ಕೆಲವರ ಹಣೆಬರಹವೇ ಅಷ್ಟೇ ನೋಡಿ... ಒಳ್ಳೆಯದನ್ನು ಬಯಸಿದವನಿಗೆ 2 ಲಕ್ಷ ರೂ. ನಷ್ಟ!
ಭಾರತೀಯ ರಸ್ತೆಗಳಲ್ಲಿ ಬಿಡಾಡಿ ದನಗಳು, ನಾಯಿಗಳು ಇತರ ಪ್ರಾಣಿ, ಪಕ್ಷಿಗಳು ಓಡಾಡುತ್ತವೆ. ಇವುಗಳನ್ನು ಅಪಘಾತದಿಂದ ತಪ್ಪಿಸಲು ಪ್ರಯತ್ನಿಸಿದವರೇ ಜೀವ ಕಳೆದುಕೊಂಡ ಹಲವು ಉದಾಹರಣೆಗಳಿವೆ. ಆದರೆ ಇತ್ತೀಚೆಗೆ ಕೇರಳದ ಮರ್ಸಿಡಿಸ್ ಬೆಂಝ್ ಚಾಲಕ ಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತವನ್ನು ತಪ್ಪಿಸಿದನಾದರೂ 2 ಲಕ್ಷ ರೂ.ಗಳ ನಷ್ಟವನ್ನು ಅನುಭವಿಸಿದ್ದಾನೆ.
ಕೇರಳದ ಪಥನಂತಿಟ್ಟ ಜಿಲ್ಲೆಯ ಕುಟ್ಟೂರಿನಲ್ಲಿ ಈ ಘಟನೆ ನಡೆದಿದ್ದು, ಪಾರಿವಳ ಮರಿಯನ್ನು ಅಪಘಾತದಿಂದ ತಪ್ಪಿಸಲು ಪ್ರಯತ್ನಿಸಿದ ವ್ಯಕ್ತಿಯ ಕಾರು ಅಪಘಾತಕ್ಕೆ ಸಿಲುಕಿದೆ. ಕೇರಳದ ಕಾಸರಗೋಡು ಜಿಲ್ಲೆಯವರಾದ ರಫೀಕ್ ಎಂಬುವರು ತಮ್ಮ ಮರ್ಸಿಡಿಸ್ ಬೆಂಝ್ ಐಷಾರಾಮಿ ಸೆಡಾನ್ ಕಾರಿನಲ್ಲಿ ಇಲ್ಲಿನ ಎಂಸಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ 10.45ರ ಸುಮಾರಿಗೆ ಕಾರು ಕುಟ್ಟೂರು ಹೈಯರ್ ಸೆಕೆಂಡರಿ ಶಾಲೆಯ ಮುಂದೆ ಹಾದು ಹೋಗುತ್ತಿತ್ತು. ಈ ವೇಳೆ ಚಾಲಕ ರಸ್ತೆಯಲ್ಲಿ ಪಾರಿವಾಳ ಮರಿಯನ್ನು ನೋಡಿದ್ದು, ಅದು ರಸ್ತೆಯಲ್ಲಿ ಅಡ್ಡಲಾಗಿ ನಡೆದುಕೊಂಡು ಹೋಗುತ್ತಿತ್ತು. ಇದನ್ನು ಗುರುತಿಸಿ ಥಟ್ಟನೆ ಬ್ರೇಕ್ ಹಾಕಿದ್ದಾರೆ, ಆದರೆ ಹಿಂದೆಯೇ ಬರುತ್ತಿದ್ದ ಪಿಕಪ್ ಟ್ರಕ್' ಮರ್ಸಿಡಿಸ್ ಬೆಂಝ್ ಕಾರಿಗೆ ಡಿಕ್ಕಿ ಹೊಡೆದಿದೆ.

ಅಪಘಾತವು ಎರಡೂ ವಾಹನಗಳಿಗೆ ಹೆಚ್ಚಿನ ಹಾನಿಯನ್ನು ಮಾಡಿದ್ದು, ಸ್ಥಳೀಯರು ಜಮಾಯಿಸಿ ಮೆಕ್ಯಾನಿಕ್ ಅನ್ನು ಕರೆಸಿ ಎರಡೂ ವಾಹನಗಳನ್ನು ಬೇರ್ಪಡಿಸಲು ಪ್ರಯತ್ನಿಸಿದರು. ಆದರೆ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿ ಕೊನೆಗೆ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು, ಹೆವಿ - ಡ್ಯೂಟಿ ಉಪಕರಣಗಳ ಸಹಾಯದಿಂದ ಪಿಕಪ್ ಟ್ರಕ್‌ನ ಬಂಪರ್ ಅನ್ನು ಕತ್ತರಿಸಿ ವಾಹನಗಳನ್ನು ಬೇರ್ಪಡಿಸಿದ್ದಾರೆ.
ಅಪಘಾತಕ್ಕೆ ಮುನ್ನ ಕಾರು ಚಾಲಕ ತುಂಬಾ ವೇಗವಾಗಿ ಚಾಲನೆ ಮಾಡುತ್ತಿದ್ದನೇ ಅಥವಾ ಪಿಕಪ್ ಚಾಲಕನದ್ದೇ ತಪ್ಪಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಮರ್ಸಿಡಿಸ್ ಬೆಂಝ್ ಚಾಲಕ ವೇಗವಾಗಿ ಬಂದು ಪಾರಿವಾಳದ ಮರಿಯನ್ನು ನೋಡಿದ ನಂತರ ಹಠಾತ್ ಬ್ರೇಕ್ ಹಾಕಿದ್ದರೇ ಅದು ಕಾರು ಚಾಲಕನದ್ದೇ ತಪ್ಪು, ಏಕೆಂದರೆ ಟ್ರಕ್‌ಗಳು ಕಾರುಗಳಂತಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.
ಹಿಂಭಾಗದಿಂದ ಬರುವ ಪಿಕಪ್ ಟ್ರಕ್‌ಗಳು ಕಾರುಗಳಂತೆ ಸಮಯಕ್ಕೆ ನಿಲ್ಲಲು ಸುರಕ್ಷತಾ ಸಾಧನಗಳು ಮತ್ತು ತಾಂತ್ರಿಕವಾಗಿ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಪಿಕಪ್ ಟ್ರಕ್ ಲೋಡ್ ಅನ್ನು ತುಂಬಿಕೊಂಡು ಚಲಿಸುವುದರಿಂದ ಭಾರವಾದ ವಾಹನಗಳು ನಿಧಾನಗೊಳಿಸಲು ಅಥವಾ ಸಮಯಕ್ಕೆ ನಿಲ್ಲಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ ಹೆದ್ದಾರಿಗಳಲ್ಲಿ ಟ್ರಕ್‌ಗಳ ನಡುವೆ ಅಂತರವಿರಲಿ ಎಂದು ಹೆಳಲಾಗುತ್ತದೆ. ಅವುಗಳನ್ನು ನಿಯಂತ್ರಣಕ್ಕೆ ತರುವುದು ಅಷ್ಟು ಸುಲಭವಾಗಿರುವುದಿಲ್ಲ. ಹಾಗಾಗಿಯೇ ಅಪಘಾತವಾದ್ರೇ ತೀವ್ರ ಹಾನಿಯಾಗುತ್ತದೆ, ಈ ಘಟನೆಯಲ್ಲೂ ಅದು ಸಾಭೀತಾಗಿದೆ. ಬ್ರೇಕ್ ಹಾಕಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಟ್ರಕ್‌ನಿಂದ ಕಾರನ್ನು ಬೇರ್ಪಡಿಸಲು ಹರಸಾಹಸ ಮಾಡಿದ್ದಾರೆ.
ತೀವ್ರ ಹಾನಿ: ಎರಡೂ ವಾಹನಗಳು ತೀವ್ರ ಹಾನಿಗೊಳಗಾಗಿವೆ. ಆದರೇ ಇಲ್ಲಿ ಕಾರನ್ನು ದುರಸ್ತಿ ಮಾಡುವುದು ಹೆಚ್ಚು ದುಬಾರಿಯಾಗಲಿದೆ. ಮರ್ಸಿಡಿಸ್ ಬೆಂಝ್ ನಂತಹ ಜರ್ಮನ್ ಕಾರುಗಳನ್ನು ಅಪಘಾತದ ಬಳಿಕ ದುರಸ್ತಿ ಮಾಡುವುದು ಅತ್ಯಂತ ದುಬಾರಿಯಾಗುತ್ತದೆ. ಅಪಘಾತದಲ್ಲಿ ಹಾನಿಗೊಳಗಾದ ಕಾರಿನ ಯಾವುದೇ ಚಿತ್ರಗಳನ್ನು ವರದಿಯಲ್ಲಿ ಹಂಚಿಕೊಳ್ಳಲಾಗಿಲ್ಲ.
ಎರಡೂ ವಾಹನಗಳಲ್ಲಿದ್ದ ಚಾಲಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರನ್ನು ರಿಪೇರಿ ಮಾಡಲು ಮಾಲೀಕರು ಕನಿಷ್ಠ 2 ಲಕ್ಷ ಖರ್ಚು ಮಾಡಬೇಕಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಭಾರತೀಯ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ನಿಮ್ಮ ಗಮನ ಒಂದು ಸೆಕೆಂಡ್ ಬೇರೆಡೆ ಹೋದರೆ, ಅನಿರೀಕ್ಷಿತ ಅಪಘಾತಗಳಿಗೆ ಕಾರಣವಾಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








