ನೋ ಪಾರ್ಕಿಂಗ್‌ನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್ ಪೀಸ್ ಪೀಸ್ ಮಾಡಿದ ಪೊಲೀಸ್..!
ನೋ ಪಾರ್ಕಿಂಗ್‌ನಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು ಸಂಚಾರಿ ನಿಯಮದ ಪ್ರಕಾರ ತಪ್ಪು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ಸಾಮಾನ್ಯ ವಿಚಾರ. ಜೊತೆಗೆ ಅಂತಹ ವಾಹನ ಮಾಲೀಕರ ವಿರುದ್ಧ ದಂಡ ಕೂಡಾ ವಿಧಿಸಬಹುದು. ಹೀಗಿರುವಾಗ ಇಲ್ಲೊಂದು ನೋ ಪಾರ್ಕಿಂಗ್ ಪ್ರಕರಣದಲ್ಲಿ ತಪ್ಪು ಮಾಡಿದ ವಾಹನ ಮಾಲೀಕನಿಗೆ ದಂಡ ವಿಧಿಸಬೇಕಿದ್ದ ಪೊಲೀಸರು ನಡೆದಕೊಂಡ ರೀತಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಸಂಚಾರಿ ನಿಯಮಗಳನ್ನು ಪಾಲಿಸದ ವಾಹನ ಸವಾರರ ವಿರುದ್ಧ ಟ್ರಾಫಿಕ್ ಪೊಲೀಸರು ದಂಡಹಾಕುವುದು ಕಾಮನ್. ಒಂದು ವೇಳೆ ಯಾವುದರೂ ಗಂಭೀರ ಪ್ರಮಾಣದ ಕೇಸ್ ಆಗಿದ್ದಲ್ಲಿ ಅಂತಹ ವಾಹನಗಳನ್ನು ಸೀಜ್ ಕೂಡಾ ಮಾಡಬಹುದಾಗಿದ್ದು, ಕೇವಲ ನೋ ಪಾರ್ಕಿಂಗ್ ಸ್ಥಳದಲ್ಲಿ ಸ್ಕೂಟರ್ ನಿಲುಗಡೆಯಾಗಿದೆ ಎಂಬ ಕಾರಣಕ್ಕಾಗಿ ಪೊಲೀಸರು ಹೋಂಡಾ ಡಿಯೋ ಸ್ಕೂಟರ್ ಅನ್ನೇ ಒಡೆದು ಹಾಕಿರುವ ಘಟನೆ ನಡೆದಿದೆ.

ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಅನ್ನು ನೋಡಿ ರೊಚ್ಚಿಗೆದ್ದ ಪೊಲೀಸ್ ಪೇದೆಯೊಬ್ಬರು ಸ್ಕೂಟರಿನ ಹೆಡ್‌ಲ್ಯಾಂಪ್, ಇನ್ಪೊಟೈನ್‌ಮೆಂಟ್ ಕ್ಲಸ್ಟರ್, ಟೈಲ್ ಲ್ಯಾಂಪ್ ಮತ್ತು ಇಂಡಿಕೇಟರ್‌ಗಳನ್ನು ಒಡೆದು ಹಾಕುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸ್ಕೂಟರ್ ಮಾಲೀಕನಿಗೆ ದಂಡ ವಿಧಿಸುವ ಬದಲು ಸ್ಕೂಟರಿನ ಬಿಡಿಭಾಗಗಳನ್ನು ಒಡೆದುಹಾಕಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತವಾಗುತ್ತಿದ್ದು, ಚೆನ್ನೈ ನಗರದ ವಾರ್ ಮೊಮೆರಿಯಲ್ ಹಾಲ್ ರಸ್ತೆಯಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ಸ್ಕೂಟರ್ ನಿಲುಗಡೆ ಮಾಡಿದ್ದಕ್ಕಾಗಿ ಪೊಲೀಸರು ಈ ರೀತಿಯಾಗಿ ದರ್ಪ ಮೆರೆದಿದ್ದಾರೆ.

ಈ ವೇಳೆ ಸ್ಥಳಕ್ಕೆ ಓಡಿಬಂದ ಸ್ಕೂಟರ್ ಮಾಲೀಕನು ಪೊಲೀಸ್ ದರ್ಪಕ್ಕೆ ಮರುಮಾತನಾಡದೇ ಸ್ಕೂಟರ್ ಅನ್ನು ತಗೆದುಕೊಂಡು ಹೋಗಿದ್ದು, ಆಗ ಸ್ಥಳದಲ್ಲೇ ನಿಂತಿದ್ದ ಸಾರ್ವಜನಿಕರು ಪೊಲೀಸರ ದರ್ಪವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡಿದ್ದಾರೆ.

ದೌವತ್ತಿಗೆ ಅಮಾನತು ಶಿಕ್ಷೆ
ಯಾವಾಗ ಪೊಲೀಸರ ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದೆ ತಡ ಹಿರಿಯ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ರವಾನೆಯಾಗಿದೆ. ವಿಡಿಯೋ ಮಾಹಿತಿಯನ್ನು ಆಧಾರಿಸಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿರುವ ಮೇಲಾಧಿಕಾರಿಗಳು ಘಟನೆ ಕುರಿತಂತೆ ಸಂಪೂರ್ಣ ಮಾಹಿತಿ ನೀಡುವಂತೆ ಆದೇಶಿಸಲಾಗಿದೆ.
MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಚೆನ್ನೈನ ಫೋರ್ಟ್ ಸ್ಟೆಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಪೆಷಲ್ ಸಬ್ ಇನ್‌ಸೆಪ್ಟರ್ ಹರಿ ಬಾಬು ಮತ್ತು ಹೋಂ ಗಾರ್ಡ್ ಮೋಹನ್ ವಿರುದ್ಧ ಇದೀಗ ಕಾನೂನು ವ್ಯಾಪ್ತಿ ಮೀರಿ ಕಾರ್ಯನಿರ್ವಹಣೆ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ದುರ್ವತನೆ ಆರೋಪದಡಿ ಅಮಾನತು ಶಿಕ್ಷೆ ನೀಡಲಾಗಿದೆ.
ನೋ ಪಾರ್ಕಿಂಗ್ ನಿಲ್ಲಿಸಲಾಗಿದ್ದ ಸ್ಕೂಟರ್ ಅನ್ನು ಒಡೆದು ಹಾಕಿದ ಪೊಲೀಸರ ವಿಡಿಯೋ ಇಲ್ಲದೇ ನೋಡಿ.
MOST READ: ಮಾಡಿಫೈ ಬೈಕ್ ಸವಾರರಿಗೆ ಭಿಕ್ಷುಕರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು..!

ಇನ್ನು ತಪ್ಪು ಮಾಡಿದ ವಾಹನ ಸವಾರನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಹೀಗೆ ದುರ್ವತನೆ ತೋರಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಛು ಆಕ್ರೋಶ ಕಾರಣವಾಗಿದ್ದು, ಪೂರ್ಣ ಪ್ರಮಾಣದ ತನಿಖೆಯ ನಂತರವಷ್ಟೇ ಘಟನೆಯ ಹಿಂದಿನ ಅಸಲಿಯತ್ತ ಬಯಲಾಗಿದೆ.


Click it and Unblock the Notifications








