ಕರೋನಾ ವೈರಸ್ ಎಫೆಕ್ಟ್: ಸಾರ್ವಜನಿಕ ಸ್ಥಳದಲ್ಲಿ ಉಗುಳುವವರೇ ಎಚ್ಚರ

ಸಾರ್ವಜನಿಕವಾಗಿ ಎಲ್ಲೆಂದರಲ್ಲಿ ಉಗುಳುವುದು ಭಾರತದಲ್ಲಿ ಬಹಳ ಸಾಮಾನ್ಯವಾಗಿದೆ. ಬೇರೆ ದೇಶಗಳಲ್ಲಿ ಸಾರ್ವಜನಿಕವಾಗಿ ಉಗುಳಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಯಾವುದೇ ಶಿಕ್ಷೆಯನ್ನು ವಿಧಿಸುವುದಿಲ್ಲ.

ಕರೋನಾ ವೈರಸ್ ಎಫೆಕ್ಟ್: ಸಾರ್ವಜನಿಕ ಸ್ಥಳದಲ್ಲಿ ಉಗುಳುವವರೇ ಎಚ್ಚರ

ಈಗಿರುವ ಶಿಕ್ಷೆಗಳಿಗೆ ಹೆದರುವವರು ಬಹಳ ಕಡಿಮೆ. ಉತ್ತರ ಭಾರತದ ರಾಜ್ಯಗಳಲ್ಲಿ ಎಲ್ಲೆಂದರಲ್ಲಿ ಉಗುಳುವುದು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ತಡೆಯಲು ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಯಾವುದೇ ಕ್ರಮಗಳು ಪರಿಣಾಮ ಬೀರುತ್ತಿಲ್ಲ.

ಕರೋನಾ ವೈರಸ್ ಎಫೆಕ್ಟ್: ಸಾರ್ವಜನಿಕ ಸ್ಥಳದಲ್ಲಿ ಉಗುಳುವವರೇ ಎಚ್ಚರ

ಆದರೆ ಕರೋನಾ ವೈರಸ್‌ನಿಂದಾಗಿ ಪರಿಸ್ಥಿತಿ ಬದಲಾಗಿದೆ ಎಂದು ಹೇಳಬಹುದು. ಕರೋನಾ ವೈರಸ್ ಹರಡಬಹುದೆಂಬ ಪಾನ್ ಮಸಾಲಾದಂತಹ ತಂಬಾಕು ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳನ್ನು ಮುಚ್ಚಲಾಗಿದೆ. ಇನ್ನೂ ಕೆಲವು ಕಂಪನಿಗಳು ಸ್ವಯಂ ನಿಯಂತ್ರಣಕ್ಕೆ ಒಳಪಟ್ಟಿವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಎಫೆಕ್ಟ್: ಸಾರ್ವಜನಿಕ ಸ್ಥಳದಲ್ಲಿ ಉಗುಳುವವರೇ ಎಚ್ಚರ

ಕರೋನಾ ವೈರಸ್‌ ಕಾರಣದಿಂದಾಗಿ ಎಲ್ಲೆಂದರಲ್ಲಿ ಉಗುಳುವವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಇದೇ ರೀತಿಯ ಘಟನೆಯೊಂದು ಇತ್ತೀಚಿಗೆ ಚಂಡೀಗಢದಲ್ಲಿ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಉಗುಳಿದ ವ್ಯಕ್ತಿಗೆ ಸ್ಥಳದಲ್ಲಿದ್ದ ಪೊಲೀಸ್ ಸರಿಯಾದ ಶಿಕ್ಷೆಯನ್ನೇ ನೀಡಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಸಾರ್ವಜನಿಕ ಸ್ಥಳದಲ್ಲಿ ಉಗುಳುವವರೇ ಎಚ್ಚರ

ಬಲದೇವ್ ಸಿಂಗ್ ಎಂಬುವವರೇ ಶಿಕ್ಷೆಗೊಳಗಾದ ವ್ಯಕ್ತಿ. ಇವರು ತಮ್ಮ ಮಗನೊಂದಿಗೆ ಬೈಕಿನಲ್ಲಿ ಬರುತ್ತಿದ್ದಾಗ ಟ್ರಾಫಿಕ್ ಪೊಲೀಸ್ ಇವರನ್ನು ತಡೆದು ನಿಲ್ಲಿಸಿ, ಸಾರ್ವಜನಿಕ ಸ್ಥಳದಲ್ಲಿ ಉಗುಳಿದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಸಾರ್ವಜನಿಕ ಸ್ಥಳದಲ್ಲಿ ಉಗುಳುವವರೇ ಎಚ್ಚರ

ಬಲದೇವ್ ಸಿಂಗ್‌ರವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಬೈಕಿನಲ್ಲಿದ್ದ ತಮ್ಮ ಮಗನನ್ನು ಕೆಳಗಿಳಿಸಿ, ತಾವು ಉಗುಳಿದ ಜಾಗಕ್ಕೆ ಹೋಗಿ ತಮ್ಮ ಕೈ ಹಾಗೂ ಹುಲ್ಲಿನಿಂದ ಉಗುಳನ್ನು ಒರೆಸಿದ್ದಾರೆ. ನಂತರ ಪೊಲೀಸರು ಬಲದೇವ್ ಸಿಂಗ್‌ರವರಿಗೆ ಸಾರ್ವಜನಿಕ ಸ್ಥಳದಲ್ಲಿ ಹೇಗೆ ವರ್ತಿಸಬೇಕೆಂದು ಬುದ್ದಿ ಹೇಳಿದ್ದಾರೆ.

ಚಂಡೀಗಢದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಜನರ ಓಡಾಟವನ್ನು ನಿಷೇಧಿಸಲಾಗಿದೆ. ಎಲ್ಲಾ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕೆಂಬ ಕಾನೂನು ಇದ್ದರೂ ಹಿಂಬದಿಯಲ್ಲಿದ್ದ ಬಲದೇವ್ ಸಿಂಗ್‌ರವರ ಮಗ ಹೆಲ್ಮೆಟ್ ಧರಿಸಿರಲಿಲ್ಲ. ಪೊಲೀಸರು ಇದಕ್ಕೆ ದಂಡ ವಿಧಿಸಿದ್ದಾರೆಯೇ ಇಲ್ಲವೇ ಎಂಬುದು ತಿಳಿದು ಬಂದಿಲ್ಲ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಎಫೆಕ್ಟ್: ಸಾರ್ವಜನಿಕ ಸ್ಥಳದಲ್ಲಿ ಉಗುಳುವವರೇ ಎಚ್ಚರ

ಕರೋನಾ ವೈರಸ್ ಕೆಮ್ಮುವುದು, ಸೀನುವುದರಿಂದ ಮಾತ್ರವಲ್ಲದೇ ಉಗುಳುವುದರಿಂದಲೂ ಹರಡುತ್ತದೆ ಎಂಬ ಕಾರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸ್ಥಳೀಯ ಆಡಳಿತಗಳು ಸಾರ್ವಜನಿಕವಾಗಿ ಉಗುಳುವವರಿಗೆ ದಂಡ ವಿಧಿಸುತ್ತಿವೆ.

Article Published On: Saturday, May 16, 2020, 10:47 [IST]
English summary
Traffic Marshal forces biker to clean up his spit from the road. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+