹನ ಚಲಾಯಿಸುವಾಗ ನಿಧಾನವಾಗಿ ಚಲಿಸುವುದು ಒಳ್ಳೆಯದು. ಅನಾರೋಗ್ಯವಿದ್ದಲ್ಲಿ ವಾಹನ ಚಲಾಯಿಸದಿರುವುದು ಉತ್ತಮ.

Most Read Articles

Kannada
English summary
Toyota Fortuner flies high in accident. Read in Kannada.
Story first published: Tuesday, January 14, 2020, 12:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X