Just In
Don't Miss!
- News
ಆಹಾರ ಸುರಕ್ಷಾ ಶೃಂಗ ಪ್ರಶಸ್ತಿ-2019: 2 ಪ್ರಶಸ್ತಿ ಗೆದ್ದ ಹೆರಿಟೇಜ್ ಫುಡ್ಸ್
- Sports
ಆಟದ ಮಧ್ಯೆ ಮಗುವಿಗೆ ಹಾಲುಣಿಸಿದ ಆಟಗಾರ್ತಿ; ಹೃದಯಗೆದ್ದ ಫೋಟೋ ವೈರಲ್
- Movies
ಡಿಸೆಂಬರ್ 18ಕ್ಕೆ ದುನಿಯಾ ವಿಜಯ್ ತಂಡದಿಂದ ಸರ್ಪ್ರೈಸ್
- Finance
ಶೈಕ್ಷಣಿಕ ಸಾಲ ಮನ್ನಾ ಆಗುತ್ತಾ? ಏನಂತಾರೆ FM ನಿರ್ಮಲಾ ಸೀತಾರಾಮನ್
- Technology
ಗೂಗಲ್ ಮ್ಯಾಪ್ ನಲ್ಲಿ ಪಾದಾಚಾರಿಗಳಿಗೆ ಅನುಕೂಲವಾಗುವ ಮತ್ತೊಂದು ಫೀಚರ್
- Lifestyle
ಕಬ್ಬಿಣಾಂಶದ ಕೊರತೆಯೇ? ಈ ಆಹಾರಗಳನ್ನು ಸೇವಿಸಿ
- Education
ಎಸ್ಎಸ್ಎಲ್ಸಿ ಪಾಸ್...ಚಾಲಕ ವೃತ್ತಿ ಅಂದ್ರೆ ನಂಗಿಷ್ಟ… ಹಾಗಿದ್ರೆ ಈ ಸಾರಿಗೆ ಸಂಸ್ಥೆ ನೇಮಕಾತಿಗೆ ಅರ್ಜಿ ಹಾಕ
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
ದಂಡ ಕಟ್ಟದಿದ್ರೆ ಆರೆಸ್ಟ್ ಆಗ್ತೀರಾ ಎಚ್ಚರ..!
ಮುಂಬೈ ಪೊಲೀಸರು ಇ-ಚಲನ್ ಮೂಲಕ ಕಳುಹಿಸಲಾದ ರೂ.80 ಕೋಟಿ ಪಾವತಿಯಾಗದ ದಂಡದ ಹಣವನ್ನು ವಸೂಲಿ ಮಾಡಲು ಮುಂದಾಗಿದ್ದಾರೆ. ಈ ಕಾರಣಕ್ಕಾಗಿ ಸಂಚಾರ ದಂಡ ಪಾವತಿಸದವರ ವಿರುದ್ಧ ಬಂಧನ ವಾರಂಟ್ ಹೊರಡಿಸುವಂತೆ ನ್ಯಾಯಾಲಯಗಳಿಗೆ ಮನವಿ ಮಾಡಲು ಮುಂಬೈ ಪೊಲೀಸ್ ಇಲಾಖೆ ನಿರ್ಧರಿಸಿದೆ.

ಈ ಅಭಿಯಾನವನ್ನು 2019ರ ಡಿಸೆಂಬರ್ 1ರಿಂದ ಆರಂಭಿಸುವ ಸಾಧ್ಯತೆಗಳಿರುವುದಾಗಿ ವರದಿಯಾಗಿದೆ. ಆದ್ದರಿಂದ, ಇ-ಚಲನ್ ಮೂಲಕ ನಿಮಗೆ ಕಳುಹಿಸಲಾದ ದಂಡದ ಮೊತ್ತವನ್ನು ನೀವು ಪಾವತಿಸದೇ ಇದ್ದರೆ, ಬಂಧನದಿಂದ ತಪ್ಪಿಸಿಕೊಳ್ಳಲು ಕೂಡಲೇ ದಂಡದ ಹಣವನ್ನು ಪಾವತಿಸಿ.

ಸಂಚಾರ ಪೊಲೀಸರು ಈ ರೀತಿಯ ಕಠಿಣ ಕ್ರಮಕ್ಕೆ ಯಾವ ಕಾರಣಕ್ಕೆ ಮುಂದಾಗಿದ್ದಾರೆ ಎಂಬುದನ್ನು ನೋಡುವುದಾದರೆ, ಈ ವ್ಯವಸ್ಥೆಯನ್ನು 2016ರಲ್ಲಿ ಪರಿಚಯಿಸಿದಾಗಿನಿಂದ ಮುಂಬೈನ ಸಂಚಾರ ಪೊಲೀಸ್ ಇಲಾಖೆಯಲ್ಲಿ 27 ಲಕ್ಷಕ್ಕೂ ಹೆಚ್ಚಿನ ಪಾವತಿಯಾಗದ ಇ-ಚಲನ್‍ಗಳಿವೆ.

ಇವುಗಳ ಪೈಕಿ 9,000 ಕ್ಕೂ ಹೆಚ್ಚು ಇ-ಚಲನ್‌ಗಳು ರೂ. 5,000ಕ್ಕೂ ಹೆಚ್ಚಿನ ಮೊತ್ತವನ್ನು ಹೊಂದಿವೆ. ಕಳೆದ 3 ವರ್ಷಗಳಿಂದ ರೂ. 80 ಕೋಟಿಗೂ ಅಧಿಕ ಮೊತ್ತದ ದಂಡಗಳನ್ನು ಪಾವತಿಸಲಾಗಿಲ್ಲ. ದಂಡ ಪಾವತಿಸದ ಜನರಿಗೆ ಟ್ರಾಫಿಕ್ ಪೊಲೀಸರು ಎಸ್‌ಎಂಎಸ್ ಹಾಗೂ ಪತ್ರಗಳನ್ನು ಕಳುಹಿಸಿದ್ದರೂ ಸಾಕಷ್ಟು ಜನರು ದಂಡ ಪಾವತಿಸಿಲ್ಲ.

ಕಳೆದ ವರ್ಷ ದಂಡದ ರೂಪದಲ್ಲಿ ರೂ.139 ಕೋಟಿ ಸಂಗ್ರಹಿಸಲಾಗಿತ್ತು. ಈ ವರ್ಷ ಇದರ ಪ್ರಮಾಣ ರೂ.100 ಕೋಟಿಗಳಿಗೆ ಇಳಿಕೆಯಾಗಿದೆ. ಮುಂಬೈ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಮಧುಕರ್ ಪಾಂಡೆ ಈ ಬೆಳವಣಿಗೆಯನ್ನು ಖಚಿತ ಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಮುಂಬೈ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಅಪರಾಧಿಗಳು ಕಾನೂನಿಗೆ ಭಯಪಡುವಂತೆ ಮಾಡುವುದು ಅವಶ್ಯಕ. ಇದಕ್ಕೂ ಮುನ್ನ ಪೊಲೀಸರು ಅಪರಾಧಿಗಳ ಲೈಸೆನ್ಸ್ ಹಾಗೂ ವಾಹನದ ದಾಖಲೆಗಳನ್ನು ವಶಪಡಿಸಿಕೊಂಡು, ದಂಡ ಪಾವತಿಸಿದ ನಂತರ ವಾಪಸ್ ನೀಡುತ್ತಿದ್ದರು.

ಈಗ ಸ್ಥಳದಲ್ಲಿ ಇ-ಚಲನ್ ನೀಡಲಾಗುತ್ತಿದ್ದು ನಿಯಮಗಳನ್ನು ಉಲ್ಲಂಘಿಸುವವರ ವಾಹನದ ಫೋಟೋ ಕ್ಲಿಕ್ ಮಾಡಿ ಎಸ್‍ಎಂಎಸ್ ಕಳುಹಿಸಲಾಗುತ್ತದೆ. ಅನೇಕ ಬಾರಿ ಈ ವಾಹನಗಳನ್ನು ಆರ್‌ಟಿಒದಲ್ಲಿ ನೋಂದಾಯಿಸಿರುವುದಿಲ್ಲ.
MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿಎಲ್ ಕಳೆದುಕೊಂಡ ಡ್ರೈವರ್..!

ನೋಂದಾಯಿಸಿದ್ದರೂ ತಪ್ಪು ವಿಳಾಸವನ್ನು ನೀಡಲಾಗುತ್ತದೆ. ದಂಡ ಪಾವತಿಸದವರನ್ನು ಜೈಲಿಗೆ ಕಳುಹಿಸುವಂತಹ ವ್ಯವಸ್ಥೆ ನಮಗೆ ಬೇಕು ಎಂದು ಹೇಳಿದರು. ಈ ಹಿಂದೆ, ಮುಂಬೈನ ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಇ-ಚಲನ್ ಮೂಲಕ ಕಳುಹಿಸುತ್ತಿದ್ದ ದಂಡವನ್ನು ಪಾವತಿಸದಿರುವ ಅನೇಕ ಘಟನೆಗಳು ನಡೆದಿವೆ.
MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಕೆಲ ತಿಂಗಳ ಹಿಂದೆ ಮುಂಬೈ ಪೊಲೀಸರು ರೂ. 1.04 ಲಕ್ಷ ದಂಡವನ್ನು ಪಾವತಿಸದ ಉದ್ಯಮಿಯೊಬ್ಬರ ಹೋಂಡಾ ಅಕಾರ್ಡ್ ಐಷಾರಾಮಿ ಸೆಡಾನ್ ಅನ್ನು ವಶಕ್ಕೆ ಪಡೆದಿದ್ದರು. ಮತ್ತೋರ್ವ ಉದ್ಯಮಿ ಬಿಎಂಡಬ್ಲ್ಯು 3-ಸೀರೀಸ್ ಹಾಗೂ ಹೋಂಡಾ ಅಕಾರ್ಡ್ ಕಾರುಗಳಲ್ಲಿ ಬಾಂದ್ರಾ-ವರ್ಲಿ ಸಮುದ್ರ ಮಾರ್ಗದಲ್ಲಿ ಹಲವು ಬಾರಿ ವೇಗವಾಗಿ ಕಾರು ಚಲಾಯಿಸಿದ್ದರು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಆದರೆ 103 ಬಾರಿ ವೇಗವಾಗಿ ಕಾರು ಚಲಾಯಿಸಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದರೂ ದಂಡವನ್ನು ಪಾವತಿಸಿರಲಿಲ್ಲ. ತನ್ನ ಹೋಂಡಾ ಅಕಾರ್ಡ್ ಕಾರ್ ಅನ್ನು ಪಾರ್ಕಿಂಗ್ ಉಲ್ಲಂಘನೆಗಾಗಿ ಎಳೆದೊಯ್ಯಲ್ಪಟ್ಟ ನಂತರ ಅವರನ್ನು ಬಂಧಿಸಲಾಯಿತು.

ಅಂತೆಯೇ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧಿಕೃತ ಟಾಟಾ ಸಫಾರಿ ಕಾರು ಕೂಡ ಹಲವು ಬಾರಿ ವೇಗವಾಗಿ ಚಲಿಸಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಸರ್ಕಾರದ ಮುಖ್ಯಸ್ಥರಿಗೆ ದಂಡದಿಂದ ವಿನಾಯಿತಿ ನೀಡುವುದರಿಂದ ಈ ದಂಡವನ್ನು ವಿಧಿಸದೇ ಹಾಗೆಯೇ ಬಿಡಲಾಯಿತು.

ಇದರ ನಡುವೆ ಕೇರಳ ಹೈಕೋರ್ಟ್ ಹೊಸ ಆದೇಶ ನೀಡಿದ್ದು, ಇದರಿಂದ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.ಹೆಲ್ಮೆಟ್ ಧರಿಸದೇ ಇರುವವರನ್ನು ಮತ್ತು ಬೈಕ್ ಸವಾರರನ್ನು ತಪಾಸಣೆ ಮಾಡಲು ನಿಲ್ಲಿಸಲು ಸೂಚಿಸಿದಾಗ ಅದನ್ನು ನಿಲ್ಲಸದೇ ಬೈಕ್ ಸವಾರರು ಮುಂದೆ ಚಲಿಸಿದ ಸಂದರ್ಭದಲ್ಲಿ ಟ್ರಾಫಿಕ್ ಪೋಲಿಸರು ಅವರನ್ನು ಬೆನ್ನಟ್ಟುವಂತಿಲ್ಲವೆಂದು ಕೇರಳ ಹೈಕೋರ್ಟ್ ಹೇಳಿದೆ.

ಪೊಲೀಸರು ಅಂತಹ ವಾಹನ ಬರುವ ಹಾದಿಯಲ್ಲಿ ಅಡ್ಡ ಬಂದು ತಡೆಯುವುದು ಅಥವಾ ದೈಹಿಕ ಬಲ ತೋರುವುದು ಮಾಡುವಂತಿಲ್ಲ.ಈ ನಿಬಂಧನೆಗಳು ಮುಂದಿನ ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ ಎಂದು ಕೇರಳ ಹೈಕೋರ್ಟ್ ಅದೇಶ ನೀಡಿದೆ.

ಈ ರೀತಿ ವಾಹನಗಳನ್ನು ಅಡ್ಡಗಟ್ಟಿದಾಗ ಅಪಘಾತ ಅಥವಾ ಪ್ರಾಣಪಾಯವಾಗುವ ಕಾರಣ ಟ್ರಾಫಿಕ್ ಪೊಲೀಸರು ಅವರನ್ನು ಪತ್ತೆಹಚ್ಚಲು ಹೆಚ್ಚು ಅಧುನಿಕ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ನ್ಯಾಯಾಲಯ ಹೇಳಿದೆ.

ಮೋಟಾರ್ ವಾಹನ ಡ್ರೈವಿಂಗ್ ನಿಯಂತ್ರಣ ಕಾಯ್ದೆ 2017ರ ನಿಯಮದಂತೆ ಟ್ರಾಫಿಕ್ ಪೊಲೀಸರು ವಾಹನವನ್ನು ಯಾವ ಕಾರಣಕ್ಕೆ ತಡೆಯಬಹುದು ಎಂಬುದರ ಬಗ್ಗೆ ಅಧಿಕೃತ ಪಟ್ಟಿ ತಯಾರಿಸಲು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಡಿಜಿಟಲ್ ಕ್ಯಾಮೆರಾ, ಟ್ರಾಫಿಕ್ ಸಿಸಿ ಕ್ಯಾಮೆರಾ, ಮೊಬೈಲ್ ಕ್ಯಾಮೆರಾ, ಇತರ ಅಧುನಿಕ ತಂತ್ರಜ್ಞಾನಗಳನ್ನು ಬಳಿಸಿ ಅವರನ್ನು ಪತ್ತೆಹಚ್ಚಬಹುದಾಗಿದೆ. ವಾಹನದ ದಾಖಲೆ, ಫಿಟೆನೆಸ್ ಸರ್ಟಿಫಿಕೇಟ್ ಮತ್ತು ಇನ್ನಿತರ ದಾಖಲೆಗಳನ್ನು ಪರಿಶೀಲಿಸಲು ಮತ್ತು ದ್ವಿಚಕ್ರ ವಾಹನದ ಅಗತ್ಯ ಮಾಹಿತಿ ಪಡೆಯಲು ಇವುಗಳನ್ನು ಬಳಸಬಹುದು.

ವಾಹನಗಳ ಪರಿಶೀಲನೆಗಾಗಿ ವಾಹನದ ಮುಂದೆ ನಿಂತು ಅಡ್ಡ ಹಾಕುವುದು ಅಥವಾ ಬೆನ್ನುಟ್ಟವ ಮೂಲಕ ಯಾವುದೇ ದೈಹಿಕವಾಗಿ ಆಡಚಣೆಯನ್ನು ಮಾಡಬಾರದು. ಇದು ಸವಾರರಿಗೆ ಅಲ್ಲದೇ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಗಳ ಜೀವಕ್ಕೂ ಅಪಾಯವನ್ನುಂಟು ಮಾಡಬಹುದು.

ಕೇರಳದ ಮಲಪ್ಪುರಂನ 18 ವರ್ಷದ ಅರ್ಜಿದಾರರಿಗೆ ಜಾಮೀನು ನೀಡುವ ಪ್ರಕರಣದಲ್ಲಿ ಕೇರಳದ ಹೈಕೋರ್ಟ್ ಈ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಆರೋಪಿ ಮತ್ತು ಆತನ ಸ್ನೇಹಿತ ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆಯಲು ಅಡ್ಡ ಬಂದಾಗ ಟ್ರಾಫಿಕ್ ಪೊಲೀಸ್ ಎಡಗಾಲಿಗೆ ಬೈಕ್ ಅನ್ನು ಹತ್ತಿಸಿ ಪರಾರಿಯಾಗಲು ಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರರು ರಸ್ತೆಯಲ್ಲಿ ಬಿದ್ದಿದರು.