ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಈ ಕಾರಿನ ಮೇಲಿರುವ ದಂಡ ಎಷ್ಟು ಗೊತ್ತಾ.?

ಹಿಂದೆಲ್ಲಾ ಎಲೆಕ್ಟ್ರಾನಿಕ್ ಚಲನ್ ಸಿಸ್ಟಂ ಬರುವುದಕ್ಕೂ ಮುನ್ನ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದಾಗ ಮಾತ್ರ ಸಂಚಾರಿ ಪೊಲೀಸರು ಹಿಡಿದು ದಂಡ ವಿಧಿಸುತ್ತಿದ್ದರು. ಆದ್ರೆ ಇದೀಗ ಎಲೆಕ್ಟ್ರಾನಿಕ್ ಚಲನ್ ಸಿಸ್ಟಂ ಬಂದ ನಂತರ ಒಮ್ಮೆ ನೀವು ಟ್ರಾಫಿಕ್ ಪೊಲೀಸರ ಹತ್ತಿರ ಸಿಕ್ಕಿಕೊಂಡರೆ ಸಾಕು ನೀವು ಮಾಡಿರುವ ಟ್ರಾಫಿಕ್ ಉಲ್ಲಂಘನೆಯ ದೊಡ್ಡ ಪಟ್ಟಿಯೇ ದೊರೆಯುತ್ತದೆ.

ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಈ ಕಾರಿನ ಮೇಲಿರುವ ದಂಡ ಎಷ್ಟು ಗೊತ್ತಾ.?

ಕೆಲವೊಮ್ಮೆ ಅವರಸದಲ್ಲೊ ಅಥವಾ ಗೊತ್ತಿಲ್ಲದೆಯೋ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಆಗುವುದು ಕಾಮನ್. ಆದರೂ ಅದು ತಪ್ಪು ತಪ್ಪೇ. ಆದ್ರೆ ಇಲ್ಲೊಬ್ಬ ಮಹಾನುಭಾವ ತಾನು ಮಾಡುತ್ತಿರುವುದು ತಪ್ಪು ಅಂತಾ ಗೊತ್ತಿದ್ದರೂ ಹಲವಾರು ಬಾರಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿರುವುದಲ್ಲದೇ 35 ಸಾವಿರಕ್ಕಿಂತಲೂ ಹೆಚ್ಚು ದಂಡ ಜಡಿಸಿಕೊಂಡಿದ್ದಾನೆ ಎಂದರೆ ನೀವು ನಂಬಲೇಬೇಕು.

ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಈ ಕಾರಿನ ಮೇಲಿರುವ ದಂಡ ಎಷ್ಟು ಗೊತ್ತಾ.?

ಹೌದು, ಇದು ನಡೆದದ್ದು ತೆಲಂಗಾಣನಲ್ಲಿನ ಸೈಬೆರಾಬಾದ್ ಎಂಬ ನಗರದಲ್ಲಿ. ಮಹೀಂದ್ರಾ ಎಕ್ಸ್ಯುವಿ500 ಅಕರಿನ ಮಾಲೀಕನೊಬ್ಬ ವ್ರಾಂಗ್ ವೇನಲ್ಲಿ ಬರುತ್ತಿದ್ದನೆಂಬ ಕಾರಣಾದಿಂದಾಗ್ಗಿ ಅಲ್ಲಿದ್ದ ಟ್ರಾಫಿಲ್ ಪೊಲೀಸರನ್ನು ಅವರನ್ನು ತಡೆದು, ಅವರ ಹತ್ತಿರವಿದ್ದ ಯಂತ್ರದಲ್ಲಿ ಪರೀಕ್ಷಿಸಿದಾಗ ಆ ವಾಹನದ ಮೇಲೆ ಸುಮಾರು ರೂ.35,760 ಪೆಂಡಿಂಗ್ ಕೇಸ್‍‍ಗಳಿದ್ದವಂತೆ.

ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಈ ಕಾರಿನ ಮೇಲಿರುವ ದಂಡ ಎಷ್ಟು ಗೊತ್ತಾ.?

ಪ್ರಯಾಣಿಕರ ಸುರಕ್ಷತೆಗಾಗಿ ಟ್ರಾಫಿಕ್ ಪೊಲೀಸರು ಕಠಿಣ ಸಂಚಾರಿ ನಿಯಮಗಳನ್ನ ಜಾರಿ ಮಾಡಿದ್ದರೂ ಕೆಲವರಿಗೆ ಅದು ಅರ್ಥವಾಗುವುದೇ ಇಲ್ಲ. ಇಲ್ಲೊಬ್ಬ ಕಾರು ಸವಾರ ಕೂಡಾ ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದು, ವಾಹನ ಚಾಲನೆಯ ವೇಳೆ ಮೊಬೈಲ್ ಬಳಕೆ, ಸಿಗ್ನಲ್​ ಜಂಪ್​, ರಾಂಗ್ ವೇ ಡ್ರೈವಿಂಗ್​ ಸೇರಿದಂತೆ ಬರೋಬ್ಬರಿ ರೂ.35,760 ಪಾವತಿಸಬೇಕಾದಷ್ಟು ಪೆಂಡಿಂಗ್ ಕೇಸ್‌ಗಳಿದೆ ಎಂದರೆ ಇನ್ಯಾವ ಮಟ್ಟಕ್ಕೆ ಈತ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೇ ಮಾಡಿರಲ್ಲ.?

ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಈ ಕಾರಿನ ಮೇಲಿರುವ ದಂಡ ಎಷ್ಟು ಗೊತ್ತಾ.?

ಸಧ್ಯಕ್ಕೆ ಮಹೀಂದ್ರಾ ಎಕ್ಸ್ಯುವಿ500 ಕಾರನು ವ್ರಾಂಗ್ ಸೈಡ್‍ನಲ್ಲಿ ಬಂದಾಗ ಆ ಕಾರಿನ ಮೇಲಿದ್ದ ಪೆಂಡಿಂಗ್ ಕೇಸ್‍‍ಗಳ ಮೇಲಿದ್ದ ದಂಡವನ್ನು ವಸೂಲಿ ಮಾಡಿ ಆ ಕಾರಿನ ಜೊತೆ ಸೆಲ್ಫಿ ತೆಗೆದುಕೊಂಡು ಸೈಬೆರಾಬಾದ್ ಟ್ರಾಫಿಕ್ ಪೊಲೀಸ್ ಎಂಬ ಫೇಸ್‍‍ಬುಕ್ ಪೇಜ್‍‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಈ ಕಾರಿನ ಮೇಲಿರುವ ದಂಡ ಎಷ್ಟು ಗೊತ್ತಾ.?

ಹಾಗೆಯೆ ತೆಲಂಗಾಣದಲ್ಲಿನ ಹೈದೆರಾಬಾದ್‍‍ನಲ್ಲಿಯು ಸಹ ಕೆಲ ದಿನಗಳ ಹಿಂದಷ್ಟೇ ಅಲ್ಲಿನ ಸ್ಥಳೀಯ ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ವೇಳೆ ಸಿಕ್ಕಿಬಿದ್ದ ಕೃಷ್ಣ ಪ್ರಕಾಶ್‍‍ರವರ TS10 ED 9176 ನೋಂದಣಿ ಸಂಖ್ಯೆ ಇರುವ ಹೀರೋ ಬೈಕ್ ಮೇಲೆ ಬರೋಬ್ಬರಿ 135 ಪ್ರಕರಣಗಳಿರುವುದು ಪತ್ತೆಯಾಗಿದ್ದು, ಸ್ಕೂಟರ್ ಮೇಲೆ ಇರುವ ಪ್ರಕರಣಗಳ ಪಟ್ಟಿ ನೋಡಿದ ಸಂಚಾರಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.

ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಈ ಕಾರಿನ ಮೇಲಿರುವ ದಂಡ ಎಷ್ಟು ಗೊತ್ತಾ.?

ಹೈದ್ರಾಬಾದ್‌ನ ಕೃಷ್ಣ ಪ್ರಕಾಶ್ ಎಂಬುವರಿಗೆ ಸೇರಿದ ಹೀರೋ ಬೈಕ್ ವಾಹನದ ನೋಂದಣಿ ಸಂಖ್ಯೆಯನ್ನು ಮೊಬೈಲ್‌ನಲ್ಲಿ ಅಪ್‌ಡೇಟ್ ಮಾಡುತ್ತಿದ್ದಂತೆ ಬರೋಬ್ಬರಿ 135 ಪ್ರಕರಣಗಳು ದಾಖಲಾಗಿರೋದು ಬೆಳಕಿಗೆ ಬಂದಿದೆ. ಅಲ್ಲದೇ, ಈ ಪ್ರಕರಣಗಳ ದಂಡದ ಒಟ್ಟು ಮೊತ್ತ ಕೇವಲ ರೂ. 31,556 ಮಾತ್ರವಂತೆ.

ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಈ ಕಾರಿನ ಮೇಲಿರುವ ದಂಡ ಎಷ್ಟು ಗೊತ್ತಾ.?

135 ಕೇಸ್‍‍ಗಳಿರುವ ಕೃಷ್ಣ ಪ್ರಕಾಶ್ ಅವರ ಹೀರೋ ಬೈಕ್ ಅನ್ನು ಅಲ್ಲಿನ ಪೊಲೀಸರು ಸೀಜ್ ಮಾಡಲಾಗಿದ್ದು, ಅವರು ಬೈಕ್ ಅನ್ನು ಹಿಂಪಡೆಯಬೇಕಿದ್ದರೆ ಮೊದಲಿಗೆ ನ್ಯಾಯಾಲಯದ ವಿಚಾರಣೆಗೆ ಹೋಗಬೇಕಂತೆ. ಮತ್ತು ಬಂದ ಚಲನ್‍‍ನಲ್ಲಿ ಆತ ಮಾಡಿದ 135 ಕೇಸ್‍ಗಳಲ್ಲಿ ವಾಹನ ಚಾಲನೆಯ ವೇಳೆ ಫೋನ್ ಬಳಕೆ, ಹೆಲ್ಮೆಟ್ ರಹಿತ ವಾಹನ, ರಾಂಗ್ ಸೈಡ್ ಡ್ರೈವಿಂಗ್ ಇಂಥ ಪ್ರಕರಣಗಳೇ ಹೆಚ್ಚಂತೆ.

Source: HMTV

More from DriveSpark

Article Published On: Wednesday, April 10, 2019, 10:21 [IST]
English summary
Cop takes selfie with Mahindra XUV500 before slapping it with Rs. 35,760 pending fine! Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+