ಅಂಬಿ ವೇದನೆ ಅರಗಿಸಿಕೊಳ್ಳಲು ಸಾಧ್ಯವೇ?

By Nagaraja

ಯಾವುದೇ ಒಬ್ಬ ಹಿರಿಯ ಚಾಲಕರಿಗೆ ಅಂಬಾಸಿಡರ್ ಯುಗಾಂತ್ಯವನ್ನು ಅರಗಿಸಿಕೊಳ್ಳಲು ಸಾಧ್ಯತೆಯಿಲ್ಲ. ಯಾಕೆಂದರೆ ಜೀವನದಲ್ಲಿ ಎಂದಾದರೂ ಒಂದು ದಿನ ಅವರು ದೇಶದ ರಸ್ತೆಗಳ ರಾಜನ ಅನುಭವ ಪಡೆದುಕೊಂಡಿರುತ್ತಾರೆ. ಮೊನ್ನೆ ಮೊನ್ನೆ ತಾನೇ ಐಕಾನಿಕ್ ಅಂಬಾಸಿಡರ್ ಉತ್ಪಾದನೆ ಸ್ಥಗತಗೊಳಿಸಿರುವುದಾಗಿ ಹಿಂದೂಸ್ತಾನ್ ಮೋಟಾರ್ಸ್ ಘೋಷಿಸುತ್ತಿರುವಂತೆಯೇ ಹಲವರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.

ಭಾರತೀಯ ರಸ್ತೆಗಳ ರಾಜ ಅಂಬಿ ಯುಗಾಂತ್ಯ

ಇವರಲ್ಲಿ ಕೋಲ್ಕತ್ತಾದ ಟ್ಯಾಕ್ಸಿ ಚಾಲಕ ಸುಮೀತ್ ಭಾದ್ರಾ ಕೂಡಾ ಒಬ್ಬರು. ಅಂದು ರಾತ್ರಿ ಎಂಟರ ಸಮಯ. ಕಳೆದ 23 ವರ್ಷಗಳಿಂದಲೂ ಕೋಲ್ಕತ್ತಾ ನಗರದೆಲ್ಲಡೆ ಸುತ್ತಾಡುತ್ತಿದ್ದ ಸುಮೀತ್ ಹಾಗೂ ಅಂಬಾಸಿಡರ್‌ಗೆ ಅದೆಲ್ಲಿಲ್ಲದ ನಂಟು. ಬಹುತೇಕ ತಮ್ಮ ಸಹ ಚಾಲಕರೆಲ್ಲ ಅಂಬಿಯಿಂದ ಆಧುನಿಕ ಸ್ಯಾಂಟ್ರೊ ಹಾಗೂ ಆಲ್ಟೊಗಳಂತಹ ಕಾರುಗಳಿಗೆ ಮೊರೆ ಹೋಗಿದ್ದರೆ ಸುಮೀತ್ ಮಾತ್ರ ಅಂಬಿಯನ್ನೇ ನೆಚ್ಚಿಕೊಂಡಿದ್ದರು. ಯಾಕೆಂದರೆ ಅವರಿಗೆ ಈ ವಿಷಯ ಚೆನ್ನಾಗಿ ಬಲ್ಲವರಾಗಿದ್ದರು - "ಅಂಬಿಯಷ್ಟು ಗುಣಮಟ್ಟ ಹಾಗೂ ಆರಾಮದಾಯಕ ಪಯಣವನ್ನು ನೀಡಲು ಇತರ ಯಾವುದೇ ಕಾರುಗಳು ನೀಡಲು ಸಾಧ್ಯವಿಲ್ಲ".

ದೇಶದ ರಸ್ತೆಗಳ ರಾಜ ಅಂಬಾಸಿಡರ್‌ಗೊಂದು ನಿಜವಾದ ಕೊಡುಗೆ

ಅಂಬಾಸಿಡರ್ ಕೊನೆಯ ಉತ್ಪನ್ನ ಬಗ್ಗೆ ವಾರ್ತಾ ಪತ್ರಿಕೆ ಮೂಲಕ ತಿಳಿದುಕೊಂಡಿದ್ದ ಸುಮೀತ್‌ಗೆ ಮುಂದಿನ ದಿನಗಳಲ್ಲಿ ಬಿಡಿಭಾಗ ಸಹ ಸಿಗುವುದು ಕಷ್ಟ ಎಂಬುದು ಮನವರಿಕೆಯಾಗಿತ್ತು. ಅಲ್ಲದೆ ಮುಂದೊಂದು ದಿನ ಟ್ಯಾಕ್ಸಿ ಸೇವೆಯಿಂದಲೂ ಮುಕ್ತವಾಗಲಿದೆಯೆಂಬ ವಿಚಾರ ಚೆನ್ನಾಗಿ ಗೊತ್ತಿತ್ತು. ಈ ಎಲ್ಲ ವಿಚಾರಗಳು ಮನದಲ್ಲಿ ಓಡುತ್ತಿರುವಂತೆಯೇ ಮನೆಯತ್ತ ಮುಖ ಮಾಡಿದ ಅವರು ತಮ್ಮ 45 ನಿಮಿಷಗಳ ಪಯಣದಲ್ಲಿ ಅಂಬಿ ನೆನಪುಗಳನ್ನು ಸ್ಮರಿಸಿಕೊಂಡರು.

ದೇಶದ ರಸ್ತೆಗಳ ರಾಜ ಅಂಬಾಸಿಡರ್‌ಗೊಂದು ನಿಜವಾದ ಕೊಡುಗೆ

ಸುಮೀತ್ ಪತ್ನಿ ಮೀನಾ ತಾಯಿ ಮನೆಗೆ ತೆರಳಿರುವುದರಿಂದ ಮನೆಯಲ್ಲಿ ರಾತ್ರಿ ಊಟ ತಯಾರಾಗಿರಲಿಲ್ಲ. ಹಾಗಾಗಿ ಪಾರ್ಸೆಲ್‌ನೊಂದಿಗೆ ಮನೆಗೆ ಬಂದಿದ್ದರು. ಬಳಿಕ ಸೋಫಾದಲ್ಲಿ ಕುಳಿತುಕೊಂಡ ಅವರು ಮೆಲ್ಲನೆ ಟಿ.ವಿ ಆನ್ ಮಾಡಿದರು. ರಿಮೋಟ್‌ನಲ್ಲಿ ಚಾನೆಲ್ ಒತ್ತುತ್ತಿರಬೇಕಾದರೆ ಒಂದು ಮಿನುಗು ತಾರೆಯಂತೆ ಟಿ.ವಿ ಪರದೆಯಲ್ಲಿ ಅಂಬಾಸಿಡರ್‌ವೊಂದು ಗೋಚರವಾಯಿತು. ಹ್ಹಾಂ ಇದೇನಿದು?

ದೇಶದ ರಸ್ತೆಗಳ ರಾಜ ಅಂಬಾಸಿಡರ್‌ಗೊಂದು ನಿಜವಾದ ಕೊಡುಗೆ

ಸೂಕ್ಷ್ಮವಾಗಿ ಗಮನಿಸುತ್ತಿರಬೇಕಾದರೆ ಅದೊಂದು ಅಂಬಾಸಿಡರ್‌ಗೆ ನೀಡುತ್ತಿರುವ ಗೌರವ ಸೂಚಕ ಕಾರ್ಯಕ್ರಮವಾಗಿತ್ತು. ಕಳೆದ 23 ವರ್ಷಗಳಿಂದಲೂ ಅಂಬಾಸಿಡರ್ ಓಡಿಸುತ್ತಿರುವ ಸುಮೀತ್ ಅಂಬಾಸಿಡರ್‌ನ ಎಲ್ಲ ವಿಚಾರವನ್ನು ತಿಳಿದುಕೊಂಡರೂ ಅವರಿಗಿಂತಲೂ ದೊಡ್ಡವರಾದ ಅಭಿಮಾನಿಗಳಿದ್ದಾರೆಂಬ ವಿಚಾರ ಮನಗಂಡರು. ಸುಮಾರು ವರ್ಷಗಳ ಹಿಂದೆ ಸ್ವತಂತ್ರ ಉದ್ಯೋಗವನ್ನೊಂದು ಕನಸು ಕಂಡಿದ್ದ ಸುಮೀತ್ ತಮ್ಮ ಕನಸಿನ ಅಂಬಾಸಿಡರ್ ಖರೀದಿಗಾಗಿ ಕಟ್ಟ ಪಾಡು ಅಷ್ಟಿಷ್ಟಲ್ಲ. ಅಂಬಾಸಿಡರ್ ಕಾರ್ಯಕ್ರಮದಲ್ಲಿ ಆಸಕ್ತಿ ಮೂಡಿದ್ದ ಸುಮೀತ್, ಸಮೀಪದಲ್ಲಿದ್ದ ಜಗ್‌ನಿಂದ ನೀರು ಗಳಗಳನೆ ಕುಡಿಯುತ್ತಾ ಟಿ.ವಿಯ ಧ್ವನಿಯನ್ನು ಏರಿಸಿಯೇ ಬಿಟ್ಟರು.

ದೇಶದ ರಸ್ತೆಗಳ ರಾಜ ಅಂಬಾಸಿಡರ್‌ಗೊಂದು ನಿಜವಾದ ಕೊಡುಗೆ

ಈ ಸಂದರ್ಭದಲ್ಲಿ ಯಾವುದೇ ಕಾರಿಗಾದರೂ 'ಗ್ರಾಂಡ್ ಒಲ್ಡ್ ಲೇಡಿ' ದರ್ಜೆ ಸಿಗಬೇಕಾದರೆ ಅದು ಅಂಬಾಸಿಡರ್‌ಗೆ ಮಾತ್ರ ಎಂಬ ಮಾತು ಹರಿದಾಡಿತ್ತು. ಕೆಲವು ವರ್ಷಗಳ ಹಿಂದಿನ ವರೆಗೂ ಮಧ್ಯಮ ವರ್ಗದ ಕುಟುಂಬದಿಂದ ಹಿಡಿದು ಹಿರಿಯ ರಾಜಕಾರಣಿಗಳ ವರೆಗೂ ಅಂಬಾಸಿಡರ್ ದೇಶದ ಪ್ರಮುಖ ಸಂಪರ್ಕ ಮಾಧ್ಯಮವಾಗಿ ಗುರುತಿಸಿಕೊಂಡಿತ್ತು. ಬರ ಬರುತ್ತಾ ಆಧುನಿಕ ಕಾರುಗಳ ಪ್ರವೇಶವಾದಂತೆ ಅಂಬಿ ನಿಧಾನವಾಗಿ ಕಳೆಗುಂದ ತೊಡಗಿತ್ತು. ಇದುವೇ 56 ವರ್ಷಗಳ ಇತಿಹಾಸಕ್ಕೆ ಕೊನೆ ಹಾಡುವಂತಾಗಿತ್ತು.

ದೇಶದ ರಸ್ತೆಗಳ ರಾಜ ಅಂಬಾಸಿಡರ್‌ಗೊಂದು ನಿಜವಾದ ಕೊಡುಗೆ

ಹೌದು, ಇದು ನೋಡಲೇ ಬೇಕಾದ ಕಾರ್ಯಕ್ರಮ ಎಂಬುದು ಸುಮೀತ್ ಮನದಟ್ಟು ಮಾಡಿಕೊಂಡರು. ಅಂಬಾಸಿಡರ್ ಜೀವಿತಾವಧಿ ಕೊನೆಗೊಂಡಿರುವುದಾಗಿ ಹಿಂದೂಸ್ತಾನ್ ಮೋಟಾರ್ಸ್ ಹೇಳಿಕೊಂಡರೂ 1950ರ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ತಂದಿಲ್ಲ. ಅಲ್ಲದೆ ಒಂದೆರಡು ಬಾರಿ ಎಂಜಿನ್ ಮಾರ್ಪಾಡು ಹಾಗೂ ಕೆಲವೊಂದು ದೇಹಶೈಲಿ ಮಾತ್ರ ಬದಲಾಗಿರುವುದನ್ನು ನಾವು ಒಪ್ಪಲೇ ಬೇಕು. ಈ ಎಲ್ಲ ವಿಷಯಯಗಳ ನಡುವೆ ಕಾರಿನ ಮೂಲ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿರಲಿಲ್ಲ. ಪಶ್ಛಿಮಬಂಗಾಳದ ಉತ್ತರಪುರದಲ್ಲಿ ತಯಾರಿಯಾಗುತ್ತಿದ್ದ ಈ ಅಂಬಾಸಿಡರ್ ಒಂದು ಕಾಲದಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡ ಕಾರೆಂಬ ಖ್ಯಾತಿಗೆ ಪಾತ್ರವಾಗಿತ್ತು.

ದೇಶದ ರಸ್ತೆಗಳ ರಾಜ ಅಂಬಾಸಿಡರ್‌ಗೊಂದು ನಿಜವಾದ ಕೊಡುಗೆ

ಕುತೂಹಲಕಾರಿಯೆಂಬಂತೆ ಆ ಸಮಯದಲ್ಲಿ ಭಾರತದಲ್ಲಿ ಯಾವ ಕಾರು ಪ್ರಬಲವಾದ ಎಂಜಿನ್ ಹೊಂದಿರಲಿಲ್ಲ. ಆದರೆ ಅಂಬಾಸಿಡರ್ ಪರಿಚಯಿಸಿದ್ದ 1800 ಐಎಸ್‌ಝಡ್ ಎಂಜಿನ್ ಆ ಕಾಲದ ಅತ್ಯಂತ ವೇಗದ ಕಾರೆಂಬ ಖ್ಯಾತಿಗೆ ಪಾತ್ರವಾಗಿತ್ತು.

ದೇಶದ ರಸ್ತೆಗಳ ರಾಜ ಅಂಬಾಸಿಡರ್‌ಗೊಂದು ನಿಜವಾದ ಕೊಡುಗೆ

ಟಿ.ವಿ ಕಾರ್ಯಕ್ರಮ ಮುಂದುವರಿದಿತ್ತು. ಆರಂಭದಲ್ಲಿ ಸೈಡ್ ವಾಲ್ವ್ ಎಂಜಿನ್ ಹೊಂದಿದ್ದ ಅಂಬಾಸಿಡರ್ 35 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಅದೇ ಅಂತಿಮವಾಗಿ 2000 ಸಿಸಿ ಡೀಸೆಲ್ ಹಾಗೂ 1800 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿತ್ತು. ಇದು ಅನುಕ್ರಮವಾಗಿ 56 ಹಾಗೂ 75 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಈ ಎರಡು ಎಂಜಿನ್‌ಗಳು ಸಿಎನ್‌ಜಿ ಯುನಿಟ್‌ಗಳಲ್ಲೂ ಲಭ್ಯವಿತ್ತು. ಈ ಪೈಕಿ ಕೊನೆಗೆ ಬಂದಿದ್ದ ಅಂಬಾಸಿಡರ್ ಅವಿಗೊ, ಬಕೆಟ್ ಸೀಟ್, ಪವರ್ ಸ್ಟೀರಿಂಗ್ ಹಾಗೂ ಎಸಿಗಳಂತಹ ಐಷಾರಾಮಿ ಸೌಲಭ್ಯಗಳನ್ನು ಪಡೆದಿತ್ತು.

ದೇಶದ ರಸ್ತೆಗಳ ರಾಜ ಅಂಬಾಸಿಡರ್‌ಗೊಂದು ನಿಜವಾದ ಕೊಡುಗೆ

ಆದರೆ ಅಂಬಾಸಿಡರ್ ಉಗಮದ ಬಗ್ಗೆ ಯಾವುದೇ ಅಂಶ ಬೊಟ್ಟು ಮಾಡದಿರುವುದು ಸುಮೀತ್ ಅವರಲ್ಲಿ ಆಶ್ಚರ್ಯ ಮೂಡಿಸಿತ್ತು. ಆದರೆ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು ಬ್ರಿಟನ್ ಮೋರಿಸ್ ಆಕ್ಸ್ ಫರ್ಡ್ ನ III ನೇಯ ಮಾದರಿಯಲ್ಲಿ ಅಂಬಾಸಿಡರ್ ಕಾಂಪಾಕ್ಟ್ ಕಾರು ನಿರ್ಮಿಸಲಾಗಿತ್ತು. ಆದರೆ ಬಳಿಕ ಆಧುನಿಕ ತಂತ್ರಜ್ಞಾನಕ್ಕೆ ಮೊರೆ ಹೋಗಿದ್ದ ಅವಿಗೊ, ಅಂಬಿ ಅವನತಿಗೆ ಎಡೆಮಾಡಿಕೊಟ್ಟಿತ್ತು.

ದೇಶದ ರಸ್ತೆಗಳ ರಾಜ ಅಂಬಾಸಿಡರ್‌ಗೊಂದು ನಿಜವಾದ ಕೊಡುಗೆ

ಈ ನಡುವೆ ಜಾಹೀರಾತುವೊಂದು ಕಾರ್ಯಕ್ರಮವನ್ನು ಸುತ್ತಾಡಿತು. ಈ ಸಂದರ್ಭದಲ್ಲಿ ಸುಮೀತ್ ಮೆಲ್ಲನೆ ಬಿ.ಡಿ ಸೇದ ತೊಡಗಿದರು. ಅಂಬಾಸಿಡರ್‌ನ ಅತ್ಯಂತ ಹೆಚ್ಚು ಸ್ಥಳಾವಕಾಶ, ಆರಾಮದಾಯಕ ಆಸನ ವ್ಯವಸ್ಥೆ ಹಾಗೂ ಗರಿಷ್ಠ ಗುಣಮಟ್ಟತೆಯಿಂದಾಗಿಯೇ ಹೆಚ್ಚಿನ ಮಾರಾಟ ಗಿಟ್ಟಿಸಿಕೊಂಡಿರುವುದು ಇದೀಗ ಇತಿಹಾಸ. ಈಗಲೂ ಭಾರತದಲ್ಲಿರುವ ಐಷಾರಾಮಿ ಕಾರು ಸಂಸ್ಥೆಗಳು ಅಂಬಾಸಿಡರ್‌ನಲ್ಲಿ ಲಭ್ಯವಾಗುವಷ್ಟು ಆರಾಮದಾಯಕೆ ನೀಡಲು ಚಡಪಡಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಇದುವೇ ಅಂಬಾಸಿಡರ್ ಯಶಸ್ಸಿನ ಹಿಂದಿರುವ ರಹಸ್ಯವಾಗಿದೆ. ಇದಲ್ಲದೆ ಇಂದಿಗೂ ಕೋಲ್ಕತ್ತಾದಲ್ಲಿ ಅತಿ ಹೆಚ್ಚು ಅಂಬಾಸಿಡರ್ ಟ್ಯಾಕ್ಸಿಗಳನ್ನು ಬಳಸಲಾಗುತ್ತಿದೆ. ಇನ್ನು ಸ್ವಲ್ಪ ಕಾಲದ ವರೆಗೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.

ದೇಶದ ರಸ್ತೆಗಳ ರಾಜ ಅಂಬಾಸಿಡರ್‌ಗೊಂದು ನಿಜವಾದ ಕೊಡುಗೆ

ಅಂಬಾಸಿಡರ್ ಬಗೆಗಿನ ಸಂದಿಗ್ಧತೆ ಮನಸ್ಸಿನಲ್ಲಿರುವಂತೆಯೇ ಇದೆನ್ನೆಲ್ಲ ಆಲಿಸಿದ ಸುಮೀತ್, ಮಂದಹಾಸ ಬೀರಿದರು. ಕಾರ್ಯಕ್ರಮ ಈ ರೀತಿ ತೆರೆಬಿದ್ದಿತ್ತು - ಇಂದಿನ ತಲೆಮಾರಿನ ಬಹುತೇಕ ಮಂದಿ ಅಂಬಾಸಿಡರ್ ಚಾಲನೆ ಮಾಡಿರುತ್ತಾರೆ ಅಥವಾ ಯಾವಾಗಲಾದರೂ ಒಂದು ಬಾರಿ ಸಂಚರಿಸಿರುತ್ತಾರೆ. ಆದರೆ ಸತ್ಯಾಂಶವನ್ನು ಅರಗಿಸಕೊಳ್ಳಬೇಕಿದ್ದು, ಸದ್ಯ ಅಂಬಿಗಿಂತಲೂ ಕಡಿಮೆ ದರದಲ್ಲಿ ಆಧುನಿಕ ಶೈಲಿಯ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾಗಿದ್ದರೂ ಶೋಭಾಯಮಾನ ಅಂಬಾಸಿಡರ್ ಸದಾ ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂಬುದಂತೂ ಅಷ್ಟೇ ಸತ್ಯ.

ದೇಶದ ರಸ್ತೆಗಳ ರಾಜ ಅಂಬಾಸಿಡರ್‌ಗೊಂದು ನಿಜವಾದ ಕೊಡುಗೆ

ಇದನ್ನೆಲ್ಲ ಆಲಿಸಿದ ಸುಮೀತ್ ಟಿ.ವಿ ನಿಧಾನವಾಗಿ ಆಫ್ ಮಾಡಿ ತಮ್ಮಲ್ಲಿದ್ದ ಕೊನೆಯ ಬಿ.ಡಿ ಸೇದಿದರು. ಹಾಗಿದ್ದರೂ ಈ ಕೊನೆಯ ಪ್ರಶ್ನೆಯಂತೂ ಅವರನ್ನು ಈಗಲೂ ಕಾಡುತ್ತಿತ್ತು. "ಕಡಿಮೆ ಪಕ್ಷ ಅಂಬಿ ಇಲ್ಲದ ಭವಿಷ್ಯವನ್ನು ಟ್ಯಾಕ್ಸಿ ಚಾಲಕರು ಹೇಗೆ ಅರಗಿಸಿಕೊಳ್ತರೋ? ನಾವಿದಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತೇವೆ" ಎಂದು ಎಲ್ಲರಂತೆಯೇ ತಮ್ಮನ್ನು ತಾವೇ ಸಮಾಧಾನಪಡಿಸಿಕೊಂಡರು. ಗುಡೈ ಬೈ ಅಂಬಾಸಿಡರ್!

ದೇಶದ ರಸ್ತೆಗಳ ರಾಜ ಅಂಬಾಸಿಡರ್‌ಗೊಂದು ನಿಜವಾದ ಕೊಡುಗೆ

ಇದೀಗ ಅಂಬಾಸಿಡರ್ ಬಗೆಗಿನ ನಿಮ್ಮ ಭಾವನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮೆರೆಯದಿರಿ...

More from DriveSpark

Article Published On: Wednesday, May 28, 2014, 11:48 [IST]
English summary
A Tribute To The Hindustan Ambassador - The Journey Ends
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+