Just In
Don't Miss!
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Finance
ಮಹಾರಾಷ್ಟ್ರದಲ್ಲಿ ಲಾಕ್ಡೌನ್: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
- News
ಬಿಟ್ ಕಾಯಿನ್ ಮೌಲ್ಯ $60,000 ನಂತೆ ಸ್ಥಿರ, ಟ್ರೇಡರ್ಸ್ಗೆ ನೆಮ್ಮದಿ
- Movies
ಸುಶಾಂತ್ ಸಿಂಗ್ ಸಾವಿನ ಬಗ್ಗೆ ಕಂಗನಾ ರಣಾವತ್ ಯೂ-ಟರ್ನ್?
- Lifestyle
ಪಾತ್ರೆ ಉಜ್ಜುವ ಸೋಪ್ನಿಂದ ಈ ವಸ್ತುಗಳು ಹಾಗೂ ಸ್ಥಳಗಳನ್ನು ಸ್ವಚ್ಛ ಮಾಡಿ ನೋಡಿದ್ದೀರಾ?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಂಗ್ ಸೈಡ್'ನಲ್ಲಿ ಬಂದ ನಟನ ಕಾರನ್ನು ಹಿಂದಕ್ಕೆ ಕಳುಹಿಸಿದ ಟ್ರಾಫಿಕ್ ಪೊಲೀಸ್
ಮಲಯಾಳಂ ಚಿತ್ರರಂಗದ ಸ್ಟಾರ್ ನಟರಲ್ಲಿ ಮಮ್ಮುಟ್ಟಿ ಸಹ ಒಬ್ಬರು. ಅವರ ಮಗ ದುಲ್ಕರ್ ಸಲ್ಮಾನ್ ಸಹ ಜನಪ್ರಿಯ ನಟ. ಈಗ ದುಲ್ಕರ್ ಸಲ್ಮಾನ್ ವಿವಾದವೊಂದರಲ್ಲಿ ಸಿಲುಕಿದ್ದಾರೆ. ದುಲ್ಕರ್ ಸಲ್ಮಾನ್ ವಿವಾದದಲ್ಲಿ ಸಿಲುಕುತ್ತಿರುವುದು ಇದೇ ಮೊದಲಲ್ಲ.

ಈ ಹಿಂದೆ ಅವರು ಸಹ ನಟರೊಂದಿಗೆ ಸಾರ್ವಜನಿಕ ರಸ್ತೆಯಲ್ಲಿ ಕಾರ್ ರೇಸ್ ಮಾಡಿ ದೊಡ್ಡ ವಿವಾದದಲ್ಲಿ ಸಿಲುಕಿದ್ದರು. ಈಗ ಅವರು ಮತ್ತೊಮ್ಮೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ವರದಿಯಾಗಿದೆ. ಸಿಗ್ನಲ್ ದಾಟಲು ದುಲ್ಕರ್ ಸಲ್ಮಾನ್ ರಾಂಗ್ ಸೈಡ್'ನಲ್ಲಿ ಕಾರು ಚಾಲನೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೊ ವೈರಲ್ ಆಗಿದೆ.

ಈ ವೀಡಿಯೊದಲ್ಲಿ ರಾಂಗ್ ಸೈಡ್'ನಲ್ಲಿ ಬರುತ್ತಿದ್ದ ದುಲ್ಕರ್ ಸಲ್ಮಾನ್ ಅವರ ಕಾರನ್ನು ಪೊಲೀಸರೊಬ್ಬರು ತಡೆದು ಹಿಂದಕ್ಕೆ ಹೋಗಲು ಹೇಳುತ್ತಿರುವುದನ್ನು ಕಾಣಬಹುದು. ಪೊಲೀಸರು ಸೂಚಿಸಿದ ನಂತರ ದುಲ್ಕರ್ ಸಲ್ಮಾನ್ ಕಾರ್ ಅನ್ನು ರಿವರ್ಸ್ ತೆಗೆದುಕೊಂಡು ಮತ್ತೆ ಸರಿಯಾದ ದಾರಿಯಲ್ಲಿ ಸಾಗಿದ್ದಾರೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸ್ಥಳದಲ್ಲಿದ್ದ ಕೆಲವು ಯುವಕರು ತಮ್ಮ ಮೊಬೈಲ್'ನಲ್ಲಿ ಈ ಘಟನೆಯನ್ನು ಸೆರೆ ಹಿಡಿದಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದುದುಲ್ಕರ್ ಸಲ್ಮಾನ್ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ಈ ಘಟನೆ ನಡೆದಾಗ ದುಲ್ಕರ್ ಸಲ್ಮಾನ್ ಪೋರ್ಷೆ ಪನಾಮೆರಾ ಟರ್ಬೊ ಐಷಾರಾಮಿ ಕಾರನ್ನು ಚಾಲನೆ ಮಾಡುತ್ತಿದ್ದರು. ಈ ಸೂಪರ್ ಕಾರು ತಮಿಳುನಾಡಿನ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅನ್ನು ಹೊಂದಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದುಲ್ಕರ್ ಸಲ್ಮಾನ್ ಹಾಗೂ ಮಮ್ಮುಟ್ಟಿ ಇಬ್ಬರೂ ಬಳಸುವ ಬಹುತೇಕ ಕಾರುಗಳು 369 ಸಂಖ್ಯೆಯ ರಿಜಿಸ್ಟ್ರೇಷನ್ ನಂಬರ್ ಹೊಂದಿವೆ. ಈ ನಂಬರ್ ಮೂಲಕ ಈ ಕಾರು ದುಲ್ಕರ್ ಸಲ್ಮಾನ್'ಗೆ ಸೇರಿದ್ದು ಎಂಬುದು ಖಚಿತವಾಗಿದೆ.

ಈ ಘಟನೆ ಆಳಪ್ಪುಳದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ದುಲ್ಕರ್ ಸಲ್ಮಾನ್ ಅವರ ಅತಿರೇಕದ ವರ್ತನೆ ಅವರ ಅಭಿಮಾನಿಗಳಲ್ಲಿ ಇರುಸು ಮುರುಸು ಉಂಟು ಮಾಡಿದೆ. ದುಲ್ಕರ್ ಸಲ್ಮಾನ್ ಮಲಯಾಳಂ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದುಲ್ಕರ್ ಸಲ್ಮಾನ್ ಚಾಲನೆ ಮಾಡಿದ ಪೋರ್ಷೆ ಪನಾಮೆರಾ ಟರ್ಬೊ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.2.13 ಕೋಟಿಗಳಾಗಿದೆ. ಆನ್ ಲೈನ್ ಬೆಲೆ ಇದಕ್ಕಿಂತ ಹೆಚ್ಚಾಗಿದೆ. ಪೋರ್ಷೆ ಪನಾಮೆರಾ ಟಾಪ್ ಎಂಡ್ ಸೂಪರ್ ಕಾರ್ ಆಗಿದೆ.

ದುಲ್ಕರ್ ಸಲ್ಮಾನ್ 2018ರಲ್ಲಿ ಈ ಕಾರು ಖರೀದಿಸಿದ್ದರು ಎಂದು ತಿಳಿದು ಬಂದಿದೆ. ಈ ಕಾರ್ ಅನ್ನು ಸದ್ಯಕ್ಕೆ ಹೈಬ್ರಿಡ್ ಆವೃತ್ತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕಾರಿನಲ್ಲಿ ಅಳವಡಿಸಿರುವ 4.0 ಲೀಟರ್ ವಿ 8 ಎಂಜಿನ್ 543 ಬಿಹೆಚ್‌ಪಿ ಪವರ್ ಹಾಗೂ 770 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು
ಈ ಕಾರು 3.8 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ದುಲ್ಕರ್ ಸಲ್ಮಾನ್'ರಂತಹ ಪ್ರತಿಭಾವಂತ ನಟ ವಿವಾದಕ್ಕೆ ಸಿಲುಕಿರುವುದು ನಿಜಕ್ಕೂ ವಿಪರ್ಯಾಸ.

ಇತ್ತೀಚಿಗೆ ಕೇರಳ ಸಾರಿಗೆ ಇಲಾಖೆ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊಗಳ ಆಧಾರದ ಮೇಲೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ನಟ ದುಲ್ಕರ್ ಸಲ್ಮಾನ್ ವಿರುದ್ಧ ಸಹ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.