Triangle Wheel Bicycle: ಇದನ್ನು ತುಳಿಯುವುದಾದ್ರು ಹೇಗೆ? ಯ್ಯೂಟ್ಯೂಬರ್ ಸಾಧನೆಗೆ ಇಂಟರ್ನೆಟ್ ಶೇಕ್!

ವಾಹನಗಳು ಎಂದಾಕ್ಷಣ ಅವುಗಳಿಗೆ ಅತಿಮುಖ್ಯವಾದ ಭಾಗಗಳು ಎಂದರೆ ಎಂಜಿನ್, ಗೇರ್‌ಬಾಕ್ಸ್, ಸ್ಟೀರಿಂಗ್, ಹ್ಯಾಂಡಲ್ ಬಾರ್ ಎಂದು ಹೇಳಿಬಿಡುತ್ತಾರೆ. ಆದ್ರೆ ಅದೇ ವಾಹನ ಒಂದು ಅಡಿ ಮುಂದೆ ಚಲಿಸಬೇಕಾದ್ರೂ ಚಕ್ರಗಳದ್ದೇ ಮುಖ್ಯ ಪಾತ್ರವಾಗಿರುತ್ತದೆ. ಅಂತಹ ಚಕ್ರಗಳು ವೃತ್ತಾಕಾರದಲ್ಲಿ ಇದ್ದರೆ ಮಾತ್ರ ವಾಹನಗಳ ಚಾಲನೆಗೆ ಅನುವು ಮಾಡಿಕೊಡುತ್ತದೆ.

ಈ ವಿಷಯ ಎಲ್ಲರಿಗೂ ಗೊತ್ತು. ಆದ್ರೆ ಇಲ್ಲೊಬ್ಬ ಯ್ಯೂಟ್ಯೂಬರ್ ವಾಹನ ಮುಂದಕ್ಕೆ ಹೋಗಲು ಚಕ್ರಗಳು ವೃತ್ತಾಕಾರದಲ್ಲೇ ಇರಬೇಕೆಂದು ಹೇಳಿದವರ್ಯಾರು ಎಂದು ಪ್ರಶ್ನಿಸಿದ್ದಾನೆ. ಈ ವಿಡಿಯೋ ನೋಡೋದಕ್ಕೂ ಮುನ್ನ ಈತ ಕೇಳಿದ ಪ್ರಶ್ನೆಗೆ ಎಲ್ಲರೂ ನಕ್ಕು ಈ ಮೂರ್ಖನಿಗೆ ಉತ್ತರ ಕೊಡುವುದು ಕೂಡ ಟೈಮ್ ವೇಸ್ಟ್ ಎಂದುಕೊಳ್ಳುವವರೇ ಹೆಚ್ಚು ಅಲ್ಲವೇ?

Triangle Wheel Bicycle

ನೀವಷ್ಟೇ ಅಲ್ಲಾ, ಈ ಲೇಖನ ಬರೆದ ನಾನು ಕೂಡ ಹಾಗೆಯೇ ಪ್ರತಿಕ್ರಿಯಿಸುತ್ತಿದ್ದೆ. ಏಕೆಂದರೆ ಬೈಸಿಕಲ್‌ಗಳು, ಕಾರುಗಳು ಅಥವಾ ಬೈಕುಗಳು ವೈಜ್ಞಾನಿಕವಾಗಿ ವೃತ್ತಾಕಾರದ ಚಕ್ರಗಳಿದ್ದಾಗ ಮಾತ್ರ ಅವು ಮುಂದಕ್ಕೆ ಹೋಗಬಲ್ಲವು. ಆ ಆಕಾರ ಬದಲಾದರೆ? Triangle Wheel Bicycle ಚಲಿಸಲು ಸಾಧ್ಯವಾಗುತ್ತದೆಯೇ? ಖಂಡಿತ ಚಲಿಸಬಲ್ಲವು ಎಂಬುದನ್ನು The Q ಎಂಬ YouTube ಚಾನಲ್ ಸಾಭೀತುಪಡಿಸಿದೆ.

ಹೌದು ಚಕ್ರಗಳು ತ್ರಿಕೋನ ಆಕಾರದಲ್ಲಿ ಇದ್ದರೂ ಮುಂದಕ್ಕೆ ಚಲಿಸಿವೆ. ಆದ್ರೆ ಇದಕ್ಕೆ ಬೇಕಾದ ತಂತ್ರಜ್ಞಾನವು ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅದಕ್ಕೂ ಮುನ್ನ ವಿಶಿಷ್ಟ ಟೈರ್‌ಗಳನ್ನು ತಯಾರಿಸಿದ್ದರ ಬಗ್ಗೆ ಮೊದಲು ತಿಳಿಯಬೇಕು. ಕಬ್ಬಿಣದ ಫ್ರೇಮ್‌ಗಳ ಬದಲಿಗೆ ಮರದ ಫ್ರೇಮ್‌ಗಳನ್ನು ವೀಲ್ ತಯಾರಿಗೆ ಬಳಸಲಾಗಿದೆ. ಇದರ ಮೇಲೆ ಬಳಸಿದಾಗ ಸೈಕಲ್ ಟೈರ್‌ಗಳನ್ನು ಜೋಡಿಸಿದ್ದಾರೆ.

Triangle Wheel Bicycle

ಸಾಂಪ್ರದಾಯಿಕ ಬೇರಿಂಗ್‌ಗಳು, ಹಬ್‌ಗಳು ಮತ್ತು ಡಿಸ್ಕ್ ಬ್ರೇಕ್‌ಗಳನ್ನು ನಂತರ ವುಡನ್ ವೀಲ್‌ಗೆ ಜೋಡಿಸಲಾಗಿದೆ. ಈ ಮೂಲಕ ವೀಲ್ ತಿರುಗುತ್ತದೆ, ಆದ್ರೆ ಎಲ್ಲವೂ ಯೋಚಿಸುವಷ್ಟು ಸುಗಮವಾಗಿರುವುದಿಲ್ಲ. ಮೊದಲೇ ಹೇಳಿದಂತೆ ತ್ರಿಕೋನ ಆಕಾರದ ವೀಲ್‌ಗಳು ತಿರುಗುವುದು ಅಷ್ಟು ಸುಲಭವಲ್ಲ, ಆಕ್ಸಲ್‌ನ ಎತ್ತರವನ್ನು ನಿರಂತರವಾಗಿ ಬದಲಾಯಿಸುವುದರಿಂದ ಚಲಿಸುವಾಗ ಮೇಲಕ್ಕೆ ಮತ್ತು ಕೆಳಕ್ಕೆ ಬೌನ್ಸ್ ಆಗುತ್ತವೆ.

ಇದೇ ಅಲ್ಲವೇ ಅಸಲಿ ಮಾಸ್ಟರ್ ಮೈಂಡ್: ವೀಲ್ ತ್ರಿಕೋನ ಆಕಾರದಲ್ಲೂ ಬೌನ್ಸ್ ಆಗದೇ ವೃತ್ತಾಕಾರದ ವೀಲ್‌ನಂತೆ ಮುಂದೆ ಹೋಗುವಂತೆ ಮಾಡಲು ಮಾಸ್ಟರ್‌ ಮೈಂಡ್‌ಗಳಿಗೆ ಮಾತ್ರ ಸಾಧ್ಯ. ಪ್ರತಿ ಚಕ್ರದ ಮೇಲೆ ಬೈಸಿಕಲ್‌ಗೆ ಅಳವಡಿಸಲಾಗಿರುವ ಒಂದು ಜೋಡಿ ಫ್ಲಾಟ್ ರೋಲರ್‌ಗಳು ಇಲ್ಲಿ ಅಸಲಿ ಪಾತ್ರ ವಹಿಸುತ್ತವೆ. ಪ್ರತಿಯೊಂದೂ ಚಕ್ರವನ್ನು ಮಿತಿಯೊಳಗೆ ತಿರುಗುವಂತೆ ಮಾಡುತ್ತವೆ.

ನಂತರ ಬೈಸಿಕಲ್‌ನ ಮುಖ್ಯ ಫ್ರೇಮ್ ವಿಭಾಗಕ್ಕೆ ಆ ಬೌನ್ಸ್ ಆಗುವಿಕೆಯನ್ನು ತಿಳಿಸಿದೆ ಚಕ್ರದ ದೃಷ್ಟಿಕೋನವನ್ನು ಆಧರಿಸಿ ಎತ್ತರವನ್ನು ಬದಲಾಯಿಸಲು ಆಕ್ಸಲ್‌ಗೆ ಸಪೋರ್ಟ್ ಮಾಡುವ ಸಸ್ಪೆನ್ಷನ್ ಸೆಟಪ್ ನೀಡಲಾಗಿದೆ. ಈ ತಂತ್ರವನ್ನು ತುಂಬಾ ಜಾಗರೂಕತೆಯಿಂದ ಮಾಡಿರುವ ವಿಡಿಯೋವನ್ನು ಕೂಡ The Q ಹಮಚಿಕೊಂಡಿದೆ. ಆಸಕ್ತಿಯಿದ್ದವರು ವಿಡಿಯೋವನ್ನು ಪೂರ್ಣವಾಗಿ ವೀಕ್ಷಿಸಿದರೆ ನಿಮಗೊಂದು ಐಡಿಯಾ ಬರಬಹುದು.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Wednesday, May 31, 2023, 12:27 [IST]
English summary
Triangle wheel bicycle how to ride video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+