ಭಾವಿ ಪತಿಯಿಂದ ನಟಿ ತ್ರಿಷಾಗೆ ಹೈಟೆಕ್ ಗಿಫ್ಟ್
ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ನಿಶ್ಚಿತಾರ್ಥ ಸುದ್ದಿ ದಕ್ಷಿಣ ಭಾರತದಲ್ಲಿ ಮಿಂಚಿನ ವೇಗದಲ್ಲಿ ಪಸರಿಸಿದ್ದು, ಪಡ್ಡೆ ಹುಡುಗರ ದಿಲ್‌ಗೆ ಆಘಾತ ನೀಡಿದೆ. ಹಾಗಿರಬೇಕೆಂದರೆ ಬಾಯ್ ಫ್ರೆಂಡ್ ವರುಣ್ ಅವರಿಂದ ದುಬಾರಿ ಉಡುಗೊರೆಯೊಂದು ತ್ರಿಷಾ ಅವರನ್ನು ತಲುಪಲಿದೆ.
ಈಗಾಗಲೇ ತಮ್ಮ ನಿಶ್ಚಿತಾರ್ಥ ಜನವರಿ 23ರಂದು ಉದ್ಯಮಿ ವರುಣ್ ಅವರೊಂದಿಗೆ ನಡೆಯಲಿದೆ ಎಂಬುದನ್ನು ಖಚಿತಪಡಿಸಿರುವ ತ್ರಿಷಾ, ಹಸಮಣೆ ಏರಲು ಸಜ್ಜಾಗಿದ್ದಾರೆ. ಇದರಂತೆ ಭಾವಿ ಪತಿ ವರುಣ್ ಅವರು ಏಳು ಕೋಟಿ ರುಪಾಯಿಗಳಷ್ಟು ಬೆಲೆಬಾಳುವ ಜಗತ್ತಿನಲ್ಲೇ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್ ಫಾಟಂ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ದಕ್ಷಿಣ ಭಾರತದಲ್ಲಿ ನಂ.1 ನಟಿ ಪಟ್ಟವನ್ನು ಹಲವು ವರ್ಷಗಳ ಕಾಲ ಉಳಿಸಿಕೊಂಡಿರುವ ನಟಿ ತ್ರಿಷಾ ಮದುವೆ ಸಮಾರಂಭಕ್ಕೆ ಕುಟುಂಬ ಹಾಗೂ ಆಪ್ತ ಬಂಧುಗಳಿಗಷ್ಟೇ ಆಮಂತ್ರಣ ಕೊಡಲಾಗಿದೆ. ಅಲ್ಲದೆ ವಿವಾಹ ಸಮಾರಂಭವು ಪ್ರಸಕ್ತ ಸಾಲಿನಲ್ಲೇ ನಡೆಯಲಿದ್ದು, ತದಾ ಬಳಿಕವೂ ಸಿನೆಮಾದಲ್ಲಿ ಮುಂದುವರಿಯಲಿದ್ದಾರೆ ಎಂಬುದು ತಿಳಿದು ಬಂದಿದೆ.

ತ್ರಿಷಾ ಅವರಿಗೆ ಬಾಯ್ ಫ್ರೆಂಡ್ ನೀಡಿರುವ ಉಡುಗೊರೆ ರೋಲ್ಸ್ ರಾಯ್ಸ್ ಫಾಟಂ ಕಾರು ಎಕ್ಸ್ ಶೋ ರೂಂ ಬೆಲೆ 4.38 ಕೋಟಿ ರು.ಗಳಿಂದ 4.60 ಕೋಟಿ ರು.ಗಳಷ್ಟು ದುಬಾರಿಯಾಗಿದೆ. ಇದು ಕಂಪ್ಲೀಟ್ ಬಿಲ್ಟ್ ಯುನಿಟ್ ಮೂಲಕ ಭಾರತವನ್ನು ತುಲುಪುವುದರಿಂದ ತುಂಬಾನೇ ದುಬಾರಿಯೆನಿಸಿಕೊಂಡಿದೆ.

ಜಗತ್ತಿನ ಅತ್ಯಂತ ಸುಂದರ ಕಾರುಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್, ಅತ್ಯುನ್ನತ್ತ ಇತಿಹಾಸವನ್ನೇ ಹೊಂದಿದೆ. 1906ನೇ ಇಸವಿಯಲ್ಲಿ ಸ್ಥಾಪಿತವಾಗಿರುವ ಈ ಇಂಗ್ಲಿಂಷ್ ಸಂಸ್ಥೆಯ ಕೇಂದ್ರ ಕಚೇರಿ ಡೆರ್ಬಿಯಲ್ಲಿದೆ.

ಚಾರ್ಲ್ಸ್ ಸ್ಟಿವರ್ಟ್ ರೋಲ್ಸ್ ಹಾಗೂ ಸರ್ ಫ್ರೆಡ್ರಿಕ್ ಹೆನ್ರಿ ರಾಯ್ಸ್ ಪ್ರಖ್ಯಾತ ರೋಲ್ಸ್ ರಾಯ್ಸ್ ಸಂಸ್ಥೆಯ ಸೂತ್ರಧಾರಿಯಾಗಿದ್ದಾರೆ. ಈಗಲೂ ರೋಲ್ಸ್ ರಾಯ್ಸ್ ವಿಂಟೇಜ್ ಕಾರುಗಳಿಗೆ ವಿಶ್ವದ್ಯಾಂತ ಭಾರಿ ಬೇಡಿಕೆಯಿದೆ.

ಇದರೊಂದಿಗೆ ದೇಶದಲ್ಲಿ ರೋಲ್ಸ್ ರಾಯ್ಸ್ ಹೊಂದಿರುವ ಕೆಲವೇ ಕೆಲವು ಸೆಲೆಬ್ರಿಟಿಗಳ ಎಲೈಟ್ ಕ್ಲಬ್‌ಗೆ ಕ್ಯೂಟ್ ಬೆಡಗಿ ತ್ರಿಷಾ ಕೂಡಾ ಸೇರಿಕೊಳ್ಳಲಿದ್ದಾರೆ.

ಇತರ ಐಷಾರಾಮಿ ಕಾರುಗಳಿಗೆ ಹೋಲಿಸಿದರೆ ರೋಲ್ಸ್ ರಾಯ್ಸ್ ತನ್ನದೇ ಆದ ವಿಶಿಷ್ಟ ವಿನ್ಯಾಸ ಕಾಪಾಡಿಕೊಂಡಿದೆ. ಸೆಡಾನ್ ಕಾರಿನ ಶೈಲಿಯನ್ನು ಹೊಂದಿದ್ದರೂ ಮುಂಭಾಗದಲ್ಲಿರುವ ಗ್ರಿಲ್ ಹಾಗೂ ಹುಡ್ ಓರ್ನಮೆಂಟ್ ಇತರ ಕಾರುಗಳಿಗಿಂತ ಭಿನ್ನವಾಗಿಸುತ್ತದೆ.

ಅಂದ ಹಾಗೆ ರೋಲ್ಸ್ ರಾಯ್ಸ್ ಫಾಟಂ 6749 ಸಿಸಿ, 12 ಸಿಲಿಂಡರ್, ವಿ12 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದ್ದು, 453 ಅಶ್ವಶಕ್ತಿ (720 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಪಡೆದುಕೊಂಡಿದೆ.

ಆಕರ್ಷಕ ಮೈಬಣ್ಣವನ್ನು ಹೊಂದಿರುವ ರೋಲ್ಸ್ ರಾಯ್ಸ್ ಫಾಟಂ ಕಾರಿನ ಒಳಗೂ ಅತ್ಯಾಧುನಿಕ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ. ಇದರಲ್ಲಿ ಸುರಕ್ಷತೆಗೂ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು, ಏರ್ ಬ್ಯಾಕ್, ಸೆಂಟ್ರಲ್ ಲಾಕಿಂಗ್, ಚೈಲ್ಡ್ ಸೇಫ್ಟಿ ಲಾಕ್, ಎಬಿಎಸ್, ಇಬಿಡಿ ಜೊತೆಗೆ ಇಎಸ್‌ಪಿ ಸೌಲಭ್ಯವೂ ಇರುತ್ತದೆ. ಇನ್ನು ಗರಿಷ್ಠ ಗುಣಮಟ್ಟದ ಮಾಹಿತಿ ಮನರಂಜನಾ ಹಾಗೂ ನೇವಿಗೇಷನ್ ಸಿಸ್ಟಂ ನಿಮ್ಮ ಪಯಣವನ್ನು ಹೆಚ್ಚು ಆಕರ್ಷಕವಾಗಿಸಲಿದೆ.

ಒಟ್ಟಿನಲ್ಲಿ ಕಳೆದ ಹಲವಾರು ವರ್ಷಗಳಿಂದ ದಕ್ಷಿಣ ಸಿನಿಮಾ ರಂಗದಲ್ಲಿ ನೆಚ್ಚಿನ ತಾರೆ ಎನಿಸಿಕೊಂಡಿರುವ ತ್ರಿಷಾ ಅವರಿಗೆ ನಾವು ಕೂಡಾ ಈ ಸಂದರ್ಭದಲ್ಲಿ ಶುಭ ಹಾರೈಸೋಣವೇ...ಹ್ಯಾಪಿ ಮ್ಯಾರಿಡ್ ಲೈಫ್ ತ್ರಿಷಾ!


Click it and Unblock the Notifications








