ವಾಹನ ಸವಾರರೇ ಎಚ್ಚರ, ಸಿಗ್ನಲ್'ನಲ್ಲಿರುವಾಗ ಕೈಯಲ್ಲಿ ಮೊಬೈಲ್ ಹಿಡಿದರೆ ಬೀಳಲಿದೆ ದಂಡ

ವಾಹನ ಚಾಲನೆ ಮಾಡುವಾಗ ಸೆಲ್ ಫೋನ್ ಬಳಸದಂತೆ ಬೆಂಗಳೂರು ನಗರ ಪೊಲೀಸರು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ಈ ಆದೇಶವನ್ನು ಸಕ್ರಿಯವಾಗಿ ಜಾರಿಗೊಳಿಸುತ್ತಿದ್ದಾರೆ. ವಾಹನ ಚಾಲನೆ ಮಾಡುವಾಗ ಸೆಲ್ ಫೋನ್ ಬಳಸಿ ಸಿಕ್ಕಿ ಬಿದ್ದರೆ ರೂ 5,000 ದಂಡ ವಿಧಿಸಲಾಗುತ್ತದೆ ಅಥವಾ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ವಾಹನ ಸವಾರರೇ ಎಚ್ಚರ, ಸಿಗ್ನಲ್'ನಲ್ಲಿರುವಾಗ ಕೈಯಲ್ಲಿ ಮೊಬೈಲ್ ಹಿಡಿದರೆ ಬೀಳಲಿದೆ ದಂಡ

ಕೆಲವು ಸಂದರ್ಭಗಳಲ್ಲಿ ಈ ಎರಡನ್ನು ವಿಧಿಸಬಹುದು. ವಾಹನ ಚಾಲನೆ ಮಾಡುವಾಗ ಹ್ಯಾಂಡ್ಸ್ ಫ್ರೀ ಸಾಧನಗಳ ಬಳಕೆಗೆ ಅನುಮತಿ ನೀಡಲಾಗುವುದಿಲ್ಲವೆಂದು ಬೆಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುವಾಗಲೂ ಮೊಬೈಲ್ ಫೋನ್ ಬಳಸದಂತೆ ಸೂಚನೆ ನೀಡಲಾಗಿದೆ. ಸಿಗ್ನಲ್ ನಲ್ಲಿ ಕಾಯುತ್ತಿರುವಾಗ ಮೊಬೈಲ್ ಫೋನಿನಲ್ಲಿ ಮಾತನಾಡುವುದು ಇತರ ವಾಹನ ಸವಾರರನ್ನು ವಿಚಲಿತಗೊಳಿಸುತ್ತದೆ ಎಂದು ಈ ಕ್ರಮವನ್ನು ಜಾರಿಗೊಳಿಸಿರುವ ಹಿಂದಿನ ಕಾರಣವನ್ನು ಪೊಲೀಸರು ನೀಡಿದ್ದಾರೆ.

ವಾಹನ ಸವಾರರೇ ಎಚ್ಚರ, ಸಿಗ್ನಲ್'ನಲ್ಲಿರುವಾಗ ಕೈಯಲ್ಲಿ ಮೊಬೈಲ್ ಹಿಡಿದರೆ ಬೀಳಲಿದೆ ದಂಡ

ಕಾರು ಅಥವಾ ಬೈಕ್ ಚಾಲನೆ ಮಾಡುವಾಗ ಹೆಡ್‌ಫೋನ್‌ಗಳನ್ನು ಬಳಸಬಹುದೇ ಅಥವಾ ಬಳಸಬಾರದೇ ಎಂಬುದನ್ನು ಸಹ ಪೊಲೀಸರು ವಿವರಿಸಿದ್ದಾರೆ. ವಾಹನ ಚಾಲನೆ ಮಾಡುವಾಗ ಹೆಡ್‌ಫೋನ್‌ಗಳನ್ನು ಯಾವುದೇ ರೀತಿಯಲ್ಲಿ ಬಳಸಿದರೂ ದಂಡ ವಿಧಿಸಲಾಗುತ್ತದೆ. ವಾಹನ ಚಾಲನೆ ವೇಳೆ ಹೆಡ್ ಫೋನ್ ಬಳಸಿ ಹಾಡುಗಳನ್ನು ಸಹ ಕೇಳುವಂತಿಲ್ಲ. ವಾಹನ ಚಾಲನೆ ಮಾಡುವಾಗ ಮೊದಲ ಬಾರಿಗೆ ಹೆಡ್‌ಫೋನ್‌ಗಳನ್ನು ಬಳಸಿ ಸಿಕ್ಕಿಬಿದ್ದರೆ ರೂ. 500 ದಂಡ ವಿಧಿಸಲಾಗುತ್ತದೆ.

ವಾಹನ ಸವಾರರೇ ಎಚ್ಚರ, ಸಿಗ್ನಲ್'ನಲ್ಲಿರುವಾಗ ಕೈಯಲ್ಲಿ ಮೊಬೈಲ್ ಹಿಡಿದರೆ ಬೀಳಲಿದೆ ದಂಡ

ಎರಡನೇ ಬಾರಿ ಸಿಕ್ಕಿಬಿದ್ದವರಿಗೆ ರೂ. 1,000 ದಂಡ ವಿಧಿಸಲಾಗುತ್ತದೆ. ಈ ನಿಯಮವು ಕಾರು ಚಾಲಕರು ಹಾಗೂ ದ್ವಿಚಕ್ರ ವಾಹನ ಸವಾರರಿಗೂ ಅನ್ವಯವಾಗುತ್ತದೆ. ಕಾರು ಚಾಲನೆ ಮಾಡುತ್ತಿರಲಿ ಅಥವಾ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿರಲಿ, ಹೆಡ್‌ಫೋನ್‌ಗಳ ಮೂಲಕ ಹಾಡುಗಳನ್ನು ಕೇಳುವಂತಿಲ್ಲ. ಆದರೆ ಕಾರು ಪ್ರಯಾಣಿಕರು ಮ್ಯೂಸಿಕ್ ಸಿಸ್ಟಂ ಮೂಲಕ ಹಾಡುಗಳನ್ನು ಕೇಳಬಹುದು.

ವಾಹನ ಸವಾರರೇ ಎಚ್ಚರ, ಸಿಗ್ನಲ್'ನಲ್ಲಿರುವಾಗ ಕೈಯಲ್ಲಿ ಮೊಬೈಲ್ ಹಿಡಿದರೆ ಬೀಳಲಿದೆ ದಂಡ

ಆದರೆ ಆ ಸಿಸ್ಟಂನಿಂದ ಹೊರ ಬರುವ ಶಬ್ದವು ಇತರ ವಾಹನ ಸವಾರರಿಗೆ ಯಾವುದೇ ತೊಂದರೆಯನ್ನು ಉಂಟು ಮಾಡಬಾರದು. ಅದೇ ರೀತಿ, ಗೂಗಲ್ ಮ್ಯಾಪ್ ವೀಕ್ಷಿಸಲು ಕೈಯಲ್ಲಿ ಮೊಬೈಲ್ ಫೋನ್ ಹಿಡಿದಿದ್ದರೂ ದಂಡ ವಿಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಅಥವಾ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಹೋಲ್ಡರ್ ಬಳಸಿ ಗೂಗಲ್ ಮ್ಯಾಪ್ ಬಳಸ ಬಹುದು.

ವಾಹನ ಸವಾರರೇ ಎಚ್ಚರ, ಸಿಗ್ನಲ್'ನಲ್ಲಿರುವಾಗ ಕೈಯಲ್ಲಿ ಮೊಬೈಲ್ ಹಿಡಿದರೆ ಬೀಳಲಿದೆ ದಂಡ

ಆದರೆ ವಾಹನ ಚಾಲನೆ ವೇಳೆಯಲ್ಲಿ ಕೈಯಲ್ಲಿ ಮೊಬೈಲ್ ಫೋನ್ ಹಿಡಿಯುವಂತಿಲ್ಲ. ಕಾರು ಅಥವಾ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ವಾಹನ ಸವಾರರು ಕೈಯಲ್ಲಿ ಸೆಲ್ ಫೋನ್ ಹಿಡಿದರೆ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಬೆಂಗಳೂರು ಪೊಲೀಸರು ವಾಹನಗಳಲ್ಲಿ ಮೊಬೈಲ್ ಫೋನ್ ಹೋಲ್ಡರ್ ಬಳಸಲು ಸೂಚಿಸಿದ್ದಾರೆ.

ವಾಹನ ಸವಾರರೇ ಎಚ್ಚರ, ಸಿಗ್ನಲ್'ನಲ್ಲಿರುವಾಗ ಕೈಯಲ್ಲಿ ಮೊಬೈಲ್ ಹಿಡಿದರೆ ಬೀಳಲಿದೆ ದಂಡ

ಇತ್ತೀಚಿನ ದಿನಗಳಲ್ಲಿ ಹೊಸ ಸ್ಥಳಕ್ಕೆ ತೆರಳುವವರು ಬೇರೆಯವರ ಬಳಿ ಮಾರ್ಗದ ಬಗ್ಗೆ ವಿಚಾರಿಸುತ್ತಿಲ್ಲ. ಬದಲಿಗೆ ಗೂಗಲ್ ಮ್ಯಾಪ್ ಬಳಸುತ್ತಿದ್ದಾರೆ. ಗೂಗಲ್ ಮ್ಯಾಪ್ ಬಳಸುವ ವಾಹನ ಸವಾರರು ತಮ್ಮ ವಾಹನದಲ್ಲಿ ಮೊಬೈಲ್ ಫೋನ್ ಹೋಲ್ಡರ್ ಅಳವಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಪೊಲೀಸರು ದಂಡ ವಿಧಿಸುವುದರಿಂದ ಪಾರಾಗಬಹುದು. ಜೊತೆಗೆ ಅಪಘಾತದಿಂದಲೂ ಪಾರಾಗಬಹುದು.

ವಾಹನ ಸವಾರರೇ ಎಚ್ಚರ, ಸಿಗ್ನಲ್'ನಲ್ಲಿರುವಾಗ ಕೈಯಲ್ಲಿ ಮೊಬೈಲ್ ಹಿಡಿದರೆ ಬೀಳಲಿದೆ ದಂಡ

ಭಾರತದಲ್ಲಿ ರಸ್ತೆ ಅಪಘಾತಗಳಿಗೆ ವಾಹನ ಸವಾರರು ವಾಹನ ಚಾಲನೆ ವೇಳೆ ಮೊಬೈಲ್ ಬಳಸುವುದು ಸಹ ಪ್ರಮುಖ ಕಾರಣವಾಗಿದೆ. ಮೊಬೈಲ್ ಫೋನಿನಲ್ಲಿ ಮಾತನಾಡುವಾಗ ಗೊಂದಲ ಏರ್ಪಟ್ಟು ರಸ್ತೆ ಅಪಘಾತಗಳಾಗುತ್ತಿವೆ. ಈ ಕಾರಣಕ್ಕೆ ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸದಿರುವುದು ಒಳ್ಳೆಯದು. ಇದು ವಾಹನ ಸವಾರರಿಗೆ ಮಾತ್ರವಲ್ಲದೆ ಅವರೊಂದಿಗೆ ಪ್ರಯಾಣಿಸುವವರನ್ನು ಅಪಘಾತಕ್ಕೀಡಾಗುವುದರಿಂದ ತಪ್ಪಿಸುತ್ತದೆ.

ವಾಹನ ಸವಾರರೇ ಎಚ್ಚರ, ಸಿಗ್ನಲ್'ನಲ್ಲಿರುವಾಗ ಕೈಯಲ್ಲಿ ಮೊಬೈಲ್ ಹಿಡಿದರೆ ಬೀಳಲಿದೆ ದಂಡ

ವಾಹನ ಚಾಲನೆ ಮಾಡುತ್ತಾ ಮೊಬೈಲ್ ಫೋನಿನಲ್ಲಿ ಮಾತನಾಡುವ ವ್ಯಕ್ತಿ ವಿಚಲಿತನಾದರೆ, ಇತರ ವಾಹನ ಚಾಲಕರು ಹಾಗೂ ಪಾದಚಾರಿಗಳು ಅಪಘಾತಕ್ಕೀಡಾಗುತ್ತಾರೆ. ಈ ಕಾರಣಕ್ಕೆ ಬೆಂಗಳೂರು ಪೊಲೀಸರು ಮುಂಬರುವ ದಿನಗಳಲ್ಲಿ ಕಠಿಣ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಪೊಲೀಸರು ಭಾವಿಸಿದ್ದಾರೆ.

ವಾಹನ ಸವಾರರೇ ಎಚ್ಚರ, ಸಿಗ್ನಲ್'ನಲ್ಲಿರುವಾಗ ಕೈಯಲ್ಲಿ ಮೊಬೈಲ್ ಹಿಡಿದರೆ ಬೀಳಲಿದೆ ದಂಡ

ಇನ್ನು ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ನಗರ ಸಂಚಾರ ಪೊಲೀಸರು ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ಹೆಲ್ಮೆಟ್ ಧರಿಸಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ. ಹೆಲ್ಮೆಟ್ ತಯಾರಕ ಕಂಪನಿಗಳು ಬೆಂಗಳೂರು ಸಂಚಾರಿ ಪೊಲೀಸರ ಕ್ರಮವನ್ನು ವಿರೋಧಿಸಿವೆ. ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ವಾಹನ ಸವಾರರಿಗೆ ತಮ್ಮ ಸೆಲ್ ಫೋನ್‌ಗಳಿಗೆ ಬರುವ ಕರೆಗಳನ್ನು ಸ್ವೀಕರಿಸಲು ನೆರವಾಗುತ್ತದೆ.

ವಾಹನ ಸವಾರರೇ ಎಚ್ಚರ, ಸಿಗ್ನಲ್'ನಲ್ಲಿರುವಾಗ ಕೈಯಲ್ಲಿ ಮೊಬೈಲ್ ಹಿಡಿದರೆ ಬೀಳಲಿದೆ ದಂಡ

ಬ್ಲೂಟೂತ್ ಹೊಂದಿರುವ ಹೆಲ್ಮೆಟ್ ಧರಿಸಿ ವಾಹನ ಸವಾರರು ವಾಹನ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಈ ಕಾರಣಕ್ಕೆ ಪೊಲೀಸರು ಬ್ಲೂಟೂತ್ ಹೊಂದಿರುವ ಹೆಲ್ಮೆಟ್ ಗಳ ಬಳಕೆಯನ್ನು ನಿಷೇಧಿಸಿದ್ದಾರೆ. ಬ್ಲೂಟೂತ್ ಬಳಸಿ ಮಾತನಾಡುವಾಗ ವಾಹನ ಸವಾರರ ಗಮನವು ಬೇರೆ ಕಡೆಗೆ ಹೋಗುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನ ಸವಾರರೇ ಎಚ್ಚರ, ಸಿಗ್ನಲ್'ನಲ್ಲಿರುವಾಗ ಕೈಯಲ್ಲಿ ಮೊಬೈಲ್ ಹಿಡಿದರೆ ಬೀಳಲಿದೆ ದಂಡ

ಬೆಂಗಳೂರು ನಗರ ಪೊಲೀಸರ ಈ ಕ್ರಮವು ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಹೆಲ್ಮೆಟ್ ಬಳಕೆದಾರರಿಗೆ ಆಘಾತವನ್ನುಂಟು ಮಾಡಿದೆ. ಇದರ ಜೊತೆಗೆ ಹೆಲ್ಮೆಟ್ ತಯಾರಕರ ಸಂಘವು ಸಹ ಬೆಂಗಳೂರು ಪೊಲೀಸರ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬ್ಲೂಟೂತ್ ಸಂಪರ್ಕ ಹೊಂದಿರುವ ಹೆಲ್ಮೆಟ್ ಗಳು ದ್ವಿಚಕ್ರ ವಾಹನ ಸವಾರರಿಗೆ ವರದಾನವಾಗಿವೆ. ಆದರೆ ಇನ್ನು ಮುಂದೆ ಬೆಂಗಳೂರಿನ ದ್ವಿಚಕ್ರ ವಾಹನ ಸವಾರರು ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಹೆಲ್ಮೆಟ್ ಧರಿಸುವಂತಿಲ್ಲ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Traffic cops to impose fine for using mobile phone at traffic signal details
Story first published: Tuesday, October 5, 2021, 16:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X