ಗೇಲಿ ಮಾಡಿ ತಪ್ಪಿಸಿಕೊಂಡು ಹೋದವನಿಗೆ ದಂಡ ಜಡಿದ ಪೊಲೀಸರು

ಭಾರತದ ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತಲೇ ಇರುತ್ತಾರೆ. ಸಂಚಾರಿ ನಿಯಮಗಳನ್ನು ಪಾಲಿಸದವರು ಪೊಲೀಸರನ್ನು ಕಂಡೊಡನೆ ವಾಹನಗಳನ್ನು ನಿಲ್ಲಿಸದೇ ತಪ್ಪಿಸಿಕೊಳ್ಳುತ್ತಾರೆ.

ಗೇಲಿ ಮಾಡಿ ತಪ್ಪಿಸಿಕೊಂಡು ಹೋದವನಿಗೆ ದಂಡ ಜಡಿದ ಪೊಲೀಸರು

ಈ ಪರಿಸ್ಥಿತಿ ಭಾರತದಲ್ಲಿರುವ ಯಾವುದೇ ಒಂದು ನಗರಕ್ಕೆ ಅಥವಾ ರಾಜ್ಯಕ್ಕೆ ಸೀಮಿತವಾಗಿಲ್ಲ. ಭಾರತದಾದ್ಯಂತವಿರುವ ಬಹುತೇಕ ಟ್ರಾಫಿಕ್ ಪೊಲೀಸರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ, ಅದರಲ್ಲೂ ವಿಶೇಷವಾಗಿ ಬೈಕ್‌ ಸವಾರರಿಂದ.

ಗೇಲಿ ಮಾಡಿ ತಪ್ಪಿಸಿಕೊಂಡು ಹೋದವನಿಗೆ ದಂಡ ಜಡಿದ ಪೊಲೀಸರು

ಟ್ರಿಪಲ್ ರೈಡ್ ಮಾಡುತ್ತಿದ್ದ ಬೈಕ್ ಸವಾರರು ಪೊಲೀಸರನ್ನು ಕಂಡೊಡನೆ ತಪ್ಪಿಸಿಕೊಂಡು ಹೋದ ಘಟನೆ ಚಂಡೀಗಢದಲ್ಲಿ ನಡೆದಿದೆ. ಟ್ರಿಪಲ್ ರೈಡ್ ಮಾಡುತ್ತಿದ್ದ ಬೈಕ್ ಸವಾರರು ತಮ್ಮನ್ನು ತಡೆಯಲು ಬಂದ ಟ್ರಾಫಿಕ್ ಪೊಲೀಸರನ್ನು ಗೇಲಿ ಮಾಡಿ ಅಲ್ಲಿಂದ ಪರಾರಿಯಾದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗೇಲಿ ಮಾಡಿ ತಪ್ಪಿಸಿಕೊಂಡು ಹೋದವನಿಗೆ ದಂಡ ಜಡಿದ ಪೊಲೀಸರು

ಕಾರ್ಯಪ್ರವೃತ್ತರಾದ ಚಂಡೀಗಢ ಪೊಲೀಸರು ಈ ಯಮಹಾ ಆರ್‌ಎಕ್ಸ್ ಟೂ-ಸ್ಟ್ರೋಕ್ ಬೈಕಿನ ಮಾಲೀಕರನ್ನು ಪತ್ತೆ ಹಚ್ಚಿ ರೂ.14,500 ದಂಡ ವಿಧಿಸಿದ್ದಾರೆ. ವಿವಿಧ ನಿಯಮಗಳ ಉಲ್ಲಂಘನೆಗಾಗಿ ಈ ಪ್ರಮಾಣದ ದಂಡ ವಿಧಿಸಲಾಗಿದೆ.

ಗೇಲಿ ಮಾಡಿ ತಪ್ಪಿಸಿಕೊಂಡು ಹೋದವನಿಗೆ ದಂಡ ಜಡಿದ ಪೊಲೀಸರು

ಸಂಚಾರಿ ಪೊಲೀಸರು ಎಂದಿನಂತೆ ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾಗ ಟ್ರಿಪಲ್ ರೈಡ್ ಹೋಗುತ್ತಿದ್ದ ಬೈಕ್‌ ಸವಾರರನ್ನು ನೋಡಿದ್ದಾರೆ. ತಕ್ಷಣವೇ ಬೈಕ್ ಅನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ, ಬೈಕ್ ನಿಲ್ಲಿಸುವ ಬದಲು ಬೈಕ್‌ ಸವಾರರು ಪೊಲೀಸರನ್ನು ಗೇಲಿ ಮಾಡಿ, ಕೈ ಬೀಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಗೇಲಿ ಮಾಡಿ ತಪ್ಪಿಸಿಕೊಂಡು ಹೋದವನಿಗೆ ದಂಡ ಜಡಿದ ಪೊಲೀಸರು

ಈ ಬೈಕಿನ ಮಾಲೀಕರಾದ ಸೆಕ್ಟರ್ 25, ಚಂಡೀಗಢದ ನಿವಾಸಿ ವಿಕ್ರಾಂತ್ ಅವರನ್ನು ಘಟನೆ ನಡೆದ 48 ಗಂಟೆಗಳ ಒಳಗೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಏಳು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ಸಂಬಂಧ ಪಟ್ಟಂತೆ ಅವರಿಗೆ ದಂಡ ವಿಧಿಸಲಾಗಿದೆ.

ಗೇಲಿ ಮಾಡಿ ತಪ್ಪಿಸಿಕೊಂಡು ಹೋದವನಿಗೆ ದಂಡ ಜಡಿದ ಪೊಲೀಸರು

ಟ್ರಿಪಲ್ ರೈಡಿಂಗ್, ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದು, ಟ್ರಾಫಿಕ್ ಸಿಗ್ನಲ್‍‍ಗೆ ಅಗೌರವ ನೀಡುವುದು, ರಾಂಗ್ ಸೈಡಿನಲ್ಲಿ ವಾಹನ ಚಲಾಯಿಸುವುದು, ಸೈಕಲ್ ಟ್ರಾಕ್‍‍ನಲ್ಲಿ ಚಲಿಸುವುದು, ಅಪಾಯಕಾರಿ ಚಾಲನೆ, ನಿರ್ಲಕ್ಷ್ಯದಿಂದ ಚಾಲನೆ ಮಾಡಿ ಇತರರ ಜೀವಕ್ಕೆ ಅಪಾಯ ತರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡ ವಿಧಿಸಲಾಗಿದೆ.

ಗೇಲಿ ಮಾಡಿ ತಪ್ಪಿಸಿಕೊಂಡು ಹೋದವನಿಗೆ ದಂಡ ಜಡಿದ ಪೊಲೀಸರು

ಆದರೆ, ಪೊಲೀಸರು ಹಿಂಬದಿ ಸವಾರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಮೋಟಾರು ವಾಹನ ಕಾಯ್ದೆಯ ಪ್ರಕಾರ ಪೊಲೀಸರು ವಾಹನವನ್ನು ಚಲಾಯಿಸದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ.

ಗೇಲಿ ಮಾಡಿ ತಪ್ಪಿಸಿಕೊಂಡು ಹೋದವನಿಗೆ ದಂಡ ಜಡಿದ ಪೊಲೀಸರು

ಪೊಲೀಸರನ್ನು ಗೇಲಿ ಮಾಡಿ ಅಲ್ಲಿಂದ ಪರಾರಿಯಾದ ಘಟನೆಯನ್ನು ಅಲ್ಲಿದ್ದವರು ತಮ್ಮ ಮೊಬೈಲ್‍‍ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಇದರಿಂದಾಗಿ ಬೈಕಿನ ರಿಜಿಸ್ಟ್ರೇಷನ್ ನಂಬರ್ ಕ್ಯಾಮರಾದಲ್ಲಿ ಸೆರೆಯಾಗಿ, ಬೈಕಿನ ಮಾಲೀಕನನ್ನು ಪತ್ತೆ ಹಚ್ಚಲು ಅನುಕೂಲವಾಗಿದೆ.

ಗೇಲಿ ಮಾಡಿ ತಪ್ಪಿಸಿಕೊಂಡು ಹೋದವನಿಗೆ ದಂಡ ಜಡಿದ ಪೊಲೀಸರು

ಮೊದಲಿಗೆ ಈ ಬೈಕಿನ ಮಾಲೀಕನನ್ನು ಸೆಕ್ಟರ್ 29ರ ನಿವಾಸಿಯೆಂದು ಪತ್ತೆ ಹಚ್ಚಲಾಯಿತು. ನಂತರ ಆತನು ಈ ಬೈಕ್ ಅನ್ನು ಸೆಕ್ಟರ್ 25ರ ನಿವಾಸಿ ವಿಕ್ರಾಂತ್ ಎಂಬುವವರಿಗೆ ಈ ಬೈಕ್ ಅನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.

ಗೇಲಿ ಮಾಡಿ ತಪ್ಪಿಸಿಕೊಂಡು ಹೋದವನಿಗೆ ದಂಡ ಜಡಿದ ಪೊಲೀಸರು

ವಿಕ್ರಾಂತ್‍‍ನನ್ನು ಪತ್ತೆ ಹಚ್ಚಿದ ಪೊಲೀಸರು, ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯ ನೆರವಿನಿಂದ ಆರೋಪಿಯನ್ನು ಗುರುತಿಸಿದ್ದಾರೆ. ನಂತರ ಆತನಿಗೆ ದಂಡದ ಚಲನ್ ನೀಡಿದ್ದಾರೆ. ದಂಡದ ಚಲನ್ ನೀಡುವ ಸಂದರ್ಭದಲ್ಲಿ ಪೊಲೀಸರು ವಿಕ್ರಾಂತ್‍‍ನನ್ನು ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಬೈಕಿನ ದಾಖಲೆಗಳನ್ನು ನೀಡುವಂತೆ ಕೇಳಿದ್ದಾರೆ.

ಗೇಲಿ ಮಾಡಿ ತಪ್ಪಿಸಿಕೊಂಡು ಹೋದವನಿಗೆ ದಂಡ ಜಡಿದ ಪೊಲೀಸರು

ವಿಕ್ರಾಂತ್ ಡೈವಿಂಗ್ ಲೈಸೆನ್ಸ್ ತೋರಿಸದ ಕಾರಣಕ್ಕೆ ಹೆಚ್ಚುವರಿಯಾಗಿ ರೂ.5,000 ದಂಡ ವಿಧಿಸಿದ್ದಾರೆ. ಪೊಲೀಸರ ಪ್ರಕಾರ ವಿಕ್ರಾಂತ್ ದಂಡ ವಿಧಿಸುವವರೆಗೂ ಈ ಬೈಕ್ ಅನ್ನು ಬೇರೆಯವರಿಗೆ ಮಾರಾಟ ಮಾಡುವಂತಿಲ್ಲ. ಈ ವೀಡಿಯೊ ಇಂಟರ್‍‍ನೆಟ್‍‍ನಲ್ಲಿ ವೈರಲ್ ಆಗಿದ್ದು, ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

More from DriveSpark

Article Published On: Friday, November 29, 2019, 13:35 [IST]
English summary
Triple riders mock at police fined rs 14500 - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+