ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸ ನಿಯಮಗಳ ಮೂಲಕ ಬಿಸಿ ಮುಟ್ಟಿಸಲು ಮುಂದಾದ ಸಾರಿಗೆ ಇಲಾಖೆ

ಇನ್ನು ಮುಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ವಾಹನ ಸವಾರರಿಗೆ 15 ದಿನಗಳಲ್ಲಿ ಇ-ಚಲನ್ (ಎಲೆಕ್ಟ್ರಾನಿಕ್ ಚಲನ್) ಅನ್ನು ನೀಡಲಾಗುವುದು. ಕೇಂದ್ರ ರಸ್ತೆ ಸಾರಿಗೆ ಇಲಾಖೆಯು ಚಲನ್ ಹಾಗೂ ದಂಡಗಳಿಗೆ ಸಂಬಂಧಿಸಿದ ಪ್ರಕರಣಗಳ ಮೇಲೆ ತ್ವರಿತ ಕ್ರಮಗಳನ್ನು ತೆಗೆದು ಕೊಳ್ಳುವ ಸಲುವಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸ ನಿಯಮಗಳ ಮೂಲಕ ಬಿಸಿ ಮುಟ್ಟಿಸಲು ಮುಂದಾದ ಸಾರಿಗೆ ಇಲಾಖೆ

ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಎಲೆಕ್ಟ್ರಾನಿಕ್ ಮೇಲ್ವಿಚಾರಣೆ ಮತ್ತು ನಿಯಮಗಳ ಜಾರಿಗಾಗಿ ಇಲಾಖೆಯು ಕೇಂದ್ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಹೊಸ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಇನ್ನು ಮುಂದೆ ಟ್ರಾಫಿಕ್ ಮಾನಿಟರಿಂಗ್ ಸಾಧನಗಳಾದ ಪೊಲೀಸ್ ಸ್ಪೀಡ್ ಕ್ಯಾಮೆರಾ, ಕ್ಲೋಸ್ಡ್-ಸರ್ಕ್ಯೂಟ್ ಕ್ಯಾಮೆರಾ, ಸ್ಪೀಡ್ ಗನ್‌, ಬಾಡಿ ವೇರಬಲ್ ಕ್ಯಾಮೆರಾ, ಡ್ಯಾಶ್‌ಬೋರ್ಡ್ ಕ್ಯಾಮೆರಾ, ಆಟೋಮ್ಯಾಟಿಕ್ ನಂಬರ್ ಪ್ಲೇಟ್ ಗುರುತಿಸುವಿಕೆ (ಎಎನ್‌ಪಿ‌ಆರ್), ತೂಕದ ಯಂತ್ರಗಳನ್ನು ಬಳಸಬಹುದು.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸ ನಿಯಮಗಳ ಮೂಲಕ ಬಿಸಿ ಮುಟ್ಟಿಸಲು ಮುಂದಾದ ಸಾರಿಗೆ ಇಲಾಖೆ

ಒಂದು ದಶ ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪ್ರಮುಖ ನಗರಗಳಲ್ಲಿ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಸಾಧನಗಳನ್ನು ಸಾಗಿಸಲಾಗಿದೆಯೆ ಎಂಬುದನ್ನು ಖಚಿತ ಪಡಿಸಿಕೊಳ್ಳುವಂತೆ ಕೇಂದ್ರ ಸಾರಿಗೆ ಇಲಾಖೆಯು ರಾಜ್ಯ ಸರ್ಕಾರಗಳನ್ನು ಕೇಳಿದೆ. ದೇಶಾದ್ಯಂತ ಸಂಚಾರ ಉಲ್ಲಂಘನೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸಾರಿಗೆ ಇಲಾಖೆಯು ತನ್ನ ಅಧಿಸೂಚನೆಯಲ್ಲಿ 132 ನಗರಗಳನ್ನು ಸೇರಿಸಿದೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸ ನಿಯಮಗಳ ಮೂಲಕ ಬಿಸಿ ಮುಟ್ಟಿಸಲು ಮುಂದಾದ ಸಾರಿಗೆ ಇಲಾಖೆ

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಹದಿನೈದು ದಿನಗಳಲ್ಲಿ ಇ ಚಲನ್ ಅನ್ನು ಸಂಬಂಧಿಸಿದ ವಾಹನ ಸವಾರರಿಗೆ ಕಳುಹಿಸಲಾಗುವುದು. ಹಾಗೂ ಎಲೆಕ್ಟ್ರಾನಿಕ್ ಕಣ್ಗಾವಲಿನ ಮೂಲಕ ಸಂಗ್ರಹಿಸಿದ ಎಲೆಕ್ಟ್ರಾನಿಕ್ ದಾಖಲೆಗಳನ್ನು ಚಲನ್ ವಿಲೇವಾರಿ ಆಗುವವರೆಗೂ ಸಂಗ್ರಹಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸ ನಿಯಮಗಳ ಮೂಲಕ ಬಿಸಿ ಮುಟ್ಟಿಸಲು ಮುಂದಾದ ಸಾರಿಗೆ ಇಲಾಖೆ

ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಇ ಚಲನ್ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಚಲನ್ ಅನ್ನು ಡಿಜಿಟಲ್ ಮಾಧ್ಯಮದ ಮೂಲಕ ಕಳುಹಿಸಲಾಗುತ್ತದೆ. ಅಪರಾಧಗಳನ್ನು ದಾಖಲಿಸಲು ಬಾಡಿ ವೇರಬಲ್ ಕ್ಯಾಮೆರಾ ಅಥವಾ ಡ್ಯಾಶ್‌ಬೋರ್ಡ್ ಕ್ಯಾಮೆರಾಗಳಂತಹ ಸಾಧನಗಳನ್ನು ಬಳಸಲು ಇಲಾಖೆಯು ಶಿಫಾರಸು ಮಾಡಿದೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸ ನಿಯಮಗಳ ಮೂಲಕ ಬಿಸಿ ಮುಟ್ಟಿಸಲು ಮುಂದಾದ ಸಾರಿಗೆ ಇಲಾಖೆ

ದೆಹಲಿಯಲ್ಲಿ ಆನ್‌ಲೈನ್‌ನಲ್ಲಿ ಚಾಲನಾ ಪರವಾನಗಿ

ಆಗಸ್ಟ್ 11 ರಿಂದ, ದೆಹಲಿ ಸಾರಿಗೆ ಇಲಾಖೆಯು ಮನೆಯಲ್ಲಿ ಕುಳಿತೇ ಚಾಲನಾ ಪರವಾನಗಿ ಪಡೆಯುವ ಸೌಲಭ್ಯವನ್ನು ಜಾರಿಗೆ ತಂದಿದೆ. ಇನ್ನು ಮುಂದೆ ದೆಹಲಿಯ ನಾಗರಿಕರು ಕಲಿಕಾ ಪರವಾನಗಿ ಅರ್ಜಿ, ಚಾಲನಾ ಪರವಾನಗಿ ನವೀಕರಣ, ಪರವಾನಗಿ ನವೀಕರಣ, ನೋಂದಣಿ ಪ್ರಮಾಣಪತ್ರ, ವಿಮಾ ಎನ್ಒಸಿ ಸೇರಿದಂತೆ ಸಾರಿಗೆ ಇಲಾಖೆಯ 33 ಸೇವೆಗಳನ್ನು ಆನ್‌ಲೈನ್ ಮೂಲಕ ಪಡೆಯಬಹುದು.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸ ನಿಯಮಗಳ ಮೂಲಕ ಬಿಸಿ ಮುಟ್ಟಿಸಲು ಮುಂದಾದ ಸಾರಿಗೆ ಇಲಾಖೆ

ಇದರಿಂದ ಇನ್ನು ಮುಂದೆ ಚಾಲನಾ ಪರವಾನಗಿ ಪಡೆಯ ಬಯಸುವವರು ಚಾಲನಾ ಪರೀಕ್ಷೆ ಹಾಗೂ ಫಿಟ್ನೆಸ್ ಪರೀಕ್ಷೆಯ ಪ್ರಮಾಣ ಪತ್ರವನ್ನು ಪಡೆಯಲು ಮಾತ್ರ ಸಾರಿಗೆ ಇಲಾಖೆಯ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ದೆಹಲಿ ಸರ್ಕಾರವು ಆರಂಭಿಸಿರುವ ಆನ್‌ಲೈನ್ ಸೇವೆಗಳನ್ನು ಪಡೆಯಲು ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರಬೇಕು.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸ ನಿಯಮಗಳ ಮೂಲಕ ಬಿಸಿ ಮುಟ್ಟಿಸಲು ಮುಂದಾದ ಸಾರಿಗೆ ಇಲಾಖೆ

ಅರ್ಜಿದಾರರು ದೆಹಲಿ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ, ಈ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸೇವೆಗಳನ್ನು ಪಡೆಯಲು ತಮ್ಮ ದೈಹಿಕ ಸಾಮರ್ಥ್ಯದ ವೈಯಕ್ತಿಕ ವಿವರಗಳನ್ನು ಹಾಗೂ ಸ್ವಯಂ ಘೋಷಣೆಯನ್ನು ನಮೂದಿಸ ಬೇಕಾದ ಪ್ರತ್ಯೇಕ ನಮೂನೆಗಳನ್ನು ಭರ್ತಿ ಮಾಡಬೇಕು. ಅರ್ಜಿದಾರರು ಅರ್ಜಿ ಸಲ್ಲಿಸಿದ ನಂತರ ಎಸ್ಎಂಎಸ್ ಮೂಲಕ ಅರ್ಜಿ ಸಂಖ್ಯೆಯನ್ನು ಸ್ವೀಕರಿಸುತ್ತಾರೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸ ನಿಯಮಗಳ ಮೂಲಕ ಬಿಸಿ ಮುಟ್ಟಿಸಲು ಮುಂದಾದ ಸಾರಿಗೆ ಇಲಾಖೆ

ದೆಹಲಿ ಸರ್ಕಾರದ ಈ ನಿರ್ಧಾರದಿಂದಾಗಿ ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ವಿನಾ ಕಾರಣ ಮನೆಯಿಂದ ಹೊರ ಬರುವುದು ತಪ್ಪುತ್ತದೆ. ಜೊತೆಗೆ ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಬಹುದು. ಇಷ್ಟು ಮಾತ್ರವಲ್ಲದೇ ಸಾರಿಗೆ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕ ಬಹುದು.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸ ನಿಯಮಗಳ ಮೂಲಕ ಬಿಸಿ ಮುಟ್ಟಿಸಲು ಮುಂದಾದ ಸಾರಿಗೆ ಇಲಾಖೆ

ಸಾರಿಗೆ ಇಲಾಖೆಯ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಾರ್ವಜನಿಕರು ಹಲವು ಬಾರಿ ದೂರು ನೀಡಿದ್ದರು. ಸಾರ್ವಜನಿಕರಿಗೆ ಆಗುತ್ತಿದ್ದ ಅನಾನುಕೂಲವನ್ನು ತಪ್ಪಿಸಲು ದೆಹಲಿ ಸರ್ಕಾರವು ಸಾರಿಗೆ ಇಲಾಖೆಯ ಸೇವೆಗಳನ್ನು ಆನ್ ಲೈನ್ ಮೂಲಕ ನೀಡುತ್ತಿದೆ. ಇದರಿಂದ ಸಾರಿಗೆ ಇಲಾಖೆಯ ಕಚೇರಿಗಳಲ್ಲಿ ಭ್ರಷ್ಟಾಚಾರ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸ ನಿಯಮಗಳ ಮೂಲಕ ಬಿಸಿ ಮುಟ್ಟಿಸಲು ಮುಂದಾದ ಸಾರಿಗೆ ಇಲಾಖೆ

ಕೇಂದ್ರ ಸಾರಿಗೆ ಇಲಾಖೆಯು ಸಹ ಕಾಲ ಕಾಲಕ್ಕೆ ತನ್ನ ನಿಯಮಗಳಲ್ಲಿ ಬದಲಾವಣೆ ತಂದು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸುತ್ತಿದೆ. ಇದರ ಜೊತೆಗೆ ವಾಹನ ಸವಾರರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ತನ್ನ ಹಲವು ಸೇವೆಗಳನ್ನು ಆನ್ ಲೈನ್ ಮೂಲಕ ನೀಡುತ್ತಿದೆ. ಕೆಲವು ರಾಜ್ಯಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

Most Read Articles

Kannada
English summary
Traffic rule violators will get challan in 15 days details
Story first published: Saturday, August 21, 2021, 13:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X