ಆಕ್ಸಿಜನ್ ಟ್ಯಾಂಕರ್ ಚಾಲಕರಿಗೆ ವಿಶೇಷ ಲಸಿಕೆ ಅಭಿಯಾನ ಆರಂಭಿಸಲು ಸೂಚಿಸಿದ ಸಾರಿಗೆ ಇಲಾಖೆ

ಕರೋನಾ ವೈರಸ್ ಎರಡನೇ ಅಲೆ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಈ ಅಲೆ ಕೆಲವು ರಾಜ್ಯಗಳಲ್ಲಿ ಹೆಚ್ಚು ಹಾನಿಯನ್ನುಂಟು ಮಾಡಿದೆ. ಭಾರತದಲ್ಲಿ ಪ್ರತಿ ದಿನ 2 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ.

ಆಕ್ಸಿಜನ್ ಟ್ಯಾಂಕರ್ ಚಾಲಕರಿಗೆ ವಿಶೇಷ ಲಸಿಕೆ ಅಭಿಯಾನ ಆರಂಭಿಸಲು ಸೂಚಿಸಿದ ಸಾರಿಗೆ ಇಲಾಖೆ

ಈ ಎರಡನೇ ಅಲೆಯಲ್ಲಿ ಸೋಂಕಿತರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾದಂತೆ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಐಸಿಯು ಹಾಗೂ ಆಕ್ಸಿಜನ್ ಕೊರತೆ ಎದುರಾಗಿದೆ. ಸಕಾಲಕ್ಕೆ ಆಕ್ಸಿಜನ್ ಸಿಗದ ಕಾರಣಕ್ಕೆ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ.

ಆಕ್ಸಿಜನ್ ಟ್ಯಾಂಕರ್ ಚಾಲಕರಿಗೆ ವಿಶೇಷ ಲಸಿಕೆ ಅಭಿಯಾನ ಆರಂಭಿಸಲು ಸೂಚಿಸಿದ ಸಾರಿಗೆ ಇಲಾಖೆ

ಕರೋನಾ ಮಹಾಮಾರಿಗೆ ಯಾವುದೇ ಲಸಿಕೆ ಕಂಡು ಹಿಡಿದಿಲ್ಲ. ಆದರೆ ಲಸಿಕೆ ಬಾರದಂತೆ ತಡೆಯಲು ಭಾರತದಲ್ಲಿ ಕರೋನಾ ವಾರಿಯರ್'ಗಳಿಗೆ ಆದ್ಯತೆ ಮೇರೆಗೆ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಆಕ್ಸಿಜನ್ ಟ್ಯಾಂಕರ್ ಚಾಲಕರಿಗೆ ವಿಶೇಷ ಲಸಿಕೆ ಅಭಿಯಾನ ಆರಂಭಿಸಲು ಸೂಚಿಸಿದ ಸಾರಿಗೆ ಇಲಾಖೆ

ಈಗ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಆಕ್ಸಿಜನ್ ಟ್ಯಾಂಕರ್‌ಗಳನ್ನು ಚಾಲನೆ ಮಾಡುವ ಚಾಲಕರಿಗೆ ಲಸಿಕೆ ನೀಡುವಂತೆ ಹಾಗೂಈ ಚಾಲಕರಿಗೆ ಕರೋನಾ ವೈರಸ್ ಸೋಂಕು ತಗುಲಿದರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯಲ್ಲಿ ಆದ್ಯತೆ ನೀಡುವಂತೆ ಎಲ್ಲಾ ರಾಜ್ಯಗಳಿಗೆ ತಿಳಿಸಿದೆ.

ಆಕ್ಸಿಜನ್ ಟ್ಯಾಂಕರ್ ಚಾಲಕರಿಗೆ ವಿಶೇಷ ಲಸಿಕೆ ಅಭಿಯಾನ ಆರಂಭಿಸಲು ಸೂಚಿಸಿದ ಸಾರಿಗೆ ಇಲಾಖೆ

ಮೆಡಿಕಲ್ ಆಕ್ಸಿಜನ್ ಹಾಗೂ ರಾಸಾಯನಿಕಗಳನ್ನು ಸಾಗಿಸುವ ಚಾಲಕರಿಗೆ ಸಣ್ಣ ಕಾರ್ಯಕ್ರಮಗಳ ಮೂಲಕ ತರಬೇತಿ ನೀಡುವಂತೆಯೂ ಸಹ ಕೇಂದ್ರ ಸಾರಿಗೆ ಇಲಾಖೆಯು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಆಕ್ಸಿಜನ್ ಟ್ಯಾಂಕರ್ ಚಾಲಕರಿಗೆ ವಿಶೇಷ ಲಸಿಕೆ ಅಭಿಯಾನ ಆರಂಭಿಸಲು ಸೂಚಿಸಿದ ಸಾರಿಗೆ ಇಲಾಖೆ

ಈ ಬಗ್ಗೆ ಕಳೆದ ಶುಕ್ರವಾರ ಟ್ವೀಟ್ ಮಾಡಿರುವ ಕೇಂದ್ರ ಸಾರಿಗೆ ಇಲಾಖೆಯು ಆಕ್ಸಿಜನ್ ಟ್ಯಾಂಕರ್ ಚಾಲಕರಿಗೆ ವಿಶೇಷ ಕೋವಿಡ್ 19 ಲಸಿಕೆ ಅಭಿಯಾನವನ್ನು ನಡೆಸಬೇಕೆಂದು ಶಿಫಾರಸು ಮಾಡಲಾಗಿದೆ. ಈ ಚಾಲಕರಿಗೆ ಕರೋನಾ ವೈರಸ್ ಸೋಂಕು ತಗುಲಿದರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಾಗ ಆದ್ಯತೆ ನೀಡಬೇಕೆಂದು ಹೇಳಿದೆ.

ಆಕ್ಸಿಜನ್ ಟ್ಯಾಂಕರ್ ಚಾಲಕರಿಗೆ ವಿಶೇಷ ಲಸಿಕೆ ಅಭಿಯಾನ ಆರಂಭಿಸಲು ಸೂಚಿಸಿದ ಸಾರಿಗೆ ಇಲಾಖೆ

ದೇಶಾದ್ಯಂತ ಆಕ್ಸಿಜನ್'ಗಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಅಪಾಯಕಾರಿ ಸರಕು ಸಾಗಿಸಲು ತರಬೇತಿ ಪಡೆದ ಚಾಲಕರ ಗುಂಪನ್ನು ರಚಿಸುವಂತೆ ರಾಜ್ಯಗಳು ಹಾಗೂಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸಾರಿಗೆ ಇಲಾಖೆಯು ತಿಳಿಸಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಆಕ್ಸಿಜನ್ ಟ್ಯಾಂಕರ್ ಚಾಲಕರಿಗೆ ವಿಶೇಷ ಲಸಿಕೆ ಅಭಿಯಾನ ಆರಂಭಿಸಲು ಸೂಚಿಸಿದ ಸಾರಿಗೆ ಇಲಾಖೆ

ಮುಂದಿನ ಕೆಲವು ವಾರಗಳಲ್ಲಿ 500 ಚಾಲಕರನ್ನು ತಕ್ಷಣವೇ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಮುಂದಿನ ಎರಡು ತಿಂಗಳಲ್ಲಿ ಈ ಸಂಖ್ಯೆಯನ್ನು 2,500ಕ್ಕೆ ಹೆಚ್ಚಿಸಬೇಕು ಎಂದು ಇಲಾಖೆ ಹೇಳಿದೆ. ತರಬೇತಿ ಪಡೆದ ಚಾಲಕರ ಮಾಹಿತಿಯನ್ನು ಡಿಜಿಟಲ್ ಡೇಟಾಬೇಸ್'ನಲ್ಲಿ ಸಂಗ್ರಹಿಸುವ ಮೂಲಕ ಅವರ ಸೇವೆಗಳನ್ನು ಎಲ್ಲಿ ಬೇಕಾದರೂ ಪಡೆಯುವಂತೆ ಮಾಡಬೇಕೆಂದು ಇಲಾಖೆ ತಿಳಿಸಿದೆ.

ಆಕ್ಸಿಜನ್ ಟ್ಯಾಂಕರ್ ಚಾಲಕರಿಗೆ ವಿಶೇಷ ಲಸಿಕೆ ಅಭಿಯಾನ ಆರಂಭಿಸಲು ಸೂಚಿಸಿದ ಸಾರಿಗೆ ಇಲಾಖೆ

ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ, ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್, ಇಂಡಿಯನ್ ಕೆಮಿಕಲ್ ಕೌನ್ಸಿಲ್, ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಶನ್ ಹಾಗೂ ಮೆಡಿಕಲ್ ಆಕ್ಸಿಜನ್ ಉತ್ಪಾದಕರ ಸಹಾಯದಿಂದ ತರಬೇತಿ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗಿದೆ.

Most Read Articles

Kannada
English summary
Union Transport Ministry asks states to give vaccination to drivers of oxygen tankers on priority. Read in Kannada.
Story first published: Monday, May 24, 2021, 13:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X