ಹೆಲ್ಮೆಟ್ ಹಾಕಿಲ್ಲವೆಂದು ಹೆಣ ಉರುಳಿಸೋ ಪೊಲೀಸರನ್ನು ನೋಡಿದ್ದೀರಾ?

ಭಾರತದಲ್ಲಿ, ಸಾಕಷ್ಟು ಮಂದಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಮತ್ತೊಂದೆಡೆ, ಜಾಗೃತಿ ಮೂಡಿಸುವ ತರಗತಿಗಳೂ ಸಹ ಹೆಚ್ಚಿಗೆಯಾಗಿವೆ.

By Girish

ಆದಾಗ್ಯೂ ಸಹ, ರಸ್ತೆ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿರುವುದು ಕಳವಳ ತರಿಸದೆ ಇರಲಾರದು. ಈ ನಿಟ್ಟಿನಲ್ಲಿ ಸಂಚಾರ ಪೊಲೀಸ್ ಇಲಾಖೆಯೂ ಸಹ ಕಟ್ಟುನಿಟ್ಟಾದ ನಿಯಮಗಳನ್ನು ತರುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶ ಹೊಂದಿದೆ.

ಹೆಲ್ಮೆಟ್ ಹಾಕಿಲ್ಲವೆಂದು ಹೆಣ ಉರುಳಿಸೋ ಪೊಲೀಸರನ್ನು ನೋಡಿದ್ದೀರಾ?

ಈ ಇಲಾಖೆಯ ಪೊಲೀಸರಿಗೆ ರಸ್ತೆ ಕಾನೂನನ್ನು ಉಲ್ಲಂಘಿಸುವ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಕ್ತಿಯನ್ನು ನೀಡಲಾಗಿದೆ. ಈ ಬಗ್ಗೆ, ಯಾರಿಗೂ ಸಹ ಯಾವುದೇ ರೀತಿಯ ಸಂದೇಹವಿಲ್ಲ.

ಆದ್ರೆ, ಕೊಟ್ಟಿರುವ ಅಧಿಕಾರವನ್ನು ಸಮಪರ್ಕವಾಗಿ ಬಳಕೆ ಮಾಡುವ ಪೊಲೀಸರನ್ನು ಇತ್ತೀಚಿಗೆ ನಾವು ನೋಡ್ತಾ ಇಲ್ಲ ಎಂಬುದು ಸದ್ಯದ ದುಃಖದ ವಿಚಾರವಾಗಿದೆ. ಹೌದು, ಇದಕ್ಕೆ ಪುಷ್ಟಿ ನೀಡುವಂತ ಘಟನೆಯೊಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನೆಡೆದಿದೆ.

ಹೆಲ್ಮೆಟ್ ಹಾಕಿಲ್ಲವೆಂದು ಹೆಣ ಉರುಳಿಸೋ ಪೊಲೀಸರನ್ನು ನೋಡಿದ್ದೀರಾ?

ಹೌದು, ವಾರದ ಕೊನೆ ಎನ್ನಲಾಗುವ ಶುಕ್ರವಾರದಂದು ಕನ್ಯಾಕುಮಾರಿಯಲ್ಲಿ ಈ ಬೆಚ್ಚಿ ಬೀಳಿಸುವ ಘಟನೆಯ ನೆಡೆದಿದ್ದು, ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಲಾಠಿ ಹಿಡಿದು ಯುದ್ಧಕ್ಕೆ ನಿಂತು ಮನ ಬಂದಂತೆ ವಾಹನ ಸವಾರರಿಗೆ ಥಳಿಸಿದ್ದಾರೆ.

ಹೆಲ್ಮೆಟ್ ಹಾಕಿಲ್ಲವೆಂದು ಹೆಣ ಉರುಳಿಸೋ ಪೊಲೀಸರನ್ನು ನೋಡಿದ್ದೀರಾ?

ಈ ಘಟನೆ ಕನ್ಯಾಕುಮಾರಿಯ ಕಲ್ಲುಪಾಲದಲ್ಲಿ ನವೆಂಬರ್ ತಿಂಗಳ 23ರಂದು ಸಂಜೆ 5 ಗಂಟೆ ಸುಮಾರಿಗೆ ನೆಡೆದಿದೆ. ಚಾಲಕನ ಹಣೆಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಪ್ಪದೇ ಓದಿ-ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಈ ಭೀಕರ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಲ್ಮೆಟ್ ಧರಿಸದ ಕಾರಣ ಚಾಲಕ ಬೈಕ್ ನಿಲ್ಲಿಸದೆ ವೇಗವಾಗಿ ಚಲಿಸಲು ಮುಂದಾಗುವ ವೇಳೆಯಲ್ಲಿ ಪೊಲೀಸನೊಬ್ಬ ಲಾಠಿ ಹಿಡಿದ್ದು ಜೋರಾಗಿ ಚಾಲಕ ಕಡೆ ಬೀಸಿದ್ದಾನೆ.

ಹೆಲ್ಮೆಟ್ ಹಾಕಿಲ್ಲವೆಂದು ಹೆಣ ಉರುಳಿಸೋ ಪೊಲೀಸರನ್ನು ನೋಡಿದ್ದೀರಾ?

ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿರುವುದನ್ನು ಕಂಡ ಸಾರ್ವಜನಿಕರ ಸಂಯಮದ ಕಟ್ಟೆ ಹೊಡೆದಿದ್ದು, ಪೊಲೀಸರ ಈ ದುರ್ವರ್ತನೆಯನ್ನು ಖಂಡಿಸಿ ವಾಗ್ವಾದಕ್ಕೆ ಇಳಿದಿದ್ದಾರೆ. ಕೊನೆಗೂ ತಮ್ಮ ತಪ್ಪನ್ನು ಒಪ್ಪಿಕೊಂಡ ಪೊಲೀಸ್ ಅಧಿಕಾರಿಗಳು, ಈ ಕೃತ್ಯದಲ್ಲಿ ತೊಡಗಿರುವ ಪೊಲೀಸ್ ಸಿಬ್ಬಂದಿಯನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

Most Read Articles

Kannada
English summary
Traffic Cop Hits Bike With Lathi For Not Wearing A Helmet. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X