ದುಬಾರಿ ಬೆಲೆಯ ಸೂಪರ್ ಬೈಕ್ ಚಾಲನೆ ಮಾಡಿದ ಸಂಚಾರಿ ಪೊಲೀಸ್

ಸೂಪರ್ ಬೈಕ್ ಹಾಗೂ ಸೂಪರ್ ಕಾರುಗಳು ಹೆಚ್ಚು ಪರ್ಫಾಮೆನ್ಸ್ ಹಾಗೂ ಹೆಚ್ಚು ಕಾರ್ಯ ದಕ್ಷತೆಯನ್ನು ಹೊಂದಿರುತ್ತವೆ. ಸೂಪರ್ ವಾಹನಗಳು ಹಲವರ ಕನಸಿನ ವಾಹನಗಳಾಗಿರುತ್ತವೆ.

ದುಬಾರಿ ಬೆಲೆಯ ಸೂಪರ್ ಬೈಕ್ ಚಾಲನೆ ಮಾಡಿದ ಸಂಚಾರಿ ಪೊಲೀಸ್

ಅದರಲ್ಲೂ ಸೂಪರ್‌ಬೈಕ್‌ಗಳು ಯುವಕರ ಕನಸಿನ ಬೈಕುಗಳಾಗಿರುತ್ತವೆ. ಕೆಲವರು ಜೀವನದಲ್ಲಿ ಒಮ್ಮೆಯಾದರೂ ಈ ದುಬಾರಿ ಬೆಲೆಯ ಸೂಪರ್‌ಬೈಕ್‌ಗಳನ್ನು ಚಾಲನೆ ಮಾಡಬೇಕೆಂಬ ಆಸೆ ಹೊಂದಿರುತ್ತಾರೆ.

ದುಬಾರಿ ಬೆಲೆಯ ಸೂಪರ್ ಬೈಕ್ ಚಾಲನೆ ಮಾಡಿದ ಸಂಚಾರಿ ಪೊಲೀಸ್

ಈ ಆಸೆ ಸಾಮಾನ್ಯ ಜನರಿಗೆ ಮಾತ್ರವಲ್ಲ, ಕೆಲವು ಪೊಲೀಸರಿಗೂ ಇರುತ್ತದೆ. ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ದುಬಾರಿ ಬೆಲೆಯ ಸೂಪರ್ ಬೈಕ್ ಚಾಲನೆ ಮಾಡಿದ ಸಂಚಾರಿ ಪೊಲೀಸ್

ಸುಜುಕಿ ಹಯಾಬುಸಾ ವಿಶ್ವದ ಅತ್ಯಂತ ಜನಪ್ರಿಯ ಸೂಪರ್‌ಬೈಕ್'ಗಳಲ್ಲಿ ಒಂದಾಗಿದೆ. ಈ ಬೈಕಿನ ಆರಂಭಿಕ ಬೆಲೆ ರೂ.13.7 ಲಕ್ಷಗಳಾಗಿದೆ. ದುಬಾರಿ ಬೆಲೆಯನ್ನು ಹೊಂದಿರುವ ಕಾರಣಕ್ಕೆ ಈ ಐಷಾರಾಮಿ ಬೈಕ್ ಭಾರತದಲ್ಲಿ ಕಂಡು ಬರುವುದು ಅಪರೂಪ.

ದುಬಾರಿ ಬೆಲೆಯ ಸೂಪರ್ ಬೈಕ್ ಚಾಲನೆ ಮಾಡಿದ ಸಂಚಾರಿ ಪೊಲೀಸ್

ಮುಂಬೈನಲ್ಲಿ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಒಬ್ಬರು ಈ ಬೈಕಿನ ಮಾಲೀಕರಿಂದ ಅನುಮತಿ ಪಡೆದು ಈ ಬೈಕಿನಲ್ಲಿ ಸಂಚರಿಸಿದ್ದಾರೆ. ಈ ಘಟನೆಯ ವೀಡಿಯೊವನ್ನು ಸಿಎಸ್ 12 ವಿಲಾಗ್ಸ್ ಎಂಬ ಯೂಟ್ಯೂಬ್ ಚಾನೆಲ್ ಅಪ್ ಲೋಡ್ ಮಾಡಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ದುಬಾರಿ ಬೆಲೆಯ ಸೂಪರ್ ಬೈಕ್ ಚಾಲನೆ ಮಾಡಿದ ಸಂಚಾರಿ ಪೊಲೀಸ್

ಸಂಚಾರಿ ಪೊಲೀಸರು ಈ ರೀತಿ ಸೂಪರ್‌ಬೈಕ್‌ನಲ್ಲಿ ಸವಾರಿ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ತೆಲಂಗಾಣದಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಸಂಚಾರಿ ಪೊಲೀಸರೊಬ್ಬರು ಡುಕಾಟಿ ಬೈಕ್ ಅನ್ನು ಚಾಲನೆ ಮಾಡಿದ್ದರು.

ದುಬಾರಿ ಬೆಲೆಯ ಸೂಪರ್ ಬೈಕ್ ಚಾಲನೆ ಮಾಡಿದ ಸಂಚಾರಿ ಪೊಲೀಸ್

ಡುಕಾಟಿ ಪ್ರೀಮಿಯಂ ಸೂಪರ್ ಬೈಕಿನ ಬೆಲೆ ರೂ.18 ಲಕ್ಷಗಳಾಗಿದೆ. ಈಗ ಬಿಡುಗಡೆಯಾಗಿರುವ ವೀಡಿಯೊದಲ್ಲಿ ಮುಂಬೈ ಟ್ರಾಫಿಕ್ ಪೊಲೀಸ್ ಸುಜುಕಿ ಹಯಾಬುಸಾ ಬೈಕಿನಲ್ಲಿ ಸಂಚರಿಸುತ್ತಿರುವುದನ್ನು ಕಾಣಬಹುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಇವರು ನಿಧಾನವಾಗಿ ಬೈಕ್ ಚಾಲನೆ ಮಾಡಿ, ಪಾರ್ಕಿಂಗ್ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಘಟನೆಯನ್ನು ಗಮನಿಸಿದರೆ ಪೊಲೀಸರು ಸಹ ಸೂಪರ್ ಬೈಕ್‌ಗಳ ಬಗ್ಗೆ ಆಸಕ್ತಿ ಹೊಂದಿರುವುದು ಕಂಡು ಬರುತ್ತದೆ. ಸುಜುಕಿ ಹಯಾಬುಸಾ ಸೂಪರ್ ಬೈಕಿನಲ್ಲಿ 1,340 ಸಿಸಿ ಎಂಜಿನ್ ಅಳವಡಿಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದುಬಾರಿ ಬೆಲೆಯ ಸೂಪರ್ ಬೈಕ್ ಚಾಲನೆ ಮಾಡಿದ ಸಂಚಾರಿ ಪೊಲೀಸ್

ಈ ಎಂಜಿನ್ 187 ಬಿ‌ಹೆಚ್‌ಪಿ ಪವರ್ ಹಾಗೂ 150 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 299 ಕಿ.ಮೀಗಳಾಗಿದೆ. ಇಂತಹ ಸೂಪರ್ ಬೈಕ್ ಅನ್ನು ಮುಂಬೈನ ಟ್ರಾಫಿಕ್ ಪೊಲೀಸ್ ಅತ್ಯಂತ ಕಡಿಮೆ ವೇಗದಲ್ಲಿ ಚಾಲನೆ ಮಾಡಿದ್ದಾರೆ.

ಚಿತ್ರ ಕೃಪೆ: ಸಿಎಸ್ 12 ವಿಲಾಗ್ಸ್

Most Read Articles

Kannada
English summary
Traffic police in Mumbai rides Suzuki Hayabusa superbike. Read in Kannada.
Story first published: Tuesday, March 16, 2021, 16:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X