ತಪ್ಪು ಯಾರದ್ದೂ ಅಲ್ಲ: ಯಮನಿಗೆ ರಜೆ ಅನಿಸುತ್ತೆ: ಪ್ರಯಾಣಿಕರು ಪಾರು, ಯಾವುದೀ ಕಾರು?

ಕಂಟೈನರ್ ಟ್ರಕ್ ಉರುಳಿ ಪಕ್ಕದಲ್ಲೇ ಹೋಗುತ್ತಿದ್ದ XUV700 ಎಸ್‌ಯುವಿ ಮೇಲೆ ಬಿದ್ದ ಭೀಕರ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಸಂಪೂರ್ಣ ಲೋಡ್ ಮಾಡಲಾದ ಕಂಟೈನರ್ ಟ್ರಕ್, ಮಹೀಂದ್ರಾ XUV700 ಮೇಲೆ ಉರುಳಿದ್ದರೂ ಪವಾಡದಂತೆ ವಾಹನದಲ್ಲಿದ್ದವರು ಹಾನಿಗೊಳಗಾಗದೆ ಪ್ರಾಣಾಪಯಾದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ವರದಿಗಳ ಪ್ರಕಾರ, ಕಂಟೈನರ್ ಟ್ರಕ್ ಉದ್ದೇಶಪೂರ್ವಕವಾಗಿ ಲೋಡ್ ಅನ್ನು ಸಾಗಿಸುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಟ್ರಕ್ ಕೆಟ್ಟು ನಿಂತಿದ್ದರಿಂದ ರಸ್ತೆಬದಿಯಲ್ಲಿ ರಿಪೇರಿ ಮಾಡಲಾಗುತ್ತಿತ್ತು. ಹೈಡ್ರಾಲಿಕ್ ಜಾಕ್ ಅನ್ನು ಇಟ್ಟು ತುಸು ಮೇಲಕ್ಕೆ ಟ್ರಕ್ ಅನ್ನು ಎತ್ತಲಾಗಿತ್ತು ಎನ್ನಲಾಗಿದೆ. ಇದೇ ವೇಳೆ ಹೈಡ್ರಾಲಿಕ್ ಜಾಕ್ ಕೈಕೊಟ್ಟಿದ್ದು ಪಕ್ಕದಲ್ಲಿ ಹಾದುಹೋಗುತ್ತಿದ್ದ ಮಹೀಂದ್ರಾ XUV700 ಮೇಲೆ ಟ್ರಕ್ ಕಂಟೈನರ್ ಉರುಳಿದೆ.

truck-container-fell-on-mahindra-xuv-700

ಕಾರು ಯಾವಮಟ್ಟದಲ್ಲಿ ನಜ್ಜುಗುಜ್ಜಾಗಿದೆಯೆಂದು ಮೇಲೆ ನೀಡಲಾದ ಚಿತ್ರಗಳನ್ನು ನೋಡಿದ್ರೆ ನಿಮಗೆ ತಿಳಿಯುತ್ತದೆ. ಆದ್ರೂ ಕಾರಿನಲ್ಲಿದ್ದವರೆಲ್ಲ ಪವಾಡವೆಂಬಂತೆ ಪಾರಾಗಿದ್ದಾರೆ. ನಮಗಿರುವ ಮಾಹಿತಿಯ ಪ್ರಕಾರ ಯಾವುದೇ ಜೀವ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ. ಕಾರು ಮಾತ್ರ ಸಂಪೂರ್ಣ ಹಾನಿಯಾಗಿದ್ದು, XUV700 ಪಿಲ್ಲರ್‌ಗಳು ಸ್ವಲ್ಪ ಮಟ್ಟಕ್ಕೆ ಕುಸಿದು ಟ್ರಕ್‌ನ ತೂಕವನ್ನು ತಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಅಪಘಾತದ ಸಮಯದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರ ವಿವರಗಳು ಲಭ್ಯವಾಗಿಲ್ಲ. ಕಾರಿನಲ್ಲಿದ್ದವರೆಲ್ಲರು ಅಗ್ನಿಪರೀಕ್ಷೆಯಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ. ಒಂದಂಥೂ ಸತ್ಯ ಅಪಘಾತದಲ್ಲಿ ಕಾರಿನ ಗುಣಮಟ್ಟವೇ ಎಲ್ಲರನ್ನು ರಕ್ಷಿಸಿದೆ ಎಂದು ಹೇಳಬಹುದು. ಏಕೆಂದರೆ ಸದ್ಯ ಭಾರತದಲ್ಲಿ ಮಹೀಂದ್ರಾ XUV700 ಎಸ್‌ಯುವಿ 5-ಸ್ಟಾರ್ ರೇಟಿಂಗ್ ಪಡೆದ ಭಾರತದ ಕೆಲವೇ ಸುರಕ್ಷಿತ ಕಾರುಗಲ್ಲಿ ಒಂದಾಗಿದೆ.

truck-container-fell-on-mahindra-xuv-700

ಮಹೀಂದ್ರಾ XUV700 5-ಸ್ಟಾರ್ ರೇಟಿಂಗ್: ಕ್ರ್ಯಾಶ್ ಟೆಸ್ಟ್‌ಗಳಲ್ಲಿನ ಅಸಾಧಾರಣ ಕಾರ್ಯಕ್ಷಮತೆಯಿಂದಾಗಿ ಮಹೀಂದ್ರಾದ ಹೊಸ ಎಸ್‌ಯುವಿ ಗ್ಲೋಬಲ್ ಎನ್‌ಸಿಎಪಿಯಿಂದ 'ಸೇಫರ್ ಚಾಯ್ಸ್' ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮಹೀಂದ್ರಾ XUV700 ಸಂಪೂರ್ಣ 5 ರೇಟಿಂಗ್ ಗಳಿಸಿದ ಮಹೀಂದ್ರಾದ ಇತಿಹಾಸದಲ್ಲಿ ಎರಡನೇ ಕಾರು ಎನಿಸಿಕೊಂಡಿದೆ. ಮಹೀಂದ್ರಾ XUV700 ನ ಬಾಡಿಶೆಲ್ ಮತ್ತು ಫುಟ್‌ವೆಲ್ ಪ್ರದೇಶವನ್ನು ಸ್ಥಿರವೆಂದು ನಿರ್ಣಯಿಸಲಾಗಿದೆ.

ವಿವರವಾಗಿ ಹೇಳುವುದಾದ್ರೆ ಮಹೀಂದ್ರಾ XUV700 ಗೆ ಗ್ಲೋಬಲ್ NCAP ಪರೀಕ್ಷೆಯಲ್ಲಿ 17 ಅಂಕಗಳಲ್ಲಿ 16.03 ಅಂಕಗಳನ್ನು ಗಳಿಸಿದೆ. ಕ್ರಾಷ್ ಟೆಸ್ಟ್‌ನಲ್ಲಿ ಮುಂಭಾಗದ ಪ್ರಯಾಣಿಕರಿಗೆ ಸಂಭವನೀಯ ಗಾಯಗಳು ಕಡಿಮೆ ಎಂದು ಸೂಚಿಸಿದೆ. ಗಮನಾರ್ಹವಾಗಿ, ಮಕ್ಕಳ ಸುರಕ್ಷತಾ ಪರೀಕ್ಷೆಗಳಿಗೆ ಒಳಪಡಿಸಿದಾಗ, ಕಾರು ಯಾವುದೇ ಮೇಡ್-ಇನ್-ಇಂಡಿಯಾ ಕಾರಿಗೆ ಇದುವರೆಗೆ ನೀಡದ ಅತ್ಯಧಿಕ ಅಂಕಗಳನ್ನು ನೀಡಲಾಗಿದೆ.

truck-container-fell-on-mahindra-xuv-700

XUV700 ಪಡೆದುಕೊಂಡಿರುವ ಈ ಅಂಕಗಳು ಗ್ಲೋಬಲ್ NCAP ನ 'ಸೇಫರ್ ಕಾರ್ಸ್ ಫಾರ್ ಇಂಡಿಯಾ' ಅಭಿಯಾನದಲ್ಲಿ ಪರೀಕ್ಷಿಸಲಾದ ಎಲ್ಲಾ ಕಾರುಗಳಲ್ಲಿ ಅತ್ಯಧಿಕವಾಗಿದೆ. ಈ ಮೂಲಕ XUV700 ಪೂರ್ಣ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ. ಕುತೂಹಲಕಾರಿಯಾಗಿ ಇದು Scorpio-N XUV700 ಗಿಂತ ಹೆಚ್ಚಿನ ಸ್ಕೋರ್ ಅನ್ನು ಸಾಧಿಸಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಇಂತಹ ಅಪಘಾತಗಳನ್ನು ತಪ್ಪಿಸಬಹುದೇ? ತಪ್ಪಿಸಬಹುದು ಆದ್ರೆ, ಸಂಪೂರ್ಣವಾಗಿ ಅಲ್ಲ. ಟ್ರಕ್‌ಗಳಂತಹ ಭಾರೀ ವಾಹನಗಳ ಪಕ್ಕದಲ್ಲಿ ಚಾಲನೆ ಮಾಡುವಾಗ ಎಚ್ಚರಿಕೆಯನ್ನು ವಹಿಸಬೇಕು. ಓವರ್‌ಟೇಕಿಂಗ್ ಕುಶಲತೆಯನ್ನು ಹೊಂದಿರುಬೇಕು, ಈ ಬೃಹತ್ ವಾಹನಗಳ ಪಕ್ಕದಲ್ಲಿ ಅಥವಾ ಹಿಂದೆ ಪ್ರಯಾಣಿಸುವುದನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಇಂತಹ ಘಟನೆಗಳಿಂದಾಗುವ ಅಪಾಯಗಳನ್ನು ತಪ್ಪಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, August 28, 2023, 13:43 [IST]
English summary
Truck container fell on mahindra xuv 700
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+