ಕೆಸರಿನಲ್ಲಿ ಸಿಲುಕಿಕೊಂಡ Ford EcoSport ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೊರ ತಂದ ಟ್ರಾಕ್ಟರ್

ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‍ಯುವಿಗಳು ಭಾರತದ ಅತ್ಯಂತ ಜನಪ್ರಿಯ ವಿಭಾಗಗಳಲ್ಲಿ ಒಂದಾಗಿದೆ. ಭಾರತದಲ್ಲಿ ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಬಿಡುಗಡೆಗೊಂಡ ಮೊದಲ ಮಾದರಿ Ford EcoSport ಆಗಿದೆ. ಇದು ಇಂದಿಗೂ ಉತ್ತಮವಾಗಿ ಮಾರಾಟವಾಗುತ್ತಿರುವ ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ.

ಕೆಸರಿನಲ್ಲಿ ಸಿಲುಕಿಕೊಂಡ Ford EcoSport ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೊರ ತಂದ ಟ್ರಾಕ್ಟರ್

Ford EcoSport ನಂತರ ಹಲವು ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‍ಯುವಿಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿತು. ಈ ವಿಭಾಗದಲ್ಲಿರುವ ಎಲ್ಲಾ ಎಸ್‍ಯುವಿಗಳು ಫ್ರಂಟ್ ವೀಲ್ ಡ್ರೈವ್ ಮಾದರಿಗಳಾಗಿವೆ. ಇದರಿಂದ ಈ ಎಸ್‍ಯುವಿ ಸಿಟಿಗಳಲ್ಲಿ ಬಳಕೆ ಮಾಡಲು ಹೆಚ್ಚು ಸೂಕ್ತವಾಗಿದೆ. ಆದರೆ ಜನರು ಒರಟಾದ ರಸ್ತೆ ಅಥವಾ ಆಫ್-ರೋಡ್ ಪ್ರದೇಶಗಳಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಚಾಲನೆ ಮಾಡಿ ಸಿಕ್ಕಿಹಾಕಿಕೊಳ್ಳುವ ಹಲವಾರು ವೀಡಿಯೊಗಳನ್ನು ನಾವು ನೋಡಿದ್ದೇವೆ. ಫ್ರಂಟ್ ವೀಲ್ ಡ್ರೈವ್ ಎಸ್‌ಯುವಿಯನ್ನು ಆಫ್-ರೋಡ್‌ನಲ್ಲಿ ಏಕೆ ಓಡಿಸಬಾರದು ಎಂಬುದನ್ನು ತೋರಿಸುವ ಇನ್ನೊಂದು ಉದಾಹರಣೆ ಇಲ್ಲಿದೆ.

ಕೆಸರಿನಲ್ಲಿ ಸಿಲುಕಿಕೊಂಡ Ford EcoSport ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೊರ ತಂದ ಟ್ರಾಕ್ಟರ್

ಕೆಸರಿನಲ್ಲಿ ಸಿಲುಕಿಕೊಂಡ Ford EcoSport ಕಾಂಪ್ಯಾಕ್ಟ್ ಎಸ್‌ಯುವಿಯ ವೀಡಿಯೋವನ್ನು ಆಟೋವೀಲ್ಸ್ ಇಂಡಿಯಾ - ಕಾರ್ಸ್ ಮತ್ತು ರೋಡ್ ಟ್ರಿಪ್ಸ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಡಲಾಗಿದೆ. ಈ ವೀಡಿಯೊ ಸುಮಾರು 45 Ford EcoSport ಎಸ್‌ಯುವಿಗಳಿಂದ ಆರಂಭವಾಗುತ್ತದೆ. ಈ ಗ್ರೂಪ್ ವಿಕೇಂಡ್ ಡ್ರೈವ್ ತೆರಳಿದ್ದಾರೆ. 45 ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಗಳು ಒಟ್ಟಿಗೆ ಚಲಿಸುತ್ತಿದ್ದರು.

ಕೆಸರಿನಲ್ಲಿ ಸಿಲುಕಿಕೊಂಡ Ford EcoSport ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೊರ ತಂದ ಟ್ರಾಕ್ಟರ್

ಎಲ್ಲಾ Ford EcoSport ದೆಹಲಿಯ NCR ಪ್ರದೇಶದಿಂದ ಬಂದಿತು ಮತ್ತು ಅವರು ವಿಶೇಷ ಉಪಹಾರ ಕೇಂದ್ರಕ್ಕೆ ಚಾಲನೆ ಮಾಡುತ್ತಿದ್ದರು. ಎಲ್ಲಾ ವಾಹನಗಳು ಚಾಲಿ ರೈಡ್ ಹೋಗುತ್ತಿದ್ದರು. ಮಧ್ಯದಲ್ಲಿ ಒಳ್ಳೆ ಪ್ರದೇಶ ಕಂಡಾಗ ನಿಲ್ಲಿಸಿ ಫೋಟೊಗಳನ್ನು ಕ್ಲಿಕಿಸಿ ತಮ್ಮ ಪ್ರಯಾಣ ಮುಂದುವರೆಸುತ್ತಿದ್ದರು. ಹೀಗೆ ಸ್ವಲ್ಪ ಸಮಯ ಚಾಲನೆ ಮಾಡಿದ ನಂತರ, ಡಾಂಬರು ರಸ್ತೆ ಮುಗಿದು ಮಣ್ಣಿನ ರಸ್ತೆಯ ಮೂಲಕ ಚಾಲನೆ ಮಾಡುತ್ತಿದ್ದರು.

ಕೆಸರಿನಲ್ಲಿ ಸಿಲುಕಿಕೊಂಡ Ford EcoSport ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೊರ ತಂದ ಟ್ರಾಕ್ಟರ್

ಕೇವಲ 1.5 ಕಿಮೀ ಮೊದಲು ಅವರು ಪ್ರಯಾಣಿಸುತ್ತಿದ್ದ ರಸ್ತೆಯನ್ನು ನಿರ್ಬಂಧಿಸಲಾಗಿದೆ ಎಂದು ಅವರಿಗೆ ತಿಳಿಯುತ್ತದೆ. ಯಾರೋ ಗೋಡೆ ಕಟ್ಟಿದ್ದರು ಮತ್ತು ಅದು ಮುಂದಿನ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿತ್ತು. ಈ ಗುಂಪು ತಿರುಗಿಸಿ ಬದಲಿ ರಸ್ತೆಯಲ್ಲಿ ಸಾಗುತ್ತಾರೆ. ನಂತರ ಈ ಗ್ರೂಪ್ ಉಪಹಾರದ ಸ್ಥಳ ತಲುಪುತ್ತದೆ ಮತ್ತು ಸ್ವಲ್ಪ ಸಮಯದ ನಂತರ ಸಂಪೂರ್ಣ ಚಿತ್ರಣ ಬದಲಾಗುತ್ತದೆ.

ಕೆಸರಿನಲ್ಲಿ ಸಿಲುಕಿಕೊಂಡ Ford EcoSport ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೊರ ತಂದ ಟ್ರಾಕ್ಟರ್

ಭಾರೀ ಮಳೆ ಪ್ರಾರಂಭವಾಗಿತ್ತು, ಕೆಲವು ಇಕೋಸ್ಪೋರ್ಟ್‌ಗಳನ್ನು ತೆರೆದ ಮೈದಾನದಲ್ಲಿ ನಿಲ್ಲಿಸಲಾಗಿದ್ದು ಅಲ್ಲಿ ಮಣ್ಣು ಸಾಕಷ್ಟು ಕೆಸರಿನಿಂಡ ಕೂಡಿತು. ಕೆಲವು EcoSport ಎಸ್‍ಯುವಿಗಳ ಮುಂಭಾಗದ ಚಕ್ರಗಳು ಹುಲ್ಲಿನ ಮೇಲೆ ಇದ್ದುದರಿಂದ ಚಾಲಕನು ಕಾರನ್ನು ಮುಂದಕ್ಕೆ ಚಲಿಸಲು ಪ್ರಯತ್ನಿಸುತ್ತಾನೆ. ಮಣ್ಣು ತುಂಬಾ ಕೆಸರಿನಿಂದ ಕೂಡಿತು. ಹಿಂಬದಿ ಚಕ್ರಗಳು ಕೆಸರಿನಲ್ಲಿ ಸಿಲುಕಿಕೊಂಡಿತು. ಇಕೋಸ್ಪೋರ್ಟ್ ಮುಂದೆ ಸಾಗುವುದಿಲ್ಲ.

ಕೆಸರಿನಲ್ಲಿ ಸಿಲುಕಿಕೊಂಡ Ford EcoSport ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೊರ ತಂದ ಟ್ರಾಕ್ಟರ್

ನಂತರ ಚಾಲಕ ಕಾರನ್ನು ರಿವರ್ಸ್ ಆಗಿ ಪ್ರಯತ್ನ ಪಡುತ್ತಾನೆ. ಅದೃಷ್ಟವಶಾತ್ ಅದು ಚಲಿಸಿತು. ಆ ಡೈವರ್ ತುಂಬಾ ಫಾಸ್ಟ್ ಆಗಿ ರಿವರ್ಸ್ ನಲ್ಲಿ ತೆಗೆಕೊಂಡು ಹೋಗುತ್ತಾನೆ. ಇನ್ನೊಂದು ಫೋರ್ಡ್ ಇಕೋಸ್ಪೋರ್ಟ್ ಅದೃಷ್ಟ ಚೆನ್ನಾಗಿರಲಿಲ್ಲ, ಅದರ ಚಾಲಕನು ಕಾರನ್ನು ಮುಂದಕ್ಕೆ ಫಾಸ್ಟ್ ಆಗಿ ತೆಗೆಯಲು ಪ್ರಯತ್ನಿಸುತ್ತಾನೆ. ಆದರೆ ಆ ಪ್ರಯತ್ನ ವಿಫಲವಾಗುತ್ತದೆ.

ರಿವರ್ಸ್ ತೆಗೆಯಲು ಕೂಡ ಪ್ರಯತ್ನಿಸಿದರು ಅದು ಕೂಡ ವಿಫಲವಾಯ್ತು. ಏನೂ ಕೆಲಸ ಮಾಡದಿದ್ದಾಗ, ಅವರು ಸ್ಥಳೀಯರಿಂದ ಸಹಾಯ ಪಡೆದರು ಮತ್ತು ಟ್ರಾಕ್ಟರ್ ಬಳಸಿ ಇಕೋಸ್ಪೋರ್ಟ್ ಅನ್ನು ಹೊರತೆಗೆಯಲು ಪ್ರಯತ್ನಿಸಿದರು. ಈ ಎಸ್‍ಯುವಿಯ ಟಯರ್ ಗಳು ಕೆಸರಿನ ಕೆಳಮಟ್ಟದಲ್ಲಿ ಸುಲುಕಿಕೊಂಡಿರುವುದರಿಂದ ಗ್ಗ ಕೂಡ ಒಂದೆರಡು ಬಾರಿ ಮುರಿಯಿತು.

ಕೆಸರಿನಲ್ಲಿ ಸಿಲುಕಿಕೊಂಡ Ford EcoSport ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೊರ ತಂದ ಟ್ರಾಕ್ಟರ್

ನಂತರ ಟ್ರಾಕ್ಟರ್ ಎಸ್‌ಯುವಿಯನ್ನು ಹಿಂಭಾಗದಿಂದ ಹೊರತೆಗೆಯಿತು. ಆದರೆ ಈ ಗ್ರೂಪ್ ಉದ್ದೇಶಪೂರ್ವಕವಾಗಿ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಆಫ್-ರೋಡ್ ಮಾಡಲು ತೆರಳಲಿಲ್ಲ, ಭಾರೀ ಮಳೆಯ ಸನ್ನಿವೇಶ ಅವರನ್ನು ಆಫ್-ರೋಡ್ ಪ್ರದೇಶದಲ್ಲಿ ತೆರಳುವಂತೆ ಮಾಡಿತು. ಇದಕ್ಕಾಗಿಯೇ ಫ್ರಂಟ್ ವೀಲ್ ಡ್ರೈವ್ ಎಸ್‍ಯುವಿಗಳಲ್ಲಿ ಆಫ್-ರೋಡ್ ತೆರಳಬಾರದು.

ಕೆಸರಿನಲ್ಲಿ ಸಿಲುಕಿಕೊಂಡ Ford EcoSport ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೊರ ತಂದ ಟ್ರಾಕ್ಟರ್

ಅದರ ಬದಲೂ 4WD ಅಥವಾ AWD SUV ಆಗಿದ್ದರೆ, ನಂತರ ಎಲ್ಲಾ ಚಕ್ರಗಳಿಗೆ ಶಕ್ತಿಯನ್ನು ಕಳುಹಿಸಲಾಗುತ್ತಿತ್ತು ಮತ್ತು ಹೆಚ್ಚು ಡ್ರಾಮ್ ಮಾಡದೆ ಕೆಸರು ಪ್ರದೇಶದಿಂದ ಹೊರಬರುತ್ತಿತ್ತು, ಒಂದು ಚಕ್ರವು ಸಿಕ್ಕಿಹಾಕಿಕೊಂಡಿದ್ದರೂ, ಇತರ ಚಕ್ರಗಳು ಪವರ್ ಅನ್ನು ಹೊಂದಿರುತ್ತವೆ. ಆದರೆ ಫ್ರಂಟ್ ವೀಲ್ ಡ್ರೈವ್ ಎಸ್‍ಯುವಿಗಳು ಸಿಲುಕಿಕೊಳುತ್ತದೆ,

ಕೆಸರಿನಲ್ಲಿ ಸಿಲುಕಿಕೊಂಡ Ford EcoSport ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೊರ ತಂದ ಟ್ರಾಕ್ಟರ್

ಇತ್ತೀಚೆಗೆ ನಧಿಯಲ್ಲಿ ಥಾರ್ ಎಸ್‍ಯುವಿ ಸಿಲುಕಿಕೊಂಡಿರುವ ವೀಡಿಯೋ ವೈರಲ್ ಆಗಿತ್ತು. ಇಲ್ಲಿ ಥಾರ್ ಎಸ್‍ಯುವಿಯು ಸಿಲುಕಿಕೊಂಡಿರುವುದಕ್ಕೆ ಅದರ ಸಾಮರ್ಥ್ಯಗಳ ಬಗ್ಗೆ ಅಲ್ಲ, ಆಫ್-ರೋಡ್ ಚಾಲನೆ ಕೌಶಲ್ಯ ಕೂಡ ಪ್ರಮುಖವಾಗಿದೆ. ಮಹೀಂದ್ರಾ ಥಾರ್ ತನ್ನ ಆಫ್-ರೋಡ್ ಸಾಮರ್ಥ್ಯವನ್ನು ಈಗಾಗಲೇ ಸಾಬೀತು ಮಾಡಿದ ಎಸ್‍ಯುವಿಯಾಗಿದೆ.

ಕೆಸರಿನಲ್ಲಿ ಸಿಲುಕಿಕೊಂಡ Ford EcoSport ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೊರ ತಂದ ಟ್ರಾಕ್ಟರ್

ಕಠಿಣವಾದ ಅಥವಾ ಹೆಚ್ಚು ಜಾರುವ ಸ್ಥಳಗಳಲ್ಲಿ ಎಸ್‍ಯುವಿಯನ್ನು ಡ್ರೈವ್ ಮಾಡುವಾಗ ಹೆಚ್ಚಿನ ಕೌಶಲ್ಯವನ್ನು ಹೊಂದಿರಬೇಕು. ಎಷ್ಟೇ ಆಫ್-ರೋಡ್ ಸಾಮರ್ಥ್ಯವಿರುವ ವಾಹನವಾದರೂ ಅದಕ್ಕೆ ಗ್ರಿಪ್ ಸಿಗದಿರುವ ಜಾರುವ ಸ್ಥಳದ ಕಡೆ ಡ್ರೈವ್ ಮಾಡಿದರೆ ಇದೇ ರೀತಿಯ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು.

ಕೆಸರಿನಲ್ಲಿ ಸಿಲುಕಿಕೊಂಡ Ford EcoSport ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೊರ ತಂದ ಟ್ರಾಕ್ಟರ್

ಕಠಿಣವಾದ ದಾರಿಯಲ್ಲಿ ವಾಹನವನ್ನು ಸಾಗಿಸುವ ಅದರ ಸಾಮರ್ಥ್ಯದ ಬಗ್ಗೆ ತಿಳಿದಿರಬೇಕು. ನೀರಿನಲ್ಲಿ ಕೂಡ ಇಳಿಸುವ ಮುನ್ನ ವಾಹನದ ಮಿತಿಗಳನ್ನು ತಿಳಿದುಕೊಳ್ಳಬೇಕು. ಹೊಸ ಥಾರ್ 650 ಎಂಎಂ ವಾಟರ್ ವೇಡಿಂಗ್ ಹೊಂದಿದೆ, ಆಫ್-ರೋಡ್ ಹೋಗುವಾಗ ಡ್ರೈವರ್ ಉತ್ತಮ ಕೌಶಲ್ಯವನ್ನು ಹೊಂದಿರಬೇಕು ಮತ್ತು ವಾಹನದ ಸಾಮರ್ಥ್ಯವನ್ನು ತಿಳಿದಿರಬೇಕು.

Image Courtesy: AutoWheels India - Cars & RoadTrips

Most Read Articles

Kannada
English summary
Tractor pulls out ford ecosport compact suv from mud portion details
Story first published: Friday, August 20, 2021, 15:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X