Just In
- 11 hrs ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!
- 12 hrs ago
ಹೆಚ್ಚಿನ ಮೈಲೇಜ್ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು
- 13 hrs ago
ಬಿಡುಗಡೆಗೂ ಮುನ್ನ 33 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಗ್ರ್ಯಾಂಡ್ ವಿಟಾರಾ
- 14 hrs ago
ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ
Don't Miss!
- News
ಭಾರತದ ಭದ್ರತೆ ಬಗ್ಗೆ ಕಳವಳ ಮೂಡಿಸಿದ್ದ ಚೀನಾ ಸಂಶೋಧನಾ ನೌಕೆಗೆ ಪ್ರವೇಶವಿಲ್ಲ ಎಂದ ಶ್ರೀಲಂಕಾ
- Lifestyle
Today Rashi Bhavishya: ಶುಕ್ರವಾರದ ದಿನ ಭವಿಷ್ಯ: ವೃಷಭ, ಸಿಂಹ, ಕನ್ಯಾ, ವೃಶ್ಚಿಕ ರಾಶಿಯವರ ಭ್ರಾತೃತ್ವ ಬಂಧ ಉತ್ತಮವಾಗಿರುತ್ತದೆ
- Movies
ಟಿವಿಯಲ್ಲಿ 'ಕೆಜಿಎಫ್ 2' ಪ್ರಸಾರ: 80 ಅಡಿ ಬ್ಯಾನರ್ ಬಿಟ್ಟು ಭರ್ಜರಿ ಪ್ರಚಾರ!
- Sports
UAE T20 League: ಶ್ರೀಮಂತ ಲೀಗ್ಗೆ ಸಹಿ ಹಾಕಿದ ಕೀರಾನ್ ಪೊಲಾರ್ಡ್, ಬ್ರಾವೋ, ಪೂರನ್
- Finance
ಕೇರಳ ಲಾಟರಿ: 'ಕಾರುಣ್ಯ ಪ್ಲಸ್ KN 433' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Technology
ಮೊಟೊ S30 ಪ್ರೊ ಸ್ಮಾರ್ಟ್ಫೋನ್ ಲಾಂಚ್! ಪ್ರೊಸೆಸರ್ ಯಾವುದು?
- Travel
ಯಾಣ - ಅತ್ಯದ್ಬುತ ಶಿಲೆಗಳಿರುವ ಇರುವ ತಾಣ!
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ವಿಮಾನದಲ್ಲಿ ಮೊದಲ ಪ್ರಯಾಣವೇ? ಹಾಗಾದ್ರೆ ಖಂಡಿತ ಈ ವಿಷಯಗಳನ್ನು ತಿಳಿದುಕೊಳ್ಳಿ
ಸುಖಕರ ಹಾಗೂ ಕಡಿಮೆ ಸಮಯದಲ್ಲಿ ನಿಮ್ಮ ಗಮ್ಯ ಸ್ಥಳಗಳಿಗೆ ಕೊಂಡೊಯ್ಯುವ ವಿಮಾನಗಳು ಈಗ ಪ್ರತಿಯೊಬ್ಬರ ಪ್ರಯಾಣಕ್ಕೂ ಲಭ್ಯವಿದೆ. ಆದರೆ ಇದು ಬಸ್ ಹಾಗೂ ರೈಲು ಪ್ರಯಾಣದಂತಲ್ಲ, ಬದಲಾಗಿ ವಾಯುಯಾನ ಮಾಡಬೇಕೆಂದರೆ ಏರ್‌ಪೋರ್ಟ್‌ಗಳಲ್ಲಿ ಕಟ್ಟುನಿಟ್ಟಿನ ನಿಯಮಗಳು ಇರುತ್ತವೆ.

ಹಾಗಾಗಿ ಪ್ಯಾಸಿಂಜರ್‌ಗಳು ವಿಮಾನ ಪ್ರಯಾಣದ ವೇಳೆ ಬಸ್, ರೈಲಿನಲ್ಲಿ ನಡೆದುಕೊಂಡಂತೆ ವಿಮಾನಗಳಲ್ಲಿ ವ್ಯವಹರಿಸಬಾರದು. ವಿಮಾನಯಾನ ಸಂಸ್ಥೆಗಳಿಗೆ ಪ್ರಯಾಣಿಕರ ಸುರಕ್ಷತೆ ಹಾಗೂ ತಮ್ಮ ಸಂಸ್ಥೆಯ ಬಗ್ಗೆ ಉತ್ತಮ ಪ್ರತಿಕ್ರಿಯೆ, ಅತಿ ಮುಖ್ಯವಾಗಿ ಇತರ ಪ್ರಯಾಣಿಕರಿಗೆ ತೊದರೆಯಾಗದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿರುತ್ತದೆ.

ಹಾಗಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ನಾವು ಸೌಜನ್ಯದಿಂದ ವರ್ತಿಸಬೇಕು. ಆಗ ಮಾತ್ರ ಇತರ ಪ್ರಯಾಣಿಕರು ನಮ್ಮನ್ನು ಗೌರವಿಸುತ್ತಾರೆ. ಆದರೆ ಕೆಲವರು ಇದನ್ನೆಲ್ಲ ನಿರ್ಲಕ್ಷಿಸಿ ಇತರರನ್ನು ಕೆರಳಿಸುವ ರೀತಿಯಲ್ಲಿ ವರ್ತಿಸುತ್ತಾರೆ. ಕೆಲವರು ಪ್ರಯಾಣಿಕರು ವಿಮಾನಗಳಲ್ಲಿ ಯಾವೆಲ್ಲಾ ಕುಚೇಷ್ಟೆಗಳನ್ನು ಮಾಡುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಇಲ್ಲಿ ತಿಳಿಸಲಾಗಿರುವ ಯಾವುದೇ ಕೆಲಸವನ್ನು ವಿಮಾನಗಳಲ್ಲಿ ಮಾಡಬಾರದು ಎಂಬ ಉದ್ದೇಶದಿಂದ ನಾವು ಈ ಸಂದೇಶವನ್ನು ಒದಗಿಸುತ್ತಿದ್ದೇವೆ. ಕೆಲವರು ವಿಮಾನವೇರಿದ ಬಳಿಕ ತಾವು ಧರಿಸಿರುವ ಸಾಕ್ಸ್‌ಗಳನ್ನು ಇದ್ದಕ್ಕಿದ್ದಂತೆ ತೆಗೆಯುತ್ತಾರೆ. ಇದು ಕೆಟ್ಟ ವಾಸನೆಗೆ ಕಾರಣವಾಗುತ್ತದೆ. ಹೀಗೆ ಮಾಡಿದರೆ ಇತರ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತದೆ.

ಅಂತೆಯೇ, ಕೆಲವು ಪ್ರಯಾಣಿಕರು ಇತರರೊಂದಿಗೆ ಹೆಚ್ಚು ಮಾತನಾಡುತ್ತಾರೆ. ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಸ್ವಲ್ಪ ಮಾತನಾಡುವುದು ತಪ್ಪೇನಲ್ಲ. ಆದರೆ ಒಂದೇ ಸಮನೇ ಗಂಟೆಗಟ್ಟಲೇ ಮಾತನಾಡುತ್ತಿದ್ದರೆ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುತ್ತದೆ. ಅಲ್ಲದೇ ಕೆಲವರಿಗೆ ವಿಮಾನದಲ್ಲಿ ತುಂಬಾ ಜೋರಾಗಿ ಹಾಡು ಕೇಳುವ ಅಭ್ಯಾಸವಿರುತ್ತದೆ.

ಇದರಿಂದ ಇತರ ಪ್ರಯಾಣಿಕರನ್ನು ಕೆರಳಿಸಬಹುದು. ಆದ್ದರಿಂದ ಹೆಡ್‌ಫೋನ್‌ಗಳ ಮೂಲಕ ನೀವು ಮಾತ್ರ ಕೇಳಬಹುದಾದ ಹಾಡುಗಳನ್ನು ಕೇಳಿ. ಇದಲ್ಲದೇ ಕೆಲವರಿಗೆ ವಿಮಾನ ಇಳಿಯುವಾಗ ಜೋರಾಗಿ ಚಪ್ಪಾಳೆ ತಟ್ಟುವ ಅಭ್ಯಾಸವಿರುತ್ತದೆ. ನೀವು ಬಸ್ಸುಗಳಲ್ಲಿ ಪ್ರಯಾಣಿಸುವಾಗ, ನಿಮ್ಮ ನಿಲ್ದಾಣಕ್ಕೆ ಬಂದಾಗ ಚಾಲಕನನ್ನು ಶ್ಲಾಘಿಸುತ್ತೀರಾ? ಇಲ್ಲವೇ ಇಲ್ಲ. ಹಾಗಾದರೆ ಪೈಲಟ್ ಅನ್ನು ಮಾತ್ರ ಏಕೆ ಶ್ಲಾಘಿಸಬೇಕು?

ಆದ್ದರಿಂದ ವಿಮಾನದಲ್ಲಿ ಅನಗತ್ಯವಾಗಿ ನಿಮ್ಮ ಕೈಗಳನ್ನು ಬೀಸಬೇಡಿ. ಅಂತೆಯೇ, ಇತರರ ಮುಖವನ್ನು ಗಂಟಿಕ್ಕಿಸುವ ರೀತಿಯಲ್ಲಿ ವಿಮಾನದಲ್ಲಿ ಸುಗಂಧ ದ್ರವ್ಯಗಳನ್ನು (ಸೆಂಟ್) ಹಾಖಿಕೊಳ್ಳದಿರಿ. ಹೆಚ್ಚು ಸುಗಂಧ ದ್ರವ್ಯವನ್ನು ಬಳಸುವುದು ಸಹ ತಪ್ಪು. ವಿಮಾನ ಹಾರಾಟದಲ್ಲಿದ್ದಾಗ ಕೆಲವರಿಗೆ ಉಸಿರಾಟ ಕಷ್ಟವಾಗುತ್ತದೆ ಅಂತಹ ಸಂಧರ್ಭಗಳಲ್ಲಿ ನಿಮ್ಮ ವಾಸನೆ ಇನ್ನಷ್ಟು ಕೆರಳಿಸಬಹುದು.

ಅಂತೆಯೇ ಕೊನೆಯಲ್ಲಿ ವಿಮಾನ ಇಳಿಯುವಾಗ ಕೆಲವರು ಮೊದಲು ಇಳಿಯಲು ಇತರರನ್ನು ಹಿಂದಿಕ್ಕಲು ಬಯಸುತ್ತಾರೆ. ಇತರರು ನಿಮ್ಮನ್ನು ಈ ರೀತಿ ನಡೆಸಿಕೊಂಡರೆ ನೀವು ಎಷ್ಟು ಕಿರಿಕಿರಿಗೊಳ್ಳುತ್ತೀರಿ? ಇತರರಿಗೂ ಅದೇ ಭಾವನೆ ಬರುತ್ತದೆ. ಹಾಗಾಗಿ ನೀವು ವಿಮಾನದಿಂದ ಇಳಿಯುವಾಗ ತಾಳ್ಮೆಯಿಂದ ವರ್ತಿಸಬೇಕು.

ಅದೇ ರೀತಿ ರಾತ್ರಿ ವೇಳೆ ಸೆಲ್ ಫೋನ್ ಸ್ಕ್ರೀನ್ ಆನ್ ಮಾಡಿ ಇತರ ಪ್ರಯಾಣಿಕರ ನಿದ್ದೆ ಕೆಡಿಸುವವರು ಬಹಳ ಮಂದಿ ಇದ್ದಾರೆ. ಅವರಲ್ಲಿ ಒಬ್ಬರಾಗಬೇಡಿ, ಈಗಾಗಲೇ ಇಕ್ಕಟ್ಟಾದ ಆಸನಗಳು ಸೇರಿದಂತೆ ಹಲವು ಕಾರಣಗಳಿಂದ ವಿಮಾನ ಪ್ರಯಾಣವು ಅಹಿತಕರವಾಗಿರುತ್ತದೆ.

ಇಂತಹ ನಾನಾ ಸಮಸ್ಯೆಗಳ ನಡುವೆಯೂ ಸೆಲ್ ಫೋನ್ ಇಟ್ಟುಕೊಂಡು ಕೊಂಚ ಕಣ್ಣು ಮಿಟುಕಿಸುವವರಿಗೆ ಕಿರುಕುಳ ನೀಡಬಾರದು. ಅದೇ ರೀತಿ ವಿಮಾನದಲ್ಲಿ ಮಲಗುವವರಿಗೆ ಗೊರಕೆಯ ಸಮಸ್ಯೆ ಕಾಡುತ್ತದೆ. ನೀವು ಮಲಗುವಾಗ ಗೊರಕೆ ಹೊಡೆದರೆ ನಿಮ್ಮ ಮನೆಯಲ್ಲಿರುವವರು ಹುಚ್ಚರಾಗುತ್ತಾರೆ.

ಹೀಗಿರುವಾಗ ಅಪರಿಚಿತ ಸಹಪ್ರಯಾಣಿಕರು ಸುಮ್ಮನಿರುತ್ತಾರಾ? ಹಾಗಾಗಿ ನಿದ್ರೆಯಲ್ಲಿ ಗೊರಕೆ ಹೊಡೆಯುವ ಅಭ್ಯಾಸವಿದ್ದರೆ ಎಚ್ಚರದಿಂದಿರಿ. ಹಾಗೆಯೇ ಮಲಗುವಾಗ ಪಕ್ಕದ ಸೀಟಿನಲ್ಲಿ ಕುಳಿತವರ ಭುಜಕ್ಕೆ ಒರಗಿಕೊಳ್ಳುವ ಅಭ್ಯಾಸವಿದ್ದರೆ ಎಚ್ಚರದಿಂದಿರಿ. ಹಾಗೆಯೇ ನಿಮಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದರೆ, ಮಿತವಾಗಿ ಕುಡಿಯಿರಿ.

ಅತಿಯಾಗಿ ಕುಡಿದು ಗಲಾಟೆ ಮಾಡುವವರಿಂದ ಇತರ ಪ್ರಯಾಣಿಕರು ಸಿಟ್ಟಾಗಬಹುದು. ಪಾರ್ಟಿ ಎಂದು ಭಾವಿಸಿ ಮದ್ಯದ ಅಮಲಿನಲ್ಲಿ ತಮಾಷೆ ಮಾಡಬೇಡಿ. ವಿಮಾನವು ಒಮ್ಮೆ ಇಳಿದ ನಂತರ ನಿಮ್ಮನ್ನು ವಿಚಾರಣೆಗೆ ಒಳಪಡಿಸುವ (ಬಂಧನಕ್ಕೊಳಗಾಗುವ) ಪರಿಸ್ಥಿತಿಯನ್ನು ತಂದುಕೊಳ್ಳಬೇಡಿ.

ಹಾಗೆಯೇ ವಿಮಾನಗಳಲ್ಲಿ ಯಾವುದೇ ಸಮಸ್ಯೆಯಾದಲ್ಲಿ ಸಿಬ್ಬಂದಿ ತಕ್ಷಣ ಪ್ರತಿಕ್ರಿಯಿಸುವುದರಿಂದ ನಮಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ನಮ್ಮಿಂದ ಮತ್ತೊಬ್ಬರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ನಡೆದುಕೊಳ್ಳಬೇಕು, ಇದನ್ನು ಗಮನದಲ್ಲಿಟ್ಟುಕೊಂಡು ವಿಮಾನದಲ್ಲಿ ಪ್ರಯಾಣಿಸುವುದು ಉತ್ತಮ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ವ್ಯಾಪಾರ, ಉದ್ಯೋಗ ಮತ್ತು ಪ್ರವಾಸ ನಿಮಿತ್ತ ಎಲ್ಲಾ ವರ್ಗದ ಜನರು ಇಂದು ಒಂದಿಲ್ಲೊಂದು ಕಾರಣಕ್ಕೆ ವಿಮಾನಯಾನವನ್ನು ಆಯ್ಕೆ ಮಾಡುತ್ತಿದ್ದು, ಹಲವು ವಲಯಗಳ ಜನರು ಪ್ರಯಾಣಿಸುವುದರಿಂದ ಒಬ್ಬೊಬ್ಬರ ಮನಃಸ್ಥಿತಿ ಒಂದೊಂದು ರೀತಿ ಇರುತ್ತದೆ. ಹಾಗಾಗಿ ಪ್ರಯಾಣಿಕರು ವಿಮಾನಗಳಲ್ಲಿ ಮೆಲೆ ತಿಳಿಸಲಾದ ಯಾವುದೇ ಕೆಲಸಗಳನ್ನು ಮಾಡದಿರಿ. ಹಾಗೆಯೇ ನಿಮಗೆ ಸಮಸ್ಯೆಯಾದಲ್ಲಿ ವಿಮಾನದಲ್ಲಿರುವ ಸಿಬ್ಬಂದಿಗೆ ತಿಳಿಸಿದರೆ ಸುಖಕರ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಾರೆ.