Just In
Don't Miss!
- News
ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
- Movies
ಎಸ್ಎಸ್ ರಾಜಮೌಳಿ ನಿರ್ಧಾರಕ್ಕೆ ಬೇಸರಗೊಂಡ ನಿರ್ಮಾಪಕ ಬೋನಿ ಕಪೂರ್
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Lifestyle
ಹೊಟ್ಟೆಯ ಬಲಭಾಗದಲ್ಲಿ ನೋವು, ಈ ತೊಂದರೆಗಳಿರಬಹುದು
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಕಾರಿನ ಹೆಸರಲ್ಲಿ ಹಳೆ ಕಾರು ಮಾರಾಟ ಮಾಡುತ್ತಿದ್ದವನ ಟ್ರೇಡ್ ಲೈಸೆನ್ಸ್ ರದ್ದುಪಡಿಸಿದ ಸಾರಿಗೆ ಇಲಾಖೆ
ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾದ ಡೀಲರ್'ಗೆ ನೀಡಲಾಗಿದ್ದ ಟ್ರೇಡ್ ಲೈಸೆನ್ಸ್ ಅನ್ನು ಅಸ್ಸಾಂ ಸಾರಿಗೆ ಇಲಾಖೆ ರದ್ದುಪಡಿಸಿದೆ. ಈ ಡೀಲರ್ ಮಾರುತಿ ಸುಜುಕಿ ಕಂಪನಿಯ ಹಳೆಯ ಕಾರುಗಳನ್ನು ಹೊಸದರಂತೆ ಪೇಂಟ್ ಮಾಡಿ ಮಾರಾಟ ಮಾಡುತ್ತಿದ್ದ.

ಈ ಬಗ್ಗೆ ಗ್ರಾಹಕರು ಅಸ್ಸಾಂ ಸಾರಿಗೆ ಆಯುಕ್ತರಿಗೆ ಲಿಖಿತ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಡೀಲರ್ ಮೇಲೆ ಕ್ರಮ ಕೈಗೊಂಡು ಟ್ರೇಡ್ ಲೈಸೆನ್ಸ್ ರದ್ದುಪಡಿಸಿದೆ. ಈ ಡೀಲರ್ ಹಲವಾರು ವರ್ಷಗಳಿಂದ ಗ್ರಾಹಕರಿಗೆ ವಂಚಿಸುತ್ತಿದ್ದ ಎಂದು ತಿಳಿದುಬಂದಿದೆ.

ಅಸ್ಸಾಂ ಸಾರಿಗೆ ಆಯುಕ್ತ ಆದಿಲ್ ಖಾನ್ ತಮ್ಮ ಸಿಬ್ಬಂದಿಯೊಂದಿಗೆ ಗುವಾಹಟಿಯಲ್ಲಿರುವ ಪೋದ್ದಾರ್ ಕಾರ್ ವರ್ಲ್ಡ್'ನ ಖಾನಪರ ಶೋರೂಂ ಮೇಲೆ ದಿಢೀರ್ ದಾಳಿ ನಡೆಸಿದರು. ದಾಳಿಯಲ್ಲಿ ಡೀಲರ್'ನ ವಂಚನೆ ಬೆಳಕಿಗೆ ಬಂದಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಶೋರೂಂ ಒಳಗೆ ಹಳೆಯ ಕಾರುಗಳನ್ನು ಇಟ್ಟುಕೊಂಡು ಅವುಗಳನ್ನು ದುರಸ್ತಿ ಮಾಡಿ ಮಾರಾಟ ಮಾಡುತ್ತಿರುವುದು ದಾಳಿಯ ವೇಳೆ ಕಂಡು ಬಂದಿದೆ. ಈ ಬಗ್ಗೆ ಡೀಲರ್'ನನ್ನು ಪ್ರಶ್ನಿಸಿದಾಗ ಹಳೆಯ ಕಾರನ್ನು ಗ್ರಾಹಕರಿಗೆ ಮಾರಾಟ ಮಾಡಲಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಸಾರಿಗೆ ಆಯುಕ್ತರಿಗೆ ಡೀಲರ್'ನ ತಪ್ಪು ಕಂಡು ಬಂದ ಕಾರಣ ತಕ್ಷಣದಿಂದ ಜಾರಿಗೆ ಬರುವಂತೆ ಆತನ ಟ್ರೇಡ್ ಲೈಸೆನ್ಸ್ ಅನ್ನು ರದ್ದುಪಡಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ವಾಹನಗಳನ್ನು ಮಾರಾಟ ಮಾಡದಂತೆ ಈ ಡೀಲರ್ ಮೇಲೆ ನಿರ್ಬಂಧ ವಿಧಿಸಲಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಇದೇ ರೀತಿಯ ಪ್ರಕರಣವೊಂದು 2015ರಲ್ಲಿ ಅಸ್ಸಾಂನಲ್ಲಿಯೇ ಕಂಡು ಬಂದಿತ್ತು. ಮತ್ತೊಬ್ಬ ಕಾರು ಡೀಲರ್ ಅಕ್ರಮವಾಗಿ ವಾಹನಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.

ಹಳೆಯ ಕಾರನ್ನು ರಿಪೇರಿ ಮಾಡಿ, ಹೊಸ ಕಾರಿನ ಬೆಲೆಗೆ ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ. ಈ ಕಾರಣಕ್ಕೆ ಮೋಟಾರು ವಾಹನ ಕಾಯ್ದೆಯಡಿ ವಾಹನಗಳ ಡೀಲರ್ ಗಳಿಗೆ ದಂಡ ವಿಧಿಸಿ ಲೈಸೆನ್ಸ್ ರದ್ದುಪಡಿಸಬಹುದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಾರುತಿ ಸುಜುಕಿ ಕಂಪನಿಯು ದೇಶದಲ್ಲಿ ವಿಂಟರ್ ಸರ್ವೀಸ್ ಅಭಿಯಾನವನ್ನು ಆರಂಭಿಸಿದೆ. ಚಳಿಗಾಲದ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಕಾರುಗಳಿಗೆ ವಿಶೇಷ ಸೇವೆಯನ್ನು ನೀಡುತ್ತಿದೆ.

ಈ ಅಭಿಯಾನವು ದೇಶಾದ್ಯಂತವಿರುವ ಕಂಪನಿಯ 2733 ಡೀಲರ್ ಹಾಗೂ 758 ಟಚ್ ಪಾಯಿಂಟ್‌ಗಳಲ್ಲಿ ಲಭ್ಯವಿರಲಿದೆ. ಈ ಅಭಿಯಾನದಲ್ಲಿ ಫಾಗ್ ಲ್ಯಾಂಪ್, ಹೆಡ್‌ಲ್ಯಾಂಪ್, ಟಯರ್, ವೈಪರ್, ಬ್ರೇಕ್ ಸೇರಿದಂತೆ ಹಲವು ಬಿಡಿಭಾಗಗಳನ್ನು ದುರಸ್ತಿ ಮಾಡಲಾಗುವುದು. ಅವಶ್ಯಕತೆ ಇದ್ದಲ್ಲಿ ವಿನಿಮಯವನ್ನು ಸಹ ಮಾಡಲಾಗುತ್ತದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮಾರುತಿ ಸುಜುಕಿ ಕಂಪನಿಯು 2021ರ ಆರಂಭದಲ್ಲಿ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಲಿದೆ. ಯಾವ ಯಾವ ಮಾದರಿಗಳ ಬೆಲೆಯನ್ನು ಎಷ್ಟು ಪ್ರಮಾಣದಲ್ಲಿ ಹೆಚ್ಚಿಸಲಾಗುವುದು ಎಂಬುದನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ.

ಮಾರುತಿ ಸುಜುಕಿ ಕಂಪನಿಯ ನವೆಂಬರ್ ತಿಂಗಳ ಮಾರಾಟವು 2019ರ ನವೆಂಬರ್ ತಿಂಗಳಿಗಿಂತ 2.4%ನಷ್ಟು ಕಡಿಮೆಯಾಗಿದೆ. ಕಂಪನಿಯು ಈ ವರ್ಷದ ನವೆಂಬರ್ ತಿಂಗಳಿನಲ್ಲಿ 1,35,775 ಯೂನಿಟ್ ವಾಹನಗಳನ್ನು ಮಾರಾಟ ಮಾಡಿದ್ದರೆ, 2019ರ ನವೆಂಬರ್ ತಿಂಗಳಿನಲ್ಲಿ 1,39,133 ಯೂನಿಟ್ ವಾಹನಗಳನ್ನು ಮಾರಾಟ ಮಾಡಿತ್ತು.