ಸುರಿಯುವ ಮಳೆಯಲ್ಲಿಯೇ ನಾಲ್ಕು ಗಂಟೆ ಕರ್ತವ್ಯ ನಿರ್ವಹಿಸಿದ ಸಂಚಾರಿ ಪೊಲೀಸ್

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಕ್ಕೊಳಗಾಗುವ ದೇಶಗಳಲ್ಲಿ ಒಂದಾಗಿದೆ. ಭಾರತದ ವಿವಿಧ ರಾಜ್ಯಗಳ ಪೊಲೀಸರು ರಸ್ತೆ ಅಪಘಾತಗಳನ್ನು ತಡೆಗಟ್ಟಲು ಹಾಗೂ ಸಂಚಾರವನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ.

ಸುರಿಯುವ ಮಳೆಯಲ್ಲಿಯೇ ನಾಲ್ಕು ಗಂಟೆ ಕರ್ತವ್ಯ ನಿರ್ವಹಿಸಿದ ಸಂಚಾರಿ ಪೊಲೀಸ್

ತಮ್ಮ ಕಾರ್ಯದಲ್ಲಿ ಕೆಲವು ಟ್ರಾಫಿಕ್ ಪೊಲೀಸರು ಎಲ್ಲರ ಗಮನವನ್ನು ಸೆಳೆಯುತ್ತಾರೆ. ಏಕೆಂದರೆ ಅವರ ಕರ್ತವ್ಯದ ಹಿಂದೆ ಬದ್ಧತೆಯಿರುತ್ತದೆ. ತಮಿಳುನಾಡಿನ ಮುತ್ತುರಾಜ್ ಅಂತಹ ಟ್ರಾಫಿಕ್ ಪೊಲೀಸರಲ್ಲಿ ಒಬ್ಬರು. ಮಳೆಯ ನಡುವೆಯೂ ಅವರು ಕರ್ತವ್ಯ ನಿರ್ವಹಿಸಿ ಸಂಚಾರ ನಿಯಂತ್ರಿಸುವ ಕೆಲಸವನ್ನು ಮಾಡಿದ್ದಾರೆ.

ಸುರಿಯುವ ಮಳೆಯಲ್ಲಿಯೇ ನಾಲ್ಕು ಗಂಟೆ ಕರ್ತವ್ಯ ನಿರ್ವಹಿಸಿದ ಸಂಚಾರಿ ಪೊಲೀಸ್

ಸುರಿಯುತ್ತಿರುವ ಮಳೆಯಲ್ಲಿ ಅವರು ಸಂಚಾರವನ್ನು ನಿಯಂತ್ರಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಕ್ಷಿಣ ತಮಿಳುನಾಡಿನ ತೂತುಕುಡಿಯಲ್ಲಿ ಈ ಘಟನೆ ನಡೆದಿದೆ. ಈ ಘಟನೆ ನಡೆದ ದಿನ ವಿವಿಡಿ ಜಂಕ್ಷನ್ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸುರಿಯುವ ಮಳೆಯಲ್ಲಿಯೇ ನಾಲ್ಕು ಗಂಟೆ ಕರ್ತವ್ಯ ನಿರ್ವಹಿಸಿದ ಸಂಚಾರಿ ಪೊಲೀಸ್

ಆದರೆ ಸಂಚಾರಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸ್ ಮುತ್ತುರಾಜ್ ಸುರಿಯುತ್ತಿರುವ ಮಳೆಯಲ್ಲಿಯೂ ಸುಮಾರು 4 ಗಂಟೆಗಳ ಕಾಲ ನಿಂತು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.

ಸುರಿಯುವ ಮಳೆಯಲ್ಲಿಯೇ ನಾಲ್ಕು ಗಂಟೆ ಕರ್ತವ್ಯ ನಿರ್ವಹಿಸಿದ ಸಂಚಾರಿ ಪೊಲೀಸ್

ಈ ವೀಡಿಯೊ ತೂತುಕುಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ರವರ ಗಮನಕ್ಕೊ ಬಂದಿದೆ. ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ಟ್ರಾಫಿಕ್ ಪೊಲೀಸ್ ಮುತ್ತುರಾಜ್ ರವರನ್ನು ಸನ್ಮಾನಿಸಿದ್ದಾರೆ. ಈ ವೀಡಿಯೊ ಫೇಸ್‌ಬುಕ್ ಹಾಗೂ ಟ್ವಿಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸುರಿಯುವ ಮಳೆಯಲ್ಲಿಯೇ ನಾಲ್ಕು ಗಂಟೆ ಕರ್ತವ್ಯ ನಿರ್ವಹಿಸಿದ ಸಂಚಾರಿ ಪೊಲೀಸ್

ಈ ಬಗ್ಗೆ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಮುತ್ತುರಾಜ್ ಕಠಿಣ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿ ಅವರಿಗೆ ಗೌರವ ಸಲ್ಲಿಸಲು ಬಯಸಿದ್ದೇನೆ ಎಂದು ಹೇಳಿದ್ದಾರೆ. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಸ್ಥಳಕ್ಕೆ ಬಂದು ಸನ್ಮಾನಿಸಿರುವುದಕ್ಕೆ ಮುತ್ತುರಾಜ್ ಅಚ್ಚರಿಗೊಂಡಿದ್ದಾರೆ.

ಸುರಿಯುವ ಮಳೆಯಲ್ಲಿಯೇ ನಾಲ್ಕು ಗಂಟೆ ಕರ್ತವ್ಯ ನಿರ್ವಹಿಸಿದ ಸಂಚಾರಿ ಪೊಲೀಸ್

ಸಾಮಾನ್ಯವಾಗಿ ಪೊಲೀಸರನ್ನು ಎಸ್‌ಪಿ ಕಚೇರಿಯಲ್ಲಿ ಸನ್ಮಾನಿಸಲಾಗುತ್ತದೆ. ಈ ಕುರಿತು ಪ್ರತಿಕ್ರಿಯಿಸಿರುವ ಮುತ್ತುರಾಜ್, ಎಸ್‌ಪಿಯವರು ನೇರವಾಗಿ ಬಂದು ನನ್ನನ್ನು ಸನ್ಮಾಸಿಸುತ್ತಿರುವುದಕ್ಕೆ ನನಗೆ ಸಂತೋಷ ಹಾಗೂ ಹೆಮ್ಮೆಯಾಗುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮಳೆ ಸುರಿಯುವಾಗ ದ್ವಿಚಕ್ರ ವಾಹನ ಸವಾರರು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುತ್ತಿದ್ದರೆ ಹೆಚ್ಚು ತೊಂದರೆಯಾಗುತ್ತದೆ. ಈ ಕಾರಣಕ್ಕೆ ಸಿಗ್ನಲ್ ಆಫ್ ಮಾಡಿ ಸಂಚಾರವನ್ನು ನಿಯಂತ್ರಿಸಿದೆ. ಇದರಿಂದ ವಾಹನ ಸವಾರರಿಗೆ ಅನುಕೂಲವಾಯಿತು ಎಂದು ಹೇಳಿದರು.

ಸುರಿಯುವ ಮಳೆಯಲ್ಲಿಯೇ ನಾಲ್ಕು ಗಂಟೆ ಕರ್ತವ್ಯ ನಿರ್ವಹಿಸಿದ ಸಂಚಾರಿ ಪೊಲೀಸ್

ದ್ವಿಚಕ್ರ ವಾಹನ ಸವಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 4 ಗಂಟೆ ಸುರಿಯುತ್ತಿರುವ ಮಳೆಯಲ್ಲಿ ನಿಂತು ಸಂಚಾರವನ್ನು ನಿಯಂತ್ರಿಸಿದ ಸಂಚಾರಿ ಪೊಲೀಸ್ ಮುತ್ತುರಾಜ್ ರವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಾರ್ವಜನಿಕರಿಂದ ಟೀಕೆಗೊಳಗಾಗುವ ಪೊಲೀಸರ ನಡುವೆ ಮುತ್ತುರಾಜ್ ರಂತಹ ಬದ್ದತೆ ಇರುವ ಪೊಲೀಸರೂ ಇರುತ್ತಾರೆ.

Most Read Articles

Kannada
English summary
Traffic police stands in rain for 4 hours to control traffic. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X