ಕಿರಣ್ ಬೇಡಿಯವರಿಂದ ಪುದುಚೆರಿ ರಸ್ತೆಯಲ್ಲಿ ಹೆಲ್ಮೆಟ್ ಅಭಿಯಾನ
ಇಂಡಿಯನ್ ಪೊಲೀಸ್ ಸರ್ವೀಸ್, ಸಾಮಾಜಿಕ ಕಾರ್ಯಕರ್ತೆ, ಮಾಜಿ ಟೆನಿಸ್ ಆಟಗಾರ್ತಿ, ರಾಜಕಾರಣಿ ಮತ್ತು ಪ್ರಸ್ಥುತ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಿರಣ್ ಬೇಡಿಯವರು ಈ ಮಧ್ಯೆ ಸಮಾಜಿಕ ಜಾಲತಾಣದಲ್ಲಿ ತಮ್ಮ ಕಾರ್ಯಗಳಿಂದ ಫೇಮಸ್ ಆಗುತ್ತಿದ್ದಾರೆ. ಇದೀಗ ಇವರ ಸಂಚಾರಿ ಜಾಗೃತಿ ಕಾರ್ಯಕ್ರಮವು ಸಹ ಅಷ್ಟೆ ವೈರಲ್ ಆಗುತ್ತಿದೆ.

ಪುದುಚೆರಿಯ ರಸ್ತೆಗಳಲ್ಲಿ ಪೊಲೀಸರ ಸಹಾಯದೊಂದಿಗೆ ಹೆಲ್ಮೆಟ್ ಧರಸದವರಿಗೆ, ಓವರ್ ಲೋಡ್ ಆಗಿರುವ ಅಟೋ ಮತ್ತು ತ್ರಿಪಲ್ ರೈಡಿಂಗ್ ಮಾಡುತ್ತಿರುವವರನ್ನು ತಡೆದು ಟ್ರಾಫಿಕ್ ರೂಲ್ಸ್ ಫಾಲೋ ಮಾಡಿ ಎಂಬ ಅಭಿಯಾನವನ್ನು ಶುರು ಮಾಡಲಾಗಿದೆ. ಈ ವಿಡಿಯೋನಲ್ಲಿ ಗಮನಿಸಿದ್ದೆ ಆದರೆ ಇಲ್ಲಿ ಹಲವರು ಹೆಲ್ಮೆಟ್ ಧರಿಸದೆಯೆ ವಾಹನ ಸವಾರಿ ಮಾಡುತ್ತಿರುವುದನ್ನು ಕಾಣಬಹುದು.
ಇಷ್ಟೆ ಅಲ್ಲದೇ ಟ್ರಿಪಲ್ ರೈಡಿಂಗ್ ಮಾಡುತ್ತಿದ್ದ ಯುವಕ, ಯುವತಿಯತು ಮತ್ತು ಓವರ್ ಲೋಡ್ ಆಗಿ ಸಂಚರಿಸುವುದನ್ನು ಕಾಣಬಹುದು. ಟ್ರಾಫಿಕ್ ಪೊಲೀಸರು ಮತ್ತು ಕೆಲ ಸೆಲಬ್ರಿಟಿಗಳು ಮಾತ್ರ ಇಂದ ಜಾಗೃತಿ ಕಾರ್ಯಕ್ರಮಗಳಲ್ಲಿ ನಿರತರಾಗಿರುತ್ತಾರೆ. ಇದೀಗ ಕಿರಣ್ ಬೇಡಿಯವರು ಕೂಡಾ ಇಂತಹ ಒಳ್ಳೆಯ ಕಾರ್ಯಕ್ಕೆ ಮುಂದಾಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೆಲ್ಮೆಟ್ ವಿಚಾರದಲ್ಲಿ ಕಳೆದ ಸುಮಾರು ದಿನಗಳ ಹಿಂದೆ ಪುಣೆಯಲ್ಲಿ ನಾವು ಹೆಲ್ಮೆಟ್ ಧರಿಸುವುದಿಲ್ಲ ಮತ್ತು ಶೇಕಡ 20 ರಷ್ಟು ಸ್ಪೀಡ್‍ನಲ್ಲಿ ಚಲಿಸುತ್ತಿರುವ ನಮಗೆ ಹೆಲ್ಮೆಟ್‍ನ ಅವಶ್ಯಕ್ತೆ ಇಲ್ಲವೆಂದು ಪುಣೆ ನಗರದ ನಾಗರೀಕರು ಮತ್ತು ರಾಜಕೀಯ ಅಭ್ಯರ್ತಿಗಳು ಪ್ರತಿಭಟನೆ ನಡೆಸಿದರು.

ದ್ವಿಚಕ್ರ ವಾಹನದ ರೈಡಿಂಗ್ ಮಾಡುವಾಗ ಉತ್ತಮ ಗುಣಮಟ್ಟದ ಹೆಲ್ಮೆಟ್ ಅನ್ನು ಧರಿಸುವು ಎಲ್ಲರಿಗೂ ಕಡ್ಡಾಯ, ಇದೇ ಅಲ್ಲದೇ ಸಣ್ಣ ಮಕ್ಕಳಿಗೆ ಕೂಡಾ ಹೆಲ್ಮೆಟ್‍ಗಳು ಲಭ್ಯವಿರುವುದು ಹಲವರಿಗೆ ತಿಳಿಯದೆ ಇರುವ ವಿಚಾರ ಹೀಗಾಗಿ ಇನ್ಮುಂದೆಯಾದರೂ, ಹೆಲ್ಮೆಟ್ ಧರಿಸಿ ಸೀಟ್ ಬೆಲ್ಟ್ ಧರಿಸಿ ವಾಹನದಲ್ಲಿ ಸಂಚರಿಸಿ ಎಂಬುದು ನಮ್ಮ ಆಶಯ.


Click it and Unblock the Notifications








