ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಸಾರಿಗೆ ಅಧಿಕಾರಿಗಳು

ಸೂಪರ್ ಕಾರುಗಳು ಕಳೆದ ಕೆಲವು ದಿನಗಳಿಂದ ಹೆಚ್ಚು ಸುದ್ದಿಯಾಗುತ್ತಿವೆ. ಕಳೆದ ತಿಂಗಳು ಖ್ಯಾತ ತಮಿಳು ಚಿತ್ರ ನಟ ವಿಜಯ್ ತಮ್ಮ ರೋಲ್ಸ್ ರಾಯ್ಸ್ ಐಷಾರಾಮಿ ಕಾರಿಗೆ ದುಬಾರಿ ಪ್ರವೇಶ ತೆರಿಗೆ ವಿಧಿಸಿರುವುದರ ವಿರುದ್ಧ ಮದ್ರಾಸ್ ಹೈ ಕೋರ್ಟಿನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಸಾರಿಗೆ ಅಧಿಕಾರಿಗಳು

ನಟ ವಿಜಯ್ ರವರ ಅರ್ಜಿಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದ ಮದ್ರಾಸ್ ಹೈ ಕೋರ್ಟ್ ಅವರಿಗೆ ಒಂದು ಲಕ್ಷ ರೂಪಾಯಿಗಳ ದಂಡ ವಿಧಿಸಿ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತ್ತು. ನಟರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ನಾಯಕರಾಗಿರ ಬೇಕು ಎಂದು ಇದೇ ವೇಳೆ ಹೈ ಕೋರ್ಟ್ ಅಭಿಪ್ರಾಯ ಪಟ್ಟಿತ್ತು.

ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಸಾರಿಗೆ ಅಧಿಕಾರಿಗಳು

ವಿಜಯ್ ರವರ ನಂತರ ನಟ ಧನುಷ್ ಸಹ 2015 ರಲ್ಲಿ ಖರೀದಿಸಿದ್ದ ತಮ್ಮ ರೋಲ್ಸ್ ರಾಯ್ಸ್ ಕಾರಿಗೆ ದುಬಾರಿ ಪ್ರವೇಶ ತೆರಿಗೆ ವಿಧಿಸಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ನಟ ಧನುಷ್ ರವರು ರೋಲ್ಸ್ ರಾಯ್ಸ್ ಕಾರಿನ ತೆರಿಗೆಗೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿರುವ 30 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಆದೇಶ ನೀಡಿದ್ದರು.

ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಸಾರಿಗೆ ಅಧಿಕಾರಿಗಳು

ಇದಿಷ್ಟು ಸೆಲೆಬ್ರಿಟಿಗಳು ಹಾಗೂ ಅವರ ಐಷಾರಾಮಿ ಕಾರುಗಳಿಗೆ ಸಂಬಂಧಿಸಿದ ಸುದ್ದಿಯಾದರೆ ತೆಲಂಗಾಣದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಲ್ಲಿ ರ‍್ಯಾಲಿ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಸಾರಿಗೆ ಅಧಿಕಾರಿಗಳು

ಭಾರತದ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ರ‍್ಯಾಲಿಯನ್ನು ಆಯೋಜಿಸಲಾಗಿತ್ತು ಎಂದು ಈ ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಐಷಾರಾಮಿ ಕಾರುಗಳ ಮಾಲೀಕರು ತಿಳಿಸಿದ್ದಾರೆ. ಈ ರ‍್ಯಾಲಿಯಲ್ಲಿ ರೋಲ್ಸ್ ರಾಯ್ಸ್, ಲ್ಯಾಂಬೊರ್ಗಿನಿ, ಮಸಾರೆಟಿ ಸೇರಿದಂತೆ ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರು ಭಾಗವಹಿಸಿದ್ದರು.

ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಸಾರಿಗೆ ಅಧಿಕಾರಿಗಳು

ಹೈದರಾಬಾದ್ ಸಾರಿಗೆ ಅಧಿಕಾರಿಗಳು ಈ ಕಾರುಗಳನ್ನು ರಾಜೀವ್ ಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ.ನಂತರ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಎಲ್ಲಾ ಐಷಾರಾಮಿ ಕಾರು ಮಾಲೀಕರಿಗೂ ದಂಡ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಸಾರಿಗೆ ಅಧಿಕಾರಿಗಳು

ಸ್ವಾತಂತ್ರ್ಯ ದಿನಾಚರಣೆಯಂದು ರ‍್ಯಾಲಿಯಲ್ಲಿ ಭಾಗವಹಿಸಿದ್ದ ಬಹುಪಾಲು ಐಷಾರಾಮಿ ಕಾರು ಮಾಲೀಕರು ರಸ್ತೆ ತೆರಿಗೆಯನ್ನು ಪಾವತಿಸಿಲ್ಲ. ಈ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ಹೇಳಲಾಗಿದೆ. ರ‍್ಯಾಲಿಯಲ್ಲಿ ಭಾಗವಹಿಸಿದ್ದ ಬಹುತೇಕ ಐಷಾರಾಮಿ ಕಾರು ಮಾಲೀಕರು ಸುಮಾರು ರೂ. 5 ಕೋಟಿಗಳಿಂದ ರೂ. 8 ಕೋಟಿಗಳವರೆಗೆ ರಸ್ತೆ ತೆರಿಗೆ ಪಾವತಿಸಿಲ್ಲವೆಂದು ತಪಾಸಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಸಾರಿಗೆ ಅಧಿಕಾರಿಗಳು

ಈ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ದುಬಾರಿ ಬೆಲೆಯ ಈ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರು ಮಾಲೀಕರು ಸಂಬಂಧಿಸಿದ ರಸ್ತೆ ತೆರಿಗೆ ಪಾವತಿಸಿದ ನಂತರ ಆ ಕಾರುಗಳನ್ನು ಮಾಲೀಕರಿಗೆ ಒಪ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಸಾರಿಗೆ ಅಧಿಕಾರಿಗಳು

ಹೈದರಾಬಾದ್ ಪೊಲೀಸರು ಹೈದರಾಬಾದ್ ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಗಾಗಿ ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಗಸ್ಟ್ 15 ರ ಬೆಳಗ್ಗೆ 7ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ರಾಮದೇವ್ ಕೊಲ್ಲಿಯಿಂದ ಗೋಲ್ಕೊಂಡ ಕೋಟೆಯವರೆಗಿನ ರಸ್ತೆಯನ್ನು ಸಾರ್ವಜನಿಕರು ಬಳಸದಂತೆ ಮುಚ್ಚಲಾಗುವುದು ಎಂದು ತಿಳಿಸಿದ್ದರು.

ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಸಾರಿಗೆ ಅಧಿಕಾರಿಗಳು

ಎ, ಬಿ ಹಾಗೂ ಸಿ ವಿಭಾಗಗಳಲ್ಲಿ ಕಾರ್ ಪಾಸ್ ಹೊಂದಿದ್ದವರಿಗೆ ಮಾತ್ರ 2021 ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ರಾಮದೇವ್ ಕೊಲ್ಲಿಯಿಂದ ಗೋಲ್ಕೊಂಡಕ್ಕೆ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಹೀಗಾಗಿ ಡಿ ಕಾರ್ ಪಾಸ್ ಹೊಂದಿರುವ ವಾಹನಗಳಲ್ಲಿ ಬರುವವರು ಬೇರೆ ಮಾರ್ಗದ ಮೂಲಕ ಚಲಿಸುವಂತೆ ಕೋರಲಾಗಿತ್ತು.

ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಸಾರಿಗೆ ಅಧಿಕಾರಿಗಳು

ಡಿ ಪಾಸ್ ಹೊಂದಿದ್ದ ವಾಹನ ಸವಾರರಿಗೆ ವಾಹನಗಳನ್ನು ನಿಲ್ಲಿಸಲು ಪೊಲೀಸರು ಪ್ರತ್ಯೇಕ ಸ್ಥಳವನ್ನು ಮೀಸಲಿಟ್ಟಿದ್ದರು. ಇನ್ನು ಇ ಪಾಸ್ ಹೊಂದಿರುವವರಿಗೆ ತಮ್ಮ ವಾಹನಗಳನ್ನು ನಿಲ್ಲಿಸಲು ಬೇರೆ ಮಾರ್ಗ ಹಾಗೂ ಬೇರೆ ಪ್ರದೇಶವನ್ನು ನಿಗದಿ ಪಡಿಸಲಾಗಿತ್ತು.

ಒಟ್ಟಿನಲ್ಲಿ ಹೈದರಾಬಾದ್ ಪೊಲೀಸರು ಸ್ವಾತಂತ್ರ್ಯ ದಿನವನ್ನು ಸುರಕ್ಷಿತವಾಗಿ ಆಚರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಂಡಿದ್ದರು. ಇದರ ಜೊತೆಗೆ ಸಾರಿಗೆ ಅಧಿಕಾರಿಗಳು ರಸ್ತೆ ತೆರಿಗೆ ಪಾವತಿಸದೇ ಐಷಾರಾಮಿ ಕಾರುಗಳಲ್ಲಿ ರಸ್ತೆಗಿಳಿದ ಕಾರು ಮಾಲೀಕರಿಗೆ ಚುರುಕು ಮುಟ್ಟಿಸಿದ್ದಾರೆ.

ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಸಾರಿಗೆ ಅಧಿಕಾರಿಗಳು

ಭಾರತದಲ್ಲಿ ವಿದೇಶಗಳಿಂದ ಆಮದು ಮಾಡಿಕೊಳ್ಳುವ ವಾಹನಗಳ ಮೇಲೆ ಹೆಚ್ಚು ತೆರಿಗೆಯನ್ನು ವಿಧಿಸಲಾಗುತ್ತದೆ. ಇದರ ಜೊತೆಗೆ ದುಬಾರಿ ಬೆಲೆಯ ಐಷಾರಾಮಿ ವಾಹನಗಳಿಗೂ ಹೆಚ್ಚು ತೆರಿಗೆಯನ್ನು ವಿಧಿಸಲಾಗುತ್ತದೆ. ಈ ಕಾರಣಕ್ಕೆ ಐಷಾರಾಮಿ ವಾಹನಗಳ ಮಾಲೀಕರು ತೆರಿಗೆ ಪಾವತಿಸದೇ ವಂಚಿಸುತ್ತಿದ್ದಾರೆ. ಐಷಾರಾಮಿ ಕಾರುಗಳನ್ನು ಖರೀದಿಸುವವರು ದುಬಾರಿ ಬೆಲೆಯ ರಸ್ತೆ ತೆರಿಗೆ ಪಾವತಿಸುವುದನ್ನು ತಪ್ಪಿಸಲು ಬೇರೆ ವಾಹನಗಳ ರಿಜಿಸ್ಟ್ರೇಷನ್ ಸಂಖ್ಯೆಗಳನ್ನು ಬಳಸುತ್ತಾರೆ. ನಮ್ಮ ಬೆಂಗಳೂರಿನಲ್ಲಿಯೂ ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಹಲವು ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

Most Read Articles

Kannada
English summary
Transport officials seizes high end super cars in hyderabad video details
Story first published: Monday, August 16, 2021, 20:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X