ನಿಲ್ದಾಣ ಮರೆತು ಮುಂದೋಗಿ ಪ್ರಯಾಣಿಕರಿಗಾಗಿ 1 ಕಿ.ಮೀ ಹಿಂಬಂದ ರೈಲು...
ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಶೋರನೂರ್‌ಗೆ ತೆರಳುತ್ತಿದ್ದ ವೇನಾಡ್ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್ ಚೆರಿಯನಾಡ್ ಎಂಬ ಸಣ್ಣ ರೈಲು ನಿಲ್ದಾಣದಲ್ಲಿ ನಿಲುಗಡೆ ತಪ್ಪಿಸಿದ ಘಟನೆ ನಡೆದಿದೆ. ಬಳಿಕ ವಿಷಯ ಅರಿವಿಗೆ ಬಂದು ಸುಮಾರು ಒಂದು ಕಿ.ಮೀ ಹಿಂದಕ್ಕೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ನಿಲ್ದಾಣವನ್ನು ಮರೆತು ಸುಮಾರು 1 ಕಿ.ಮೀ ಹೋದ ನಂತರ ಇಳಿಯಬೇಕಿದ್ದ ಪ್ರಯಾಣಿಕರು, ರೈಲ್ವೆ ಅಧಿಕಾರಿಗಳು ದಿಗ್ಭ್ರಮೆಗೊಂಡಿದ್ದಾರೆ. ಮಾವೆಲಿಕ್ಕಾರ ಮತ್ತು ಚೆಂಗನ್ನೂರು ನಿಲ್ದಾಣಗಳ ನಡುವೆ ಇರುವ ಈ ಸಣ್ಣ ನಿಲ್ದಾಣವಾದ ಚೆರಿಯನಾಡ್ ನಿಲ್ದಾಣದಲ್ಲಿ ಬೆಳಿಗ್ಗೆ 7.45 ರ ಸುಮಾರಿಗೆ ಘಟನೆ ನಡೆದಿದೆ. ಲೊಕೊ ಪೈಲೋಟ್‌ಗಳ ಗೊಂದಲದಿಂದ ಹೀಗಾಗಿದೆ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಅಧಿಕಾರಿಗಳ ಪ್ರಕಾರ, ಸಿಗ್ನಲ್‌ಗಳು' ಬ್ಲಾಕ್ (ದೊಡ್ಡ) ನಿಲ್ದಾಣಗಳಲ್ಲಿ ಮಾತ್ರ ಲಭ್ಯವಿವೆ. ಚೆರಿಯನಾಡ್ ಕೇವಲ ಹಾಲ್ಟ್ ಸ್ಟೇಷನ್ ಆಗಿರುವುದರಿಂದ ಅಲ್ಲಿ ಯಾವುದೇ ಸಿಗ್ನಲ್ ಇಲ್ಲ. ಹಾಗಾಗಿ ಲೊಕೊಪೈಲೋಟ್‌ಗಳು ಗೊಂದಲಕ್ಕೆ ಒಳಗಾಗಿ ನಿಲ್ದಾಣವನ್ನು ದಾಟಿ ಹೋಗಿರಬಹುದು. ಇದೆ ಮೊದಲ ಬಾರಿಗೆ ಈ ನಿಲ್ದಾಣದಲ್ಲಿ ಈ ರಿತಿಯ ಘಟನೆ ನಡೆದಿದೆ ಎಂದು ಅಧಿಕಾರುಗಳು ತಿಳಿಸಿದ್ದಾರೆ.
ಇನ್ನು ರೈಲು ಪ್ರಯಾಣಿಕರಿಂದ ಯಾವುದೇ ದೂರುಗಳು ಬಂದಿಲ್ಲ. ಏಕೆಂದರೆ ಅವರಲ್ಲಿ ಯಾರೂ ಕೂಡ ಯಾವುದೇ ಅನಾನುಕೂಲತೆಯನ್ನು ಎದುರಿಸಲಿಲ್ಲ. ರೈಲು ಸರಿಯಾದ ಸಮಯಕ್ಕೆ ತನ್ನ ಗಮ್ಯಸ್ಥಾನವನ್ನು ತಲುಪಿದೆ. ಆದರೂ ವೇಳಾಪಟ್ಟಿಯಲ್ಲಿ ಸುಮಾರು ಎಂಟು ನಿಮಿಷಗಳ ಕಾಲ ವಿಳಂಬವಾಯಿತು. ಆದರೆ ಚಾಲಕರು ಅದನ್ನು ನಂತರ ಸರಿಪಡಿಸಿದರು" ಎಂದು ರೈಲ್ವೇ ಅಧಿಕಾರಿ ಹೇಳಿದರು.

ಯಾರಿಗೂ ಯಾವುದೇ ಸಮಸ್ಯೆಯಾಗದ ಕಾರಣ ಇದು ದೊಡ್ಡ ಘಟನೆ ಅಲ್ಲ ಎಂದು ರೈಲ್ವೇ ಮೂಲಗಳು ಬಣ್ಣಿಸಿವೆ. ರೈಲು ನಿಲ್ಲಿಸದೆ ಮುಂದೆ ಹೋಗಿದ್ದಾಗ ಮಾತ್ರ ಪ್ರಯಾಣಿಕರಲ್ಲಿ ಸ್ವಲ್ಪ ಗೊಂದಲವಾಗಿತ್ತು. ರೈಲು ಮರಳಿ ಸ್ಟೇಷನ್‌ಗೆ ಹಿಂತಿರುಗಿದ ಬಳಿಕ ಇಳಿದು ಹತ್ತುವ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆಗಳು ಎದುರಾಗಲಿಲ್ಲ. ಭಾನುವಾರವಾದ್ದರಿಂದ ಪ್ರಯಾಣಿಕರು ಕೂಡ ಕಡಿಮೆ ಇದ್ದರು ಎಂದು ಅಖಿಲ ಕೇರಳ ರೈಲ್ವೆ ಪ್ರಯಾಣಿಕರ ಸಂಘದ ಅಧ್ಯಕ್ಷ ಪಾಲ್ ಮನ್ವಟ್ಟಮ್ ಹೇಳಿದ್ದಾರೆ.
ಸದ್ಯ ಈ ಘಟನೆ ಕುರಿತು ಆಗಿರಬಹುದಾದ ದೋಷದ ಕುರಿತು ಅಧಿಕಾರಿಯೊಬ್ಬರಿ ಮಾತನಾಡಿ, ಚೆರಿಯನಾಡು ನಿಲ್ದಾಣದಲ್ಲಿ ಸಿಗ್ನಲ್ ಅಥವಾ ಸ್ಟೇಷನ್ ಮಾಸ್ಟರ್ ಇಲ್ಲ, ಇದು ಲೊಕೊ ಪೈಲಟ್‌ನ ತಪ್ಪು ನಿರ್ಣಯಕ್ಕೆ ಕಾರಣವಾಗಿರಬಹುದು. ಆದರೂ ನಿಯಮಗಳ ಭಾಗವಾಗಿ ಲೋಪದ ಬಗ್ಗೆ ಲೋಕೋ ಪೈಲಟ್‌ಗಳಿಂದ ವಿವರಣೆ ಪಡೆಯಲಾಗುವುದು ಎಂದು ರೈಲ್ವೇ ಅಧಿಕಾರಿ ತಿಳಿಸಿದ್ದಾರೆ.
ನೂರಾರು ಕಿ.ಮೀ ದೂರದ ಪ್ರಯಾಣವನ್ನು ಅಗ್ಗವಾಗಿ ನಮಗೆ ಲಭ್ಯವಾಗಿಸುವ ಭಾರತೀಯ ರೈಲ್ವೇಯು ಏಷ್ಯಾದಲ್ಲೆ ಅತಿ ದೊಡ್ಡ ರೈಲ್ವೇ ಜಾಲವನ್ನು ಹೊಂದಿದೆ. ಆಗಾಗ್ಗೆ ಇಂತಹ ತಪ್ಪುಗಳು ಮಾಡುವುದರಿಂದ ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಗುರಿಯಾಗುತ್ತದೆ. ಈ ಘಟನೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕದಲ್ಲಿರಿ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications