ಜಗತ್ತಿನ ಅತ್ಯಮೂಲ್ಯ ಆಟೋ ಬ್ರಾಂಡ್ 'ಟೊಯೊಟಾ'
ಜಗತ್ತಿನ ಅತ್ಯಮೂಲ್ಯ ಆಟೋ ಬ್ರಾಂಡ್ ಎಂಬ ಖ್ಯಾತಿಗೆ 'ಟೊಯೊಟಾ' ಪಾತ್ರವಾಗಿದೆ. ಮಾರುಕಟ್ಟೆ ಸಂಶೋಧನೆ ಸಂಸ್ಥೆ ಮಿಲ್ವಾರ್ಡ್ ಬ್ರೌನ್ (Millwar Brown) ನಡೆಸಿರುವ ಅಧ್ಯಯನದಲ್ಲಿ ವಿಶ್ವದ 100 ಅತ್ಯಮೂಲ್ಯ ಬ್ರಾಂಡ್‌ಗಳ ಆಟೋ ಪೈಕಿ ಟೊಯೊಟಾ ಅಗ್ರಸ್ಥಾನ ಪಡೆದುಕೊಂಡಿದೆ.
ಕಳೆದ ಬಾರಿಯ ಫೇವರಿಟ್ ಬಿಎಂಡಬ್ಲ್ಯು ಹಿಂದಿಕ್ಕುವ ಮೂಲಕ ಟೊಯೊಟಾ ಅಗ್ರಸ್ಥಾನ ಆಲಂಕರಿಸಿದೆ. ಈ ಹಿಂದೆ 2006ರಿಂದ 2009ರ ವರೆಗೆ ಟೊಯೆಟಾ ನಂ.1 ಸ್ಥಾನ ಪಡೆದುಕೊಂಡಿತ್ತು. ಆದರೆ 2010 ಹಾಗೂ 2012ರಲ್ಲಿ ಬಿಎಂಡಬ್ಲ್ಯು ಹಿಂದಿಕ್ಕಿತ್ತು. ಇದೀಗ ಮತ್ತೆ ಅಗ್ರಸ್ಥಾನ ಮರಳಿ ಪಡೆದುಕೊಂಡಿದೆ.
ಟೊಯೊಟಾ ಬ್ರಾಂಡ್ ಮೌಲ್ಯ ಶೇಕಡಾ 12ರಷ್ಟು ಏರಿಕೆ ಕಂಡು 24.5 ಮಿಲಿಯನ್ ಡಾಲರ್‌ಗೆ ತಲುಪಿದೆ. ಮತ್ತೊಂದೆಡೆ ಬಿಎಂಡಬ್ಲ್ಯು ಬ್ರಾಂಡ್ ಮೌಲ್ಯ 24 ಮಿಲಿಯನ್ ಡಾಲರ್‌ಗೆ ಕುಸಿದಿದೆ. ಮೂರನೇ ಸ್ಥಾನದಲ್ಲಿರುವ ಮರ್ಸಿಡಿಸ್ ಬೆಂಝ್ ಬ್ರೌಂಡ್ ಮೌಲ್ಯ 18 ಮಿಲಿಯನ್ ಡಾಲರ್ ಆಗಿದೆ.
ಅಂದ ಹಾಗೆ ಒಟ್ಟಾರೆಯಾಗಿ ವಿಶ್ವದ ಅತ್ಯಮೂಲ್ಯ ಬ್ರಾಂಡ್ ಗೌರವಕ್ಕೆ ಅಪಲ್ ಸಂಸ್ಥೆ ಪಾತ್ರವಾಗಿದ್ದು 185.1 ಮಿಲಿಯನ್ ಡಾಲರ್ ಬ್ರೌಂಡ್ ಮೌಲ್ಯ ಹೊಂದಿದೆ. ಈ ಮೂಲಕ ಸತತ ಮೂರನೇ ಬಾರಿಗೆ ಈ ಸ್ಥಾನವನ್ನು ಆಲಂಕರಿಸಿದೆ. ಎರಡು ಹಾಗೂ ಮೂರನೇ ಸ್ಥಾನದಲ್ಲಿರುವ ಗೂಗಲ್ ಮತ್ತು ಐಬಿಎಂ ಅನುಕ್ರಮವಾಗಿ 113.7 ಹಾಗೂ 112.5 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯ ಹೊಂದಿದೆ.

ನಂ.1 : ಟೊಯೊಟಾ
ಒಟ್ಟಾರೆಯಾಗಿ 23ನೇ ಸ್ಥಾನ
ಬ್ರಾಂಡ್ ಮೌಲ್ಯ: 24,497 ಮಿಲಿಯನ್ ಡಾಲರ್
ಶೇಕಡಾ 12ರಷ್ಟು ಪ್ರಗತಿ

ನಂ.2 : ಬಿಎಂಡಬ್ಲ್ಯು
ಒಟ್ಟಾರೆಯಾಗಿ 24ನೇ ಸ್ಥಾನ
ಬ್ರಾಂಡ್ ಮೌಲ್ಯ: 24,015 ಮಿಲಿಯನ್ ಡಾಲರ್
ಶೇಕಡಾ 2ರಷ್ಟು ಕುಸಿತ

ನಂ.3 : ಮರ್ಸಿಡಿಸ್ ಬೆಂಝ್
ಒಟ್ಟಾರೆಯಾಗಿ 43ನೇ ಸ್ಥಾನ
ಬ್ರಾಂಡ್ ಮೌಲ್ಯ: 17,952 ಮಿಲಿಯನ್ ಡಾಲರ್
ಶೇಕಡಾ 11ರಷ್ಟು ಪ್ರಗತಿ

ನಂ.4 : ಹೋಂಡಾ
ಬ್ರಾಂಡ್ ಮೌಲ್ಯ: 12,401 ಮಿಲಿಯನ್ ಡಾಲರ್
ಶೇಕಡಾ 2ರಷ್ಟು ಕುಸಿತ

ನಂ.5 : ನಿಸ್ಸಾನ್
ಬ್ರಾಂಡ್ ಮೌಲ್ಯ: 10,186 ಮಿಲಿಯನ್ ಡಾಲರ್
ಶೇಕಡಾ 3ರಷ್ಟು ಪ್ರಗತಿ

ನಂ.6 : ಫೋಕ್ಸ್‌ವ್ಯಾಗನ್
ಬ್ರಾಂಡ್ ಮೌಲ್ಯ: 8,790 ಮಿಲಿಯನ್ ಡಾಲರ್
ಶೇಕಡಾ 3ರಷ್ಟು ಪ್ರಗತಿ

ನಂ.7 : ಫೋರ್ಡ್
ಬ್ರಾಂಡ್ ಮೌಲ್ಯ: 7,556 ಮಿಲಿಯನ್ ಡಾಲರ್
ಶೇಕಡಾ 2ರಷ್ಟು ಪ್ರಗತಿ

ನಂ.8 : ಆಡಿ
ಒಟ್ಟಾರೆಯಾಗಿ 100ನೇ ಸ್ಥಾನ
ಬ್ರಾಂಡ್ ಮೌಲ್ಯ: 5,545 ಮಿಲಿಯನ್ ಡಾಲರ್
ಶೇಕಡಾ 18ರಷ್ಟು ಪ್ರಗತಿ

ನಂ.9 : ಹ್ಯುಂಡೈ
ಬ್ರಾಂಡ್ ಮೌಲ್ಯ: 4,000 ಮಿಲಿಯನ್ ಡಾಲರ್
ಶೇಕಡಾ 11ರಷ್ಟು ಪ್ರಗತಿ

ನಂ.10 : ಲೆಕ್ಸಾಸ್
ಬ್ರಾಂಡ್ ಮೌಲ್ಯ: 3472 ಮಿಲಿಯನ್ ಡಾಲರ್
ಶೇಕಡಾ 2ರಷ್ಟು ಪ್ರಗತಿ


Click it and Unblock the Notifications