Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಂಡ ವಿಧಿಸುವ ಬದಲು ಬೇರೆ ಕಾರಣಕ್ಕೆ ಸೂಪರ್‌ಬೈಕ್ ತಡೆದ ಪೊಲೀಸರು
ಪೊಲೀಸರು ವಾಹನ ಸವಾರರನ್ನು ತಡೆದು ವಾಹನಗಳನ್ನು ತಪಾಸಣೆ ಮಾಡುವುದು ಭಾರತದ ರಸ್ತೆಗಳಲ್ಲಿ ಸಾಮಾನ್ಯ ದೃಶ್ಯವಾಗಿದೆ. ಪೊಲೀಸರು ದುಬಾರಿ ಬೆಲೆಯ ಸೂಪರ್‌ಬೈಕ್‌ಗಳನ್ನು ಹೆಚ್ಚು ತಪಾಸಣೆಗೆ ಒಳಪಡಿಸುತ್ತಾರೆ.

ಸೂಪರ್ ಬೈಕ್‌ಗಳ ನೋಟ ಹಾಗೂ ಅವುಗಳ ಸೈಲೆನ್ಸರ್ ನಿಂದ ಬರುವ ಶಬ್ದದ ಕಾರಣಕ್ಕೆ ಪೊಲೀಸರು ಆ ಬೈಕುಗಳನ್ನು ತಡೆದು ತಪಾಸಣೆ ನಡೆಸುತ್ತಾರೆ. ಪೊಲೀಸರು ಈ ಹಿಂದೆ ಹಲವಾರು ಕಾರಣಗಳಿಗಾಗಿ ಸೂಪರ್ ಬೈಕ್‌ಗಳ ಮಾಲೀಕರಿಗೆ ದಂಡ ವಿಧಿಸಿದ್ದಾರೆ. ಕೆಲವು ಬಾರಿ ಬೈಕ್ ಸವಾರರ ನಡುವೆ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯು ಸಹ ನಡೆದಿದೆ.

ಆದರೆ ಕೆಲ ಪೊಲೀಸರು ಇದಕ್ಕೆ ತದ್ವಿರುದ್ಧ. ಕೆಲವು ಪೊಲೀಸರು ಸೂಪರ್‌ಬೈಕ್‌ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಹಾಗೂ ಆ ಸೂಪರ್ ಬೈಕುಗಳೊಂದಿಗೆ ಫೋಟೋ ತೆಗೆದುಕೊಳ್ಳಲು ಬಯಸುತ್ತಾರೆ. ಈ ಕಾರಣಕ್ಕಾಗಿಯೂ ಸೂಪರ್ ಬೈಕ್‌ಗಳನ್ನು ನಿಲ್ಲಿಸಲಾಗುತ್ತದೆ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಇತ್ತೀಚೆಗೆ ಇದೇ ರೀತಿಯ ಘಟನೆಯೊಂದು ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊವನ್ನು ಐ ಆಮ್ ಆಟೋಮೋಟಿವ್ ಕ್ರೇಜರ್ ಎಂಬ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಕರ್ತವ್ಯದಲ್ಲಿರುವ ಕೆಲವು ಪೊಲೀಸರು ಸೂಪರ್ ಬೈಕೊಂದನ್ನು ತಡೆದು ಅದರ ವಿವರಗಳನ್ನು ಪಡೆಯುತ್ತಿರುವುದನ್ನು ಕಾಣಬಹುದು.

ಆ ಬೈಕಿನ ಮಾಲೀಕರು, ಈ ಬೈಕ್ ಟ್ರಯಂಫ್ ಟೈಗರ್ 800 ಅಡ್ವೆಂಚರ್ ಟೂರರ್ ಸೂಪರ್ ಬೈಕ್ ಎಂದು ಹೇಳುತ್ತಾರೆ. ಈ ಬೈಕಿನಲ್ಲಿ ಮೂರು ಸಿಲಿಂಡರಿನ ಎಂಜಿನ್ ಅಳವಡಿಸಲಾಗಿದೆ ಎಂದೂ ಸಹ ಹೇಳುತ್ತಾರೆ. ಒಬ್ಬ ಪೊಲೀಸ್ ಬೈಕ್ ಬಳಿ ಬಂದು ಬೈಕಿನ ಇನ್ನಿತರ ವಿವರಗಳನ್ನು ಪಡೆಯುತ್ತಾರೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಬೈಕ್ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದ ಅವರು ಈ ಬೈಕ್‌ನಲ್ಲಿ ಸವಾರಿ ಮಾಡುವುದು ಹೇಗೆ ಎಂದೂ ಸಹ ಪ್ರಶ್ನಿಸುತ್ತಾರೆ. ಸಾಮಾನ್ಯ ಬೈಕ್‌ಗಳಿಗೆ ಹೋಲಿಸಿದರೆ ಟ್ರಯಂಫ್ ಟೈಗರ್ 800 ಬೈಕ್‌ನ ಸೀಟ್ ಎತ್ತರವಾಗಿದೆ. ಇತರ ಬೈಕ್‌ಗಳಿಗೆ ಹೋಲಿಸಿದರೆ ಟ್ರಯಂಫ್ ಟೈಗರ್ 800 ಬೈಕಿನ ಸವಾರಿ ಕೂಡ ವಿಭಿನ್ನವಾಗಿದೆ.

ಎತ್ತರವಿರುವ ಈ ಬೈಕ್ ಮೇಲೆ ಕೂರುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಬೈಕ್ ಸವಾರ ಬೈಕಿನ ಸೈಡ್ ಸ್ಟ್ಯಾಂಡ್ ಹಾಕಿ ಫುಟ್‌ರೆಸ್ಟ್ ಮೂಲಕ ಸೀಟಿನ ಮೇಲೆ ಕೂರಲು ಪೊಲೀಸರಿಗೆ ನೆರವಾಗುತ್ತಾರೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಟ್ರಯಂಫ್ ಟೈಗರ್ 800ನಂತಹ ದೈತ್ಯ ಅಡ್ವೆಂಚರ್ ಟೂರರ್ ಬೈಕ್ ಮೇಲೆ ಕೂರಲು ಇದಕ್ಕಿಂತ ಸೂಕ್ತ ಮಾರ್ಗ ಮತ್ತೊಂದಿಲ್ಲ. ಆದರೆ ಇದರಿಂದ ಬೈಕಿನ ಸೈಡ್ ಸ್ಟ್ಯಾಂಡ್ ಹಾಳಾಗುವುದಿಲ್ಲವೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ಇದೇ ಪ್ರಶ್ನೆ ಬೈಕ್ ಏರಿದ ಪೊಲೀಸರಿಗೂ ಎದುರಾಗಿದೆ.

ಬೈಕಿನ ಸೈಡ್ ಸ್ಟ್ಯಾಂಡ್ ಬಲಿಷ್ಟವಾಗಿರುವುದರಿಂದ ಎಷ್ಟು ತೂಕವನ್ನು ಬೇಕಾದರೂ ತಡೆದುಕೊಳ್ಳುತ್ತದೆ ಎಂದು ಬೈಕ್ ಸವಾರ ವಿವರಿಸಿದ್ದಾರೆ. ಸಾಮಾನ್ಯವಾಗಿ ಕೆಲವು ಪೊಲೀಸರು ಈ ರೀತಿಯ ಬೈಕ್‌ಗಳನ್ನು ನೋಡಿದರೆ ಅವುಗಳನ್ನು ತುಸು ದೂರ ಚಾಲನೆ ಮಾಡುತ್ತಾರೆ. ಆದರೆ ಈ ಪೊಲೀಸ್ ಬೈಕ್ ಚಾಲನೆ ಮಾಡಿದರಾ ಎಂಬುದು ದೃಢಪಟ್ಟಿಲ್ಲ.