Toyota: 10 ಲಕ್ಷ ಕಿ.ಮೀ ಓಡಿದೆ, ಆದ್ರೂ ಶೋರೂಂ ಕಂಡಿಷನ್: ಈಗಷ್ಟೆ ಡೆಲಿವರಿ ಪಡೆದಂತೆ ಇನ್ನೋವಾ!
ಅಚ್ಚರಿಗೊಳ್ಳುವ ಹಾಗೆ ಟೊಯೊಟಾ ಇನ್ನೋವಾ ಕಾರೊಂದು 1 ಮಿಲಿಯನ್ (ಹತ್ತು ಲಕ್ಷ) ಕಿ.ಮೀ ಕ್ರಮಿಸಿದೆ. ಈ ವಾಹನವು ಕೇರಳದ ಕಣ್ಣೂರಿನಲ್ಲಿ ಕಮರ್ಷಿಯಲ್ ಸೆಗ್ಮೆಂಟಿಗೆ ಸೇರಿರುವ ಕಾರಣ ಸಾಕಷ್ಟು ಕಿಲೋಮೀಟರ್ ಓಡಿದೆ. ಈ ವಾಹನದ ಮಾಲೀಕ ಸತಾರ್ ಅವರು ಕೇರಳದಲ್ಲಿ ಟ್ರಾವೆಲ್ ಮತ್ತು ಕ್ಯಾಬ್ ವ್ಯವಹಾರವನ್ನು ನಡೆಸುತ್ತಿದ್ದಾರೆ. ಈ ವಾಹನದ ಬಗ್ಗೆ ಇತ್ತೀಚೆಗೆ ಹಂಚಿಕೊಂಡ ವಿಡಿಯೋದಲ್ಲಿ ಎಲ್ಲಾ ವಿವರಗಳನ್ನು ನೀಡಲಾಗಿದೆ. 10 ಲಕ್ಷ ಕಿಲೋಮೀಟರ್ ಓಡಿದರೂ ಕಾರಿನ ಕ್ಯಾಬಿನ್ ಹೊರಗೆ ಮತ್ತು ಒಳಗೆ ಸ್ವಚ್ಛವಾಗಿ ಕಾಣುತ್ತಿದ್ದು, ಮಾಲೀಕರ ಮೇಂಟೇನನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನೋವಾ ಎಂಜಿನ್ ಏಕೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ?: ಇನ್ನೋವಾ 2.5L D4D ಟರ್ಬೊ-ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಕಡಿಮೆ ಆರ್‌ಪಿಎಂಗಳಲ್ಲಿ ಹೆಚ್ಚಿನ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 100 ಬಿಹೆಚ್ ಪವರ್ ಹಾಗೂ 200 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 2.5 ಲೀಟರ್ ಎಂಜಿನ್‌ಗೆ ಈ ಪವರ್ ಕಡಿಮೆ ಎನಿಸಬಹುದು. ಆದರೆ ಎಂಜಿನ್ ಲೈಫ್ ಮತ್ತು ವಿಶ್ವಾಸಾರ್ಹತೆಯು ತಯಾರಕರ ಮುಖ್ಯ ಉದ್ದೇಶವಾಗಿದೆ.

ಕಂಪನಿಯು ಈ ಎಂಜಿನ್ ಅನ್ನು ದೀರ್ಘಕಾಲ ಉಳಿಯಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಆಯಿಲ್ ಬರ್ನರ್‌ನ ವಿನ್ಯಾಸದೊಂದಿಗೆ ಎರಕ ಕಬ್ಬಿಣದಿಂದ ನಿರ್ಮಿಸಲಾಗಿದೆ. ಈ ಎಂಜಿನ್ ಅಲ್ಯೂಮಿನಿಯಂ ಪಿಸ್ಟನ್‌ಗಳು ಮತ್ತು ಹೆಡ್‌ಗಳನ್ನು ಹೊಂದಿದೆ. ಇದನ್ನು ದೊಡ್ಡದಾಗಿ ಮತ್ತು ಭಾರವಾಗಿಟ್ಟುಕೊಂಡು, ಟೊಯೊಟಾ ಅತ್ಯುತ್ತಮ ಎಂಜಿನ್ ಜೀವನವನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ.
ಇಂತಹ ಕಾರುಗಳನ್ನು ಉತ್ತಮವಾಗಿ ಮೇಂಟೇನ್ ಮಾಡಿದ್ರೆ ಹೇಗಿರುತ್ತದೆ ಎಂಬುದನ್ನು ಕೇರಳದ ಸತಾರ್ ಎಂಬುವರು ತೋರಿಸಿಕೊಟ್ಟಿದ್ದಾರೆ. ಇನ್ನೋವಾ ಕಾರಿನೊಂದಿಗಿನ ಅನುಭವ ಹಂಚಿಕೊಂಡಿರುವ ಅವರು, 7 ಲಕ್ಷ ಕಿ.ಮೀವರೆಗೆ ಶೋರೂಂ ಸರ್ವಿಸ್ ಮಾಡಿಸಿದ್ದರು. ನಂತರ ಅವರು ಹಳೆಯ ಟೊಯೋಟಾ ತಂತ್ರಜ್ಞರು ಸ್ವತಂತ್ರವಾಗಿ ನಡೆಸುತ್ತಿದ್ದ ಗ್ಯಾರೇಜ್ ಸೆಂಟರ್‌ಗಳಲ್ಲಿ ಕಾರನ್ನು ಸರ್ವಿಸ್ ಮಾಡಿಸುತ್ತಿದ್ದರು. ಈ ಇನ್ನೋವಾ ಪ್ರತಿ 10,000 ಕಿ.ಮೀ.ಗೆ ಸರ್ವಿಸ್ ಪಡೆಯುತ್ತಿತ್ತು.

ಬ್ರೇಕ್ ಪ್ಯಾಡ್‌ಗಳು ಸಾಮಾನ್ಯವಾಗಿ 1 ಲಕ್ಷ ಕಿ.ಮೀವರೆಗೆ ಬಾಳಿಕೆ ಬರುತ್ತವೆ. ಕ್ಲಚ್ ಲೈಫ್ ಸುಮಾರು 2.5 ಲಕ್ಷ ಕಿ.ಮೀ, ಟೈರ್‌ಗಳು 70,000-80,000 ಕಿ.ಮೀ ಇರುತ್ತವೆ. ಪ್ರತಿ ಟೈರ್ ಬೆಲೆ ಸುಮಾರು 6,500 ರೂ. ಹಾಗೂ ಟೈಮಿಂಗ್ ಬೆಲ್ಟ್ ಬೆಲೆ 3,500 ರೂ. ಇವನ್ನು ಸ್ಥಳೀಯ ಗ್ಯಾರೇಜ್‌ನಲ್ಲಿ ಅಳವಡಿಸುವುದರಿಂದ ವೆಚ್ಚವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡಿದೆ ಎಂದು ಸತಾರ್ ಹೇಳಿದ್ದಾರೆ.
ವಾಹನವು ಸತಾರ್ ಅವರಿಗೆ ತಲೆನೋವು ನೀಡಿದ ಏಕೈಕ ಸಮಯವೆಂದರೆ ವಾಹನ ಬಿಸಿಯಾದಾಗ ನಿಲ್ಲುತ್ತಿತ್ತು. ಅವರ ವಿಶ್ವಾಸಾರ್ಹ ಸ್ಥಳೀಯ ಗ್ಯಾರೇಜ್‌ನಲ್ಲಿ ಹೆಚ್ಚಿನ ತಪಾಸಣೆ ನಡೆಸಿದಾಗ, ಅದು ದೋಷಪೂರಿತ ವೈರಿಂಗ್ ಕಿಟ್‌ನಿಂದ ಹಾಗೆ ನಿಲ್ಲುತ್ತಿರುವುದನ್ನು ಕಂಡುಕೊಂಡರು. ಆ ವೇಳೆ ಬದಲಿಗಾಗಿ 20,000 ವೆಚ್ಚಿಸಿದರಾದರೂ ಸಮಸ್ಯೆಯನ್ನು ಸರಿಪಡಿಸಲಾಯಿತು.

ಸದ್ಯ ಮಾಲೀಕ ಸತಾರ್ ಅವರ ಮುಂದಿನ ಹೊಸ ವಾಹನ ಕೂಡ ಇನ್ನೋವಾ ಕ್ರಿಸ್ಟಾ ಎಂದು ಹೇಳುತ್ತಿದ್ದಾರೆ. ಟೊಯೊಟಾ ಎಂಜಿನ್‌ಗಳು ನೀಡುವ ವಿಶ್ವಾಸಾರ್ಹತೆಯ ಬಗ್ಗೆ ಆಗಾಗ್ಗೆ ಇಂತಹ ಉದಾಹರಣೆಗಳನ್ನು ನೋಡುತ್ತಲೇ ಇರುತ್ತೇವೆ. ಈ ಹಿಂದೆಯೂ ತಮಿಳುನಾಡಿನಲ್ಲಿ ಮತ್ತೊಂದು ಇನ್ನೋವಾ ಹತ್ತು ಲಕ್ಷ ಕಿ.ಮೀ ಓಡಿತ್ತು. ಟೊಯೋಟಾ ಎಂಜಿನ್‌ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications