ಏರ್ಪೋಟ್‌ನಿಂದ ಎಲೆಕ್ಟ್ರಾನಿಕ್‌ ಸಿಟಿಗೆ ಹೋಗೋ ಕ್ಯಾಬ್ ಹಣದಲ್ಲಿ ವಿದೇಶಕ್ಕೆ ಹೋಗಬಹುದು: ಗ್ರಾಹಕ ಕಂಗಾಲು

ಸಿಲಿಕಾನ್ ಸಿಟಿ ಬೆಂಗಳೂರನ್ನು ನೆನಪಿಸಿಕೊಂಡರೆ, ಹತ್ತು ಹಲವು ಸಂಗತಿಗಳು ಕಣ್ಣ ಮುಂದೆ ಬಂದರೂ, ಬೆಂಗಳೂರಿನಲ್ಲಿ ನೆಲೆಸಿರುವ ಬಹುತೇಕರ ಕಣ್ಣಿಗೆ ಬೀಳುವುದು ಟ್ರಾಫಿಕ್ ಜಾಮ್. ಬೆಂಗಳೂರಿನಲ್ಲಿ ಅನೇಕ ಜನರು ಓಡಾಡಲು ಕೆಲವು ಬಾರಿ ಓಲಾ, ಉಬರ್‌ಗಳ ಕ್ಯಾಬ್‌, ಆಟೋಗಳನ್ನು ಬಳಸುತ್ತಾರೆ. ಇವುಗಳು ಜನರಿಗೆ ಸಾಕಷ್ಟು ಅನುಕೂಲಕರವಾಗಿದೆ.

ನಾವು ಬಾರಿ ಓಲಾ, ಉಬರ್‌ಗಳ ಕ್ಯಾಬ್ ಅಥವಾ ಆಟೋಗಳನ್ನು ಬುಕ್ ಮಾಡಿ ಸುಲಭವಾಗಿ ನಮಗೆ ತೆರಳಬೇಕಾದ ಸ್ಥಳಗಳಿಗೆ ತೆರಳಬಹುದು. ಇದೇ ರೀತಿ ಇತ್ತೀಚೆಗೆ ವ್ಯಕ್ಯಿಯೊಬ್ಬರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೋಗೋದಕ್ಕೆ ಉಬರ್ (Uber) ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದ್ದಾರೆ. ನಂತರ ಆ ವ್ಯಕ್ತಿ ಉಬರ್ ಆ್ಯಪ್‌ನಲ್ಲಿ ಅಪ್ಲಿಕೇಶನ್​ನಲ್ಲಿ ತೋರಿಸಿದ ಪ್ರಯಾಣ ದರವನ್ನು ನೋಡಿ ಒಂದು ಕ್ಷಣ ಆಘಾತಕ್ಕೊಳಗಾಗಿದ್ದಾರೆ.

Uber

ಏಕೆಂದರೆ ಆ ಪ್ರಯಾಣದ ದರವು 2500 ರಿಂದ 4000 ರೂಪಾಯಿಯವರೆಗೂ ಇದೆ. ಇದರಲ್ಲಿ ಉಬರ್​ ಎಕ್ಸ್​​ ಎಲ್​​​ಗೆ 4,000 ರೂ ಮತ್ತು ಉಬರ್ ಪ್ರೀಮಿಯಂಗೆ 2,584 ರೂ. ದರ ತೋರಿಸಿತ್ತು. ಇನ್ನು ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ 50 ಕಿಮೀ ದೂರವಿದೆ ಎಂದೂ ಆ್ಯಪ್​ ತೋರಿಸಿದೆ. ಇದನ್ನು ಅವರು ಸ್ಕ್ರೀನ್‌ಶಾಟ್ ತೆಗೆದುಕೊಂಡು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಈ ಪೋಸ್ಟ್ ನಂತರ ಭಾರೀ ವೈರಲ್ ಆಗಿದೆ.

ಇನ್ನು ಟ್ವಿಟರ್ ಪೋಸ್ಟ್ ನಲ್ಲಿ ಕ್ಯಾಬ್ ದರವು ನಾನು ವಿಮಾನ ಟಿಕೆಟ್‌ಗೆ ಪಾವತಿಸಿದ ದರದ ಸನಿಹದಲ್ಲಿದೆ ಎಂದೂ ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಪೋಸ್ಟ್ ರಸ್ತೆ ಸಾರಿಗೆ ಮತ್ತು ಸುರಕ್ಷತೆಯ ಆಯುಕ್ತ ಎಸ್‌ಎನ್ ಸಿದ್ದರಾಮಪ್ಪ ಅವರ ಗಮನಕ್ಕೆ ಬಂದು ಅವರು ಕ್ಯಾಬ್ ಕಂಪನಿ ವಿರುದ್ಧ ನೋಟಿಸ್ ನೀಡುವಂತೆ ಪ್ರಾದೇಶಿಕ ರಸ್ತೆ ಸಾರಿಗೆ (ಆರ್‌ಟಿಒ) ಗೆ ಸೂಚಿಸಿದ್ದಾರೆ.

Uber

ದುಬಾರಿ ದರ ವಿಧಿಸುವ ಮೂಲಕ ನಿಯಮ ಉಲ್ಲಂಘಿಸಿರುವ ಕಂಪನಿಯ ವಿರುದ್ಧ ನೋಟಿಸ್ ನೀಡಲು ಆರ್‌ಟಿಒಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿಗಳಾಗಿದೆ. ಸಾರಿಗೆ ಇಲಾಖೆಯು ಮೊದಲ ನಾಲ್ಕು ಕಿಮೀಗೆ ಪ್ರೀಮಿಯಂ ಕ್ಯಾಬ್‌ಗಳಿಗೆ 75 ಮತ್ತು 150 ರೂ.ಗೆ ಕ್ಯಾಬ್ ದರವನ್ನು ನಿಗದಿಪಡಿಸಿದೆ. ಈ ರೀತಿ ಹಲವು ಟ್ಯಾಕ್ಸಿ ಅಪ್ಲಿಕೇಶನ್​ನಲ್ಲಿ ದುಬಾರಿ ದರವನ್ನು ವಿಧಿಸುತ್ತಿದ್ದಾರೆ.

ದುಬಾರಿ ದರ ಒಂದು ಕಡೆಯಾದರೆ, ಕ್ಯಾಬ್‌ ಮತ್ತು ಆಟೋ ಸೇವೆಗಳ ಸಮಸ್ಯೆ ಸಾಕಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಒಂದು ಕ್ಯಾಬ್ ಅಥವಾ ಆಟೋ ಬುಕ್ ಆಗಲು ಸಾಕಷ್ಟು ಕಾಲ ಕಾಯಬೇಕಾಕಿದೆ. ಕಂಪನಿಗಳು ಹಾಗೂ ಕ್ಯಾಬ್‌ ಚಾಲಕರ ಕಣ್ಣಾಮುಚ್ಚಾಲೆ ಆಟದಲ್ಲಿ ಗ್ರಾಹಕರು ಪರದಾಡುತ್ತಿದ್ದಾರೆ. ಆಟೋ ಮಾಡಿ ಹೋಗುವ ಎಂದು ಆಟೋಗಳು ದುಬಾರಿ ದರ ಹೇಳುವುದಾದರೆ, ಇಲ್ಲವಾದರೆ ಬರುವುದಿಲ್ಲ ಎಂಬ ಉತ್ತರ.

ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದೆ. ಇದರಿಂದ ಬಾಡಿಗೆ ಆಟೋ ಮತ್ತು ಕ್ಯಾಬ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಂಜೆ ಅಥವಾ ರಾತ್ರಿ ಮಳೆ ಸುರಿಯುವುದು ಸಾಮಾನ್ಯವಾಗಿದೆ. ಈ ಸಮಯದಲ್ಲಿ ಜನರು ಪ್ರಯಾಣಕ್ಕೆ ಹೆಚ್ಚಾಗಿ ಕ್ಯಾಬ್‌ ಅಥವಾ ಆಟೊಗಳನ್ನು ಅವಲಂಬಿಸುತ್ತಿದ್ದಾರೆ. ಆದರೆ, ಕಂಪೆನಿಗಳು ಗ್ರಾಹಕರ ಬೇಡಿಕೆಗೆ ತಕ್ಕಂತೆ ಸೇವೆ ಒದಗಿಸುತ್ತಿಲ್ಲ. ಸರಿಯಾಗಿ ಕ್ಯಾಬ್ ಸಿಗುವುದಿಲ್ಲ, ಸಿಕ್ಕರೂ ದುಬಾರಿ ದರ ಇರುತ್ತದೆ.

ಪೀಕ್‌ ಅವರ್ ಬೆಳಗ್ಗೆ ಮತ್ತು ಸಂಜೆಯಲ್ಲಿ ಕ್ಯಾಬ್‌ ಹಾಗೂ ಆಟೊಗಳ ಬುಕ್ಕಿಂಗ್‌ ಹೆಚ್ಚಿರುತ್ತದೆ. ಬಸ್ ಗಳು ರಶ್ ಆಗಿರುತ್ತದೆ. ಸರಿಯಾದ ಸಮಯಕ್ಕೆ ಬರುವುದು. ಬೆಂಗಳೂರಿನಲ್ಲಿ ಸರ್ವಾಜನಿಕ ವಾಹನಗಳ ಸೇವೆಯು ಸರಿಯಾಗಿದ್ದರೆ ಜನರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಇಲ್ಲವಾದರೆ ಮೆಟ್ರೋಗಳನ್ನು ಮತ್ತಷ್ಟು ವೇಗದಲ್ಲಿ ವಿಸ್ತರಿಸಬೇಕು. ಇದರಿಂದ ಟ್ರಾಫಿಕ್ ಕಿರಿ ಕಿರಿ ಇರುವುದಿಲ್ಲ. ಸಮಯ ಲಾಭ ಅಲ್ಲದೇ ಹೆಚ್ಚು ಸುಲಭ.

Article Published On: Friday, June 2, 2023, 16:10 [IST]
English summary
Transport dept notice against uber for charging 4000 bangalore airport to electronic city trip
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+