CCTV Video: 15 ಜನರ ಬಲಿತೆಗೆದುಕೊಂಡ ಟ್ರಕ್; 1 ಹೋಟೆಲ್ 4 ವಾಹನಗಳನ್ನು ಪುಡಿಮಾಡಿದ ಕಂಟೈನರ್
ರಸ್ತೆಗಳಲ್ಲಿ ಎಚ್ಚರಿಕೆಯಿಂದ ಸಾಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಚಾಲಕನ ಒಂದು ಸೆಕೆಂಡ್‌ನ ತಪ್ಪಿನಿಂದ ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವಾಗ, ನಮ್ಮ ಪ್ರಾಣದ ಜೊತೆ ಇತರರ ಪ್ರಾಣದ ಜವಾಬ್ದಾರಿಯ ನಮ್ಮ ಮೇಲಿರುತ್ತದೆ ಎಂಬುದನ್ನು ಮರೆಯಬಾರದು.
ಇಲ್ಲೊಂದು ಕಡೆ ಕಂಟೈನರ್ ಟ್ರಕ್ ಡ್ರೈವರ್ ಮಾಡಿದ ತಪ್ಪಿನಿಂದ ಸುಮಾರು ಹದಿನೈದಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡ ದಾರುಣ ಘಟನೆಯೊಂದು ನಡೆದಿದೆ. ವರದಿಗಳ ಪ್ರಕಾರ ಈ ಅಪಘಾತದಲ್ಲಿ ಏನಿಲ್ಲವೆಂದರೂ ಹದಿನೈದು ಮಂದಿ ಅಸುನೀಗಿದ್ದಲ್ಲದೇ, ಸುಮಾರು 28 ಕ್ಕೂ ಅಧಿಕ ಮಂದಿ ಗಾಯಗೊಡಿದ್ದಾರೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದ ಧುಲೆಯ (Maharashtra Accident) ಹೆದ್ದಾರಿಯೊಂದರಲ್ಲಿ ಈ ಅಪಘಾತ ನಡೆದಿದ್ದು, ಕಂಟೈನರ್ ಲಾರಿಯೊಂದು ವೇಗವಾಗಿ ಬಂದುದರ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ವರದಿಗಳ ಪ್ರಕಾರ ಮುಂಜಾನೆ 10.45 ಕ್ಕೆ ಅಪಘಾತ ನಡೆದಿದ್ದು ವೇಗವಾಗಿ ಬಂದ ಕಂಟೈನರ್ ಲಾರಿ ನಿಯಂತ್ರಣ ತಪ್ಪಿ ತನ್ನ ಮುಂದಿದ್ದ ನಾಲ್ಕು ವಾಹನಗಳನ್ನು ಗುದ್ದಿ ಪುಡಿಮಾಡಿದೆ.
ಇಷ್ಟು ಮಾತ್ರವಲ್ಲದೇ ನಾಲ್ಕು ವಾಹನಗಳನ್ನು ಗುದ್ದಿ ಪುಡಿ ಮಾಡಿದರ ಜೊತೆಗೆ ಅಲ್ಲೇ ರಸ್ತೆ ಬದಿಯಲ್ಲಿದ್ದ ಹೊಟೆಲ್‌ಗೂ ಈ ಲಾರಿ ಗುದ್ದಿದೆ. ಈ ಅಪಘಾತದ ಸಂಪೂರ್ಣ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರ ಮೈನವಿರೇಳಿಸುವಂತಿದೆ. ಇನ್ನು ಅಪಘಾತದ ಆರಂಭದಲ್ಲಿ ಸುಮಾರು 7 ರಿಂದ 10 ಮಂದಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದರು.

ಆನಂತರದಲ್ಲಿ ಬಂದ ವರದಿಗಳ ಪ್ರಕಾರ ಸಾವಿನ ಸಂಖ್ಯೆ 15 ತಲುಪಿದ್ದು ಸುಮರು. 28 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಭವಿಸಿದ ಕೂಡಲೇ ಅಲ್ಲಿದ್ದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪಘಾತಕ್ಕೆ ಒಳಗಾದವರನ್ನು ಶಿರ್ಪೂರ್ ಮತ್ತು ಧುಲೆ ಆಸ್ಪತ್ರೆಗಳಿಗೆ ಸೇರಿಸಾಗಿದೆ.
ಇನ್ನು ಘಟನೆಗೆ ಕಾರಣವೇನೆಂದು ನೊಡುವುದಾದರೆ ವೇಗವಾಗಿ ಬರುತ್ತಿದ್ದ ಕಂಟೈನರ್ ಟ್ರಕ್ ನ ಬ್ರೇಕ್ ಫೇಲಾಗಿದ್ದೆ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ವೇಗವಾಗಿ ಚಲಿಸುತ್ತಿದ್ದ ಟ್ರಕ್ ಅನ್ನು ನಿಯಂತ್ರಿಸುವಲ್ಲಿ ಚಾಲಕ ವಿಫಲನಾಗಿದ್ದು, ತನ್ನ ಎದುರು ಚಲಿಸುತ್ತಿದ್ದ ಸುಮಾರು ನಾಲ್ಕು ವಾಹನಗಳಿಗೆ ಗುದ್ದಿದ್ದಾನೆ.
ಅಷ್ಟು ಮಾತ್ರವಲ್ಲದೇ ಅಲ್ಲೇ ರಸ್ತೆ ಬದಿಯಲ್ಲಿದ್ದ ಹೊಟೆಲ್‌ಗೂ ಗುದ್ದಿ ನಂತರ ಆ ಕಟೈನರ್ ಟ್ರಕ್ ಪಲ್ಟಿಯಾಗಿ ಬಿದ್ದಿದೆ. ಇದರ ತೀವ್ರತೆಗೆ ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸುವಲ್ಲಿ ಅಲ್ಲಿದ್ದ ಜನರು ನೆರವಗಿದ್ದಾರೆ. ಈ ಗಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications